ಕಂಪ್ಲಿ ತಾಲ್ಲೂಕಿನಲ್ಲಿ 6 ದಿನಗಳಲ್ಲಿ 65.ಮಿ.ಮೀ.ಮಳೆ- 4 ಮನೆಗಳಿಗೆ ಹಾನಿ



ಕಂಪ್ಲಿ:ತಾಲ್ಲೂಕಿನಲ್ಲಿ ಕಳೆದ 6 ದಿನಗಳಲ್ಲಿ  ಅಂದಾಜು 65 ಮಿ.ಮೀ.ನಷ್ಟು ಮಳೆಯಾಗಿದ್ದು, ನಿರಂತರ ಮಳೆಗೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ನಾಲ್ಕು ಮನೆಗಳಿಗೆ ಹಾನಿಯಾಗಿದೆ ಎಂದು ತಹಸಿಲ್ದಾರ್ ಗೌಸಿಯಾಬೇಗಂ ತಿಳಿಸಿದರು.

ಕಳೆದ ಎರಡು ಮೂರು ತಿಂಗಳಿನಿಂದ ಮುಂಗಾರು ಮಳೆ ಕಣ್ಮರೆಯಾಗಿತ್ತು. ಆದರೆ ಕಳೆದ ವಾರದ ಶನಿವಾರದಿಂದ ಬುಧವಾರ ಅಂದರೆ ಜು.22ರಿಂದ ಜು.27ರವರೆಗೆ ತಾಲ್ಲೂಕಿನ ಸುಮಾರು 65 ಮಿ.ಮೀ.ನಷ್ಟು ಮಳೆಯಾಗಿದೆ. ಅದರಲ್ಲಿ ಎರಡು ಮೂರು ದಿನಗಳು ಬಿಟ್ಟು ಬಿಡದೇ ನಿರಂತರವಾಗಿ ಜಿಟಿ ಜಿಟಿ ಮಳೆಯಾಗಿದ್ದು, ಈ ನರಂತರ ಮಳೆಗೆ ತಾಲ್ಲೂಕಿನ ವಿವಿಧ ಗ್ರಾಮಗಳಾದ  ಕಣ್ವಿ ತಿಮ್ಮಲಾಪುರ, ಕಂಪ್ಲಿ ಪಟ್ಟಣ, ಎಮ್ಮಿಗನೂರು ಹಾಗೂ ನೆಲ್ಲುಡಿ ಗ್ರಾಮಗಳಲ್ಲಿ ಹಳೆ ಮನೆಗಳು ಭಾಗಶಃ ಬಿದ್ದಿವೆ ಎಂದು ತಿಳಿಸಿದರು.


ಮಳೆಯಶ್ರಿತ ಜಮೀನುಗಳಲ್ಲಿ ಅಲ್ಲಲ್ಲಿ ಬಿತ್ತನೆಯಾಗಿದ್ದರೆ, ಇದೀಗ ಉತ್ತಮ ಮಳೆಯಾಗಿರುವುದರಿಂದ ಭಿತ್ತನೆ ಕಾರ್ಯಗಳು ನಡೆಯಬೇಕಿದೆ, ಮಳೆ ಇಲ್ಲದೇ ಇರುವುದರಿಂದ ಮುಂಗಾರು ಹಂಗಾಮಿನ ಭತ್ತದ ನಾಟಿ ಕಾರ್ಯ ಬಹುತೇಕ ಗ್ರಾಮಗಳಲ್ಲಿ ಆರಂಭವಾಗಿಲ್ಲ, ನದಿ ತೀರದಲ್ಲಿ, ಕೊಳವೆ ಬಾವಿ ಪಂಪಸೆಟ್‌ಗಳನ್ನು ಹೊಂದಿರುವ ರೈತರು ಅಲ್ಲಲ್ಲಿ ಭತ್ತದ ನಾಟಿ ಕಾರ್ಯವನ್ನು ಮುಗಿಸಿದ್ದು, ಇನ್ನು ಕೆಲವು ಕಡೆಗಳಲ್ಲಿ ಭತ್ತದ ನಾಟಿ ಕಾರ್ಯನಡೆಯುತ್ತಿದೆ. ಆದರೆ ಜಲಾಶಯ ಭರ್ತಿಯಾಗದ ಹಿನ್ನೆಲೆಯಲ್ಲಿ ಕಾಲುವೆಗಳಿಗೆ ನೀರು ಬಿಟ್ಟಿಲ್ಲ. ಇದೀಗ ಜೀವನಾಡಿ ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ನೀರು ಬರುತ್ತಿದ್ದು, ಜಲಾಶಯಕ್ಕೆ ಬರುತ್ತಿರುವ ನೀರಿನ ಪ್ರಮಾಣ ಇದೇ ರೀತಿ ಮುಂದುವರಿದರೆ ಇನ್ನೊಂದು ವಾರದಲ್ಲಿ ಜಲಾಶಯ ಭರ್ತಿಯಾಗು ಲಕ್ಷಣಗಳು ಇದ್ದು, ನಂತರ ಈ ಭಾಗದಲ್ಲಿ ಭತ್ತದ ನಾಟಿ ಕಾರ್ಯ ವ್ಯಾಪಕವಾಗಿ ನಡೆಯಲಿದೆ ಎಂದ ಅವರು ನಿರಂತರ ಮಳೆಯಿಂದ ತಾಲ್ಲೂಕಿನಲ್ಲಿ ಯಾವುದೇ ಮನೆಗಳು ಬಿದ್ದಿರುವುದು ಬಿಟ್ಟರೆ ಯಾವುದೇ ಪ್ರಾಣಾಪಾಯಗಳಾಗಲಿ, ಬೆಳೆಗಳ ನಷ್ಟವಾಗಲಿ ಸಂಭವಿಸಿಲ್ಲವೆAದರು.

ಮನೆಗಳು ಬಿದ್ದಿರುವ ಗ್ರಾಮಗಳಾದ ಕಣ್ವಿ ತಿಮ್ಮಲಾಪುರ, ಕಂಪ್ಲಿ, ಎಮ್ಮಿಗನೂರು ಹಾಗೂ ನೆಲ್ಲುಡಿ ಗ್ರಾಮಗಳಿಗೆ ಪಿಡಿಒಗಳಾದ ಶಿಲ್ಪರಾಣಿ, ತಾರುನಾಯ್ಕ, ಶೇಷಗಿರಿ ಹರ‍್ವಿ, ಗ್ರಾಮಾಡಳಿತಾಧಿಕಾರಿಗಳಾದ ಎಚ್.ವಿ.ಮಂಜುನಾಥ್, ಮಂಜುನಾಥ್ ಸೇರಿದಂತೆ ಕಂದಾಯ ಮತ್ತು ಪಂಚಾಯ್ ರಾಜ್ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ