ಮಗುವನ್ನು 2 ಭಾಗವಾಗಿ ಕಟ್‌ಮಾಡಿ ಎಂಬ ಕತೆ ಗೊತ್ತಾ?
ಬಹುತೇಕರಿಗೆ ಈ ಕತೆ ಗೊತ್ತೇ ಇರುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ಇಂತಹ ಕತೆಗಳನ್ನು ಓದುವವರ ಪ್ರಮಾಣ ಕಡಮೆ ಆಗಿದೆ. ಅಂತಹ ಪ್ರಮುಖ ಕತೆಗಳಲ್ಲಿ ಇದೂ ಒಂದು.
ಈ ಕತೆಯಲ್ಲಿ ಸೋಲೊಮನ್ ಎಬ ರಾಜನೊಬ್ಬ ಇಬ್ಬರು ಬಾಣಂತಿಯರು ಒಂದೇ ಮಗುವಿಗಾಗಿ ಜಗಳ ಕಾಯುತ್ತಾರೆ. ಈ ಮಗು ನಿಜವಾಗಿ ಯಾರಿಗೆ ಸೇರಿದ್ದು ಎಂಬುದನ್ನು ರಾಜ ಚಾಕಚಕ್ಯತೆಯಿಂದ ಪರಿಪರಿಸುತ್ತಾರೆ. ಇದೇ ಕತೆಯ ವಿಶೇಷ.
ಇದು ಹಿಬ್ರು ಭಾಷೆಯ ಬೈಬಲ್‌ನಲ್ಲಿ ಇದೆ. ಇಸ್ರೇಲ್‌ನ ರಾಜನ ಮುಂದೆ ಒಂದು ವಿಚಿತ್ರ ಪ್ರಕರಣ ಬರತ್ತದೆ. ಒಂದೇ ಮನೆಯಲ್ಲಿ ವಾಸಮಾಡುವ ಇಬ್ಬರು ಮಹಿಳೆಯರು ಒಂದು ಮಗುವಿನೊಂದಿಗೆ ರಾಜನ ಬಳಿ ಬರುತ್ತಾರೆ. ರಾಜನ ಮುಂದೆ ಇಬ್ಬರು ಮಹಿಳೆಯರು ಮುಗುವನ್ನು ಇರಿಸಿ, ಇದು ತಮ್ಮದೇ ಮಗು ಎಂದು ವಾದಮಂಡಿಸುತ್ತಾರೆ. ಸಾಲೋಮನ್ ರಾಜ ಒಂದಿಷ್ಟು ಯೋಚಿಸಿ, ತೀರ್ಪು ನೀಡುತ್ತಾರೆ. ಅದೂ ಸಹ ಪಕ್ಕಾ ಆ ಮಗು ಯಾರದ್ದು ಎಂಬ ತೀರ್ಮಾನ ಮಾಡುತ್ತಾರೆ.
ಇಬ್ಬರು ಬಾಣಂತಿಯರ ಮುಂದೆ ರಾಜ ತನ್ನ ಸೈನಿಕರಿಗೆ ಆದೇಶ ನೀಡಿ, ಮಗುವನ್ನು ಎರಡು ಭಾಗಗಳನ್ನಾಗಿ ಕತ್ತರಿಸಿ ಹಂಚಿ ಎಂದು ಆದೇಶ ಇಡುತ್ತಾರೆ. ಅದರಂತೆ ಸೈನಿಕರು ಮಗುವಿನ ಕಡೆ ಹೋಗುವಾಗ ತಕ್ಷಣ ಓರ್ವ ತಾಯಿ ಮುಂದೆ ಬಂದು ಇಲ್ಲ ಇಲ್ಲ... ಆ ಮಗು ನನ್ನದಲ್ಲ..... ಮಗು ಆಕೆಯದ್ದೇ ಎಂದು ಇನ್ನೊಬ್ಬ ತಾಯಿ ಕಡೆ ಬೊಟ್ಟು ಮಾಡುತ್ತಾಳೆ.
ಆಗ ರಾಜ ಮಗು ಈ ತಾಯಿಯದ್ದೇ, ಅದನ್ನು ಆಕೆಗೆ ಕೊಡಿ ಎಂದು ತೀರ್ಮಾನ ಇಡುತ್ತಾರೆ. ಇದೇ ಅಲ್ವಾ ನ್ಯಾಯ ಅಂದರೆ.
ಯಾವುದೇ ತಾಯಿ ತನ್ನ ಮಗ ಚೆನ್ನಾಗಿ ಬದುಕುತ್ತಾನೆ ಎಂದರೆ ಅದು ತನ್ನಿಂದ ದೂರ ಇದ್ದರೂ ಸರಿ ಎಂಬ ಮನಸ್ಥಿತಿ ಬೆಳೆಸಿಕೊಳ್ಳುತ್ತಾಳೆ ಎಂದು!

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ