ಹಿಂದೂ–ಮುಸ್ಲಿಮರು ಸೌಹಾರ್ದದಿಂದ ಹಬ್ಬ ಆಚರಣೆ
ಕೊಪ್ಪಳ ತಾಲೂಕಿನ ಹಳೇ ಬಂಡಿ ಹರ್ಲಾಪುರ ಗ್ರಾಮ ದಲ್ಲಿ ಮೊಹರಂ ಹಬ್ಬದ ಮದ್ಯರಾತ್ರಿ ಕತ್ತಲ ರಾತ್ರಿ ವಿಜೃಂಭಣೆದಿಂದ ಆಚರಿಸಲಾಯಿತು,
ಶುಕ್ರವಾರ ವಿವಿಧ ಕಡೆಗಳಿಂದ ಅಪಾರ ಸಂಖ್ಯೆಯಲ್ಲಿ ಜನ ಬಂದು ಪೀರಲ ದೇವರ ದರ್ಶನ ಪಡೆದರು. ಹಿಂದೂ–ಮುಸ್ಲಿಮರು ಸೌಹಾರ್ದದಿಂದ ಹಬ್ಬ ಆಚರಿಸಿದರು.
ಗ್ರಾಮದಲ್ಲಿ ಹಬ್ಬವನ್ನು ಧರ್ಮತೀತವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ನಮ್ಮ ಮುತ್ತಾತ, ತಾತ ಹಾಗೂ ತಂದೆಯವರು ಪ್ರತಿವರ್ಷ ಅದ್ದೂರಿಯಾಗಿ ಹಬ್ಬದಲ್ಲಿ ಪಾಲ್ಗೊಂಡು ಆಚರಿಸುತ್ತಿದ್ದರು. ನಾವು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. ನಮ್ಮ ಊರು ಭಾವೈಕ್ಯದ ಕೊಂಡಿಯಾಗಿದೆ’ ಎನ್ನುತ್ತಾರೆ ಗ್ರಾ.ಪಂ. ಸದ್ಯಸ, ಸರ್ವರ್ ಅಲಿ, ಸದರಿ ಗ್ರಾಮ ಪಂಚಾಯತ್ ಸದಸ್ಯ ಆಂಜನೇಯನಲು, ಸರ್ವರ ಅಲಿ, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಹನುಮಂತಪ್ಪ ಕಾಟ್ರಳ್ಳಿ, ಹನುಮಂತಪ್ಪ ಕರಡಿ,ಹಾಗೂ ಎಸ್ಡಿ ಎಮ್ ಸಿ ಅಧ್ಯಕ್ಷ ಫಕೀರಸಬ್ ಯಡಿಯಪುರ, ಬಶೀರ್ ಸಾಬ್, ಫಿರೋಜ್ ಖಾನ್,ವೀರೇಶ್ ಮುದಗಲ್, ನಾಗರಾಜ್ ಬಳ್ಳಾರಿ, ಯಮನೂರ ಸಾಬ್ ಬಹದ್ದೂರ್ ಬಂಡಿ, ಸೋಮಶೇಖರ್ ಉಪ್ಪಾರ್, ಕರಿಯಪ್ಪ ಶಿವಪುರ,ಕನಕಪ್ಪ ಮುಂಡರಗಿ, ಗ್ರಾಮದ ಮುಖಂಡರುಗಳು ಮತ್ತು ಯುವಕರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ