ಲೊಯೋಲ ಕಾಲೇಜಿನ ವಿದ್ಯಾರ್ಥಿಗಳ ಚಿಂತನ ಮಂಥನ ಕೂಟ
ಮಾನ್ವಿ: ಪಟ್ಟಣದ ಲೊಯೋಲ ಕಾಲೇಜಿನ ಸಭಾಂಗಣದಲ್ಲಿ ಕಲ್ಯಾಣ - ಕರ್ನಾಟಕದ ಜನಸಾಮಾನ್ಯರ ಸಮಸ್ಯೆಗಳು ಮತ್ತು ಸವಾಲುಗಳು ಕುರಿತು ನಡೆದ ವಿದ್ಯಾರ್ಥಿಗಳ ಚಿಂತನ ಮಂಥನ ಕೂಟವನ್ನು ಉದ್ಘಾಟಿಸಿ ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ ವಿನೋದ್ ಪಾಲ್ ಎಸ್.ಜೆ ಮಾತನಾಡಿ ಮಾನವನ ಸರ್ವತೋಮುಖ ಬೆಳವಣಿಗೆಗಾಗಿ ಬೌದ್ಧಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಅಗತ್ಯಗಳು ಅತ್ಯವಶ್ಯವಾಗಿವೆ ಸತತ ಅಭ್ಯಾಸದಲ್ಲಿ ನಿರತರಾದಾಗ ಮಾತ್ರ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಕೇವಲ ಅಂಕ ಗಳಿಕೆಗೆ ಮಾತ್ರ ಅದ್ಯತೆ ನೀಡದೆ ವೈಜ್ಞಾನಿಕ ಚಿಂತನೆ, ಸೃಜನಶೀಲತೆ ಮತ್ತು ಮಾನವೀಯತೆ,ಸಾಮಾನ್ಯ ಜ್ಞಾನ, ಕೌಶಲ್ಯಗಳನ್ನು, ಬೆಳೆಸಿಕೊಂಡಗ ಮಾತ್ರ ನವ ಸಮಾಜದ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ. ಎಂದು ತಿಳಿಸಿದರು.
ವಿದ್ಯಾರ್ಥಿ ಇಸ್ಮಾಯಿಲ್ ಕಲ್ಯಾಣ ಕರ್ನಾಟಕದಲ್ಲಿ ಪ್ರಸ್ತುತ ಶಿಕ್ಷಣದ ಸಮಸ್ಯೆಗಳು ಮತ್ತು ಸವಾಲುಗಳು. ವಿದ್ಯಾರ್ಥಿನಿ ಅನ್ನಾಳಮ್ಮಾ ಜನಸಾಮಾನ್ಯರ ವಲಸೆಗೆ ಕಾರಣಗಳು ಮತ್ತು ಸವಾಲುಗಳು. ಧರ್ಮಪ್ಪ ಕಲ್ಯಾಣ ಕರ್ನಾಟಕದಲ್ಲಿ ರೈತರು ಅನುಭವಿಸುತ್ತಿರುವ ಸಮಸ್ಯೆಗಳು. ಟಿ.ಸರಸ್ವತಿ ಕಲ್ಯಾಣ ಕರ್ನಾಟದ ಮೂಲಭೂತ ಸಮಸ್ಯೆಗಳು ಮತ್ತು ಸವಾಲುಗಳು ಎಂಬ ವಿಷಯನ್ನು ಮಂಡಿಸಿದರು.
ನAತರ ವಿದ್ಯಾರ್ಥಿಗಳು ಮಂಡಿಸಿದ ವಿಷಯಗಳ ಮೇಲೆ ನಡೆದ ಚಿಂತನ ಮಂಥನದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಚರ್ಚೆ ನಡೆಸಿದರು. ವಿಷಯ ಮಂಡಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಬೋಧಕ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಚಿಂತನ ಮಂಥನ ಕೂಟದಲ್ಲಿ ಭಾಗವಹಿಸಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ