ಹುಡೇಂ ಗ್ರಾ.ಪಂ ಅಧ್ಯಕ್ಷರಾಗಿ ಬಿ ರಾಮಚಂದ್ರಪ್ಪ ಉಪಾಧ್ಯಕ್ಷರಾಗಿಪ್ಯಾರಿಮಾಭಿ ಅಬ್ದುಲ್ ಘನಿ ಸಾಬ್ ಆಯ್ಕ


ಕಾನ ಹೊಸಹಳ್ಳಿ: ಸಮೀಪದ ಹೂಡೇಂ ಗ್ರಾಮ ಪಂಚಾಯಿತಿಯ 2ನೇ ಅವಧಿಗೆ ಅಧ್ಯಕ್ಷರು ಉಪಾಧ್ಯಕ್ಷರ ಚುನಾವಣೆ ಜರಗಿತು. ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 19 ಜನ ಸದಸ್ಯರುಗಳನ್ನು ಹೊಂದಿದ್ದು, ಅಧ್ಯಕ್ಷ ಸ್ಥಾನಕ್ಕೆ ಬಿ ರಾಮಚಂದ್ರಪ್ಪ ಮತ್ತು ಜೋಳ್ಳು ಪಾಲಯ್ಯ ನಾಮಪತ್ರ ಸಲ್ಲಿಸಿದ್ದರು ಆದ್ದರಿಂದ ಅಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆಯಿತು ಒಟ್ಟು 19 ಜನ ಸದಸ್ಯರು ಮತದಾನ ಮಾಡಿದರು ಈ ಪೈಕಿ ಡಿ ರಾಮಚಂದ್ರಪ್ಪ ಇವರಿಗೆ 7 ಮತಗಳು ಹಾಗೂ ಜೊಳ್ಳು ಪಾಲಯ್ಯ ಇವರಿಗೆ 6 ಮತಗಳು ಬಂದಿದ್ದು. 6 ಮತಗಳು ತಿರಸ್ಕೃತಗೊಂಡಿವೆ ಆದ್ದರಿಂದ 7 ಮತಗಳನ್ನು ಪಡೆದು ಬಿ ರಾಮಚಂದ್ರಪ್ಪ ಇವರು ಅಧ್ಯಕ್ಷರಾಗಿದ್ದಾರೆ. ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಪ್ಯಾರಿ ಮಾಬಿ ಅಬ್ದುಲ್ ಘನಿಸಾಬ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಗ್ರಾಪಂ ಚುನಾವಣಾಧಿಕಾರಿ ಕೂಡ್ಲಿಗಿ ಸಿಡಿಪಿಒ ನಾಗನಗೌಡ ಪಾಟೀಲ್ ಘೋಷಿಸಿದ್ದಾರೆ.. ಈ ಸಂದರ್ಭದಲ್ಲಿ ಪಿಡಿಒ ಲಕ್ಷ್ಮಿ ಬಾಯಿ, ಸಿಪಿಐ ವೆಂಕಟಸ್ವಾಮಿ, ಪಿಎಸ್ಐ ಎರಿಯಪ್ಪ ಅಂಗಡಿ, ಕಾರ್ಯದರ್ಶಿಗಳಾದ ತಿಪ್ಪೇರುದ್ರಪ್ಪ, ಗ್ರಂಥಪಾಲಕ ಗುರುರಾಜ್. ಕಂದಾಯ ಇಲಾಖೆ, ಪೋಲಿಸ್ ಇಲಾಖೆ ಸೇರಿದಂತೆ ಗ್ರಾ.ಪಂ ಸರ್ವ ಸದಸ್ಯರು, ಸಿಬ್ಬಂದಿ ವರ್ಗ, ಸಾರ್ವಜನಿಕರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*