ಸರಕಾರಿ ಉರ್ದು ಫ್ರೌಡಶಾಲೆಯ ಬೆಳ್ಳಿ ಮಹೋತ್ಸವದಲ್ಲಿ ಭಾಗವಹಿಸಿದ ಸಚಿವರು
ಮಾನ್ವಿ: ಪಟ್ಟಣದ ಸರಕಾರಿ ಉರ್ದು ಫ್ರೌಡಶಾಲೆಯ ಆವರಣದಲ್ಲಿ ನಡೆದ ಶಾಲೆಯ ಬೆಳ್ಳಿ ಮಹೋತ್ಸವ ಕಾರ್ಯಕ್ರಮವನ್ನು ರಾಜ್ಯಾ ಸಣ್ಣ ನೀರಾವರಿ ಹಾಗೂ ವಿಜ್ಞಾನ ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಉದ್ಘಾಟಿಸಿ ಮಾತನಾಡಿ ಸರಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಸಲುವಾಗಿ ರಾಜ್ಯದಲ್ಲಿ ಶಿಕ್ಷಕರ ಕೊರತೆ ನಿವಾರಣೆಗಾಗಿ ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿಯೇ ಶೇ ೫೦ರಷ್ಟು ಅತಿಥಿ ಶಿಕ್ಷಕರನ್ನು ಶಿಕ್ಷಕರ ಕೊರತೆ ಇರುವ ಶಾಲೆಗಳಿಗೆ ನೀಡಲಾಗಿದೆ. ಪಟ್ಟಣದಲ್ಲಿ ಅಲ್ಪ ಸಂಖ್ಯೆತ ಸಮುದಾಯಗಳು ಹೆಚ್ಚಿದ್ದು ಅಲ್ಪ ಸಂಖ್ಯೆತ ಹೆಣ್ಣುಮಕ್ಕಳಿಗೆ ಶಿಕ್ಷಣದೊರೆಯ ಬೇಕು ಎನ್ನುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಶ್ರಾಮಿಸಬೇಕು ರಾಜ್ಯದಲ್ಲಿನ ಮಕ್ಕಳಲ್ಲಿ ಅಪೌಷ್ಟಿಕತೆ ನಿವಾರಣೆಗಾಗಿ ಅಂಗನವಾಡಿ ಹಾಗೂ ಶಾಲೆಗಳಲ್ಲಿನ ಮಕ್ಕಳಿಗೆ ಮೋಟ್ಟೆಯನ್ನು ವಿತರಿಸಲು ೩ಕೋಟಿ ಮೋಟ್ಟೆಗಳು ಅಗತ್ಯವಿದ್ದು ಈ ಕುರಿತು ಸಚಿವ ಸಂಪುಟದಲ್ಲಿ ಚರ್ಚೆ ನಡೆಸಲಾಗಿದ್ದು ಪ್ರತಿ ಮೋಟ್ಟೆಗೆ ೭ರೂನಂತೆ ಮೋಟ್ಟೆಯನ್ನು ಖರೀದಿಸುವುದಕ್ಕೆ ಕ್ರಮ ಕೈಗೊಳ್ಳಲಾಗುವುದು. ಸರಕಾರವು ಮಕಕ್ಕಳ ಶಿಕ್ಷಣಕ್ಕಾಗಿ ಅನೇಕ ಸೌಲಭ್ಯಗಳನ್ನು ನೀಡುತ್ತಿದ್ದಾರು ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಿರುವುದರಿಂದ ಶಿಕ್ಷಣ ಇಲಾಖೆ ಹಾಗೂ ಶಿಕ್ಷಕರು ಶಾಲಾಭಿವೃದ್ದಿ ಸಮಿತಿಯವರು ಶಾಲೆಗಳಲ್ಲಿ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಲು ಪ್ರಮಾಣಿಕ ಪ್ರಯತ್ನ ಮಾಡಬೇಕು ಎಂದು ತಿಳಿಸಿದರು.
ಶಾಸಕ ಹಂಪಯ್ಯ ನಾಯಕ ಮಾತನಾಡಿ ಸರಕಾರಿ ಶಾಲೆಗಳಲ್ಲಿ ಮೂಲಭೂತಸೌಲಭ್ಯಗಳು ಇದ್ದಾಗ ಮಾತ್ರ ವಿದ್ಯಾರ್ಥಿಗಳು ಉತ್ತಮವಾಗಿ ಶಿಕ್ಷಣವನ್ನು ಪಡೆಯಲು ಸಾಧ್ಯವಾಗುತ್ತದೆ ಕೇವಲ ಸರಕಾರದ ಅನುದಾನಕ್ಕಾಗಿ ಕಾಯದೆ ವಿವಿಧ ಸಂಘ ಸಂಸ್ಥೆಗಳು ಹಾಗೂ ಜನಪ್ರತಿನಿಧಿಗಳು ಸರಕಾರಿ ಶಾಲೆಗಳು ನಮ್ಮ ಶಾಲೆಯೆಂಬ ಭಾವನೆಯೊಂದಿಗೆ ಸರಕಾರಿ ಶಾಲೆಗಳನ್ನು ದತ್ತು ಪಡೆಯುವ ಮೂಲಕ ಸರಕಾರದ ಸೌಲಭ್ಯದ ಜೊತೆಗೆ ತಮ್ಮ ಕೊಡುಗೆಯನ್ನು ನೀಡಿ ಶಾಲೆಗಳನ್ನು ಅಭಿವೃದ್ದಿ ಪಡಿಸಿದಲ್ಲಿ ಮಾತ್ರ ಶೈಕ್ಷಣಿಕವಾಗಿ ಅಭಿವೃದ್ದಿಯನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಶಾಲೆಯ ಬೆಳ್ಳಿ ಮಹೋತ್ಸವ ಅಂಗವಾಗಿ ಹೊರತರಲಾದ ಜ್ಞಾನಮೃತ ಸ್ಮರಣ ಸಂಚಿಕೆಯನ್ನು ಸಚಿವರು ಬಿಡುಗಡೆಗೊಳ್ಳಿಸಿದರು. ಎಸ್.ಎಸ್.ಎಲ್.ಸಿ.ವಾರ್ಷಿಕ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿನಿ ವರ್ಷರವರನ್ನು ಸನ್ಮಾನಿಸಲಾಯಿತು.
ವಾರ್ಡ್ ನಂ ೧೩ರಲ್ಲಿ ಉರ್ದುಶಾಲೆ ಮಂಜೂರು ಮಾಡುವಂತೆ ಪುರಸಭೆ ಸದಸ್ಯ ಹುಸೇನ್ ಬಾಷ ಸಚಿವರಿಗೆ ಮನವಿ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸಾಕ್ಷರಾತ ಉಪ ನಿರ್ದೇಶಕರಾದ ಇಂದಿರಾ,ಆರ್. ತಹಸೀಲ್ದಾರ್ ಚಂದ್ರಕಾAತ್ ಎಲ್.ಡಿ. ತಾ.ಪಂ.ಇ.ಓ. ಎಂ.ಡಿ.ಸೈಯಾದ್ ಪಟೇಲ್, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ್.ಡಿ, ಪುರಸಭೆ ಮುಖ್ಯಾಧಿಕಾರಿ ಗಂಗಾಧರ, ಪಿ.ಎಸ್.ಐ.ವೆಂಕಟೇಶ.ಎA. ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷರಾದ ಸಾಲಿಂ ಪಾಷಾ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಅಬ್ದೂಲ್ ಗಫೂರ್ ಸಾಬ್, ಮುಖಂಡರಾದ ಸೈಯಾದ್ ಅಕ್ಬರ್ ಪಾಷಾ,ಬಾಲಸ್ವಾಮಿ ಕೊಡ್ಲಿ,ಬಿ.ಕೆ.ಅಮರೇಶಪ್ಪ, ಶಾಂತಪ್ಪ, ವಿರೇಶಸ್ವಾಮಿ ರೌಡೂರ್, ಶಾಲೆಯ ಮುಖ್ಯಗುರು ಆಶೋಕ್ ಕುಮಾರ್, ಎಸ್.ಡಿ.ಎಂ.ಸಿ.ಅಧ್ಯಕ್ಷರಾದ ಮೆಹಬೂಬ್, ಸೇರಿದಂತೆ ಇನ್ನಿತರರು ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ