ಕೆಪಿಸಿಸಿ ಸಂಯೋಜಕರಾದ ಪಲ್ಲವಿ ಜಿ. ರವರ ನೇತೃತ್ವಲ್ಲಿ ಸಭೆ

 


ಬೆಂಗಳೂರು: ಮುಖ್ಯಮಂತ್ರಿಗಳೊಂದಿಗೆ ಕೆಪಿಸಿಸಿ ಸಂಯೋಜಕರಾದ ಪಲ್ಲವಿ ಜಿ. ನೇತೃತ್ವಲ್ಲಿ ಕುಳುವ ಸಂಘದ ಪದಾಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಸಮ್ಮುಖದಲ್ಲಿ ಸಮಾಜದ ಕುಂದು ಕೊರತೆ ಸಭೆ ನಡೆಯಿತು. ಕುಳುವ ಮಹಾಸಂಘದ ರಾಜ್ಯಾಧ್ಯಕ್ಷ ಶಿವಾನಂದ ಎಂ. ಭಜಂತ್ರಿ ಅದ್ಯಕ್ಷತೆಯಲ್ಲಿ ವಹಿಸಿದ್ದರು.

ಪ್ರಧಾನ ಕಾರ್ಯದರ್ಶಿ ಬಿ.ಎಸ್.ಆನಂದ್‌ಕುಮಾರ್ ಏಕಲವ್ಯ ಸಭೆಯಲ್ಲಿ ಕುಳುವ ಸಮಾಜದ ಪರವಾಗಿ ಸವಿವರವಾಗಿ ಮಂಡಿಸಿದ ಬೇಡಿಕೆಗಳನ್ನು ಆಲಿಸಿದ ಮಾನ್ಯ ಮುಖ್ಯಮಂತ್ರಿಗಳು, ೨೦೧೩-೨೦೧೪ನೇ ಸಾಲಿನ ಬಜೆಟ್‌ನಲ್ಲಿ ಘೋಷಣೆಯಾದ ಕೊರಮ–ಕೊರಚ ಸಮುದಾಯದ ಅಭಿವೃದ್ಧಿ ನಿಗಮಮನ್ನು ಅನುಷ್ಠಾನಗೊಳಿಸುವ ಬಗ್ಗೆ ಪರಿಶೀಲನೆ ಮಾಡುವುದಾಗಿ ತಿಳಿಸಿದರು.

ಶ್ರೀ ಶರಣ ಕುಳುವ ನುಲಿಯ ಚಂದಯ್ಯನವರ ಜಯಂತಿಯನ್ನು ಸಮಾಜ ಕಲ್ಯಾಣ ಇಲಾಖೆ ಮೂಲಕ ಆಚರಿಸುವಂತೆ ತಿದ್ದುಪಡಿ ಆದೇಶ ಹೊರಡಿಸುವ ಬಗ್ಗೆ ಭರವಸೆ ನೀಡಿದರು. “ಶ್ರೀ ಕುಳುವ ನುಲಿಯಚಂದಯ್ಯ ಭವನ” ನಿರ್ಮಾಣಕ್ಕೆ ಬೆಂಗಳೂರು ನಗರದಲ್ಲಿ ಬಿಡಿಎ/ ಕಂದಾಯ ಇಲಾಖೆ ಮೂಲಕ ನಿವೇಶನ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸಮಾಜದ ಮಠ ಮಠ/ವಿದ್ಯಾಸಂಸ್ಥೆ ಸ್ಥಾಪಿಸಲು ಅಗತ್ಯ ಭೂಮಿ ಮಂಜೂರಾತಿ ಮಾಡುವ ಬಗ್ಗೆ ಪರಿಶೀಲಿಸಿ ಕ್ರಮ ವಹಿಸಲಾಗುವುದೆಂದು ತಿಳಿಸಿದರು. 

ಶಹನಾಯಿ ಮಾಂತ್ರಿಕ ಶ್ರೀ ಸನಾದಿ ಅಪ್ಪಣ್ಣನವರ ಜನ್ಮಸ್ಥಳ ಬಾಗಲಕೋಟೆ ಜಿಲ್ಲೆಯ ಬೀಳಗಿಯಲ್ಲಿ ಅವರ ಸಮಾಧಿಯನ್ನು ಅಭಿವೃದ್ಧಿಪಡಿಸಿ ಸ್ಮಾರಕ ಭವನ ಮತ್ತು ಸಂಗೀತ ಮ್ಯೂಸಿಯಂ ಸ್ಥಾಪಿಸಿ ಶ್ರೀ ಸನಾದಿ ಅಪ್ಪಣ್ಣ್ತ ಹೆಸರಿನಲ್ಲಿ ರಾಜ್ಯ ಮಟ್ಟದ ಪ್ರಶಸ್ತಿ ಸ್ಥಾಪಿಸುವ ಬಗ್ಗೆ ಹಾಗೂ ೧೯೦೦ ದಶಕದಲ್ಲಿಕ ಕರ್ನಾಟಕದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಬ್ರ‍್ರಿಟೀಷರಿಂದ ಗಲ್ಲು ಶಿಕ್ಷೆಗೆ ಒಳಗಾಗಿ ವೀರಮರಣ ಹೊಂದಿದ ಕರ್ನಾಟಕ ರಾಬಿನ್‌ಹುಡ್ ಎಂದೇ ಹೆಸರಾದ ಕನ್ನೇಶ್ವರ ರಾಮನ ಹೆಸರಿನಲ್ಲಿ ಕರ್ನಾಟಕ ಸರ್ಕಾರ “ಸ್ವತಂತ್ರ ವೀರ ಕನ್ನೇಶ್ವರ ರಾಮ” ಹೆಸರಿನಲ್ಲಿ ೫.೦೦ಲಕ್ಷ ವೆಚ್ಚದಲ್ಲಿ ಪ್ರಶಸ್ತಿ ಸ್ಥಾಪಿಸುವ ಬಗ್ಗೆ ಪರಿಶೀಲಿಸುವುದಾಗಿ ತಿಳಿಸಿದರು.

ಎಸ್.ಸಿ.ಎಸ್.ಪಿ ಯೋಜನೆಯಡಿ ಪಾರಂಪರಿಕ ಹಂದಿ ಸಾಕಾಣಿಕೆದಾರರ ಆರ್ಥಿಕ ಅಭಿವೃದ್ಧಿಗಾಗಿ “ವರಾಹಮಿತ್ರ” ನೂತನ ಯೋಜನೆ ರೂಪಿಸಿ ಜಾರಿಗೊಳಿಸುವ ಬಗ್ಗೆ, ಪಾರಂಪರಿಕವಾಗಿ ಈಚಲು, ಬಿದಿರು ಮತ್ತು ಬೆತ್ತಗಳಿಂದ ಬುಟ್ಟಿ ಹಾಗೂ ಇತರೆ ಕರಕುಶಲ ಉತ್ಪನ್ನಗಳನ್ನು ತಯಾರು ಮಾಡುವವರ ಕೌಶಲ್ಯವನ್ನು ಉತ್ತೇಜಿಸಿ ಆರ್ಥಿಕವಾಗಿ ಸದೃಢವಾಗಲು ಗುಡಿ ಕೈಗಾರಿಕೆಯನ್ನು ಅಭಿವೃದ್ಧಿಪಡಿಸಿ ಮಾರುಕಟ್ಟೆ ಕಲ್ಪಿಸಲು “ಬಿದಿರು ಹಸಿರು ಮಿತ್ರ” ನೂತನ ಕಾರ್ಯಕ್ರಮವನ್ನು ಆರಂಭಿಸುವ ಬಗ್ಗೆ ಪರಿಶೀಲಿಸುವುದಾಗಿ ತಿಳಿಸಿದರು.

ಅಳಿವಿನ ಅಂಚಿನಲ್ಲಿರುವ ಕೊರಮ-ಕೊರಚರ ಕುಳುವ ಭಾಷೆ ಸಂರಕ್ಷಿಸಲು ವಿಶ್ವವಿದ್ಯಾಲಯದ ಭಾಷಾ ಸಂಶೋಧನಾ ಅಧ್ಯಯನ ಕೇಂದ್ರದ ಮೂಲಕ ಅಧ್ಯಯನ ನಡೆಸಲು ಕ್ರಮ ಕೈಗೊಳ್ಳವುದಾಗಿ ತಿಳಿಸಿದರು. ವಿಜಯಪುರ ಜಿಲ್ಲೆಯ ಹೀರೆ ಶಿವಣಗಿ ಗ್ರಾಮದಲ್ಲಿ ಶ್ರೀ ನುಲಿಚಂದಯ್ಯರವರ ಜನ್ಮ ಸ್ಥಳವನ್ನು ಜೀರ್ಣೋದ್ದಾರ ಮಾಡಲು ಅನುದಾನು ನೀಡುವ ಬಗ್ಗೆ ಪರಿಶೀಲಿಸುವುದಾಗಿ ತಿಳಿಸಿದರು. 

ಭಾರತೀಯ ಕುಳುವ ಮಹಾಸಂಘದ ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿ ಆದರ್ಶ್ ಯಲ್ಲಪ್ಪ ಮಾತನಾಡಿ ಸಾಮಾಜಿಕ ನ್ಯಾಯದ ತಳಹದಿಯಲ್ಲಿ ಪರಿಶಿಷ್ಟ ಜಾತಿಯ ೫ನೇ ಅತೀ ದೊಡ್ಡ ಜಾತಿಯಾಗಿರುವ ಅಲೆಮಾರಿ ಕೊರಮ-ಕೊರಚ(ಕುಳುವ) ಜನಾಂಗಕ್ಕೆ ೨೦೨೩ರ ಸಾರ್ವತ್ರಿಕ ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷದಲ್ಲಿ ನಿಷ್ಠಾವಂತರಾಗಿ ದುಡಿಯುತ್ತಿರುವ ನಮ್ಮ ಸಮಾಜದ ರಾಜಕೀಯ ಪ್ರತಿಭಾವಂತರಿಗೆ ಅವಕಾಶ ವಂಚನೆಯಾಗಿರುವ ಬಗ್ಗೆ ಪ್ರಸ್ತಾಪ ಮಾಡಿ “ಸರ್ಕಾರದಲ್ಲಿ ನಾಮನಿರ್ದೇಶಿತ ಸ್ಥಾನಮಾನ ನೀಡಿ ರಾಜಕೀಯ ಪ್ರಾತಿನಿಧ್ಯ ಕಲ್ಪಿಸುವಂತೆ” ಕೋರಿದರು.

ಮುಖ್ಯಮಂತ್ರಿಳು ಈ ಬಾರಿ ಶಿವಮೊಗ್ಗ ಗ್ರಾಮಾಂತರ ವಿಧಾನ ಸಭಾ ಕ್ಷೇತ್ರದಲ್ಲಿ ಶ್ರೀಮತಿ ಪಲ್ಲವಿ ರವರಿಗೆ ಟಿಕೆಟ್ ಬಹುತೇಕ ಖಚಿತವಾಗಿತ್ತು. ಪಕ್ಷಕ್ಕೂ ಸಹ ಅವರು ಗೆದ್ದು ಬರುವ ಬಗ್ಗೆ ವರದಿಗಳು ಬಂದಿದ್ದವು. ಆದರೇ ಕೊನೇ ಕ್ಷಣದ ಜಾತಿ ಲೆಕ್ಕಾಚಾರದಲ್ಲಿ ಎಡಗೈ ಸಮುದಾಯಕ್ಕೆ ಟಿಕೆಟ್ ನೀಡಬೇಕಾಯಿತು ಎಂದು ವಿಷಾದ ವ್ಯಕ್ತಪಡಿಸಿ ಮುಂದಿನ ದಿನಗಳಲ್ಲಿ ಪರಿಶಿಷ್ಟ ಜಾತಿ ಅಲೆಮಾರಿ ಕೊರಮ-ಕೊರಚ(ಕುಳುವ) ಸಮಾಜಕ್ಕೆ ಸರ್ಕಾರದಲ್ಲಿ ನಾಮನಿರ್ದೇಶಿತ ಸ್ಥಾನಮಾನ ನೀಡಿ ರಾಜಕೀಯ ಪ್ರಾತಿನಿಧ್ಯ ಕಲ್ಪಿಸಿ ಸಾಮಾಜಿಕ ನ್ಯಾಯ ಒದಗಿಸುವ ಭರವಸೆ ನೀಡಿದರು. 

ಸಭೆಯಲ್ಲಿ ಸಚಿವರಾದ ಭೈರತಿ ಸುರೇಶ್, ಕೆಪಿಸಿಸಿ ಮುಖಂಡ ವೆಂಕಟೇಶ್, ರಾಜ್ಯ ಮಹಿಳಾ ಅಧ್ಯಕ್ಷರು ಶ್ರೀಮತಿ ಸುಗುಣಾ ಅಶ್ವಥ್, ಜಂಟಿ ಕಾರ್ಯದರ್ಶಿ ಕಿರಣ್‌ಕುಮಾರ್ ಕೊತ್ತಗೆರೆ ರಾಜ್ಯ ಉಪಾಧ್ಯಕ್ಷರು ಶ್ರೀಮತಿ ಭೀಮಾಪುತ್ರಿ ನಾಗಮ್ಮ, ಸಂಘಟನಾ ಕಾರ್ಯದರ್ಶಿಗಳಾದ ಎಂ.ಎ.ರಂಗಸ್ವಾಮಿ, ರಾಮನಗರ ವೆಂಕಟೆಶ್, ನೌಕರರ ಘಟಕದ ಸಂಚಾಲಕ ವಿ.ರವಿ ಕುಮಾರ್, ಬೆಂಗಳೂರು ನಗರ ಸಂಚಾಲಕ ಅರವಿಂದ್ ಜಯರಾಮ್ ಉಪಸ್ಥಿತರಿದ್ದರು.    

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ