ಗುಡೇಕೋಟೆಯಲ್ಲಿ ಭಾವೈಕ್ಯತೆಯ ಮೊಹರಂ ಸಂಭ್ರಮ
ಗುಡೇಕೋಟೆ: ಪ್ರತಿ ವರ್ಷದಂತೆ ಈ ವರ್ಷವು ಮೋಹರಂ ಹಬ್ಬವು ಗುಡೇಕೋಟೆ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು ಸಂಭ್ರಮದಿಂದ ಆಚರಿಸಿದರು.
ಭಾವೈಕ್ಯತೆಗೆ ಸಾಕ್ಷಿ, ಆಲಾಯಿ ದೇವರಿಗೆ ಹಾಕಿದ ಹಾರಗಳು, ನೃತ್ಯ ಗಮನ ಸೆಳೆದವು. ಹಿಂದೂ ಮುಸ್ಲಿಂ ಭಾವೈಕೈಯ ಪ್ರತೀಕವಾದ ಮೊಹರಂ ಹಬ್ಬದ ಸಂಭ್ರಮದ ಮನೆ ಮಾಡಿತ್ತು. ಸುಮಾರು 9 ದಿನಗಳ ವರೆಗೆ ಮೊಹರಂ ಹಬ್ಬವನ್ನು ಆಚರಿಸಲಿದ್ದು ಶನಿವಾರ ಬೆಂಕಿಯ ಕೆಂಡವನ್ನು ಹಾಯ್ದು ಹೋಗುವ (ಅಗ್ನಿ) ದೃಶ್ಯ ಕಿಚ್ಚು ಹತ್ತಿಸುವಂತಿತ್ತು.
ಲಾಲ್ ಸಾಬ್ ಮತ್ತು ಹುಸೇನ್ ಸಾಬ್ ಅವರ ತ್ಯಾಗ ಬಲಿದಾನದ ಪ್ರತೀಕವಾಗಿ ಆಚರಿಸುವ ಮೊಹರಂ ಹಬ್ಬವನ್ನು ಪಾಳೆಗಾರರ ಸಂಸ್ಥಾನ ಗುಡೇಕೋಟೆಯಲ್ಲಿ ಹಿಂದೂ ಮುಸ್ಲಿಂ ಸಮುದಾಯ ಸಾಮರಸ್ಯದಿಂದ ಆಚರಿಸುವುದು ವಾಡಿಕೆ, ಸುಮಾರು 9 ದಿನಗಳ ವರೆಗೂ ವಿಭೀನ್ನವಾದ ಆಚರಣೆ ಇರುತ್ತದೆ. ಅದರಲ್ಲಿ ಆಲಯಿ
ಕುಣಿತ ಜನರನ್ನು ಗಮನ ಸೆಳೆಯುತ್ತದೆ. ಇನ್ನೂ ಭಾರಿ ಗ್ರಾತದ ಅಗ್ನಿ ಕುಂಡದಲ್ಲಿ ಅಲಾಯಿ ದೇವರು ಹೊತ್ತವರು ಹಾಯ್ದು ಹೋಗುವ ದೃಶ್ಯ ನೋಡುಗರ ಎದೆ ಝಲ್ ಎನ್ನುವಂತಿತ್ತು. ಹಿಂದೂ ಮುಸ್ಲಿಂ ಜನಾಂಗದವರು ಸೇರಿ ಮೊಹರು ಆಚರಿಸುತ್ತಾರೆ. ಮೊಹರಂ ಮೆರವಣಿಗೆಯಲ್ಲಿ ಹಾಡುಗಳನ್ನು ಊರಿನವರು ಅನೇಕ ಹಿರಿಯರು ಯುವಕರು ಹಾಡುತ್ತಾ ಮೆರವಣಿಗೆ ಮಾಡುವುದು ಮತ್ತೊಂದು ವಿಶೇಷವಾಗಿದೆ. ಮೊಹರಂ ಸಂಭ್ರಮ ಗ್ರಾಮದಲ್ಲಿ ಯಾವುದೇ ರೀತಿಯ ಭೇದಭಾವ ಇಲ್ಲದೆ ಹಿಂದೂ ಮುಸ್ಲಿಂ ಏಕತೆಯನ್ನು ಸಾರುವ
ಭಾವೈಕ್ಯತೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.ಗುಡೇಕೋಟೆ ಪೋಲೀಸ್ ಠಾಣೆ ಪಿಎಸ್ಐ ಮಾಲೀಕ್ ಸಾಹೇಬ್ ಕಲಾರಿ ಹಾಗೂ ಸಿಬ್ಬಂದಿ ವರ್ಗದವರು ಠಾಣಾ ವ್ಯಾಪ್ತಿಯ ಯಾವುದೇ ಗ್ರಾಮಗಳಲ್ಲಿ ಅಹಿತಕರ ಘಟನೆ ನಡೆಯದಂತೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ