ಮಣಿಪುರ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿಗೆ ತರಲು ಮನವಿ

 


ಮಾನ್ವಿ: ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ತಾ.ಸಮಿತಿ ವತಿಯಿಂದ ರಾಜ್ಯಪಾಲರಿಗೆ ಗ್ರೇಡ್-೨ ತಹಸೀಲ್ದಾರ್ ಅಬ್ದುಲ್ ವಾಹಿದ್ ರವರ ಮೂಲಕ ಮನವಿ ಸಲ್ಲಿಸಿ ತಾ.ಪ್ರ.ಸಂಚಾಲಕರಾದ ಯಮನಪ್ಪ ಪನ್ನೂರ್ ಮಾತನಾಡಿ ಮಣಿಪುರ ರಾಜ್ಯದಲ್ಲಿ ಕಳೆದ ಮೂರು ತಿಂಗಳಿನಿಂದ ಅಲ್ಲಿಯ ಬುಡಕಟ್ಟು ಸಮುದಯಕ್ಕೆ ಸೇರಿದ ಮಹಿಳೆಯರ ಮೇಲೆ ನಿರಂತರವಾಗಿ ದೌರ್ಜನ್ಯ, ಹಿಂಸಾಚಾರ,ನಗ್ನವಾಗಿ ಮಹಿಳೆಯರನ್ನು ಬೀದಿಯಲ್ಲಿ ಮೆರವಣಿಗೆ,ಸಾಮೂಹಿಕ ಅತ್ಯಾಚಾರ,ಕೊಲೆ ,ಸುಲಿಗೆ,ನಡೆಯುತ್ತಿದ್ದಾರು ಮಣಿಪುರ ರಾಜ್ಯದ ಸರಕಾರ ಹಾಗೂ ಕೇಂದ್ರ ಸರಕಾರದಿಂದ ಯಾವುದೆ ನಿಯಂತ್ರಣ ಕ್ರಮಗಳು ಕೈಗೊಳ್ಳಲು ಸಾಧ್ಯವಾಗದೆ ಇರುವುದರಿಂದ ಕೂಡಲೆ ಮಣಿಪುರ ರಾಜ್ಯದಲ್ಲಿನ ಸರಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ಜೆ.ಹೆಚ್.ದೇವರಾಜ್, ಪ್ರವೀಣಕುಮಾರ್, ಸಂಪತ್ ರಾಜ್, ಸುರೇಶ,ಆಕಾಶ್ ಮ್ಯಾತ್ರಿ, ಅಮರೇಶಕಾವಲಿ, ದುರುಗಪ್ಪ, ಶಿವರಾಜ ದೊಡ್ಡಿ, ಕುಮಾರ, ಚಿದಾನಂದ ಹುನುಮಂತರಾಯ, ಬಸವರಾಜ, ರವಿಕುಮಾರ್ ಸೇರಿದಂತೆ ಇನ್ನಿತರರು ಇದ್ದರ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ