152 ಅಡಿ ತಲುಪಿದ ಭದ್ರಾ ನೀರಿನ ಮಾತ್ರ



ದಾವಣಗೆರೆ:ಸತತ ಉತ್ತಮ ಮಳೆ ಹಿನ್ನೆಲೆಯಲ್ಲಿ ಭದ್ರಾ ಜಲಾಶಯಕ್ಕೆ ಹೆಚ್ಚಿನ ನೀರು ಬರುತ್ತಿದ್ದು ಇಂದು ಬೆಳಗಿನ ಜಾವ 6 ಗಂಟೆ ವೇಳೆಗೆ ಜಲಾಶಯದ ನೀರಿನ ಮಟ್ಟ 152 ಅಡಿ 9 ಇಂಚು ತಲುಪಿದೆ.
ನಿನ್ನೆ ಬೆಳಗಿನ ಜಾವ 6ಗಂಟೆ ವೇಳೆಗೆ 33.83 ಟಿಎಂಸಿ ನೀರು ಸಂಗ್ರಹ ಆಗಿತ್ತು. ಇಂದು ಬೆಳಗಿನ ಜಾವ 6 ಗಂಟೆ ವೇಳೆಗೆ 36.53 ಟಿಎಂಸಿ ನೀರು ಸಂಗ್ರಹ ಆಗಿದೆ. ಅಲ್ಲಿಗೆ ನಿನ್ನೆ ಒಂದೇ ದಿನ ಸುಮಾರು 3 ಟಿಎಂಸಿ ನೀರು ಜಲಾಶಯಕ್ಕೆ ಬಂದಿದೆ. 
ಒಳ ಹರಿವಿನ ಪ್ರಮಾಣ ನಿನ್ನೆ 39483 ಕ್ಯೂಸೆಕ್ ಇತ್ತು. ಇಂದು 31425 ಕ್ಯೂಸೆಕ್ ಗೆ ಇಳಿದಿದೆ. ಇಂದು ಮತ್ತೆ ಉತ್ತಮ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ಹೆಚ್ಚಿನ ನೀರು ಬರುವ ನಿರೀಕ್ಷೆ ಇದೆ.
ಜಲಾಶಯ ತುಂಬಲು ಇನ್ನು 33.3 ಅಡಿ ಬಾಕಿ ಇದೆ. 35 ಟಿಎಂಸಿ ನೀರು ಜಲಾಶಯಕ್ಕೆ ಹರಿದು ಬರಬೇಕಿದೆ. ಹಾಲಿ ಆಗುತ್ತಿರುವ ಮಳೆ ಪ್ರಮಾಣ ಹೀಗೆ ಮುಂದುವರಿದರೆ ಇನ್ನು 8-10 ದಿನಗಳಲ್ಲಿ ಜಲಾಶಯ ತುಂಬಬಹುದು ಎಂದು ಅಂದಾಜಿಸಲಾಗಿದೆ.

ಜಲಾಶಯದ ನೋಟ ಹೇಗಿದೆ ನೋಡಿ


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಯಾಶೀಲರಾಗಲು ಕ್ರೀಡೆಗಳು ಸಹಕಾರಿ -ಕೆ ನೇಮಿರಾಜನಾಯ್ಕ

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಪಿಡಿಓ,ಕಾರ್ಯದರ್ಶಿ

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*