ಮಣಿಪುರ ರಾಜ್ಯದಲ್ಲಿ ದಲಿತ ಮಹಿಳಾ ಮೇಲೆ ನಡೆದು ಕೃತ್ಯವನ್ನು ಖಂಡಿಸಿ: ಡಿಎಸ್ಎಸ್ ಜಿಲ್ಲಾಧ್ಯಕ್ಷ ಬದ್ದಿ ಮರಿಸ್ವಾಮಿ ಆಕ್ರೋಶ

ಕೊಟ್ಟೂರು :ಮಣಿಪುರ ರಾಜ್ಯದ ಕಾಂಗ್ ಗೋಷ್ಠಿ ಜಿಲ್ಲೆಯ ಕೊಕ್ಕಿ ಬುಡಕಟ್ಟು ಸಮುದಾಯದ ಇಬ್ಬರು ದಲಿತ ಮಹಿಳಾ ಮೇಲೆ ನಡೆದ ಕೃತ್ಯಗಳು ಇಡೀ ದೇಶವೇ ಪ್ರಪಂಚದ ಎದುರು ತಲೆತಗ್ಗಿಸುವಂತಹ ಘಟನೆ ಸಂಭವಿಸಿದೆ ಕೃತ್ಯ ಎಸಗಿದವರ ವಿರುದ್ಧ ಯಾವುದೇ ಕ್ರಮವಹಿಸದೆ ಇರುವುದು ಅತ್ಯಂತ ಖಂಡನೆಯ ಎಂದು ಡಿಎಸ್ಎಸ್ ಜಿಲ್ಲಾಧ್ಯಕ್ಷ ಬದ್ದಿ ಮರಿಸ್ವಾಮಿ ಯವರು ಮಣಿಪುರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.


ಕೊಟ್ಟೂರು ಪಟ್ಟಣದಲ್ಲಿ ಬುಧವಾರ ತಾಲೂಕು ಕಚೇರಿಯ ಮುಂಭಾಗದಲ್ಲಿ ಮಾನ್ಯ ತಹಸೀಲ್ದಾರ್ ಮೂಲಕ ರಾಷ್ಟಪತಿ ದ್ರೌಪದಿ ಮುರ್ಮ ರವರಿಗೆ ಮನವಿ ಸಲ್ಲಿಸಿ ಮಾತನಾಡಿದರು ಬುಡಕಟ್ಟು ಮಹಿಳೆಯರ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ, ಬೆತ್ತಲೆ ಮೆರವಣಿಗೆ ಇಡೀ ದೇಶವೇ ನಾಚಿಕೆಯಿಂದ ತಲೆ ತಗ್ಗಿಸುವಂತೆ ಆಗಿದೆ ಈ ಘಟನೆಗಳನ್ನು ಪ್ರಪಂಚದ ಎಲ್ಲ ಮಾಧ್ಯಮಗಳಲ್ಲಿ ಪ್ರಸಾರ ಮಾಡುತ್ತಿವೆ. ಇಷ್ಟು ಎಲ್ಲ ಆದರೂ ಕೂಡ ಅಲ್ಲಿನ ಸರ್ಕಾರವು ಕೃತ್ಯ ಮಾಡಿದವರು ವಿರುದ್ಧ ಯಾವುದೇ ಕ್ರಮ ವಹಿಸದೆ ಇರುವುದು ಅತ್ಯಂತ ಆಗಾದ ವಿಷಯವಾಗಿದೆ ಇದರಿಂದಾಗಿ ಅಲ್ಲಿನ ಸರ್ಕಾರವನ್ನು ವಜಾಗೊಳಿಸಿ ರಾಷ್ಟಪತಿ ಆಡಳಿತವನ್ನು ಜಾರಿಗೊಳಿಸಬೇಕು ದೇಶದಲ್ಲಿ ಪ್ರಜಾಪ್ರಭುತ್ವ ಉಳಿದು ಹೆಣ್ಣಿನ ರಕ್ಷಣೆಯಾಗಬೇಕು ತಪ್ಪಿತಸ್ಥರಿಗೆ ಕೂಡಲೇ ಬಂಧಿಸಿ ಗಲ್ಲು ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದರು 

ಈ ಸಂದರ್ಭದಲ್ಲಿ ಡಿಎಸ್ಎಸ್ ತಾಲೂಕು ಸಂಚಾಲಕರಾದ ಕನ್ನಾಕಟ್ಟಿ. ಶಿವರಾಜ್, ಡಿ ಎಸ್ ಎಸ್  ತಾಲೂಕು ಅಧ್ಯಕ್ಷ ಪಿ ಚಂದ್ರಶೇಖರ್, ಆರ್. ಶ್ರೀನಿವಾಸ್, ಪಿ. ಶಿವರಾಜ್, ಸೋಮಶೇಖರ್, ನಾಗರಾಜ್, ಮಣಿಕಂಠ, ಸಮೀರ್, ಮುಂತಾದವರು ಇದ್ದರು.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*