*ಗುಡೇಕೋಟೆಯಲ್ಲಿ ಶಾಂತಿಯುತವಾಗಿ ಕತ್ತಲರಾತ್ರಿ ಆಚರಣೆ*

*ಗುಡೇಕೋಟೆ*:- ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಗ್ರಾಮದಲ್ಲಿ ಶಾಂತಿಯುತವಾಗಿ ಮೊಹರಂ ಹಬ್ಬದ ಕತ್ತಲರಾತ್ರಿ ಆಚರಿಸಲಾಯಿತು.

ಮೊಹರಂ ಹಬ್ಬ ಇಂದು ಹಾಗೂ ಮುಸ್ಲಿಮರ ಭಾವೈಕತೆಯನ್ನು ಸೂಚಿಸುವ ಹಬ್ಬ. ಈ ಹಬ್ಬದಲ್ಲಿ ಹಿಂದುಗಳು ಕೂಡ ಪ್ರಮುಖ ಪಾತ್ರ ವಹಿಸುತ್ತಾರೆ. 


ಮೊಹರಂನ 9ನೇ ದಿನವನ್ನು ಆಶುರಾ,ಕತ್ತಲರಾತ್ರಿ ಎಂದು ಕರೆಯುತ್ತಾರೆ. ಇದು ಮುಸ್ಲಿಮರಿಗೆ ಮಹತ್ವದ ದಿನವಾಗಿದೆ.ಸುನ್ನಿ ಮತ್ತು ಶಿಯಾ ಮುಸ್ಲಿಮರು ಮೊಹರಂ ಅನ್ನು ವಿಭಿನ್ನವಾಗಿ ಆಚರಿಸುತ್ತಾರೆ. ಅನೇಕ ಸುನ್ನಿ ಮುಸ್ಲಿಮರಿಗೆ ಈ ತಿಂಗಳು ಇಸ್ಲಾಮಿಕ್ ನ ಹೊಸ ವರ್ಷ ಆರಂಭವಾಗಿದೆ. ಶಾಂತಿಯ ಪ್ರತಿಬಿಂಬವಾಗಿದೆ. ಆದರೆ ಇಸ್ಲಾಂನ ಶಿಯಾವನ್ನು ಅನುಸರಿಸುವ ಮುಸ್ಲಿಮರಿಗೆ, ಈ ತಿಂಗಳು ಇಸ್ಲಾಮಿಕ್ ಇತಿಹಾಸದಲ್ಲಿ ದುಃಖದ ಪಶ್ಚಾತ್ತಾಪದ ದಿನವಾಗಿ ಆಚರಿಸುತ್ತಾರೆ.


ಶಿಯಾ ಮುಸ್ಲಿಮರಿಗೆ, ಮೊಹರಂ ತಿಂಗಳು, ಪ್ರವಾದಿ ಮಹಮ್ಮದ್ ಪೈಗಂಬರ್ ಮೊಮ್ಮಗ ಹುಸೇನ್ ಇಭ್ನಾ ಅಲಿಯಾ ಸಾವನ್ನು ನೆನಪಿಸುತ್ತದೆ.ಖಾಲೀಫಾ ಯಜಿದ್ನಿಂದ ಕ್ರಿ,ಶ, 680 ರಲ್ಲಿ ಅಶುರಾ ದಿನದಂದು ಕರುಬಲಾ ಎಂಬ ಮರುಭೂಮಿಯಲ್ಲಿ ನಡೆದ ತುಮಲ ಯುದ್ಧದಲ್ಲಿ ಹುಸೇನ್ ನನ್ನು ಕೊಲ್ಲಲಾಯಿತು. ಹೀಗಾಗಿ ಅನೇಕ ಶಿಯಾಗಳು ಈ ತಿಂಗಳ ಪ್ರವಾದಿಯ ಕುಟುಂಬದ ಶೌರ್ಯವನ್ನು ನೆನಪಿಸಿಕೊಂಡು ದುಃಖಿಸುತ್ತಾರೆ.


ಒಟ್ಟಾರೆಯಾಗಿ ಹಿಂದೂ ಮುಸ್ಲಿಂ ಜನರು ಆಚರಿಸುವ ಹಬ್ಬ ಮೊಹರಂ, ಕತ್ತಲರಾತ್ರಿ ದಿನ ವಿವಿಧ ಪಂಜಾಗಳು ಇಡೀ ರಾತ್ರಿ ಒಬ್ಬರಿಗೊಬ್ಬರು ಭೇಟಿ ನೀಡುವ ಮೂಲಕ ಗ್ರಾಮದ ವಿವಿಧ ಭಾಗಗಳಲ್ಲಿ ಸಂಚರಿಸಿ ಸಂಜೆ ಜಾವ ಬೀಬೀ ಫಾತಿಮಾ ಪಂಜಾಕ್ಕೆ ಭಕ್ತರ ಹರಕೆ ತೀರಿಸಿದರು. ಯುವಕರು ಹೆಜ್ಜೆ ಹಾಕಿದ ದೇಹ ದಂಡಿಸುವ ದೃಶ್ಯ ಸಾಮಾನ್ಯವಾಗಿತ್ತು.ಗುಡೇ ಕೋಟೆಯ ಮೊಹರಂ ಹಬ್ಬವನ್ನು ಶಾಂತಿಯುತವಾಗಿ ಆಚರಿಸಿ ಭಾವೈಕ್ಯತೆ ಮೂಡಿಸಲಾಗಿದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ