ಹದಗೆಟ್ಟ ರಸ್ತೆ, ಕೊಚ್ಚೆಯಂತಾದ ತಹಶೀಲ್ದಾರ್ ಕಛೇರಿಯ ಆವರಣ

 


ಕೊಟ್ಟೂರು ಪಟ್ಟಣದ ತಹಶೀಲ್ದಾರರ ಕಛೇರಿಯ ಹತ್ತಿರ ಸಾರ್ವಜನಿಕರು ಹೋದರೆ, ಖಂಡಿತವಾಗಿ ಬೀಳುವುದು ಶತಃಸಿದ್ಧ, ಕಳೆದ ವಾರದಿಂದಲೂ ಸುರಿಯುತ್ತಿರುವ ಮಳೆಯಿಂದ ತಹಶೀಲ್ದಾರರ ಕಛೇರಿಯ ರಸ್ತೆ, ನೀರು ತುಂಬಿಕೊಂಡು ಆವರಣವೆಲ್ಲಾ ಕೊಚ್ಚೆಯಾಗಿದ್ದರಿಂದ ಓಡಾಡಲು ಜನರು ಬೀಳುವ, ಭಯಪಡುವಂತಹ ವಾತಾವರಣ ನಿರ್ಮಾಣವಾಗಿದೆ.  ಸಾರ್ವಜನಿಕರು ದೂರದಲ್ಲಿ ವಾಹನ ಬಿಟ್ಟು, ಕಛೇರಿಗೆ ಹೋಗುವವರು ಕೊಚ್ಚೆಯಲ್ಲಿ ಕಾಲಿಟ್ಟು ಬಿದ್ದು ಮೈಯೆಲ್ಲಾ ಮಣ್ಣಾಗಿರುವ ತುಂಬಾ  ಉದಾಹರಣೆಗಳಿವೆ. 
ತಹಶೀಲ್ದಾರರ ಕಛೇರಿಯ ಹತ್ತಿರ ಸುಮಾರು ದೂರದಲ್ಲಿ ಡಾಂಬರು ರಸ್ತೆಯಿದ್ದು, ಅದು ಮುಗಿದ ನಂತರ ಬರೀ ಮಣ್ಣಿರುವುದರಿಂದ ವೃದ್ಧರು ಓಡಾಡುವುದೇ ದುಸ್ತರವಾಗಿದೆ. ಸರ್ಕಾರದ ಯೋಜನೆಗಳಾದ ಗೃಹಲಕ್ಷ್ಮಿ, ಗೃಹಜ್ಯೋತಿ ಹಾಗೂ ಇನ್ನಿತರೆ ಕಂದಾಯ ಇಲಾಖೆಗೆ ಸಂಬಂಧಪಟ್ಟ ಸೇವೆಗಳಿಗೆ ಜನರು ವಿಪರೀತವಾಗಿ ಬರುತ್ತಿದ್ದಾರೆ. ಆದರೆ ಜನರು ತುಂಬಾ ಆತಂಕದಿಂದ ಓಡಾಡುತ್ತಿದ್ದಾರೆ. ಅಲ್ಲದೇ ಇದೇ ಭಾಗದಲ್ಲಿ ಖಾಸಗಿ ಶಾಲೆಯೊಂದಿದ್ದು, ಶಾಲೆಗೆ ಬರುವ ಮಕ್ಕಳೂ ಸಹ ಕೆಸರಿನಲ್ಲಿ ಓಡಾಡಿಕೊಂಡೇ ಶಾಲೆಗೆ ಹೋಗುತ್ತಿದ್ದಾರೆ. ಬೈಕ್ ಸವಾರರು ಕ್ಷಣಕಾಲ ಮೈಮರೆತರೂ ಬೀಳುವುದಂತೂ ಶತಃಸಿದ್ಧ.
ಕೂಡಲೇ ಸಂಬಂಧಪಟ್ಟವರು ಈ ಬಗ್ಗೆ ಕ್ರಮವಹಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
.........................................................

ಕೋಟ್ 
ಪ್ರತಿ ನಿತ್ಯ ತಹಸೀಲ್ದಾರ್ ರವರು ತಮ್ಮ ವಾಹನದಲ್ಲಿ ತಾಲೂಕು ಕಚೇರಿಗೆ ಬರುವಾಗ  ಇಲ್ಲಿನ ಕೆಸರು ಗದ್ದೆ ಆಗಿರುವ  ಆವರಣವನ್ನು ಗಮನಿಸಿದರು ಕೂಡ ಇದನ್ನು ಸರಿಪಡಿಸುವಂತ್ತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚಿಸಿದರು ಸಾಕು ಈ ಆವರಣ ಸ್ವಚ್ಛಗೊಳ್ಳುತ್ತದೆ ಸಾರ್ವಜನಿಕರು ಆಗುವ ಅನಾನುಕೂಲ ಬಗ್ಗೆ ಬೇಗನೆ  ಗಮನ ಹರಿಸಬೇಕು

ಪಿ. ಚಂದ್ರಶೇಖರ್
ಡಿಎಸ್ಎಸ್ ಮುಖಂಡರು 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ