ಚುನಾವಣೆಯಲ್ಲಿ ಸೋತಾಗ ನನ್ನ ಬೆನ್ನಿಗೆ ನಿಂತಿದ್ದು ಮಾತ್ರ ನನ್ನ ಬಣಜಿಗ ಸಮಾಜ: ಶೆಟ್ಟರ್
![]() |
.ಮಸ್ಕಿ ಪಟ್ಟಣದ ಭ್ರಮರಾಂಭ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಮಹೋತ್ಸವ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಲವು ವರ್ಷದಿಂದ ಬಿಜೆಪಿಯಲ್ಲಿ ನಿಷ್ಠಾವಂತ ಕಾರ್ಯಕರ್ತನಾಗಿ ಪಕ್ಷ ಕಟ್ಟಿದ್ದೆ. ಆದರೆ ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಕೊನೆ ಹೊತ್ತಿನ ವೇಳೆಗೆ ನನಗೆ ಟಿಕೆಟ್ ಕೊಡದೇ ಬಿಜೆಪಿ ಅಪಮಾನ ಮಾಡಿತು. ಸ್ವಾಭಿಮಾನಕ್ಕೆ ಧಕ್ಕೆ ಬರುತ್ತಿದ್ದಂತೆಯೇ ಆ ಪಕ್ಷಕ್ಕೆ ನಾನು ರಾಜೀನಾಮೆ ನೀಡಿ, ಕಾಂಗ್ರೆಸ್ ಸೇರಿದೆ. ಆದರೆ ಎಲ್ಲ ಶಕ್ತಿಗಳು ಕೂಡಿ ನನ್ನನ್ನು ರಾಜಕೀಯವಾಗಿ ಮುಗಿಸಲು ನೋಡಿದವು. ಅದಕ್ಕೆ ನನಗೆ ಸೋಲಾಯಿತು.
ಸೋಲಿನ ಸಂದರ್ಭದಲ್ಲಿ ನನಗೆ ಬೆನ್ನೆಲುಬಾಗಿ ನನ್ನ ಸಮಾಜ ನಿಂತಿತ್ತು. ಆ ಸಮಾಜದ ಋಣ ನನ್ನ ಮೇಲೆ ಸಾಕಷ್ಟಿದೆ. ರಾಜ್ಯಾದ್ಯಂತ ಸಮಾಜದ ಸಂಘಟನೆ ಮಾಡುವ ಮೂಲಕ ಋಣ ತೀರಿಸಿವೆ. ಈಗ ಕಾಂಗ್ರೆಸ್ ಕೂಡ ನನ್ನನ್ನು ಗುರುತಿಸಿ ರಾಜಕೀಯ ಸ್ಥಾನ ಮಾನ ನೀಡಿದೆ. ಆ ಪಕ್ಷಕ್ಕೂ ನನ್ನ ಸಮಾಜದವರ ಬೆಂಬಲವಾಗು ನಿಲ್ಲಬೇಕು ಎಂದು ಶೆಟ್ಟರ್ ಹೇಳಿದರು
[26/07, 4:39 PM] Press Reporter: ಶಾಸಕ ಆರ್. ಬಸನಗೌಡ ತುರ್ವಿಹಾಳ ಮಾತನಾಡಿ, ಬಣಜಿಗ ಸಮಾಜವು ಜನಪರ ಚಿಂತನೆ ಮಾಡುವ ಜೊತೆಗೆ ಎಲ್ಲರನ್ನೂ ಒಗ್ಗಟ್ಟಾಗಿ ಕರೆದುಕೊಂಡು ಹೋಗುವ ಸಮಾಜವಾಗಿದೆ, ಸಮಾಜದ ಭವನ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ಕೊಡಿಸುವ ಭರವಸೆ ನೀಡಿದರು.
ಗಚ್ಚಿನಮಠದ ವರರುದ್ರಮುನಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದರು.
ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ( ) ಸಂಗನಾಳ ದೊಡ್ಡಪ್ಪ ಕಡಬೂರು ಡಾ. ಮಲ್ಲಿಕಾರ್ಜುನ ಇತ್ಲಿ, ನಾಗರಾಜ ಯಂಬಲದ, ಬಾಳೇಕಾಯಿ, ಮಲ್ಲಿಕಾರ್ಜುನ ಯಂಬಲದ, ಬಸವರಾಜ ಕುಡತಿನಿ, ಪಂಪಣ್ಣ ನಂದಾ, ಕವಿತಾ ಕೋಡಿಹಾಳ ಇದ್ದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ