ಎಮ್ಮೆ ಕಳಕೊಂಡ ರೈತನ ಮೇಲೆ ಜೆಸ್ಕಾಂ ಅಧಿಕಾರಿ ಸಿದ್ದಪ್ಪನ — ದರ್ಪ.

ಕೊಟ್ಟೂರು ತಾಲೂಕಿನ ವ್ಯಾಪ್ತಿಯಲ್ಲಿ ಬರುವ ನಾಗರಕಟ್ಟೆ ಯಲ್ಲಿ  ಗ್ರಾಮ ಪಂಚಾಯತಿ ಎದುರುಗಡೆ ಇರುವ ಟ್ರಾನ್ಸ್ಫರೆಂಟ್ ವಿದ್ಯುತ್ ತಂತಿ ಯಿಂದ ಎಮ್ಮೆ ಮೃತಪಟ್ಟಿದೆ ಸುಮಾರು ಮಧ್ಯಾಹ್ನ 2.30ಕ್ಕೆ ಈ ಘಟನೆ  ನಡೆದಿದ್ದು. ಎಮ್ಮೆ ವಿದ್ಯುತ್ ಸ್ಪರ್ಶದಿಂದ  ಮೃತಪಟ್ಟಿರುವುದು ವಿಷಯ ತಿಳಿದ್ದರೂ ರಾತ್ರಿ 8 ಗಂಟೆಯಾದರೂ ಸ್ಥಳಕ್ಕೆ ಆಗಮಿಸದೆ ಇರುವ ಇಲ್ಲಿನ ಅಧಿಕಾರಿಗಳ ನಿರ್ಲಕ್ಷ್ಯ ಕುರಿತು ಆಕ್ರೋಶ ರೈತರು ವ್ಯಕ್ತಪಡಿಸಿದ್ದಾರೆ. ಹಾಗೆ ಸುತ್ತ ಮುತ್ತಲಿನ ಹಳ್ಳಿಗಳಿಗೆ   ಸುಮಾರು 6 ತಾಸು ಕರೆಂಟ್ ಇಲ್ಲ ಜೆಸ್ಕಾಂ ಅಧಿಕಾರಿಯಾದ ಸಿದ್ದಪ್ಪ ಅವರನ್ನು ರೈತಾಪಿ ಗ್ರಾಮಸ್ಥರು  ಪ್ರಶ್ನೆ ಮಾಡಿದರೆ.ಸರಿಯಾಗಿ ಸ್ಪಂದಿಸದೇ ಇರುವುದು  ಗ್ರಾಮಸ್ಥರು ಕೆಂಗಣ್ಣಿಗೆ ಗುರಿಯಾಗಿದೆ. 

ಪ್ರಸ್ತುತ  ರಾಜ್ಯದಲ್ಲಿ ಸಾರ್ವಜನಿಕರಿಗಾಗಿ ಅನೇಕ ಸೌಲಭ್ಯ ಜೊತೆಗೆ ಸರ್ಕಾರ ವಿದ್ಯುತ್ ಉಚಿತ ಎಂದು ನೀಡಿದರು. ಅಧಿಕಾರಿಗಳು ನಿರ್ಲಕ್ಷತನ ದಿಂದ ಸಾರ್ವಜನಿಕರಿಗೆ ಸೌಲಭ್ಯ ದೊರೆಯುತ್ತಿಲ್ಲ ಸಿದ್ದಪ್ಪ ಜೆಸ್ಕಾಂ ಅಧಿಕಾರಿ  ಕಚೇರಿಯ ದೂರವಾಣಿ ನಂಬರಿಗೆ ಸಂಪರ್ಕಿಸಿದರೆ  ಸಾರ್ವಜನಿಕರ ಸಂಪರ್ಕಕ್ಕೆ ಸಿಗದೇ ಇರುವುದು ಅಸಮಾಧಾನ ವ್ಯಕ್ತವಾಗಿದೆ.

ಸರ್ಕಾರದಿಂದ ಜೆಸ್ಕಾಂ ಕಚೇರಿಯ ಅಧಿಕಾರಿಗಳಿಗೆ ಸಾರ್ವಜನಿಕರಿಗೆ ಸಹಾಯವಾಗಲೆಂದು ಇವರನ್ನು ಸಂಪರ್ಕಿಸಲು ದೂರವಾಣಿ ನಂಬರ್ ಕೂಟ್ಟಿದ್ದರು ಸಹ ಅದರಿಂದ ಸರಿಯಾಗಿ ಸಾರ್ವಜನಿಕರಿಗೆ ಸೇವೆ  ನೀಡದಿರುವುದು ರಿಂದ ಗ್ರಾಮಸ್ಥರು ಕೆಂಗಣ್ಣಿ ಗುರಿಯಾಗಿದ್ದಾರೆ.

ಜೆಸ್ಕಾಂ ಅಧಿಕಾರಿ ಸಿದ್ದಪ್ಪನನ್ನು :ಅಮಾನತ್ತು ಮಾಡಬೇಕೆಂದು ಗ್ರಾಮಸ್ಥರು ಒತ್ತಾಯ

ಮಾನ್ಯ ಕೂಡ್ಲಿಗಿ ವಿಧಾನಸಭಾ ಕ್ಷೇತ್ರ ಶಾಸಕರಾದ ಡಾ. ಎನ್‌ ಟಿ ಶ್ರೀನಿವಾಸ್ ರವರು ಶೀಘ್ರದಲ್ಲಿ  ಇಂತಹ ಅಧಿಕಾರಿಗಳನ್ನು ಅಮಾನತ್ತು ಮಾಡಬೇಕೆಂದು. ಇಲ್ಲಿನ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ಜೆಸ್ಕಾಂ ಅಧಿಕಾರಿ ಸಿದ್ದಪ್ಪನ ಬಗ್ಗೆ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂದು ಪ್ರಕಾಶ್ ಎಡಬ್ಲ್ಯೂ ಇವರಿಗೆ ಈ ಹಿಂದೆ ತಿಳಿಸಿದರೂ ಸಹ ಯಾವುದೇ ಕ್ರಮ ಕೈಗೊಳ್ಳದೆ  ಇರುವುದು ಮತ್ತು ಮೇಲಧಿಕಾರಿಗಳ ನಿರ್ಲಕ್ಷ್ಯ ತನದಿಂದ  ಈ ಘಟನೆ ನಡೆದಿದೆ.ಎಂದು ಗ್ರಾಮಸ್ಥರು ಆರೋಪಿಸಿದರು. 

ಕೂಡ್ಲಿಗಿ ತಾಲೂಕಿನ ಉಜ್ಜಿನಿ ಶಾಖೆಯ ಜೆಸ್ಕಾಂ ಅಧಿಕಾರಿಗಳಿಗೆ ಇವರ ಮೇಲಾಧಿಕಾರಿಗಳು ಇದ್ದಾರೋ ಇಲ್ಲವೋ ಅಥವಾ ಹೇಳೋರು ಕೇಳೋರು ಇಲ್ಲದ ಹಾಗೆ ನಡೆದುಕೊಳ್ಳುವ ಪರಿ  ಇವತ್ತಿನ ವ್ಯವಸ್ಥೆಗೆ ಕಾರಣ ಆಗಿದ್ದಾರೆ. ಇದರಿಂದ ಸಾರ್ವಜನಿಕರಿಗೆ ಯಾವ ರೀತಿ ನ್ಯಾಯ ಸಿಗುತ್ತದೆ ಎಂದು ಶಾಸಕರಾದ ಡಾಕ್ಟರ್ ಎನ್ ಟಿ ಶ್ರೀನಿವಾಸ್ ರವರನ್ನು ಸಾರ್ವಜನಿಕ ರಾದ ಓಬಳೇಶ್, ರೇವಣ್ಣ ,ಮತ್ತು ವಸಂತ್ ಕುಮಾರ್, ಸದಸ್ಯರು ಮತ್ತು ಊರಿನ ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಗ್ರಾಮಸ್ಥರ ಅಭಿಪ್ರಾಯ

ಹೊಲದಲ್ಲಿ ವಿದ್ಯುತ್ ತಂತಿಗಳು ಕೆಳಗೆ ಬಿದ್ದಿರುವು ಸ್ಥಿತಿ ಮತ್ತು ವಿದ್ಯುತ್ ಕಂಬಗಳು ದುರಸ್ಥಿತಿ ಕೆಲವು ರೈತರ ಬೋರ್ವೆಲ್ ಗಳಿಗೆ ಸರಿಯಾದ ಸಂಪರ್ಕ ಇಲ್ಲದೆ ಇರುವುದರಿಂದ ಮನೆಗಳಿಗೆ  ವಿದ್ಯುತ್ತಿನ ಏರಿಳಿತದಿಂದ   ಶಾರ್ಟ್ ಸರ್ಕ್ಯೂಟ್ ನಿಂದಾಗಿ ಟಿವಿ ಫ್ರಿಡ್ಜ್ ಇನ್ನಿತರ ಉಪಕರಣಗಳು ಹಾನಿ ಉಂಟಾಗಿರುವ ಉದಾಹರಣೆಗಳು ಇವೆ ಮತ್ತು ಈ ದಿನ ಎಮ್ಮೆ ಸಾವು ಆಗಿದೆ. ನಾಳೆ ಜನರ ಜೀವದ ಜೊತೆ ಚೆಲ್ಲಾಟ ಆಡುತ್ತಿರುವ ಅಧಿಕಾರಿಗಳು.ಎಂದು ವಸಂತ್ ಕುಮಾರ್, ಸದಸ್ಯರು ತಿಳಿಸಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*