ಗ್ರಾಮೀಣ ಪತ್ರಕರ್ತರಿಗೂ ಸರಕಾರಿ ಸೌಲಭ್ಯಗಳಿಗೆ ಒತ್ತಾಯಿಸುವೆ:ನೇಮಿರಾಜ್ ನಾಯ್ಕ್

 

ಅತಿ ಶೀಘ್ರದಲ್ಲಿ ಪತ್ರಿಕಾ ಭವನ ನಿರ್ಮಾಣ ಭರವಸೆ

ಕೊಟ್ಟೂರು:ತಾಲೂಕು ಕೇಂದ್ರ ಹಾಗೂ ಹೋಬಳಿ ಕೇಂದ್ರಗಳಲ್ಲಿ ಪತ್ರಿಕೆಗಳಿಗಾಗಿ ಕಾರ್ಯನಿರ್ವಹಿಸುವ ಪತ್ರಕರ್ತರಿಗೆ ಗೌರವಧನ ಸೇರಿ ಸರಕಾರದ ಎಲ್ಲ ಸೌಲಭ್ಯಗಳನ್ನು ಒದಗಿಸುವುದಕ್ಕೆ ಮುಂದಿನ ವಿಧಾನಸಭೆ ಅವೇಶನದಲ್ಲಿ ಸರಕಾರಕ್ಕೆ ಒತ್ತಾಯಿಸುತ್ತೇನೆ ಎಂದು ಶಾಸಕ ಕೆ.ನೇಮಿರಾಜನಾಯ್ಕ ಹೇಳಿದರು.

ಪಟ್ಟಣದ ಬಾಲಾಜಿ ಕನ್ವೆನ್‌ಷನಲ್ ಹಾಲ್‌ನಲ್ಲಿ ನಡೆದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಶನಿವಾರ ಮಾತನಾಡಿದರು.

ಸಮರ್ಪಕವಾಗಿರುವ ವ್ಯವಸ್ಥೆಯನ್ನು ಮೀರಿ ನಡೆಯುವ ಸರಕಾರಗಳ ವಿರುದ್ಧ ಪತ್ರಿಕೆಗಳು ನಿರ್ಭೀತಿಯಿಂದ ವರದಿ ಮಾಡಿದ ಪರಣಾಮವಾಗಿ ಕೆಲ ಪಕ್ಷಗಳು ಅಕಾರವನ್ನೇ ಕಳೆದುಕೊಂಡಿವೆ. ನಗರ ಸೇರಿದಂತೆ ಹಳ್ಳಿಗಳಲ್ಲಿ ಸರಕಾರದ ಸೌಲಭ್ಯಗಳು ತಲುಪದೇ ಇದ್ದಾಗ ಅವುಗಳನ್ನು ಪತ್ರಿಕೆಗಳಲ್ಲಿ ವರದಿ ಮಾಡಿ ಜನಪ್ರತಿನಿಗಳನ್ನು ಎಚ್ಚರಿಸುವ ಕೆಲಸವನ್ನು ಪರ್ತಕರ್ತರು ಮಾಡುತ್ತಿದ್ದಾರೆ. ನ್ಯಾಯಾಂಗ, ಶಾಸಕಾಂಗ ಮತ್ತು ಕಾರ್ಯಾಂಗದAತೆ ಪತ್ರಿಕಾ ರಂಗವೂ ದೇಶದಲ್ಲಿ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುತ್ತಿದೆ. ಪತ್ರಿಕೆ ಕಚೇರಿಗಳಲ್ಲಿ ಹಾಗೂ ಜಿಲ್ಲಾ ವರದಿಗಾರರಿಗೆ ಸರಕಾರದ ಎಲ್ಲ ಸೌಲಭ್ಯಗಳು ಸಿಗುತ್ತಿವೆ. ಆದರೆ ಕೆಲವೊಂದು ಸಾರಿ ಅಪಾಯವನ್ನೇ ಮೈಮೇಲೆ ಎಳೆದುಕೊಂಡು ವರದಿ ಮಾಡುವ ತಾಲೂಕು ಹಾಗೂ ಹೋಬಳಿ ಮಟ್ಟದ ಪತ್ರಕರ್ತರಿಗೆ ಯಾವುದೇ ಸುರಕ್ಷತೆಗಳಿಲ್ಲ. ಇಂತಹ ಪತ್ರಕರ್ತರನ್ನು ಸರಕಾರ ಪರಿಗಣನೆಗೆ ತೆಗೆದುಕೊಂಡು ಎಲ್ಲ ಸೌಲಭ್ಯಗಳನ್ನು ಒದಗಿಸುವುದು ಅವಶ್ಯವಾಗಿದೆ. ಕ್ಷೇತ್ರದ ಹ.ಬೊ.ಹಳ್ಳಿ ಮತ್ತು ಕೊಟ್ಟೂರು ಪಟ್ಟಣಗಳಲ್ಲಿ ಪತ್ರಕರ್ತರ ಭವನ ನಿರ್ಮಾಣ ಮಾಡಿಕೊಡುವುದಾಗಿ ಹೇಳಿದರು.

ಜಿಪಂ ಮಾಜಿ ಸದಸ್ಯ ಎಂಎಂಜೆ ಹರ್ಷವರ್ಧನ ಮಾತನಾಡಿ, ಪತ್ರಕರ್ತರು ವರದಿ ಮಾಡುವುದರೊಂದಿಗೆ ಸಾಮಾಜಿಕ ಕಾರ್ಯಗಳಲ್ಲಿ ಹಾಗೂ ಹೋರಾಟಗಳಲ್ಲಿ ತೊಡಗಿಕೊಂಡಿದ್ದಾರೆ. ಪತ್ರಕರ್ತರು ಕಾರ್ಯನಿರ್ವಹಿಸಲು ಅವಶ್ಯವಾಗಿ ಬೇಕಿರುವ ಪತ್ರಿಕಾ ಭವನ ನಿರ್ಮಾಣಕ್ಕೆ ಪ.ಪಂ.ವತಿಯಿಂದ ನಿವೇಶನ ಕಲ್ಪಿಸುವುದಾಗಿ ಭರವಸೆ ನೀಡಿದರು.

ಸಾನ್ನಿಧ್ಯ ವಹಿಸಿದ್ದ ಚಾನುಕೋಟಿ ಮಠಾಧ್ಯಕ್ಷ ಡಾ.ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಕೊಟ್ಟೂರು ತಾಲೂಕಿನಲ್ಲಿನ ಪತ್ರಕರ್ತರು ಸಾಮಾಜಿಕ ಭದ್ಧತೆಯನ್ನು ಹೊಂದಿದ್ದಾರೆ. ತಾಲೂಕಿನಲ್ಲಿ ನಡೆಯುವ ಸಾಮಾಜಿಕ ಹೋರಾಟಗಳಲ್ಲಿ ಅವರು ಭಾಗಿಯಾಗಿದ್ದಾರೆ. ಪತ್ರಕರ್ತರ ಸಮಸ್ಯೆಗಳಿಗೆ ಸರಕಾರ ಸ್ಪಂದಿಸಲಿ ಎಂದು ಹೇಳಿದರು.

ಪತ್ರಕರ್ತ ಪಾಟೀಲ್ ವೀರನಗೌಡ ವಿಶೇಷ ಉಪನ್ಯಾಸ ನೀಡಿದರು. ಅಧ್ಯಕ್ಷತೆ ವಹಿಸಿದ್ದ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಕೊಟ್ರೇಶ, ಮಾತನಾಡಿ  ಪತ್ರಕರ್ತರ ನೇರವಾಗಿ ನಿಷ್ಠರವಾಗಿ ವರದಿ ಮಾಡಿದ ಕೂಡಲೇ ಅಧಿಕಾರಿ ವರ್ಗ ಹಾಗೂ ರಾಜಕೀಯ ಪ್ರಭಾವಿಗಳು ಪತ್ರಕರ್ತರ  ನಿಷ್ಠುರವಾಗಿ ಬಿಂಬಿಸುತ್ತಾರೆ.ಮತ್ತು ಪ್ರತಿ ಶಾಸಕರು ಆಶ್ವಾಸನೆಗಳು ಕಾರ್ಯಗತಕ್ಕೆ  ಆಗದಿರುವುದು ಅಸಮಾಧಾನ ವ್ಯಕ್ತವಾಗಿದೆ.ಈಗಲಾದರೂ ಕಾರ್ಯರೂಪಕ್ಕೆ ಪತ್ರಿಕಾ ಭವನ , ಜಾಗ , ಕಾಲಿ ನಿವೇಶನಗಳು ನೀಡುವ ಬಗ್ಗೆ ಭರವಸೆ ನೀಡಿದರು. ತಾಲೂಕು ಮತ್ತು ಗ್ರಾಮೀಣ ಮಟ್ಟದ ಪತ್ರಕರ್ತರಿಗೆ  ಸೌಲಭ್ಯಗಳು  ಒದಗಿಸುವ ಬಗ್ಗೆ ಸದನದಲ್ಲಿ ಚರ್ಚೆ ಮಾಡುವಂತೆ ಶಾಸಕರಲ್ಲಿ ಮನವಿ ಮಾಡಿದರು.

ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸತ್ಯನಾರಯಣ, ಜಿಪಂ ಮಾಜಿ ಉಪಾಧ್ಯಕ್ಷ ಪಿಎಚ್ ದೊಡ್ಡರಾಮಣ್ಣ, ಡಿಎಸ್‌ಎಸ್ ಮುಖಂಡ ಬಿ.ಮರಿಸ್ವಾಮಿ ಮಾತನಾಡಿದರು. ಸಂಘದ ಜಿಲ್ಲಾ ಪದಾಕಾರಿಗಳಾದ ಕೆ.ಲಕ್ಷಣ, ವೆಂಕೋಬಿನಾಯ್ಕ, ಕಿಚಡಿ ಕೊಟ್ರೇಶ, ಎಂ.ರವಿಕುಮಾರ ಇದ್ದರು. 

ಸಮಾರಂಭದಲ್ಲಿ ವಿಶೇಷ ಸನ್ಮಾನ ಕಿಚಿಡಿ ಕೊಟ್ರೇಶ್ ಜಿಲ್ಲಾ ಉಪಾಧ್ಯಕ್ಷರಿಗೆ, ಶಿಲ್ಪಕಲಾಕಾರ ವಿರೇಶ್‌ಆಚಾರಿ, ಹಸಿರುಹೊನಲು ತಂಡದ ಎಸ್.ಗುರುರಾಜ, ನಿವೃತ್ತ ಪೊಲೀಸ್ ಅಕಾರಿ ಎಂ.ಕೊಟ್ರೇಶ, ಸೈನಿಕ ಎಚ್.ಕೊಟ್ರೇಶ, ಶಿಕ್ಷಕಿ ಗಂಗಮ್ಮರನ್ನು ಸಂಘದಿಂದ ಸನ್ಮಾನಿಸಲಾಯಿತು. ಪತ್ರಕರ್ತರಾದ ಎಸ್.ಎಂ.ಗುರುಪ್ರಸಾದ, ಬಿ.ಕೊಟ್ರೇಶ ಕಾರ್ಯಕ್ರಮ ನಿರ್ವಹಿಸಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*