ಸುಸ್ಥಿರ, ಸಮಾನತೆ, ಜ್ಞಾನವಂತ ಸಮಾಜ ನಿರ್ಮಾಣ ರಾಷ್ಟಿçÃಯ ಶಿಕ್ಷಣ ನೀತಿಯ ಮೂಲ ಉದ್ದೇಶ: ವಿಜಯಕುಮಾರ
ಮೂರನೇ ವರ್ಷದ ರಾಷ್ಟಿçÃಯ ಶಿಕ್ಷಣ ನೀತಿಯ ವಾರ್ಷಿಕೋತ್ಸವ ಸಮಾರಂಭ
ರಾಯಚೂರು,ಜು.೨೯:- ಭಾರತದೇಶವನ್ನು ಸುಸ್ಥಿರವಾಗಿ ಸಮಾನತೆ ಮನೋಧರ್ಮದ ಹಾಗೂ ಸ್ಪಂದನಶೀಲ ಜ್ಞಾನ ಸಮಾಜವಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಭಾರತೀಯ ಅಸ್ಮಿತೆಯ ಮೇಲೆ ಆಧಾರಗೊಂಡಿರುವ ಶಿಕ್ಷಣ ವ್ಯವಸ್ಥೆಯನ್ನು ಸಾಕರಗೊಳಿಸುವುದು ಈ ರಾಷ್ಟೀಯ ಶಿಕ್ಷಣ ನೀತಿಯ ಮಹಾನ್ ಉದ್ದೇಶವಾಗಿದೆ ಹಾಗೂ ಪ್ರತಿಯೊಬ್ಬರಿಗೂ ಉನ್ನತ ಮಟ್ಟದ ಶಿಕ್ಷಣವನ್ನು ದೊರಕಿಸಿ ಕೊಡುವುದರ ಮೂಲಕ ಈ ಕನಸನ್ನು ನನಸಾಗಿಸಬಹುದು ಎಂದು ಹಟ್ಟಿಯ ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲರಾದ ವಿಜಯಕುಮಾರ ಅವರು ಹೇಳಿದರು.
ಅವರು ಜು.೨೮ರ(ಶುಕ್ರವಾರ) ನಗರದ ಕೇಂದ್ರೀಯ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಮೂರನೇ ವರ್ಷದ ರಾಷ್ಟಿçÃಯ ಶಿಕ್ಷಣ ನೀತಿಯ ವಾರ್ಷಿಕೋತ್ಸವ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು.
ಕೇಂದ್ರೀಯ ವಿದ್ಯಾಲಯ ಸಂಸ್ಥೆಗಳು ರಾಷ್ಟಿçÃಯ ಶಿಕ್ಷಣ ನೀತಿಯ ಮೂಲಕ ಶಿಕ್ಷಣ ಕ್ರಮ ಮತ್ತು ಭೋಧನಾಕ್ರಮಗಳು ವಿದ್ಯಾರ್ಥಿಗಳಲ್ಲಿ ಮೂಲಭೂತ ಕರ್ತವ್ಯಗಳು ಮತ್ತು ಸಂವಿಧಾನಾತ್ಮಕ ಮೌಲ್ಯಗಳು ಇವುಗಳ ಬಗ್ಗೆ ಆಳವಾದ ಗೌರವಾಧಾರಗಳನ್ನು ಹುಟ್ಟುಹಾಕುವಂತಾಗಬೇಕೆAಬ ಗುರಿಯನ್ನು ಹೊಂದಿವೆ ಎಂದು ತಿಳಿಸಿದರು.
ಇದೇ ವೇಳೆ ರಾಯಚೂರು ಕೇಂದ್ರೀಯ ವಿದ್ಯಾಲಯದ ಪ್ರಾಥಮಿಕ ಶಿಕ್ಷಕ ಡಿ.ದಿನೇಶ್ ಕುಮಾರ್ ಅವರು ಶಾಲಾ ಶಿಕ್ಷಣದ ವಿನ್ಯಾಸದ ಬಗ್ಗೆ ಮಾಹಿತಿ ನೀಡಿ, ಭೋಧನಾಕ್ರಮ ಹಾಗೂ ಶಿಕ್ಷಣಕ್ರಮಗಳನ್ನು ಮರು ವಿನ್ಯಾಸ ಮಾಡಲಾಗಿದೆ. ಹೊಸ ಭೋಧನಾಕ್ರಮ ಮತ್ತು ಪಠ್ಯಕ್ರಮ ವಿನ್ಯಾಸದಲ್ಲಿ ಒಟ್ಟಾರೆಯಾಗಿ ೪ ಹಂತಗಳನ್ನು ಒಳಗೊಂಡಿವೆ. ಅಡಿಪಾಯಮಟ್ಟ, ತಯಾರಿಮಟ್ಟ, ಮಾಧ್ಯಮಿಕಮಟ್ಟ ಹಾಗೂ ಪ್ರೌಢಮಟ್ಟ
ಆಡಿಪಾಯಮಟ್ಟದಲ್ಲಿ ೩ ರಿಂದ ೮ ವಯಸ್ಸಿನ ಮಕ್ಕಳು ಬರುತ್ತಾರೆ, ಅದರಲ್ಲಿ ೩ ರಿಂದ ೫ ವರ್ಷದ ಮಕ್ಕಳನ್ನು ಪೂರ್ವಪ್ರಥಮಿಕ ಹಂತ ಎಂದು ಮತ್ತು ೫ ರಿಂದ ೮ ವರ್ಷದ ಮಕ್ಕಳನ್ನು ಪ್ರಾಥಮಿಕ ಹಂತ ೧ ರಿಂದ ೨ ನೇ ತರಗತಿಯಲ್ಲಿ ಆಟದ, ಚಟುವಟಿಕೆಗಳ ಮೂಲಕ ಶಿಕ್ಷಣ ಒದಗಿಸುವ ಪಠ್ಯಕ್ರಮ ಹೊಂದಿರುತ್ತದೆ ಎಂ<ದು ತಿಳಿಸಿದರು.
ತಯಾರಿಮಟ್ಟದಲ್ಲಿ ೮ ರಿಂದ ೧೧ ವಯೋಮಾನದ ಮಕ್ಕಳಿದ್ದು ೩ ರಿಂದ ೫ ನೇ ತರಗತಿಯವರಾಗಿರುತ್ತಾರೆ. ಅನುಭವ ಕೇಂದ್ರಿತ ಕಲಿಕಾ ವಿಜ್ಞಾನ, ಗಣಿತ, ಕಲೆ, ಸಮಾಜ ಅಧ್ಯಯನ ಹಾಗೂ ಮಾನವೀಯ ಕಲೆಗಳ ಕಲಿಯುವ ಜೊತೆಯಲ್ಲಿ ಪರೀಕ್ಷಾ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ.
ಮಾಧ್ಯಮಿಕ ಮಟ್ಟದಲ್ಲಿ ೧೧ ರಿಂದ ೧೪ ನೇ ವಯೋಮಾನದ ಮಕ್ಕಳಿದ್ದು ೬ ರಿಂದ ೮ ನೇ ತರಗತಿಯವರಾಗಿರುತ್ತಾರೆ. ಈ ಹಂತದಲ್ಲಿ ವಿಷಯಾಧಾರಿತ ಪತ್ಯಕಳಲಿಕೆ ಒಳಗೊಂಡಿರುತ್ತದೆ ಜೊತೆಯಲ್ಲಿ ೨೧ ನೇ ಶತಮಾನದ ಕೌಶಲ್ಯಗಳಬಗ್ಗೆ ಉದಾಹರಣೆಗೆ: ಕೊಡಿಂಗ್ ಮತ್ತು ವೃತ್ತಿ ಶಿಕ್ಷಣ ಆಧಾರಿತ ಶಿಕ್ಷಣವನ್ನು ನೀಡಲಾಗುತ್ತದೆ.
ಪ್ರೌಢಮಟ್ಟದಲ್ಲಿ ೧೪ ರಿಂದ ೧೮ ವಯಸ್ಸಿನ ಮಕ್ಕಳಿದ್ದು, ಪ್ರಥಮ ಹಂತದಲ್ಲಿ ೯ ಮತ್ತು ೧೦ ನೇ ತರಗತಿ ಮಕ್ಕಳು ಮತ್ತು ದ್ವಿತೀಯ ಹಂತದಲ್ಲಿ ೧೧ ಮತ್ತು ೧೨ ನೇ ತರಗತಿ ಮಕ್ಕಳಿರುತ್ತಾರೆ. ಈ ಮಟ್ಟದಲ್ಲಿ ಆಳವಾದ ಅಧ್ಯಯನ, ನಿರ್ಣಯಬದ್ದ ಆಲೋಚನೆ, ಜೀವನದ ಗುರಿ ಉದ್ದೇಶಗಳ ಕಡೆಗೆ ವಿಶೇಷ ಗಮನ ಹಾಗೂ ೨೧ ನೇ ಶತಮಾನದ ಕೌಶಲ್ಯಗಳಬಗ್ಗೆ ಉದಾಹರಣೆಗೆ: ಕೊಡಿಂಗ್ ಮತ್ತು ವೃತ್ತಿ ಶಿಕ್ಷಣ ಆಧಾರಿತ ಶಿಕ್ಷಣವನ್ನು ನೀಡಲಾಗುತ್ತದೆ ಎಂದು ತಿಳಿಸಿದರು.
ಉನ್ನತ ಶಿಕ್ಷಣದಲ್ಲಿ ರಾಷ್ಟ್ರೀಯ ಶಿಕ್ಷಣದ ನೀತಿಯ ಪಾತ್ರದ ಕುರಿತು ರಾಯಚೂರು ಕೇಂದ್ರೀಯ ವಿದ್ಯಾಲಯದ ಗಣಕ ಶಿಕ್ಷಕ ವೀರೇಶ್ ಆರ್ ಎಸ್, ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ರಾಯಚೂರು ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲ ಸುಧೀಂದ್ರ ಆರ್.ಕೆ, ಶಿಕ್ಷಕಿ ಸ್ಮಿತಾ ಸೇರಿದಂತೆ ರಾಯಚೂರು ನಗರದ ವಿವಿಧ ಶಾಲೆಗಳ ಪ್ರಾಂಶುಪಾಲರು ಮತ್ತು ಶಿಕ್ಷಕರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ