ದಿನಕ್ಕೊಂದು ವಚನ- ಬಸವಣ್ಣನವರ 57ನೆಯ ವಚನ

ನೀ ಹುಟ್ಟಿಸಿದಲ್ಲಿ ಹುಟ್ಟಿ, ನೀ ಕೊಂದಲ್ಲಿ ಸಾಯದೆ ಎನ್ನ ವಶವೆ ಅಯ್ಯಾ?
ನೀವಿರಿಸಿದರಲ್ಲಿರದೆ, ಎನ್ನ ವಶವೇ ಅಯ್ಯಾ?
ಅಕಟಕಟಾ! ಎನ್ನವನೆನ್ನನವನೆನ್ನಯ್ಯಾ,
ಕೂಡಲಸಂಗದೇವಯ್ಯಾ.



ಹುಟ್ಟು ಸಾವು ನಮ್ಮ ಕೈಯಲ್ಲಿ ಇಲ್ಲ ಎಂಬ ಸಾರ ಸಾರುವ ಈ ವಚನ ಹಲವು ಆಯಾಮಗಳನ್ನು ಹೊಂದಿದೆ. ನೇರವಾಗಿ ನೋಡುವುದಾದರೆ ಹುಟ್ಟು ಸಾವು ನಮ್ಮ ಕೈಯಲ್ಲಿ ಇಲ್ಲ. ಅದು ಕೂಡಲಸಂಗನ ಕೈಯಲ್ಲಿ ಇದೆ. ಆದರೆ, ಬದುಕಿರುವ ತನಕ ಕೂಡಲಸಂಗಯ್ಯ ತಾನು ಹುಟ್ಟಿಸಿದ ಕೂಸನ್ನು ತನ್ನದೇ ಎಂದು ಭಾವಿಸಬೇಕೆಂದು ಬಸವಣ್ಣ ಬಯಸುತ್ತಾರೆ. 

ಆದರೆ, ಇದನ್ನು ವಿಶಾಲವಾದ ದೃಷ್ಟಿಯಲ್ಲಿ ನೋಡಿದರೆ ವಚನದ ತಾತ್ಪರ್ಯ ಬೇರೆಯದ್ದೇ ಇದೆ. ಹುಟ್ಟು, ಸಾವು ನಮ್ಮ ಕೈಯಲ್ಲಿ ಇಲ್ಲ. ಆದರೆ, ಬದುಕಿರುವ ತನಕ ನಾವು ಹೇಗಿರಬೇಕು ಎಂಬುದು ನಮ್ಮ ಕೈಯಲ್ಲಿ ಇದೆ ಎಂದಾಗಿದೆ. ಬಸವಣ್ಣನವರು ನಾನು ಬದುಕಿರುವ ತನಕ ಕೂಡಲ ಸಂಗಮದೇವನಿಗೆ ಸೇರಿದವನೆನ್ನಿಸಿಕೊಳ್ಳುವ ಆಸೆಯನ್ನು ವಚನದಲ್ಲಿ ಹೇಳುತ್ತಾರೆ.

ಜಾತಿ, ಮತ, ಪಂಥಗಳನ್ನು ಬಿಟ್ಟು ಮನುಷ್ಯ ಪಥದದಲ್ಲಿ ನಡೆಯಬೇಕು. ಶರಣ ಪಂಥದಲ್ಲಿ ನಡೆಯಬೇಕು ಎಂಬುದನ್ನು ಬಸವಣ್ಣ ಈ ರೀತಿ ಹೇಳುತ್ತಾರೆ.

ಹುಟ್ಟಿನ ಕಾರಣಕ್ಕೆ, ಸಾವಿನ ಕಾರಣಕ್ಕೆ ಶ್ರೇಷ್ಠ, ಕನಿಷ್ಠಗಳು ಬರುವುದಿಲ್ಲ. ಬದಲಿಗೆ ನಾವು ಬದುಕಿರುವ ತನಕ ನಡೆದುಕೊಳ್ಳುವ ಆಧಾರದಲ್ಲಿ ಶ್ರೇಷ್ಠತೆ ಇರುತ್ತದೆ. ಕೂಡಲ ಸಂಗಯ್ಯ ಎನ್ನವನೆನ್ನನ್ನೆವು ಎನ್ನಬೇಕಾದರೆ ಆತನ ಆಣತಿಯಂತೆ ನಡೆದುಕೊಳ್ಳಬೇಕು ಎಂದು ಬಸವಣ್ಣ ಆಶಯ ಪಡುತ್ತಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*