ಭದ್ರಾ ಜಲಾಶಯಕ್ಕೆ ಒಂದೇ ದಿನ 3 ಟಿಎಂಸಿ ನೀರು




ದಾವಣಗೆರೆ:ಮಲೆನಾಡಿನಲ್ಲಿ ಅತಿಯಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಭಾನುವಾರ ಒಂದೇ ದಿನ ಜಲಾಶಯಕ್ಕೆ 3 ಟಿಎಂಸಿ ನೀರು ಹರಿದುಬಂದಿದೆ.

ಜಲಾಶಯದಲ್ಲಿ ಭಾನುವಾರ ಬೆಳಗಿನ ಜಾವದ ವೇಳೆಗೆ 30.44 ಟಿಎಂಸಿ ನೀರು ಸಂಗ್ರಹ ಆಗಿತ್ತು. ಇಂದು ಬೆಳಗಿನ ಜಾವ 6 ಗಂಟೆ ವೇಳೆಗೆ ಇದರ ಪ್ರಮಾಣ33.83ಕ್ಕೆ ಏರಿದೆ. ಅಲ್ಲಿಗೆ ಒಟ್ಟಾರೆ 4.39 ಟಿಎಂಸಿ ನೀರು ಜಲಾಶಯಕ್ಕೆ ಹರಿದುಬಂದಿದೆ.

ಒಳ ಹರಿವಿನಲ್ಲೂ ಭಾರೀ ಏರಿಕೆ ಕಂಡುಬಂದಿದೆ. ನಿನ್ನೆ ಒಳ ಹರಿವಿನಿ ಪ್ರಮಾಣ5038 ಕ್ಯುಸೆಕ್ ಇತ್ತು. ಇಂದು ಇದು ಬರೋಬ್ಬರಿ12,169 ಕ್ಯುಸೆಕ್‌ಗೆ ಏರಿದೆ. ಹಾಲಿ ನೀರಿನ ಪ್ರಮಾಣ 145 ಅಡಿಗೆ ಏರಿದೆ. ಜಲಾಶಯದ ಎತ್ತರ 186 ಅಡಿ ಇದ್ದು, ಇನ್ನೂ 41 ಅಡಿ ತುಂಬುವುದು ಬಾಕಿ ಇದೆ. ಇಂದೂ ಸಹ ಜಲಾಶಯದ ಪಾತ್ರದಲ್ಲಿ ಉತ್ತಮ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಇನ್ನೂ 2-3 ದಿನ ಇದೇ ಪ್ರಮಾಣದಲ್ಲಿ ನೀರು ಹರಿದುಬರುವುದು ಖಚಿತವಾಗಿದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪಡಿತರ ವಿತರಣೆಯಲ್ಲಿ ಸರ್ವರ್ ದೋಷ ಕಾದುಕುಳಿತ ಬಡ ಕುಟುಂಬಗಳು

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಪಿಡಿಓ,ಕಾರ್ಯದರ್ಶಿ

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*