ಎಸ್.ಎಸ್.ಕೆ ಸಮಾಜ : ನಿಗಮ ಮಂಡಳಿ, ಸಹಸ್ರಾರುರ್ಜನ ವೃತ್ತ ,ಜಯಂತಿ ಆಚರಣೆ ಕುರಿತು ಮನವಿ.
ಸಿಂಧನೂರು ಜು.30 ಜಿಲ್ಲೆಗೊಂದು ಸಹಸ್ರಾರುರ್ಜನ ವೃತ್ತ ,ಪ್ರತಿ ಕಛೇರಿಯಲ್ಲಿ ಜಯಂತಿ ಹಾಗೂ ಕ್ಷತ್ರಿಯ ಸಮಾಜದ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪಿಸುವಂತೆ ಒತ್ತಾಯಿಸಿ ಕ್ಷತ್ರಿಯ ಸಮಾಜದ ವತಿಯಿಂದ ತಹಶಿಲ್ದಾರರ ಮೂಲಕ ರಾಜ್ಯದ ಮುಖ್ಯಮಂತ್ರಿ ಗಳಾದ ಸಿದ್ದರಾಮಯ್ಯ ಅವರಿಗೆ ಮನವಿಯನ್ನು ಸಲ್ಲಿಸಿದರು.
ಶುಕ್ರವಾರ ನಗರದಲ್ಲಿನ ಸೋಮವಂಶದ ಸಹಸ್ರಾರುರ್ಜನ ಕ್ಷತ್ರಿಯ ಸಮಾಜದವರು ಕರ್ನಾಟಕ ರಾಜ್ಯದಲ್ಲಿ ಸುಮಾರು ಹದಿನಾರು ಲಕ್ಷ ಜನರಿದ್ದು ,ಅದರಲ್ಲಿ ಶೇ 85 % ರಷ್ಟು ಬಡವರಿದ್ದು ಉಪ ಜೀವನಕ್ಕಾಗಿ ಬೇರೆ ಬೇರೆ ಉದ್ಯೋಗಗಳಾದ ಸೋಡಾ ಅಂಗಡಿ ,ಪಾನ್ ಶಾಪ್ ,ಸಾವಜಿ ಹೋಟೆಲ್ ,ವಾಚ್ ರಿಪೇರಿ ,ಕಿರಾಣಿ ,ಮೊಬೈಲ್ ರಿಪೇರಿ ,ಗ್ಯಾರೇಜ್ ಸೇರಿದಂತೆ ಹತ್ತು ಹಲವು ಉದ್ಯೋಗ ಗಳನ್ನು ಸಮಾಜದಲ್ಲಿ ನಿಭಾಯಿಸುತ್ತಾ ಬದುಕನ್ನು ಸಾಗಿಸುತ್ತಿದ್ದೆವೆ. ಸರ್ಕಾರದ ಗೆಜೆಟ್ ನಲ್ಲಿ 'ಪಟೆಗಾರ ' ಎಂದಿದ್ದು ಬೆರಳಿಕೆ ಜನರ ಮಾತ್ರ ಶ್ರೀಮಂತ ರಿದ್ದಾರೆ ಅದಕ್ಕಾಗಿ ಪ್ರತಿ ಜಿಲ್ಲೆಗೊಂದು ಸಹಸ್ರಾರುರ್ಜನ ವೃತ್ತ, ಪ್ರತಿ ಕಛೇರಿ ಗಳಲ್ಲಿ ಜಯಂತಿ ಆಚರಣೆ ಮಾಡಲು ಆದೇಶ ನೀಡಬೇಕು ಮತ್ತು ನಮ್ಮ ಸಮಾಜಕ್ಕೆ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪನೆ ಮಾಡಿ ಅದರಿಂದ ಮುಂದಿನ ಪೀಳಿಗೆ ಸಮಾಜವನ್ನು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಪ್ರಗತಿ ಸಾಧಿಸಲು ಸಹಕರಿಸಬೇಕೆಂದು ಕ್ಷತ್ರಿಯ ಸಮಾಜದವರು ಮನವಿಯನ್ನು ಸಲ್ಲಿಸಿ ಒತ್ತಾಯಿಸಿದರು.
ಎಸ್.ಎಸ್.ಕೆ ಪಂಚ ಟ್ರಸ್ಟ್ ಸಮಾಜದ ಹಿರಿಯರು ,ಮುಖಂಡರು, ಪದಾಧಿಕಾರಿಗಳು ಮನವಿಯನ್ನು ಸಲ್ಲಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ