ಪೋಸ್ಟ್‌ಗಳು

2024 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಸಚಿನ್ ಪಂಚಾಳ ನಿಗೂಢ ಸಾವಿಗೆ ಸೂಕ್ತ ನ್ಯಾಯಾಂಗ ತನಿಖೆಗೆ ಆಗ್ರಹ

ಇಮೇಜ್
ಮಸ್ಕಿ : ಸಚಿನ ತಂದೆ ಮೊನಪ್ಪ ಪಂಚಾಳ ಇವರ ಆತ್ಮಹತ್ಯೆಯ ನಿಗೂಢ ಸಾವಿನ ಬಗ್ಗೆ ತನಿಖೆ ಮತ್ತು ಅವರ ಪರಿವಾರಕ್ಕೆ ನ್ಯಾಯ ಒದಗಿಸ ಬೇಕು ಎಂದು ಮಾಜಿ ವಿಶ್ವ ಕರ್ಮ ಸಮಾಜದ ಮಾಜಿ ಅಧ್ಯಕ್ಷ ಕಾಳಪ್ಪ ಕಣ್ಣೂರು ಆಗ್ರಹಿಸಿದ್ದಾರೆ. ದಿನಾಂಕ 28.12.2024 ಶನಿವಾರ ದಂದು, ಬೀದರ್ ಜಿಲ್ಲೆಯ ತುಗಾಂವ ಗ್ರಾಮದ ಯುವಕ ದಿವಂಗತ ಸಚೀನ ಪಂಚಾಳ, ಇವರ ನಿಗೂಢ ಸಾವಿನ ಬಗ್ಗೆ ವಿಷಾದ ವ್ಯಕ್ತಪಡಿಸಿ, ದುಃಖ ಸಾಗರದಲ್ಲಿ ಮುಳುಗಿದ ಕುಟುಂಬಕ್ಕೆ ಸಾಂತ್ವನ ಹೇಳುತ್ತ,ಸಣ್ಣ ವಯಸ್ಸಿನ ಹಿರಿಯರ ಏಕೈಕ ಮಗ ನಿಗೂಢ ಸಾವಿನಿಂದ ತಂದೆ ತಾಯಿ ಪರಿವಾರದ ಸದಸ್ಯರು ಅನಾಥರಾಗಿದ್ದಾರೆ. ಈ ದುರ್ಘಟನೆಯ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಸೂಕ್ತವಾದ ಕಾನೂನು ತನಿಖೆ ಮಾಡುವ ಮೂಲಕ ಸಂತ್ರಸ್ತರಿಗೆ ನ್ಯಾಯ ಒದಗಿಸುವುದರ ಜೊತೆಗೆ ಈ ಘಟನೆಯಿಂದ ನೊಂದ ಅವರ ಕುಟುಂಬಕ್ಕೆ ತಕ್ಕ ಪರಿಹಾರ ನೀಡಬೇಕು ಎಂದು ವಿಶ್ವಕರ್ಮ ಸಮಾಜದ ಮುಖಂಡ ವಿಜಯ ಬಡಿಗೇರ ರವರ ಸರಕಾರಕ್ಕೆ ಒತ್ತಾಯಿಸಿದರು.

" ಕೊಟ್ಟೂರಿನಲ್ಲಿ ಪೂರ್ವಭಾವಿ ಸಭೆ" *ಬದುಕಿನ ಪ್ರತಿ ಹಂತದಲ್ಲೂ ಮಹರ್ಷಿ ವಾಲ್ಮೀಕಿ ಆದರ್ಶ ಮೈಗೂಡಿಸಿಕೊಳ್ಳಬೇಕು: ಶ್ರೀ ಪ್ರಸನ್ನಾನಂದ ಸ್ವಾಮೀಜಿಯವರು*

ಇಮೇಜ್
*ಮಹರ್ಷಿ ವಾಲ್ಮೀಕಿ ಜಾತ್ರೆ ಯಾವುದೋ ಒಂದು ವರ್ಗ ಅಥವಾ ಪಕ್ಷಕ್ಕೆ ಸೀಮಿತಗೊಳಿಸದೆ ಎಲ್ಲರೂ ಸೇರಿ ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸದಸ್ಯರಾದ ಶಿರಿಬಿ ಕೊಟ್ರೇಶ್  ಹೇಳಿದರು* ಕೊಟ್ಟೂರು: ಪಟ್ಟಣದ ವಾಲ್ಮೀಕಿ ಸಭಾಂಗಣದಲ್ಲಿ ಮಹರ್ಷಿ ವಾಲ್ಮೀಕಿ ಜಾತ್ರೆ ಅಂಗವಾಗಿ ಭಾನುವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಹರ್ಷಿ ವಾಲ್ಮೀಕಿ ಜಾತ್ರೆ ಪ್ರಯುಕ್ತ ಕೆಲೆಂಡರ್ ಬಿಡುಗಡೆ ಮಾಡಲಾಯಿತು ನಂತರ ಗುರುಪೀಠದ ಅಧ್ಯಕ್ಷರಾದ ಶ್ರೀ ಶ್ರೀ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿಯವರು ಮಾತನಾಡಿ, ಸ್ತ್ರೀ-ಪುರುಷ ಸರಿಸಮಾನತೆಯೊಂದಿಗೆ ಕಲ್ಯಾಣ ರಾಜ್ಯದ ಆಶಯ ಹೊಂದಿದ್ದ ಮಹರ್ಷಿ ವಾಲ್ಮೀಕಿಯು ರಾಮಾಯಣದಲ್ಲಿ ವಿವಿಧ ಪಾತ್ರಗಳ ಮೂಲಕ ಬದುಕಿನ ಪ್ರತಿ ಹಂತದಲ್ಲೂ ಅನುಸರಿಸಬೇಕಾದ ನೀತಿ ಬೋಧಿಸಿದ್ದು ಪ್ರತಿಯೊಬ್ಬರೂ ಅವರ ಆದರ್ಶ ಮೈಗೂಡಿಸಿಕೊಳ್ಳಬೇಕು.ರಾಜನಹಳ್ಳಿ ಯಲ್ಲಿ 08-09 ಫೆಬ್ರವರಿ 2025 ರಂದು ನಡೆಯಲಿರುವ ಮಹರ್ಷಿ ವಾಲ್ಮೀಕಿ ಜಾತ್ರೆ ಮಹಾ ರಥೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ಸಮುದಾಯದ ಮುಖಂಡರು ಶ್ರಮಿಸಬೇಕು ಎಂದರು. ಮಹರ್ಷಿ ವಾಲ್ಮೀಕಿ ಜಾತ್ರೆಯನ್ನು ಈ ಹಿಂದಿನಂತೆ ಅರ್ಥಪೂರ್ಣವಾಗಿ ಆಚರಿಸಲು ಕೊಟ್ಟೂರು ತಾಲ್ಲೂಕು ವಾಲ್ಮೀಕಿ ಪ್ರಮುಖ ಮುಖಂಡರು ಹಾಗೂ ಯುವಕರು ಭಾಗವಹಿಸಿ ವಿಜೃಂಭಣೆಯಿಂದ ಆಚರಿಸಲು ಕೋರಿದರು  ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯ ತೋಟದ ರಾಮಣ್ಣ,ಕರವೇ ಅಧ್ಯಕ್ಷ ಎಂ ಶ್ರೀನಿವಾಸ್ ಸ...

ರಾಷ್ಟ್ರಕವಿ ಕುವೆಂಪು ಅವರ 120ನೇ ಜಯಂತೋತ್ಸವ

ಇಮೇಜ್
  ಮಸ್ಕಿ : ಕನ್ನಡದ ಮೊದಲ ಜ್ಞಾನಪೀಠ ಪ್ರಶಸ್ತಿ ವಿಜೇತ ಶ್ರೀ ರಾಮಾಯಣ ದರ್ಶನಂ ಕೃತಿಯ ವಿಜೇತ ನಾಡಗೀತೆ ರಚನೆಕಾರರಾದ ರಾಷ್ಟ್ರಕವಿ ಕುವೆಂಪು ಅವರ 120ನೇ ಜಯಂತೋತ್ಸವದ ಅಂಗವಾಗಿ  ಕರ್ನಾಟಕ ರಕ್ಷಣಾ ವೇದಿಕೆ ( ಎಚ್ ಶಿವರಾಮೇಗೌಡರ ಬಣ) ವತಿಯಿಂದ ಪಟ್ಟಣದ ಮುದುಗಲ್ ಕ್ರಾಸ್ ಬಳಿ ಇರುವ ಧ್ವಜ ಸ್ತಂಭದ ಮುಂಭಾಗದಲ್ಲಿ ಕುವೆಂಪುರವರ ಜನ್ಮದಿನೋತ್ಸವವನ್ನು ಆಚರಣೆ ಮಾಡಲಾಯಿತು. ಈ ವೇಳೆಯಲ್ಲಿ ತಾಲೂಕು ಅಧ್ಯಕ್ಷರಾದ ಆರ್ ಕೆ ನಾಯಕ ತಾಲೂಕ ಪ್ರಧಾನ ಕಾರ್ಯದರ್ಶಿ ದೇವಪ್ಪ ನಾಯಕ, ತಾಲೂಕು ಉಪಾಧ್ಯಕ್ಷ ಹನುಮಂತ ಉಪ್ಪಾರ್, ಮೆದಿಕಿನಾಳ ಗ್ರಾಮ ಘಟಕದ ಅಧ್ಯಕ್ಷ ಸಿದ್ದು ನಾಯಕ ಮೇಟಿ ,ವೀರೇಶ್ ಹಳ್ಳಿ, ಮೌನೇಶ್ ನಾಯಕ ತುಗ್ಗಲದಿನ್ನಿ, ದುರ್ಗೇಶ್ ನಾಯಕ ಸುಂಕನೂರು, ಶರಣ ನಾಯಕ ಅಪರಂಜಿ ,ಶಿವರಾಜ್ ನಾಯಕ ಕಾಸ್ಲಿ, ಬಸವರಾಜ್, ರಾಯಚೂರು ರವಿ ಗಾಂಧಿನಗರ, ರಾಘವೇಂದ್ರ ನಾಯಕ ತೊಗರಿ, ಇದ್ದರು.

ಇಸ್ಪೀಟ್ ಆಡಲು ಹಣ ಕೊಟ್ಟು , ಮನೆಯ ಹತ್ತಿರ ಬರುತ್ತಿರುವ ಇಸ್ಪೀಟ್ ಫೈನಾನ್ಸ್ ರಿಗೆ ಕಡಿವಾಣ ಯಾವಾಗ..?

ಇಮೇಜ್
  ಸನ್ನಿವೇಶದ ಛಾಯಾಚಿತ್ರ.. ಕೊಟ್ಟೂರು: ಪಟ್ಟಣದಲ್ಲಿ ಅತೀ ಹೆಚ್ಚಾಗಿ ನಡೆಯುತ್ತಿರುವುದು ಇಸ್ಪೀಟ್ ದಂಧೆ. ಇಸ್ಪೀಟ್ ದಂಧೆಯ ಮೋಜಿಗೆ ಒಳಗಾಗಿ ಹಲವಾರು ಮಂದಿ ತಮ್ಮ ಜೀವನವನ್ನು, ಕುಟುಂಬವನ್ನು ಬೀದಿಗೆ ತಳ್ಳುವಂತಹ ಪರಿಸ್ಥಿತಿ ಬಂದಿದೆ.  ದಿನದ ಕೆಲಸ ಮುಗಿಯುತ್ತಿದ್ದಂತೆ ಆಟ ಆಡಲೆಂದೇ ಸಣ್ಣ ಹಳ್ಳಿಯಿಂದಲೂ ಇಸ್ಪೀಟ್‌ ಆಡಲು ವ್ಯಾಪಾರಿಗಳು, ಶಿಕ್ಷಕರು, ನೌಕರರು, ಕೂಲಿ-ಕಾರ್ಮಿಕರೆ ಹೆಚ್ಚಿಗಿ ಸೇರುತ್ತಾರೆ. ಪಟ್ಟಣದ ಹಲವಾರು ಕಡೆ ಇಸ್ಪೀಟ್ ಅಡ್ಡಾಗಳಿದ್ದು,ಅಲ್ಲೆಲ್ಲಾ ಹಣವಿರುವವರು , ಸಮಾಜದಲ್ಲಿ ಹೆಸರು ಇರುವವರನ್ನು ಕರೆತಂದು  ಇಸ್ಪೀಟ್ ಆಡಲು ಇಸ್ಪೀಟ್ ನೆಡಸುವ ಆಟಗಾರರು  10000/ಕ್ಕೆ  ಒಂದು ಗಂಟೆಗೆ  1000/  ಬಡ್ಡಿ ಎಂದು  ಸಾಲದ ರೂಪದಲ್ಲಿ ಹಣ ನೀಡುವ ಬೊಮ್ಮ ,ದುರ್ಗಪ್ಪ ಹಾಗೂ ಇತರರು..? ಅವರು ಸೋತ ಮೇಲೆ ಅವರಿಂದ ಕೊಟ್ಟ ಸಾಲವನ್ನು ವಸೂಲಿ ಮಾಡಲು  ರಾತ್ರಿ 10 ಗಂಟೆ ಗೆ ಮನೆಗಳ ಹತ್ತಿರ ಬಂದು, ಕುಟುಂಬಸ್ಥರಿಗೆ ಭಯ ಬೀತರನ್ನಾಗಿಸುವದು, ತೊಂದರೆ ನೀಡುತ್ತಿರುವ ಹಲವಾರು ಘಟನೆಗಳು ಜರುಗುತ್ತಿವೆ. ಆದರೂ ಇದರ ಬಗ್ಗೆ ಕೇಳುವವರು ಯಾರೂ ಇಲ್ಲದಂತಾಗಿದೆ.? ತಮ್ಮನ್ನೇ ನಂಬಿಕೊಂಡ ಬಡಕುಟುಂಬಗಳು ತಮ್ಮ ಮೂಲಭೂತ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಪರದಾಡುತ್ತಿರುವ ಬದುಕುಗಳಲ್ಲಿ ಇಂತಹ ಇಸ್ಪೀಟ್ ಸಾಲಗಳು ಅವರ ಬದುಕನ್ನೇ ಛಿದ್ರ ಮಾಡುತ್ತಿವೆ. ಇಂತಹ ಸಾಲಗಳನ್ನು ಮಾಡಿ ಕುಟುಂಬದ ಹೆಸ...

ಆಧುನಿಕ ಬದುಕಿನಲ್ಲಿ ಮೂಲೆಗುಂಪು ಆಗುತ್ತಿರುವ ಮಡಿವಾಳ ಸಮಾಜ

ಇಮೇಜ್
  ವರದಿ : ಗ್ಯಾನಪ್ಪ ದೊಡ್ಡಮನಿ ಮಸ್ಕಿ : ಮಡಿವಾಳ ಸಮಾಜವು ಕರ್ನಾಟಕದಲ್ಲಿ ಕಾಯಕ ಸಮಾಜಗಳಲ್ಲೊಂದು. ‘ಕಾಯಕವೇ ಕೈಲಾಸ’ ಎಂದು ಅಹರ್ನಿಶಿ ದುಡಿವ ಮಡಿವಾಳ ಸಮಾಜ ಹನ್ನೆರಡನೇ ಶತಮಾನದ ಶರಣ ಮಡಿವಾಳ ಮಾಚಿದೇವನನ್ನು ಆರಾಧ್ಯದೈವವನ್ನಾಗಿಸಿಕೊಡು ಭಕ್ತಿ-ಭಾವದಿಂದ ಸಮಾಜಸೇವೆ ಮಾಡುತ್ತಾ ತಾನಾಯಿತು ತನ್ನ ಕಾಯಕವಾಯಿತು ಎಂದು ಜೀವ ಸವೆಸುತ್ತಿರುವ ಸಮುದಾಯ.  ಆಧುನಿಕ ಯುಗದಲ್ಲಿ ಮಡಿವಾಳ ಸಮುದಾಯವು ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಶೋಚನೀಯ ಸ್ಥಿತಿಯಲ್ಲಿದೆ. ರಾಜಕೀಯ ಕ್ಷೇತ್ರದಲ್ಲಂತೂ ಹೇಳಿಕೊಳ್ಳಲೂ ಒಬ್ಬನೇ ಒಬ್ಬ ಜನನಾಯಕನಿಲ್ಲ. ಶಾಸನಸಭೆಗಳಲ್ಲಂತೂ ಪ್ರಾತಿನಿಧ್ಯ ಇಲ್ಲವೇ ಇಲ್ಲ. ಹೀಗಿರುವಲ್ಲಿ ಮಡಿವಾಳರು ಆರ್ಥಿಕವಾಗಿ ಸಬಲರಾಗುವ ದಿಸೆಯಲ್ಲಿ ಸಾಗುವುದು ದೂರದ ಕನಸೇ ಸರಿ. ಹೀಗಾಗಿ ಆಧುನಿಕ ಕಾಲದಲ್ಲಿ ಸಮುದಾಯದ ಏಳಿಗೆ ಕೂಡ ಕಷ್ಟವಾಗಿದೆ. ಬಟ್ಟೆ ಒಗೆಯುವ ಸಂದರ್ಭದಲ್ಲಿ ಸಾಬೂನು ಮತ್ತು ರಾಸಾಯನಿಕ ಮಿಶ್ರಿತ ಸೋಡಾ, ಪುಡಿ ಬಳಕೆ ಮಾಡುವುದರಿಂದ ಆನಾರೋಗ್ಯಕ್ಕೂ ಒಳಗಾಗಿದ್ದಾರೆ. ಇನ್ನು ವಾಷಿಂಗ್ ಮೆಷಿನ್‌ಗಳು ಮತ್ತು ಡ್ರೈಕ್ಲೀನರ್ ಕೇಂದ್ರಗಳು ಪ್ರವೇಶ ಪಡೆದ ಬಳಿಕವಂತೂ ಮಡಿವಾಳರ ಉದ್ಯೋಗಕ್ಕೆ ಹೊಡೆತ ಬಿದ್ದಿದೆ. ಜೊತೆಗೆ ಆದಾಯ ಪ್ರಮಾಣವೂ ಕುಸಿತ ಕಂಡಿದೆ. ಈ ಎಲ್ಲದರ ಮಧ್ಯೆಯೂ ಅವರು ಮೂಲ ಕಸುಬನ್ನು ಕಾಪಾಡಿಕೊಂಡು ಬಂದಿದ್ದಾರೆ. ಇದರ ಮಧ್ಯ ತಾಲ್ಲೂಕಿನ ವಿವಿಧೆಡೆ ಇರುವ ಹಳ್ಳದ ಒಡಲು ಮರಳು ಮಾಫಿಯಾ ದಿಂದ ಬರಿದಾಗಿದ್ದು, ಇದರ ಜೊತೆಗ...

ಸಾಲಗಾರರ ರಹಿತ ಕ್ಷೇತ್ರಕ್ಕೆ ನಾಗಪ್ಪ ಬಾರ್ ಕೇರ್ ನಾಮಪತ್ರ ಸಲ್ಲಿಕೆ

ಇಮೇಜ್
  ಮಸ್ಕಿ:ಪಟ್ಟಣದಲ್ಲಿರುವ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘಕ್ಕೆ ಜ.4ರಂದು ನಡೆಯಲಿರುವ ಚುನಾವಣೆಯಲ್ಲಿ ಸಾಲಗಾರರ  ರಹಿತ ಕ್ಷೇತ್ರದಿಂದ ಶುಕ್ರವಾರ ನಾಗಪ್ಪ ಬಾರ್ಕೆರ್ ನಾಪತ್ರವನ್ನು ಸಲ್ಲಿಸಿದರು. ಪಟ್ಟಣದಲ್ಲಿರುವ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ ನಿಯ ಮಿತದ ಚುನಾವಣೆ ಕಚೇರಿಯಲ್ಲಿ ಶುಕ್ರವಾರ ಚುನಾವಣಾಧಿಕಾರಿ ಬಸ್ಸಪ್ಪ ತನಿಖೆದಾರ್ ಅವರಿಗೆ ಉಮೇದುವಾರಿಕೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಲ್ಲಪ್ಪ ಬಾರಿ ಕೇರ್, ಶಿವನೆಪ್ಪ,ಮಲ್ಲಯ್ಯ ಮುರಾರಿ, ನಾರಾಯಣಪ್ಪ ಕಾಸ್ಲಿ,ಮಲ್ಲಯ್ಯ ಮಲ್ಕಾಪುರ್, ಸಿದ್ದು ಮುರಾರಿ, ಮೈಬೂಬ್ ಹಣಿಗಿ, ಮಲ್ಲಿಕ ಮುರಾರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಮನಮೋಹನ್‌ ಸಿಂಗ್ ನಿಧನಕ್ಕೆ ಆರ್.ಸಿದ್ದನಗೌಡ ಸಂತಾಪ

ಇಮೇಜ್
  ಮಸ್ಕಿ : ಹತ್ತು ವರ್ಷಗಳ ಕಾಲ ದೇಶ ಮುನ್ನಡೆಸಿ ದೇಶದಲ್ಲಿ ಆರ್ಥಿಕ ಸುಧಾರಣೆಗಳ ಮೂಲಕ ದೊಡ್ಡ ಕೊಡುಗೆಯನ್ನು ನೀಡಿದ್ದ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ನಿಧನ ಹೊಂದಿರುವ ಸುದ್ದಿ ತಿಳಿದು ಅತ್ಯಂತ ದುಖಃವಾಗಿದೆ. ದೇಶದ ಅಭಿವೃದ್ದಿಯ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದ ಮುತ್ಸದ್ದಿಯೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದು ಕೆ.ಪಿ.ಸಿ.ಸಿ ರಾಜ್ಯ ಎಸ್ ಟಿ ಘಟಕದ ಪ್ರಧಾನ ಕಾರ್ಯದರ್ಶಿ ಯಾದ ಆರ್ ಸಿದ್ದನಗೌಡ ತುರುವಿಹಾಳ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ. ಅದೇ ರೀತಿ ಮಸ್ಕಿ ಪಟ್ಟಣದ ಕಾಂಗ್ರೆಸ್ ಪಕ್ಷದ ಕಾರ್ಯದಲ್ಲಿ ಹನುಮಂತಪ್ಪ ಮುದ್ದಾಪುರ ರವರು ನೇತೃತ್ವದಲ್ಲಿ ಡಾ. ಮನಮೋಹನ್‌ ಸಿಂಗ್ ನಿಧನಕ್ಕೆ ಸಂತಾಪ ಸೂಚಿಸುವ ಮೂಲಕ ಗೌರವ ನಮನ ಸಲ್ಲಿಸಿದರು.

ಹಳೆ ಬಸ್‌ ನಿಲ್ದಾಣಕ್ಕೆ ಕವಿತಾಳ ಭಾಗದ ಬಸ್ಸೇ ಬರೋಲ್ಲ! : ಮಲ್ಲಪ್ಪ ಗೋನಾಳ

ಇಮೇಜ್
  ವೃದ್ಧರು, ಅಂಗವಿಕಲರು ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಹಿಡಿ ಶಾಪ!  ಮಸ್ಕಿ : ಹಳೆ ಬಸ್‌ ನಿಲ್ದಾಣವಿದೆ ಎಂದು ಬಸ್‌ಗಾಗಿ ಕಾಯುತ್ತಾ ನಿಂತರೆ, ನೀವು ಅಲ್ಲಿಯೇ ಕಾಯುತ್ತಲೇ ನಿಲ್ಲಬೇಕಾಗುತ್ತದೆ ಹೊರತು ಬಸ್‌ ಮಾತ್ರ ಅಲ್ಲಿಗೆ ಬರೊಲ್ಲ. ಒಂದು ವೇಳೆ ಬಸ್‌ ಬಂದರೂ ಆ ಬಸ್‌ ನಿಲ್ದಾಣದಲ್ಲಿ ನಿಲ್ಲುವುದಿಲ್ಲ. ಹೌದು ಪಟ್ಟಣದಲ್ಲಿ ರಸ್ತೆ ಕಾಮಗಾರಿ ಪ್ರಾರಂಭವಾಗಿದ್ದರಿಂದ ಬಸ್‌ ಚಾಲಕರು ಹಿಂದಿನಿಂದಲೂ ಹೊಸ ಬಸ್‌ ನಿಲ್ದಾಣದ ಬಳಿ ಬಸ್‌ ನಿಲುಗಡೆ ಮಾಡುವುದನ್ನು ರೂಢಿ ಮಾಡಿಕೊಂಡಿದ್ದಾರೆ. ಹಳೆ ಬಸ್ ನಿಲ್ದಾಣವಾಗಿದ್ದರೂ ಯಾವೊಬ್ಬ ಬಸ್‌ ಚಾಲಕನೂ ಅಲ್ಲಿ ನಿಲುಗಡೆ ಮಾಡುವುದಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ, ಜನರು ಸಹ ಹೊಸ ಬಸ್‌ ನಿಲ್ದಾಣದ ಬಳಿಯೇ ನಿಂತಿರುತ್ತಾರೆ. ಹೀಗಾಗಿ ಅಲ್ಲಿಯೇ ನಿಲುಗಡೆ ಮಾಡುತ್ತಿದ್ದೇವೆ ಎಂದು ಅಧಿಕಾರಿಗಳು ಹೇಳುತ್ತಾರೆ. ಪಟ್ಟಣದ ಗಾಂಧಿನಗರದಲ್ಲಿ ಹೊಸ ಬಸ್‌ ನಿಲ್ದಾಣವಿದೆ ಹಾಲಾಪುರ,ತೋರಣದಿನ್ನಿ,ಕವಿತಾಳಗೆ ಹೋಗಲು ಇಲ್ಲಿಯ ಹಳೆ ಬಸ್ ನಿಲ್ದಾಣದಿಂದ ಬಸ್ ಹತ್ತಬೇಕು.ಇದರಿಂದಾಗಿ  ಬಸ್ ನಿಲ್ದಾಣಕ್ಕೆ ಹೋಗಲು ಪ್ರಯಾಣಿಕರು,ವೃದ್ಧರು, ಅಂಗವಿಕಲರಿಗೆ 50 ರಿಂದ 100 ರೂಪಾಯಿ ಆಟೋಗಳಿಗೆ ಕೊಟ್ಟು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಬಂಧಿಸಿದ ಅಧಿಕಾರಿಗಳು ಆದಷ್ಟು ಬೇಗನೇ ಹಳೆ ಬಸ್ ನಿಲ್ದಾಣದಲ್ಲಿ ಬಸ್ ನಿಲುಗಡೆ ಮಾಡಿ ಪ್ರಯಾಣಿಕರಿಗೆ ಅವಕಾಶ ನೀಡಬೇಕು ಎಂದು ಸಾರ್ವಜನಿಕರ ಮನವಿಯಾಗಿದೆ. ...

ಅಂಬೇಡ್ಕರ್ ವಿರುದ್ಧ ಅಮಿತ್ ಷಾ ಟೀಕೆ: ಪ್ರಕರಣವನ್ನು ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ವರ್ಗಾಸಿದ ಕೋರಮಂಗಲ ಪೊಲೀಸರು

ಇಮೇಜ್
  ಬೆಂಗಳೂರು, ಡಿ, 27; ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ವಿರುದ್ಧ ಲೋಕಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಮಾಡಿದ್ದ ಟೀಕೆ ಕುರಿತು ಮಾರುತಿ ನಗರದ ದತಲಿ ಸಂಘಟನೆ ಮುಖಂಡ & ಸಮಾಜ ಸೇವಕ ಎಂ.ಎನ್. ಗಂಗಾಧರಯ್ಯ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದ ದೂರನ್ನು ದೆಹಲಿಯ ಪಾರ್ಲಿಂಟ್ ಸ್ಟ್ರೀಯ್ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.    ಅಮಿತ್ ಷಾ ಅವರು ಡಿ. 17 ರಂದು ರಾಜ್ಯ ಸಭೆಯಲ್ಲಿ " ಅಂಬೇಡ್ಕರ್ ಅಂಬೇಡ್ಕರ್ ಎನ್ನುವುದು ಪ್ಯಾಷನ್ ಆಗಿದೆ. ಇಷ್ಟೊಂದು ಬಾರಿ ದೇವರ ನಾಮ ಜಪ ಮಾಡಿದ್ದರೆ ಏಳೇಳು ಜನ್ಮಕ್ಕೂ ಸ್ವರ್ಗ ದೊರೆಯುತ್ತಿತ್ತು” ಎಂದು ಮಾಡಿರುವ ಟೀಕೆ ನಮ್ಮ ಮನಸ್ಸಿಗೆ ನೋವುಂಟು ಮಾಡಿದ್ದು, ಸಂವಿಧಾನ ಶಿಲ್ಪಿಗೆ ಅಪಮಾನ ಮಾಡಿದ್ದಾರೆ ಮತ್ತು ಅಗೌರವ ತೋರಿದ್ದಾರೆ. ಅವರ ಮೇಲೆ ಪ್ರಿವೇನ್ಷನ್ ಅಪ್ ಅಟ್ರಾಸಿಟಿ ಅಕ್ಟ್ 1989 ರಡಿಯಲ್ಲಿ ಮೊಕದ್ದಮೆ ದಾಖಲಿಸಿ ಕಾನೂನು ರೀತಿ ಕ್ರಮ ತೆಗೆದುಕೊಳ್ಳಬೇಕು ಎಂದು ದೂರು ಸಲ್ಲಿಸಿದ್ದರು.  ಸದರಿ ದೂರು ಅರ್ಜಿಯನ್ನು ಸರಹದ್ದು ಆಧಾರದ ಮೇಲೆ ದೆಹಲಿಯ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಆದ್ದರಿಂದ ನೀವೂ ನಿಮ್ಮ ಬಳಿಯಿರುವ ಸಾಕ್ಷಾಧಾರಗಳೊಂದಿಗೆ ಸಂಬಂಧಪಟ್ಟ ಠಾಣಾಧಿಕಾರಿಗಳನ್ನು ಭೇಟಿ ಮಾಡುವಂತೆ ಸೂಚಿಸಿ ಕೋರಮಂಗಲ ಠಾಣೆ ಪೊಲೀಸರು ಹಿಂಬರಹ ನೀಡಿದ್ದಾರೆ.  ಈ ಕುರಿತು ಪ್ರತಿಕ್ರಿಯೆ ನೀಡಿರುವ ಎಂ.ಎನ್. ಗಂಗಾಧ...

ರಾಜ್ಯಮಟ್ಟದ ಕಾಯಕರತ್ನ ಪ್ರಶಸ್ತಿಗೆ ಭಾಜನರಾದ ಮೌನುದ್ದೀನ್ ಬೂದಿನಾಳ್.

ಇಮೇಜ್
  ಹಟ್ಟಿ ಚಿನ್ನದ ಗಣಿ: ಸಾಹಿತ್ಯ ಪ್ರೇಮಿ,ಕವಿ ಮತ್ತು ಹಟ್ಟಿ ಚಿನ್ನದ ಗಣಿ ಪ್ರಾಮಾಣಿಕ ನೌಕರ ಮೌನುದ್ದೀನ್ ಬೂದಿಹಾಳ ಅವರಿಗೆ ರಾಜ್ಯ ಮಟ್ಟದ ಕಾಯಕ ರತ್ನ ಪ್ರಶಸ್ತಿ ಆಯ್ಕೆ ಆಗಿದ್ದಾರೆ.ಅವರು ಸಾಹಿತ್ಯದಲ್ಲಿ ಮತ್ತು ಜನಪರ ಕೆಲಸಗಳಲ್ಲಿ ಆಸಕ್ತಿ ಹೊಂದಿದವರು.ಪರರ ಕಾಳಜಿ ಇರುವವರು.ಬಡ,ನಿರ್ಗತಿಕರನ್ನು ಕಂಡರೆ,ಪ್ರೀತಿಯಿಂದ ಕಾಣುವರು ಇಂತಹ ಎಲೆ ಮರಿ ಕಾಯಿಯಂತೆ ಕಾಯಕಯೋಗಿ ಎನಿಸಿರುವ. ಮೌನುದ್ದೀನ್ ಬೂದಿನಾಳ ಇವರಿಗೆ ರಾಜ್ಯಮಟ್ಟದ ಕಾಯಕರತ್ನ ಪ್ರಶಸ್ತಿ ಆಯ್ಕೆ ಆಗಿದ್ದಾರೆ.  ಹಟ್ಟಿ ಚಿನ್ನದ ಗಣಿಯ ಸಮೀಪದ ಹಿರೇನಗನೂರು ಗ್ರಾಮದ ಮೌನುದ್ದೀನ್ ಬೂದಿನಾಳ್ ಇವರು ಶರಣು ವಿಶ್ವವಚನ ಫೌಂಡೇಶನ್ ಮೈಸೂರು ರಾಯಚೂರು ತಾಲುಕಾ ಗೌರವಾಧ್ಯಕ್ಷರು. ಇವರಿಗೆ.ಶರಣು ವಿಶ್ವವಚನ ಫೌಂಡೇಶನ್ ವತಿಯಿಂದ 2024ನೇ ಸಾಲಿನ ರಾಜ್ಯಮಟ್ಟದ ಕಾಯಕರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಂಸ್ಥಾಪಕರಾದ ಡಾ,ವಚನ ಕುಮಾರಸ್ವಾಮಿ ತಿಳಿಸಿದ್ದಾರೆ. ಇದೇ ತಿಂಗಳ 28 ರಂದು ಬೆಳಗ್ಗೆ 10 ಗಂಟೆಗೆ ಮೈಸೂರಿನ ವಿಜಯನಗರದ ಕನ್ನಡ ಸಾಹಿತ್ಯಭವನದಲ್ಲಿ ಪೂಜ್ಯರು ಮತ್ತು ಗಣ್ಯರ ಸಮ್ಮುಖದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಮೌನುದ್ದೀನ್ ಅವರು.ಸ್ವೀಕರಿಸಲಿದ್ದಾರೆ. ಮೌನುದ್ದೀನ ಅವರಿಗೆ ಕುಟುಂಬಸ್ಥರು ಹಾಗೂ ಸ್ನೇಹಿತರು ಅಭಿನಂದಿಸಿ,ಶುಭ ಹಾರೈಸಿದ್ದಾರೆ.

ತಾ.ಪಂ : ಕಂಪ್ಯೂಟರ ಅಪರೇಟರ್ ದಿನಾಚರಣೆ

ಇಮೇಜ್
  ಮಸ್ಕಿ : ಕಂಪ್ಯೂಟ‌ರ್ ಆವಿಷ್ಕಾರ ಮಾಡಿದ ವಿಜ್ಞಾನಿ ಚಾರ್ಲ್ಸ್ ಬ್ಯಾಬೇಜ್ ಅವರ ಜನ್ಮ ದಿನದ ಪ್ರಯುಕ್ತ ಡಿ.26 ರಂದು ಇನ್ಮುಂದೆ ಪ್ರತಿ ವರ್ಷ ಗ್ರಾ.ಪಂ ಡೇಟಾ ಆಪರೇಟರ್‌ಗಳ ದಿನವನ್ನಾಗಿ ಆಚರಿಸಲು ಸರಕಾರದ ಆದೇಶ ಹಿನ್ನೆಲೆಯಲ್ಲಿ ಇಂದು ಮಸ್ಕಿ ಪಟ್ಟಣದ ತಾಲೂಕ ಪಂಚಾಯತಿ ಕಾರ್ಯಾಲಯದಲ್ಲಿ  ಡೇಟಾ ಆಪರೇಟರ್‌ಗಳ ದಿನಾಚರಣೆ ಮಾಡಲಾಯಿತು. ಈ ವೇಳೆಯಲ್ಲಿ ತಾಲ್ಲೂಕು ಪಂಚಾಯತಿ ಇ.ಒಅಮರೇಶ್ ಯಾದವ್,ಚಂದ್ರಶೇಖರ,ಗೀರಿಯಪ್ಪ,ಶರಣ ಬಸವ, ಬಸವರಾಜ, ಡೇಟಾ ಆಪರೇಟರ್‌ಗಳಾದ ರಂಗಪ್ಪ, ಶರಣಬಸವ, ಬಸಲಿಂಗಪ್ಪ,ಬಲವೇಂದ್ರ, ಸೇರಿದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಇದ್ದರು.

ಹಸಿರು ಹೊನಲು ತಂಡದಿಂದ ಸರ್ಕಾರಿ ಶಾಲೆಗಳ ಹೊರಗೋಡೆಗೆ ವರ್ಲಿ ಚಿತ್ರಕಲೆಯ ಚಿತ್ತಾರದ ಮೆರಗು

ಇಮೇಜ್
  *ಅಂದದ ಶಾಲೆಗಾಗಿ ಇಂದಿನಿಂದ* ಶೀರ್ಷಿಕೆಯಡಿಯಲ್ಲಿ ಕೊಟ್ಟೂರು ಪಟ್ಟಣದಲ್ಲಿ ಸಾಮಾಜಿಕ ಜವಾಬ್ದಾರಿಗಳನ್ನು ಅರಿತು, ಸಾಮಾಜಿಕವಾಗಿ ತಮ್ಮನ್ನು ತಾವು ತೊಡಗಿಕೊಂಡು ಸಾರ್ವಜನಿಕರಲ್ಲಿ ಮೆಚ್ಚುಗೆ ಪಡೆದಿರುವ ಹಸಿರು ಹೊನಲು ತಂಡ ಈಗ ಹೊಸ ಪ್ರಯೋಗವನ್ನು ಮಾಡಿದೆ. ಅದರ ಅಂಗವಾಗಿ ಹೊಸ ಕೊಡಿಹಳ್ಳಿ ಸರ್ಕಾರಿ ಶಾಲೆಗಳ ಹೊರ ಗೋಡೆಗಳಿಗೆ ವರ್ಲಿ ಚಿತ್ರಕಲೆ ಕಲೆ ಬೊಂಬೆ , ಇತರೇ ಚಿತ್ರಗಳನ್ನು ಬರೆಯುವ ಕಾರ್ಯಕ್ಕೆ ಮುನ್ನುಡಿ ಬರೆದಿದ್ದಾರೆ.  ಪಟ್ಟಣ, ಗ್ರಾಮಿಣ ಹಳ್ಳಿಗಳ ,ಸರ್ಕಾರಿ ಶಾಲೆಗಳು ಎಂದರೆ ತಾತ್ಸಾರದಿಂದ ನೋಡುವ ಕಾಲಘಟ್ಟದಲ್ಲಿ, ಮಕ್ಕಳ ಮನಸ್ಸನ್ನು ಸೆಳೆಯುವ ರೀತಿ ಚಿತ್ತಾರಗಳನ್ನು ಗೋಡೆಯ ಮೇಲೆ ಬರೆದು, ಸರ್ಕಾರಿ ಶಾಲೆ ಏನೂ ಕಡಿಮೆ ಇಲ್ಲ ಎನ್ನುವ ಸಂದೇಶವನ್ನು ಸಾರಿದ್ದಾರೆ. ಗೋಡೆಗಳ ಮೇಲೆ ಬರೆದಿರುವ ಅಂದವಾಗಿ ಬರೆದಿರುವ ರೇಖಾಚಿತ್ರಗಳು ಮಕ್ಕಳ ಮನಸ್ಸಿನ ಮೇಲೆ ಸಕಾರಾತ್ಮಕ ಪರಿಣಾಮ ಬೀರಿ ಅವರ ಶೈಕ್ಷಣಿಕ ಚಟುವಟಿಕೆಗಳಿಗೆ ಸಹಕಾರಿಯಾಗುವಂತಹ ಈ ರೀತಿಯ ಕೆಲಸಗಳಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  ಈ ರೀತಿಯ ಸಾಮಾಜಿಕ ಕೆಲಸಗಳನ್ನು ಮಾಡುವ ತಂಡಗಳು ಊರಿಗೆ ಒಂದೇ ಒಂದು ಇದ್ದರೂ ಸಾಕು ಆ ಊರು ಪ್ರಗತಿಯ ಹಾದಿಯಲ್ಲಿ ಸಾಗುತ್ತದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಹಸಿರು ಹೊನಲು ತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸುವ ಮೂಲಕ ಅವರ ಹೊಸ ಹೊಸ ಚಿಂತನೆಗಳು ಮುನ್ನುಡಿ ಬರೆಯಲಿದ್ದಾರೆ. ಇವರ  ಹಾದಿಯಲ್ಲಿ...

ಮಸ್ಕಿ ಮ್ಯಾಕ್ಸ್‌ ಸಕ್ಸಸ್‌ಗಾಗಿ ವಿಜಯ ಚಿತ್ರಮಂದಿರದಲ್ಲಿ ಸುದೀಪ್‌ ಅಭಿಮಾನಿಗಳು ವಿಶೇಷ ಪೂಜೆ.

ಇಮೇಜ್
  ಮಸ್ಕಿ : ನಟ ಕಿಚ್ಚ ಸುದೀಪ್‌ ಅಭಿನಯದ ಮ್ಯಾಕ್ಸ್‌ ಸಿನಿಮಾ ಇಂದು ಕ್ರಿಸ್‌ಮಸ್‌ ಅಂಗವಾಗಿ ರಿಲೀಸ್‌ ಆಗಿದೆ. ಇಂದು ಮುಂಜಾನೆಯಿಂದಲೇ ಪ್ರದರ್ಶನಗಳು ಹೌಸ್‌ಫುಲ್‌ ಆಗಿದ್ದು, ಸಿನಿಮಾ ವೀಕ್ಷಿಸಿದ ಕಿಚ್ಚನ ಅಭಿಮಾನಿಗಳು ಹಬ್ಬ ಮಾಡಿದ್ದಾರೆ. ಇಂದು ರಿಲೀಸ್‌ ದಿನವಾದ ಕಾರಣ  ಅಭಿನಯ ಚಕ್ರವರ್ತಿ ಬಾದಷ ಕಿಚ್ಚ್ ಅಭಿಮಾನಿಗಳು ಮಸ್ಕಿ ತಾಲ್ಲೂಕಿ ಅಧ್ಯಕ್ಷ ಕಿಚ್ ವಿಜಯ ಕುಮಾರ ರವರು ಹಳೆ ಬಸ್ ನಿಲ್ದಾಣ ಹತ್ತಿರ ಇರುವ ವಿಜಯ ಚಿತ್ರಮಂದಿರಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ, ಸಿನಿಮಾ ಸಕ್ಸಸ್‌ಗೆ ಆಲ್‌ ದಿ ಬೆಸ್ಟ್‌ ಹೇಳಿದ್ದಾರೆ. ಬೆಳಿಗ್ಗೆ ಶೋ ಆರಂಭಕ್ಕೂ ಮುನ್ನ ಚಿತ್ರಮಂದಿರಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಪರದೆ ಬಿಡುವ ಪರಿಕರಗಳಿಗೆ ಹಾಗೂ ಅಲ್ಲಿದ್ದ ಕಿಚ್ ನ‌ ಫೋಟೋಗಳಿಗೆ ಮಂಗಳಾರತಿ ಮಾಡುವ ಮೂಲಕ ಮ್ಯಾಕ್ಸ್‌ ಸಿನಿಮಾ ಭರ್ಜರಿ ಪ್ರದರ್ಶನ ಕಾಣಲಿ ಎಂದು ಪ್ರಾರ್ಥಿಸಿದ್ದಾರೆ.  ಈ ಸಂದರ್ಭದಲ್ಲಿ,ಮಂಜು ಬೆಳಗಲ್,ಚೇತನ ಆರ್ಚರ್, ನಾಗರಾಜ್ ಕಡುಬೂರು,ಮುತ್ತು ನಾಯಕ,ಅಂಬು ಭೋವಿ, ಗಜನಿ ವಡ್ಡರ,ಗಣೇಶ ಕಡುಬೂರು, ರಮೇಶ ಕಾಟಗಲ್,ಅಂಬು ಉದ್ಬಾಳ, ಹುಚ್ಚಪ್ಪ ನಾಯಕ,ಅರುಣ್ ಭೋವಿ, ರವಿ ನಾಯಕ, ಡಿಜೆ ಭೋವಿ, ಸಿದ್ದು ಮುರಾರಿ, ಮಹಿಬೂಬ ಹಣಿಗಿ,ನೀರುಪಾದಿ ಕಬ್ಬೇರ,ಸೇರಿದಂತೆ ಅಭಿನಯ ಚಕ್ರವರ್ತಿ ಬಾದಷ ಕಿಚ್ಚ್ ಅಭಿಮಾನಿಗಳು ಮಸ್ಕಿ ತಾಲ್ಲೂಕಿ ಅಭಿಮಾನಿಗಳು ಇದ್ದರೂ..

"ಜನಮನ ಗೆದ್ದ ನಾಯಕ ಅಟಲ್ ಜೀ"-ಪ್ರತಾಪ್ ಗೌಡ ಪಾಟೀಲ್

ಇಮೇಜ್
ಮಸ್ಕಿ : ಪಟ್ಟಣದ ಭಾರತೀಯ ಜನತಾ ಪಾರ್ಟಿ ಕಾರ್ಯಾಲಯದಲ್ಲಿ ಅಜಾತಶತ್ರು,ಮಾಜಿ ಪ್ರಧಾನ ಮಂತ್ರಿಗಳಾದ ಅಟಲ್ ಬಿಹಾರಿ ವಾಜಪೇಯಿ ಅವರ 100ನೇ ಜನ್ಮೋತ್ಸವ ಕಾರ್ಯಕ್ರಮವನ್ನು ಮಾಡಲಾಯಿತು. ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾಜಿ ಶಾಸಕರಾದ ಶ್ರೀ ಪ್ರತಾಪ್ ಗೌಡ ಪಾಟೀಲ್ ಮಾತನಾಡಿ ದೂರದೃಷ್ಟಿ ಆಡಳಿತದ ಮೂಲಕ  ಜನಮನ ಗೆದ್ದ ನಾಯಕ ಅಟಲ್ ಜೀ" ಮಾಜಿ ಪ್ರಧಾನಿ,ಭಾರತ ರತ್ನ ದಿ.ಅಟಲ್‌ ಬಿಹಾರಿ ವಾಜಪೇಯಿ ಅವರ 100 ನೇ ವರ್ಷದ ಜನ್ಮದಿನದ ಸ್ಮರಣಾರ್ಥ ಹಾಗೂ ಸುಶಾಸನ ದಿನದ ಅಂಗವಾಗಿ ಪಕ್ಷದ ಕಾರ್ಯಾಲಯ ಅಟಲ್ ಜೀ ಅವರ ಜೀವನ ಸಾಧನೆಯ ಕುರಿತು ಮಾತನಾಡಿದರು. ದೇಶ ಕಂಡ ಅತ್ಯುತ್ತಮ ಮಾಜಿ ಪ್ರಧಾನಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮಸ್ಮರಣೆಯ ಸಂದರ್ಭದಲ್ಲಿ ಸದೃಢ ಹಾಗೂ ಸಮೃದ್ಧ ಭಾರತ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಿಕೊಟ್ಟ ಅವರ ಶ್ರೇಷ್ಠ ವ್ಯಕ್ತಿತ್ವವನ್ನು ದೇಶ ಸ್ಮರಿಸುತ್ತಿದೆ,ಅವರ ಆದರ್ಶಯುತ ಜೀವನ ಮತ್ತು ಸಾಧನೆಗಳು ದೇಶದ ಅಭಿವೃದ್ಧಿಯ ಪಥ ಮುನ್ನಡೆಯಲು ನಿತ್ಯ ನಿರಂತರ ಮಾರ್ಗದರ್ಶಿಯಾಗಿವೆ. ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ರೈತರು,ಬಡವರು ಹಾಗೂ ಹಿಂದುಳಿದ ವರ್ಗದವರ ಪರವಾಗಿ ಕೈಗೊಂಡ ಅನೇಕ ಅಭಿವೃದ್ಧಿ ಯೋಜನೆಗಳು ಹಾಗೂ ಸಾಧನೆಗಳು ಅಟಲ್ ಜೀ ಅವರ ಕನಸುಗಳು ಸಾಕಾರಗೊಳ್ಳುತ್ತಿರುವುದಕ್ಕೆ ಸಾಕ್ಷಿಯಾಗಿರುವುದನ್ನು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಬಿಜೆಪಿ ಮಂಡಲದ ಅಧ್ಯಕ್ಷ ಶರಣಬಸವ ಸೊಪ್ಪಿಮಠ,ಬಿಜೆಪಿ ಜಿಲ್ಲಾ...

ಮಸ್ಕಿ : ಕ್ರಿಸಮಸ್ ಹಬ್ಬ ಆಚರಣೆ

ಇಮೇಜ್
  ಮಸ್ಕಿ : ಕ್ರಿಸಮಸ್ ಹಬ್ಬದ ಸಂಭ್ರಮ ಮನೆ ಮಾಡಿದೆ.ಕಣ್ಣು ಕುಕ್ಕುವ ಬಗೆಯಲ್ಲಿ ಅಲಂಕಾರಗೊಂಡ ವಿದ್ಯುತ್ ದೀಪಗಳು ರೋಮಾಂಚನ ವಾಗಿತ್ತು.ಮಸ್ಕಿ ಪಟ್ಟಣ ಸೇರಿ ತಾಲೂಕಿನ ವಿವಿದೆಡೆ ಕ್ರಿಸಮಸ್ ಹಬ್ಬದ ಸಂಭ್ರಮ. ಕ್ರಿಸ್ಮಸ್ ಹಬ್ಬ ಹಾಗೂ ಹೊಸ ವರ್ಷದ ಪ್ರಯುಕ್ತ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಹಾಗೂ ಕಟ್ಟಡಗಳ ಮೇಲೆ ಬಣ್ಣ ಬಣ್ಣದ ವಿದ್ಯುತ್ ದೀಪಗಳು ಮಿರಿ ಮಿರಿ ಮಿಂಚುವಂತೆ ಕಂಗೊಳಿಸುತ್ತಿವೆ. ಮಸ್ಕಿ ಸಂತ ಜಾನರ ಚರ್ಚ್ ನಲ್ಲಿ ಫಾದರ್ ಚಾರ್ಲ್ಸ ಸುಂದರ ರಾಜ ಧರ್ಮ ಗುರುಗಳ ನೇತೃತ್ವದಲ್ಲಿ ಕ್ರಿಸ್ಮಸ್ ಹಬ್ಬದ ವಿಶೇಷ ಬಲಿಪೂಜೆಯು ವಿವಿಧ ಹಳ್ಳಿಗಳಿಂದ ಧರ್ಮ ಕೇಂದ್ರದ ಭಕ್ತಾದಿಗಳ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಸಿಹಿ ಹಂಚುವ ಮೂಲಕ ಸಡಗರ ಸಂಭ್ರಮದಿಂದ ಕ್ರಿಸ್ಮಸ್ ಆಚರಣೆ ಮಾಡಲಾಯಿತು. ಯೇಸು ಕ್ರಿಸ್ತನ ಜನ್ಮ ಸಂದೇಶ ಸಾರುವ ಆಕರ್ಷಕ ಗೋದಲಿಗಳು ಚರ್ಚುಗಳ ಗಮನ ಸೆಳೆದವು.ಹಬ್ಬದ ಪ್ರಯುಕ್ತ ವಾರದ ಮುಂಚಿತವಾಗಿ ಕ್ಯಾರೇಲ್ಸ್ ಹಾಗೂ ವಿಶೇಷ ಕಾರ್ಯಕ್ರಮಗಳು ಜರುಗಿದವು. ಪೂಜಾ ಕಾರ್ಯಕ್ರಮದ ನಂತರ ಸಂತೋಷದಿ ಭೋಜನ ಸವಿದರು. ನಂತರ ಯೇಸು ಕ್ರಿಸ್ತನ ಜನ್ಮ ಸ್ಥಳವಾದ ಗೋದಲಿಯ ಮುಂಭಾಗ ಭಕ್ತಾದಿಗಳು ಫೋಟೋ ಕ್ಲಿಕ್ಕಿಸುವ ಮೂಲಕ ಗಮನ ಸೆಳೆದರು.

ಡಿ 27 ರಿಂದ ನ್ಯಾಷನಲ್ ಮೈದಾನದಲ್ಲಿ ಅವರೇಕಾಯಿ ಮೇಳ ಪ್ರಾರಂಭ

ಇಮೇಜ್
ಬೆಂಗಳೂರು; ಬಸವನಗುಡಿ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಡಿಸೆಂಬರ್ 27, 2024 ರಿಂದ ಜನವರಿ 5, 2025 ರ ತನಕ ಅವರೇಕಾಯಿ ಮೇಳ ನಡೆಯಲಿದ್ದು, ಬೆಳಿಗ್ಗೆ 10 ರಿಂದ ರಾತ್ರಿ10ರ ತನಕ ಅಂಗಡಿ ತೆರೆದಿರುತ್ತದೆ. ವಿಶೇಷವಾಗಿ ಸಂಜೆ 3 ರಿಂದ ರಾತ್ರಿ 10ರ ತನಕ ಮಾತ್ರ ವಿಶೇಷ ಖಾದ್ಯಗಳಾದ ದೋಸೆ, ವಡೆ ಇತ್ಯಾದಿಗಳು ದೊರೆಯುತ್ತದೆ. ಅವರೇಕಾಯಿ ಮೇಳವನ್ನು 27 ಸಂಜೆ 6:00ಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉದ್ಘಾಟನೆ ಮಾಡುವರು, ತಿಪಟೂರು.  ಶ್ರೀ ಸೋಮೇಕಟ್ಟೆ ಕಾಡಸಿದ್ಧೇಶ್ವರ ಮಠದ ಪೀಠಾಧ್ಯಕ್ಷರಾದ ಶ್ರೀ ಮ.ನಿ.ಪ್ರ. ಡಾ. ಕರಿವೃಷಭ ದೇಶೀಕೇಂದ್ರ ಶಿವಯೋಗೀಶ್ವರ ಮಹಾಸ್ವಾಮಿಗಳು ದೀಪ ಬೆಳಗಿಸುವವರು ಎಂದು ಮಾಲೀಕರಾದ ಗೀತಾ ಶಿವಕುಮಾರ್ ತಿಳಿಸಿದ್ದಾರೆ ಮುಖ್ಯ ಅತಿಥಿಗಳಾಗಿ ಸಂಸದ ತೇಜಸ್ವಿ ಸೂರ್ಯ  ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ, ಕೃಷಿ ಸಚಿವ ಎನ್. ಚೆಲುವರಾಯ ಸ್ವಾಮಿ, ಶಾಸಕರಾದ ಉದಯ ಗರುಡಾಚಾರ್, ಹೆಚ್, ಸಿ ಬಾಲಕೃಷ್ಣ ಮುಂತಾದ ಗಣ್ಯರು ಭಾಗವಹಿಸಲಿದ್ದಾರೆ ಎಂದರು. ಮೇಳದಲ್ಲಿ ಅವರೇಕಾಯಿಯಿಂದ ತಯಾರಾದ ಇಡ್ಲಿ. ದೋಸೆ, ಪಾಯಸ, ಚಕ್ಕುಲಿ, ನಿಪ್ಪಟ್ಟು, ಸಿಹಿ, ಖಾರಾ ಪದಾರ್ಥಗಳು ಸೇರಿದಂತೆ ಸುಮಾರು ನೂರು ಬಗೆಯ ತಿಂಡಿ, ತಿನಿಸುಗಳು, ರುಚಿಕಟ್ಟಾದ ಖಾದ್ಯಗಳು ಗ್ರಾಹಕರಿಗೆ ಲಭ್ಯವಾಗುತ್ತಿದೆ ಎಂದು ಸ್ವಾತಿ ವಿವರಿಸಿದರು  ಶುಚಿ, ರುಚಿಗೆ ಅತ್ಯುತ್ತಮ ಗುಣಮಟ್ಟ ಮತ್ತು ತಾಜಾ ತಿಂಡಿ ತಿನಿಸುಗಳಿಗೇ ಹೆಸರು ...

ಎಲೆಕ್ಟ್ರಿಕಲ್ ವಾಹನಗಳ ವ್ಯವಹಾರಗಳಿಗೆ ಸಾಲ ಸೌಲಭ್ಯ ಹಣಕಾಸು ಪೂರೈಸಲು ಶ್ರೀರಾಮ್ ಫೈನಾನ್ಸ್ ಸಿದ್ಧತೆ

ಇಮೇಜ್
  ಬೆಂಗಳೂರು: ಶ್ರೀರಾಮ್ ಫೈನಾನ್ಸ್ ಲಿಮಿಟೆಡ್ (ಶ್ರೀರಾಮ್ ಫೈನಾನ್ಸ್), ಶ್ರೀರಾಮ್ ಗುಂಪಿನ ಪ್ರಮುಖ ಕಂಪನಿಯಾಗಿದೆ, ಇದು ಎಲ್ಲಾ ಹಸಿರು ಹಣಕಾಸು ಹೂಡಿಕೆಯನ್ನು ಶ್ರೀರಾಮ್ ಹಸಿರು ಹಣಕಾಸು ಅಡಿಯಲ್ಲಿ ಒಟ್ಟುಗೂಡಿಸುವ ಮೂಲಕ ಹಸಿರು ಹಣಕಾಸಿನ ಬಗ್ಗೆ ತನ್ನ ಬದ್ಧತೆಯನ್ನು ಮತ್ತಷ್ಟು ಬಲಪಡಿಸಿದೆ, ಇದು ಇಲೆಕ್ಟ್ರಿಕ್ ವಾಹನಗಳ ಹೊರತಾಗಿ ಹೂಡಿಕೆಗಳನ್ನು ಬೆಂಬಲಿಸಲು ಮೀಸಲಾಗಿರುತ್ತದೆ. ಇದರಿಂದ ತಾಳಮೇಳದ ಹೂಡಿಕೆಗಳನ್ನು ವೇಗಗೊಳಿಸಲು ಮತ್ತು ಪರಿಸರಕ್ಕೆ ಹೊಣೆಗಾರವಾದ ಬೆಳವಣಿಗೆಗೆ ಉತ್ತೇಜನ ನೀಡಲು ಮಹತ್ವದ ಹೆಜ್ಜೆ ಹಾಕಲಾಗಿದೆ. ಶ್ರೀರಾಮ್ ಫೈನಾನ್ಸ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ಉಪಾಧ್ಯಕ್ಷ ಉಮೇಶ್ ರೇವಣಕರ್ ಮತ್ತು ಶ್ರೀರಾಮ್ ಫೈನಾನ್ಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಹೂಡಿಕೆಗಳನ್ನು ಬೆಂಬಲಿಸಲು   ಹಣಕಾಸು ವ್ಯವಹಾರವನ್ನು ಶ್ರೀರಾಮ್ ಹಸಿರು ಹಣಕಾಸು ಅಡಿಯಲ್ಲಿ ತಾತ್ತ್ವಿಕ ಪರಿಹಾರಗಳಿಗೆ ಹಣಕಾಸು ಒದಗಿಸಲಿದೆ . ಅಧಿಕಾರಿ ವೈ.ಎಸ್.ಚಕ್ರವರ್ತಿ ಅವರು ಬೆಂಗಳೂರಿನಲ್ಲಿ ಶ್ರೀರಾಮ್ ಗ್ರೀನ್ ಫೈನಾನ್ಸ್ ಬಿಡುಗಡೆ ಸಮಾರಂಭದಲ್ಲಿ ಲೋಗೋವನ್ನು ಬಿಡುಗಡೆ ಮಾಡಿದರು. ಗ್ರೀನ್ ಫೈನಾನ್ಸ್ ಪೋರ್ಟ್‌ಫೋಲಿಯೊವನ್ನು ಹಣಕಾಸು ಇವಿಗಳು, ಬ್ಯಾಟರಿ ಚಾರ್ಜಿಂಗ್ ಸ್ಟೇಷನ್‌ಗಳು, ನವೀಕರಿಸಬಹುದಾದ ಇಂಧನ ಉತ್ಪನ್ನಗಳು ಮತ್ತು ಪರಿಹಾರಗಳು, ಶಕ್ತಿ ದಕ್ಷ ಯಂತ್ರೋಪಕರಣಗಳು ಇತ್ಯಾದಿಗಳ ಮೂಲಕ ನಿರ್ಮಿಸಲಾಗುತ್ತದೆ. ಎಲೆಕ್ಟ್ರಿಕಲ್...

ಜಯಂತಿಗಳ ಪೂರ್ವಭಾವಿ ಸಭೆ

ಇಮೇಜ್
  ಮಸ್ಕಿ : ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ವಿಶ್ವಮಾನವ ಕುವೆಂಪು ಹಾಗೂ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಜಯಂತಿಯ ಅಂಗವಾಗಿ ಪೂರ್ವಭಾವಿ ಸಭೆ ನಡೆಸಲಾಯಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಗ್ರೇಡ್_2 ಅವರು ಮಾತನಾಡಿ, ಇದೇ ಡಿ.29 ರಂದು ಬೆಳಿಗ್ಗೆ ವಿಶ್ವಮಾನವ ಕುವೆಂಪು ಅವರ ಜಯಂತಿಯನ್ನು ತಾಲ್ಲೂಕು ಆಡಳಿತದಿಂದ ಆಚರಿಸಲಾಗುತ್ತದೆ, ತಹಶೀಲ್ದಾ ಕಚೇರಿಯಲ್ಲಿ ಕುವೆಂಪು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವಿಸುವ ಮೂಲಕ ಆಚರಿಸಲಾಯಿತು. ಹಾಗೂ ಜ.1 ರಂದು ಬೆಳಿಗ್ಗೆ 10 ಗಂಟೆಗೆ ಸರ್ಕಾರದ ಆದೇಶದಂತೆ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಅವರ ಜಯಂತಿ ಅಂಗವಾಗಿ, ಅಂದು ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಅಮರಶಿಲ್ಪಿ ಜಕಣಾಚಾರಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಇಬ್ಬರು ಮಹನೀಯರ ಜಯಂತಿಯನ್ನು ತಾಲೂಕಿನ ಎಲ್ಲಾ ಶಾಲಾ, ಕಾಲೇಜು, ಸರಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಆಚರಿಸಬೇಕು ಹಾಗೂ ತಾಲೂಕು ಆಡಳಿತದಿಂದ ನಡೆಯುವ ಕಾರ್ಯಕ್ರಮದಲ್ಲಿ ಎಲ್ಲಾ ಇಲಾಖೆ ಕಾರ್ಯನಿರ್ವಹಣಾಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಬೇಕು, ಭಾಗವಹಿಸಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಬೇಕು ಎಂದು ಸೂಚಿಸಿದರು. ಈ ಸಭೆಯಲ್ಲಿ ಮಸ್ಕಿ ತಾಲ್ಲೂಕು ವಿಶ್ವಕರ್ಮ ಸಮಾಜದವರು ಹಾಗೂ ವಿವಿಧ ಅಧಿಕಾರಿಗಳು, ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಅಮಿತ್ ಶಾ ಅವರ ರಾಜೀನಾಮೆ ಹಾಗೂ ಅವರ ಮೇಲೆ ಶಿಸ್ತು ಕಾನೂನೂ ಕ್ರಮ ಜರುಗಿಸಲು ಒತ್ತಾಯ

ಇಮೇಜ್
  ಮಸ್ಕಿ : ರಾಜ್ಯಸಭೆಯಲ್ಲಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಬಗ್ಗೆ ವಿವಾದಾತ್ಮಕ ಮಾತನಾಡಿದ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರು ರಾಜೀನಾಮೆ ಪಡೆಯಲು ಒತ್ತಾಯಿಸಿ ಪ್ರತಿಭಟಿಸಿ ತಹಶೀಲ್ದಾರರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು. ಪಟ್ಟಣದ ಹಳೇ ಬಸ್ ನಿಲ್ದಾಣದ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತದ ಬಳಿ ಸಂಸತ್ ಭವನದಲ್ಲಿ ಚರ್ಚೆ ಮಾಡುವ ಸಂದರ್ಭದಲ್ಲಿ ಕೇಂದ್ರ ಗೃಹ ಮಂತ್ರಿಯಾದ ಅಮಿತ್ ಷಾ ಅವರು 'ಅಂಬೇಡ್ಕರ್ ಅವರನ್ನು ಮತ್ತೆ ಮತ್ತೆ ನೆನಪಿಸುವುದು, ನೆನೆಸಿಕೊಳ್ಳುವುದು ಅಂಬೇಡ್ಕರ್ ಅವರ ಹೆಸರನ್ನು ಹೇಳುವುದು ಫ್ಯಾಷನ್ ಆಗಿದೆ'. ಅಂಬೇಡ್ಕರ್ ಅವರನ್ನು ನೆನೆಸಿಕೊಳ್ಳುವಷ್ಟು ದೇವರನ್ನು ನೆನೆದಿದ್ದರೆ ಸ್ವರ್ಗ ಪ್ರಾಪ್ತಿಯಾಗುತ್ತಿತ್ತು,ಎನ್ನುವಂತಹ ವಿವಾದಾತ್ಮಕ ಮಾತನ್ನು ಹೇಳಿ ಬಾಬಾ ಸಾಹೇಬರಿಗೆ ಹಾಗೂ ಕೋಟ್ಯಂತರ ಅಂಬೇಡ್ಕರ್ ಅನುಯಾಯಿಗಳಿಗೆ ಅವಮಾನವನ್ನುಂಟು ಮಾಡಿದ್ದಾರೆ. ಇದು ಅವರ ವೈಯಕ್ತಿಕ ಅಭಿಪ್ರಾಯವಲ್ಲ ಒಂದು ಸರ್ಕಾರದ ಘನತೆವೆತ್ತ ಮಂತ್ರಿಯಾಗಿ, ಸರ್ಕಾರದ ಪ್ರತಿನಿಧಿಯಾಗಿ ಈ ಮಾತನ್ನು ಹೇಳಿದ್ದಾರೆ. ಹಾಗಾಗಿ ಇದು ಅಸಂವಿಧಾನಿಕ ನಡೆ ಮತ್ತು ಇದು ಖಂಡನೀಯ. ಒಂದು ಸಂವಿಧಾನವನ್ನು ರಚನೆ ಮಾಡಿದಂತಹ ನಿರ್ಮಾತೃ ಎಂದು ಇಡೀ ದೇಶವೇ ಘನತೆಯಿಂದ ಅಂಬೇಡ್ಕರ್ ಬಗ್ಗೆ ಮಾತಡುವಾಗ,ಚರ್ಚೆ ಮಾಡುವಾಗ ಮತ್ತು ಸಂವಾದ ಮಾಡುವಾಗ ಎಷ್ಟೋ ದಮನಿತ ಸಮುದಾಯಗಳು ಇವತ್ತು ಅಂಬೇಡ್ಕರ್ ಅವರನ್ನು ದೊಡ್ಡ ಜ್ಞಾನದ ಭಂಡಾರವೆಂದು ಅವರಿಗೆ ಗೌರ...

ಡಾ.ಬಿ ಆರ್ ಅಂಬೇಡ್ಕರ್ ಜಯಂತಿಯ. ದಿನದಂದು ವೇತನಯುಕ್ತ ರಜೆಗಾಗಿ. ಎಸ್ಸಿ ಎಸ್ಟಿ ನೌಕರರ ಸಂಘದಿಂದ 6 ವರ್ಷ ಸುದೀರ್ಘ ಹೋರಾಟಕ್ಕೆ ಸಿಕ್ಕ ಜಯ.

ಇಮೇಜ್
  ಹಟ್ಟಿ ಚಿನ್ನದ ಗಣಿ:22 ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ನೌಕರರ ಸಂಘ ಹಟ್ಟಿ ಚಿನ್ನದ ಗಣಿ ಕಂಪನಿ ವತಿಯಿಂದ ಸಂವಿಧಾನ ಶಿಲ್ಪಿ ಡಾ!ಬಾಬಾ ಸಾಹೇಬ್ ಅಂಬೇಡ್ಕರ್ ರವರ ಜಯಂತಿಯ ಅಂಗವಾಗಿ ವೇತನಯುಕ್ತ ರಜೆ ಘೋಷಿಸಲು ಸುಮಾರು 6 ವರ್ಷಗಳ ಸುದೀರ್ಘ ಹೋರಾಟವನ್ನ ನಮ್ಮ ಎಸ್ಸಿ ಹಾಗೂ ಎಸ್ ಟಿ ನೌಕರರ ಸಂಘದ ಜಮದಗ್ನಿ ಕೋಠಾ (ಅಧ್ಯಕ್ಷರು) ಹಾಗೂ ಶರಣಗೌಡ ಗುರಿಕಾರ (ಪ್ರಧಾನ ಕಾರ್ಯದರ್ಶಿಗಳು ) ಸಂಘದ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದ್ಯಸರುಗಳ ನಿರಂತರ ಒಗ್ಗಟಿನ ಕೂಗು,ಆಡಳಿತ ವರ್ಗದೊಂದಿಗೆ ಹಲುವಾರು ಸಭೆಗಳು, ಕರ್ನಾಟಕ ಸರಕಾರದ ಮಾನ್ಯ ಮಂತ್ರಿಗಳಿಗೆ ಖುದ್ದು ಬೇಟೆ ನೀಡಿ ಹಟ್ಟಿ ಚಿನ್ನದ ಗಣಿ ಕಂಪನಿ ಕಾರ್ಮಿಕರಿಗೆ ಪ್ರತಿ ವರ್ಷ ಏಪ್ರಿಲ್ 14 ರಂದು ವೇತನಯುಕ್ತ ರಜೆ ಘೋಷಿಸಲು ಮನವಿ ಸಲ್ಲಿಸಿದ ಪ್ರಯುಕ್ತ ಇಂದು ನಮ್ಮ ಕಾರ್ಮಿಕರ ವೇತನ ಒಪ್ಪಂದದಲ್ಲಿ ಮೊದಲು 13 ರಜೆಗಳು ಇದ್ದವು ಇನ್ನು ಮುಂದೆ 14 ರಜೆಗಳು ನೀಡಲು ಅನುಮೋದನೆ ಸಿಕ್ಕಿದ್ದು ಆ 14 ನೇಯ ರಜೆ ನಮ್ಮ ಬಾಬಾ ಸಾಹೇಬರ ಜಯಂತಿಯ ವೈಶಿಷ್ಟತೆ ಆಗಿರುತ್ತದೆ. ಇದು ನಮ್ಮ ಸಂಘದ ಸತತ ಹೋರಾಟದ ಫಲ ಹಾಗೂ ಎಸ್ಸಿ ಹಾಗೂ ಎಸ್ ಟಿ ನೌಕರರ ಸಂಘದ ಬಲವರ್ಧನೆ, ಇದಕ್ಕೆ ಸಹಕರಿಸಿದ ಎಲ್ಲಾ ಗಣ್ಯ ಮಾನ್ಯರಿಗೆ, ವ್ಯವಸ್ಥಾಪಕ ನಿರ್ದೇಶಕರುಗಳಿಗೆ,ಕಂಪನಿ ಆಡಳಿತ ವರ್ಗದವರಿಗೆ,ಕಾರ್ಮಿಕ ವರ್ಗಕ್ಕೆ ಹಾಗೂ ಮಾಧ್ಯಮ ಮಿತ್ರರಿಗೆ, ಭೀಮ ವಂದನೆಗಳನ್ನು ಸಲ್ಲಿಸಿದರು.

ಯೇಸುವಿನ ಪವಿತ್ರ ಹೃದಯ ದೇವಾಲಯದಲ್ಲಿ.ಮಿನಿ ಕ್ರಿಸ್ಮಸ್ ಆಚರಣೆ.

ಇಮೇಜ್
  ಹಟ್ಟಿ ಚಿನ್ನದ ಗಣಿಯ:ಯೇಸುವಿನ ಪವಿತ್ರ ಹೃದಯ ದೇವಾಲಯದಲ್ಲಿ.ಸಾಯಂಕಾಲ 8:00ಗೆ ಮಿನಿ ಕ್ರಿಸ್ಮಸ್ ಹಬ್ಬವನ್ನು.ಫಾದರ್  ಡಾ!ವಿಜಯಕುಮಾರ್ ಅವರ ನೇತೃತ್ವದಲ್ಲಿ.ಹಟ್ಟಿ ಚಿನ್ನದ ಗಣಿಯ ವಿವಿಧ ಚರ್ಚುಗಳ ಸಭಾ ಪಾಲಕರಾದ ರೆವರೆಂಡ್ ದೇವದನ್ ಆನಂದಪ್ಪ.ಶ್ಯಾಮ್ ಪ್ರದೀಪ್. ರೆವರೆಂಡ್ ವೆಸ್ಲಿ.ಹಾಗೂ ಸಿಸ್ಟರ್ ಸುಪೀರಿಯರ್ ಇವರನ್ನು ಆಹ್ವಾನಿಸಿ.ಜ್ಯೋತಿ ಬೆಳಸಿ ನಂತರ ಕೇಕ್ ಕತ್ತರಿಸುವ ಮುಖಾಂತರ ಮಿನಿ ಕ್ರಿಸ್ಮಸ್ ಆಚರಣೆಗೆ ಚಾಲನೆ ನೀಡಲಾಯಿತು.ನಂತರ ರೆವರೆಂಡ್ ದೇವದನ್ ಆನಂದಪ್ಪ ಮಾತನಾಡಿ. ನವಂಬರ್ ಕೊನೆಯ ದಿವಸ ಆರಂಭವಾದ ಮಧ್ಯರಾತ್ರಿಯಲ್ಲಿ.ಕ್ರೈಸ್ತ ಬಂದವರು ಆ ಮಧ್ಯರಾತ್ರಿಯಲ್ಲಿ ವೆಲ್ಕಮ್ ಕ್ರಿಸ್ಮಸ್ ಎಂಬುದಾಗಿ ಆಚರಣೆ ಮಾಡುತ್ತಾರೆ.ಅಂದರೆ ನಾವು ಭಕ್ತಿ ಪೂರ್ವಕವಾಗಿ ಲೋಕ ರಕ್ಷಕನಾದ ಯೇಸುಕ್ರಿಸ್ತನ ಜನನವನ್ನು ಆತ್ಮೀಯ ರೀತಿಯಲ್ಲಿ ಬರಮಾಡಿಕೊಳ್ಳುವಂತ ಸಂತೋಷದ ಸಮಯ.ಅದೇ ರೀತಿ ನಾವು ಇನ್ನೂ ಎರಡು ದಿನಗಳು ಕಳೆದರೆ ನಾವೆಲ್ಲರೂ ಕ್ರಿಸ್ಮಸ್ ಆಚರಣೆ ಮಾಡುತ್ತೇವೆ.ಕ್ರಿಸ್ತನ ಆಗಮನದ ದಿನಮಾನಗಳಲ್ಲಿ ಪ್ರಾರ್ಥನಾ ಪೂರಕ ಸಮಯವನ್ನು ಕಳೆಯುತ್ತಾ ಇದ್ದೇವೆ.ಹಾಗಾದರೆ ಕ್ರಿಸ್ತ ಜಯಂತಿ ಅಂದರೆ ಏನು? ಕ್ರಿಸ್ಮಸ್ ಹಬ್ಬ ಅಂದರೆ ಮೊದಲನೆಯ ಅರ್ಥ ಲೋಕ ರಕ್ಷಕನಾದಂತ ಏಸುಕ್ರಿಸ್ತನನ್ನು ಗುರುತಿಸುವಂತದ್ದು. ಗುರುತುಸುವಿಕೆ ಅದು ವ್ಯಕ್ತಿಯ ಶ್ರೇಷ್ಠತೆ.ಹಾಗೂ ವ್ಯಕ್ತಿತ್ವವನ್ನು ತೋರಿಸುವಂತದ್ದು ಆಗಿರುತ್ತದೆ.ಹಾಗೆ ಯೇಸುಕ್ರಿಸ್ತನು ಜನಿಸಿದಾಗ. ಈ ...

ಸ್ನೇಹ ಸದನ ಸಮಗ್ರ ಸಮಾಜ ಕಾರ್ಯನಿರ್ವಹಣೆ ಕೇಂದ್ರದಲ್ಲಿ.ಕ್ರಿಸ್ಮಸ್ ಆಚರಣೆ.

ಇಮೇಜ್
  ಬ್ಯಾಡಗಿ: ಪಟ್ಟಣದ ಕದರಮಂಡಲಗಿ ರಸ್ತೆಯಲ್ಲಿರುವ ಸ್ನೇಹ ಸದನ ಸಮಗ್ರ ಸಮಾಜ ಕಾರ್ಯ ನಿರ್ವಾಹಣ ಕೇಂದ್ರದಲ್ಲಿ.ಸತತವಾಗಿ ಎರಡು ದಿನಗಳ ಕಾಲ ಕ್ರಿಸ್ಮಸ್ ಹಬ್ಬ ಸಂಭ್ರಮಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. 21.12.2024ರಂದು ಸಂಸ್ಥೆಯ ಸಂಕಿತ ಮಹಿಳೆಯರಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಬ್ರಹ್ಮಕುಮಾರಿ ಈಶ್ವರಿ ವಿದ್ಯಾಲಯದ ಕುಮಾರಿ ರೇಖಾ ಅಮ್ಮನವರು ಹಾಗೂ ಅವರ ಶಿಷ್ಯರಾದ ವನಜಾಕ್ಷಿಯವರು ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವತಿಯಿಂದ.ಮಕ್ಕಳ ಸಹಾಯವಾಣಿಯ ಬ್ಯಾಡಗಿ ತಾಲೂಕ ಸಂಯೋಜಕರಾದ ಶ್ರೀಯುತ ರಮೇಶ್ ಲಮಾಣಿ ಅವರು ಆಗಮಿಸಿದ್ದರು. ಕುಮಾರಿ ರೇಖಾ ಅಮ್ಮನವರು ಮಾತನಾಡಿ ಆರೋಗ್ಯದ ಕುರಿತು ಸಾಕಷ್ಟು ಕಾಳಜಿಯನ್ನು ತೆಗೆದುಕೊಳ್ಳಬೇಕು ಎಂದು ತಿಳಿಸಿದರು. ಮತ್ತು ಧ್ಯಾನವನ್ನು ಮಾಡಿಸಿ.ಅವರ ಮನಸ್ಸನ್ನು ಶುದ್ಧಗೊಳಿಸುವ ರೀತಿಯಲ್ಲಿ ಮಾಹಿತಿಯನ್ನು ನೀಡಿದರು. ನಂತರ ಸಂಸ್ಥೆಯ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಸಂಕಿತ ಮಹಿಳೆಯರಿಗೆ ಹಮ್ಮಿಕೊಳ್ಳಲಾಗಿತ್ತು. ಕುಟಿರದ ಮಕ್ಕಳು ಮಹಿಳೆಯರಿಗೆ ವಿವಿಧ ನೃತ್ಯಗಳನ್ನು ಮಾಡುತ್ತಾ ಅವರ ಮನಸ್ಸಿಗೆ ಸಂತೋಷವನ್ನು ನೀಡಿದರು.ಮತ್ತು ಸಹೋದರಿ ರೂಪಾ ರವರು ಮಹಿಳೆಯರಿಗೂ ಕ್ರಿಸ್ಮಸ್ ಹಬ್ಬದ ಸಂದೇಶವನ್ನು ನೀಡಿದರು.ಎಲ್ಲರಿಗೂ ಆಟೊ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಅದರಲ್ಲಿ ಭಾಗವಹಿಸಿ, ವಿಜೇತರಾದವರಿಗೆ ಬಹುಮಾನಗಳನ್ನು ವಿತರಣೆ ಮಾಡಲಾಯಿತು. ಕೊನೆಯಲ್ಲಿ ಸುಮಾರು 85 ಮಹಿಳೆಯರ...

ಚನ್ನಮಲ್ಲ ಶಿವಯೋಗಿಗಳ 69 ನೇ ಜಾತ್ರಾ ಮಹೋತ್ಸವ

ಇಮೇಜ್
  ಮಸ್ಕಿ : ಲಿಂ.ಚನ್ನಮಲ್ಲ ಶಿವಯೋಗಿಗಳ 69 ನೇ ಜಾತ್ರಾ ಮಹೋತ್ಸವವು ತಾಲ್ಲೂಕಿನ ಮೆದಿಕಿನಾಳ ಗ್ರಾಮದಲ್ಲಿ ಭಾನುವಾರ ಸಹಸ್ರಾರು ಸಹಸ್ರಾರು ಜನ ಸಂದಣಿಯಲ್ಲಿಯೂ ಶಾಂತಿಯುತವಾಗಿ ಜರುಗಿತು. ಭಾನುವಾರ ಬೆಳಿಗ್ಗೆ ಚನ್ನಮಲ್ಲ ಶಿವಯೋಗಿಗಳ ಗದ್ದುಗೆಗೆ ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಗಂಗಾ ಸ್ಥಳದಿಂದ ಕುಂಭ ಹಾಗೂ ಚನ್ನಮಲ್ಲ ಶಿವಯೋಗಿಗಳ ಭಾವಚಿತ್ರದ ಮೆರವಣಿಗೆ ನಡೆಯಿತು.ನಂತರ ನೇರವಾಗಿ ಕಾರ್ಯಕ್ರಮದ ವೇದಿಕೆಗೆ ಗಣ್ಯರನ್ನು ಬರ ಮಾಡಿಕೊಂಡು ಹಾಸನ ಸ್ವೀಕಾರ ಮಾಡಿದ ಗಣ್ಯರಿಗೆ ಶಾಲು ಹೊದಿಸಿ ಮಠದ ಹಿನ್ನೆಲೆ ಇರುವ ಪುಸ್ತಕ ಹಾಗೂ ನೆನೆಪಿನ ಕಾಣಿಗೆ ನೀಡಿ ವೇದಿಕೆಗೆ ಬರಮಾಡಿಕೊಂಡರು. ಕಾರ್ಯಕ್ರಮದ ಮೊದಲಿಗೆ ಪ್ರಾರ್ಥನಾ ಭರತ ನಾಟ್ಯ ಮಾಡಲಾಯಿತು.ವಿಶೇಷ ಎಂಬಂತೆ ತಮ್ಮ ಇಳಿ ವಯಸ್ಸಿನಲ್ಲೂ 3 ನವ ದಂಪತಿಗಳಿಗೆ ಹೊಸ ಸಮವಸ್ತ್ರ,ಬಂಗಾರ,ಹಸಿರು ಬಳೆ,ಹಾಗೂ ಮದುವೆ ಕಾರ್ಯಕ್ಕೆ ಬೇಕಾಗುವವನ್ನೂ ನೀಡಿ ತಮ್ಮ ಅಂತರಾಳದ ಚನ್ನಮಲ್ಲ ಸ್ವಾಮೀಜಿರವರ ಮೇಲಿನ ಭಕ್ತಿ ಮತ್ತು ಪ್ರೀತಿಗೆ ಹಾಗೂ ಅವರ ಸ್ಮರಣಾರ್ಥದ ಮಠಕ್ಕೆ ದೇಣಿಗೆ ನೀಡುವ ಮೂಲಕ ತಮ್ಮ ಸೇವೆಯನ್ನು ಸಲ್ಲಿಸಿದ ಬಸಮ್ಮ ಗಂಡ ದಿವಂಗತ ಮಲ್ಲಪ್ಪ ಕೋಸಗಿ ಅವರನ್ನು ವೇದಿಕೆಗೆ ಅಥಿತಿಯಾಗಿ ಆಹ್ವಾನಿಸಿ ಸನ್ಮಾನಿಸಿ ಗೌರವಿಸಿದರು. ನಂತರ ಶ್ರೀ ಮಠದ 501 ಬಾಲಮಕ್ಕಳಿಗೆ ಹಾಗೂ ಮುತ್ತೈದೆ ಮಹಿಳಾ ಭಕ್ತರಿಗೆ ಅತೀ ಶಿಸ್ತು ಬದ್ಧವಾಗಿ ಅತ್ಯಂತ ಗೌರವಯುತವಾಗಿ ಅಂದರೆ ಗಂಡನ ಮನೆಗೆ ಹೋಗುವ...

"ವಿಜಯಮಾಲೆ ಧರಿಸಿದ ಕೆಪಿಎಸ್ ಪತ್ರಕರ್ತರ ತಂಡ"

ಇಮೇಜ್
  *ಅತ್ತ್ಯುತ್ತಮ ಗೆಲುವು ಸಾಧಿಸಿದ ಕೆಪಿಎಸ್ ಪತ್ರಕರ್ತರ ತಂಡ* ಕೊಟ್ಟೂರಿನಲ್ಲಿ  ಹಳೆ  ಕೊಟ್ಟೂರು ಸೇವಾ ಟ್ರಸ್ಟ್ (ರಿ) ಕೊಟ್ಟೂರು ಅವರಿಂದ ಆಯೋಜಿಸಿದ ಸ್ಟಂಪರ್ ಬಾಲ್  ಟೂರ್ನಮೆಂಟ ಮೊದಲನೇ ಬಾರಿಗೆ ಸುಖಾಂತ್ಯ ಕಂಡಿತು. ಕೊಟ್ಟೂರು : ಹಳೆ  ಕೊಟ್ಟೂರು ಸೇವಾ ಟ್ರಸ್ಟ್ (ರಿ) ಕೊಟ್ಟೂರು ವತಿಯಿಂದ ಆಯೋಜಿಸಿದ ಸ್ಟಂಪರ್ ಬಾಲ್ ಮೊದಲನೇ ಬಾರಿಗೆ  ಡಿಸೆಂಬರ್ 21 ,22 ಎರಡು ದಿನ ಆಯೋಜಿಸಲಾಗಿತ್ತು. ಒಟ್ಟು 10 ತಂಡಗಳು ಭಾಗವಹಿಸಿದ್ದವು. ಅಂತಿಮ ಪಂದ್ಯದ ಸೆಣಸಾಟಕ್ಕಾಗಿ ಲಾಯನ್ಸ್ ಕೊಟ್ಟೂರು  ಮತ್ತು  ಕೆಪಿಎಸ್ ಪತ್ರಕರ್ತರ ತಂಡ ಸೆಮಿಫೈನಲ್‌ನಲ್ಲಿ ಹಣಾಹಣಿಯಾಗಿ  ಕೆಪಿಎಸ್ ಪತ್ರಕರ್ತರ ತಂಡ  ಫೈನಲ್‌ಗೆ ಲಗ್ಗೆಯಿಟ್ಟಿತು. ನಂತರ ಹಳೆ ಕೊಟ್ಟೂರು ಮತ್ತು ಗೇಮ್ ಚೆಜರ್ ತಂಡ ಸೆಮಿಫೈನಲ್‌ನಲ್ಲಿ ರೋಚಕದ ಆಟ ನಡೆಯುತು.ಭಾನುವಾರ ಮಧ್ಯಾಹ್ನ ಕೆಪಿಎಸ್ ಪತ್ರಕರ್ತರ ತಂಡ ಮತ್ತು ಗೇಮ್  ಚೆಜರ್ ಫೈನಲ್ ಆಟವನ್ನು ನಡೆದವು. ಪ್ರಥಮ ಬಹುಮಾನ ಆಕರ್ಷಕ ಟೋಪಿ 20,001/ಎನ್ ಹೇಮಣ್ಣ ಅಲಬೂರು ಅವರಿಂದ ನೀಡಲಾಯಿತು.ಮತ್ತು ದ್ವಿತೀಯ ಬಹುಮಾನ ಆಕರ್ಷಕ ಟ್ರೋಫಿ 10001/ ಬಹುಮಾನವನ್ನು ನಿಡಿ ಎಂ ಎಂ ಜೆ ಮಂಜುನಾಥ ಮಾತನಾಡಿ ಕ್ರೀಡೆ ಜೀವನದಲ್ಲಿ ಬಹಳ ಮುಖ್ಯ. ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ದೈಹಿಕ ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳಬಹುದು ಎಂದರು  ಫೈನಲ್ ಪಂದ್ಯಾವಳಿಯಲ್ಲ...

ರಾಜ್ಯಮಟ್ಟದ ಚಿನ್ಮಯಜ್ಞಾನಿ ಶಿಕ್ಷಕ ಪ್ರಶಸ್ತಿಗೆ ಭಾಜನರಾದ : ರವಿಕುಮಾರ ಎಸ್ ಚುಕನಟ್ಟಿ

ಇಮೇಜ್
  ದೇವದುರ್ಗ : ರಾಜ್ಯಮಟ್ಟದ ಚಿನ್ಮಯಜ್ಞಾನಿ ಶಿಕ್ಷಕ ಪ್ರಶಸ್ತಿಗೆ ತಾಲ್ಲೂಕಿನ. ಸ.ಮಾ.ಹಿ.ಪ್ರಾ.ಶಾಲೆ, ಸೋಮನಮರಡಿ ಶಿಕ್ಷಕರಾದ ರವಿಕುಮಾರ ಎಸ್,ಆಯ್ಕೆ ಯಾಗಿದ್ದು ತಾಲ್ಲೂಕಿನ ಹೆಮ್ಮೆಯ ವಿಷಯ ಎಂದು ಸಾರ್ವಜನಿಕ ಹಾಗೂ ಸಾಹಿತ್ಯ ಜ್ಞಾನಗಳು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶರಣು ವಿಶ್ವವಚನ ಫೌಂಡೇಷನ್, ಮೈಸೂರು ಸಹಯೋಗ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು 2025ರ ಶರಣು ದಿನಚರಿ, ಬಸವಭಾನು ಸಂಚಿಕೆ ಬಿಡುಗಡೆ ರಾಜ್ಯ ಮಟ್ಟದ ಚಿನ್ಮಯಜ್ಞಾನಿ ಶಿಕ್ಷಕ ಪ್ರಶಸ್ತಿ ಹಾಗೂ ವಿವಿಧ ಪ್ರಶಸ್ತಿಗಳ ಪ್ರದಾನ ಸಮಾರಂಭ ಹಾಗೂ ಸಂಸ್ಥೆಯ ದತ್ತಿದಾಸೋಹಿಗಳು, ಆಜೀವ ಸದಸ್ಯರು, ಪ್ರೋತ್ಸಾಹದಾಯಕರಿಗೆ ಅಭಿನಂದನಾ ಸಮಾರಂಭ ಕಾರ್ಯಕ್ರಮವ 28 ಡಿಸೆಂಬರ್ 2024 ಶನಿವಾರ ಜಿಲ್ಲಾ ಕನ್ನಡ ಸಾಹಿತ್ಯ ಭವನ, ವಿಜಯನಗರ ಒಂದನೇ ಹಂತ, ಮೈಸೂರು ನಲ್ಲಿ ನಡೆಯುವ ಕಾರ್ಯಕ್ರಮ ದಲ್ಲಿ ರಾಜ್ಯಮಟ್ಟದ ಚಿನ್ಮಯಜ್ಞಾನಿ ಶಿಕ್ಷಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ ಎಂದು ಶರಣು ವಿಶ್ವ ವಚನ ಫೌಂಡೇಶನ್ ಹಾಗೂ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪತ್ರಿಕೆ ಪ್ರಕಟನೆ ಮೂಲಕ ತಿಳಿಸಿದರು.

"ಹಳೆ ಕೊಟ್ಟೂರು ಸೇವಾ ಟ್ರಸ್ಟ್ (ರಿ) ವತಿಯಿಂದ ಪ್ರಥಮ ಕ್ರಿಕೆಟ್‌ ಪಂದ್ಯಾವಳಿಗೆ ಚಾಲನೆ"

ಇಮೇಜ್
  ಕೊಟ್ಟೂರು:- ದಿನ ನಿತ್ಯದ ಕರ್ತವ್ಯ ಹಾಗೂ ಕೆಲಸದ ಜೊತೆಗೆ ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ಉತ್ತಮ ಆರೋಗ್ಯವಂತಿಕೆಯ ಜೀವನ ಸಾಗಿಸಲು ಮುಂದಾಗಬೇಕೆಂದು ಕೆ.ಕೊಟ್ರೇಶ್ ಅದ್ಯಕ್ಷರು, ಕರ್ನಾಟಕ ಪತ್ರಕರ್ತರ ಸಂಘ, ತಾಲೂಕು ಘಟಕ ಕೊಟ್ಟೂರು ಇವರು ತಿಳಿಸಿದರು. ಕೊಟ್ಟೂರಿನಲ್ಲಿ ಹಳೆ ಕೊಟ್ಟೂರು ಸೇವಾ ಟ್ರಸ್ಟ್ (ರಿ) ಆಯೋಜಿಸಿದ್ದ ಕ್ರಿಕೆಟ್‌ ಪಂದ್ಯಾವಳಿಗೆ ಶನಿವಾರ ಚಾಲನೆ ನೀಡಿ ಮಾತಾಡಿದರು. ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವುದರಿಂದ ಆರೋಗ್ಯ ವೃದ್ಧಿಯಾಗಲಿದೆ. ಇಂತಹ ಕ್ರೀಡಾಕೂಟ ಹಮ್ಮಿಕೊಳ್ಳುವುದು ಒಳ್ಳೆಯ ಬೆಳವಣಿಗೆ. ಸೋಲು ಗೆಲುವು ಎನ್ನದೇ ಆಟದಲ್ಲಿ ಭಾಗಿಯಾಗಬೇಕಿದೆ ಎಂದು ಸಂಸ್ಥಾಪಕರು ವಿಜಯ ಕುಮಾರ್ ಹಟ್ಟಿ ತಿಳಿಸಿದರು. ಕ್ರಿಕೆಟ್‌ ಪಂದ್ಯವಳಿಯಲ್ಲಿ ಪ್ರಥಮ ಬಹುಮಾನ ಇಪ್ಪತ್ತು ಸಾವಿರ ರೂಪಾಯಿಗಳು, ದ್ವಿತೀಯ ಬಹುಮಾನ ಹತ್ತು ಸಾವಿರ ರೂಪಾಯಿಗಳು ಬಹುಮಾನ ನೀಡುತ್ತಿದ್ದು, ಕ್ರಿಕೆಟ್ ಪಂದ್ಯವಳಿಯಲ್ಲಿ ಭಾಗವಹಿಸುವ ಆಟಗಾರರಲ್ಲಿ ಉತ್ತಮ ಪ್ರದರ್ಶನ ನೀಡಿದ ಕ್ರೀಡಾ ಪಟುಗಳಿಗೆ ಇತರೇ ಬಹುಮಾನಗಳ ವಿತರಣೆ ಮಾಡುತ್ತೇವೆ ಎಂದು ಆಯೋಜಕರು ತಿಳಿಸಿದರು. ಅಗ್ನಿಶಾಮಕ ಇಲಾಖೆ,,ಪಟ್ಟಣ ಪಂಚಾಯಿತಿ, ಪೊಲೀಸ್ ಇಲಾಖೆ, ಹಳೆ ಕೊಟ್ಟೂರು, ಕೆಪಿಎಸ್ ಪತ್ರಕರ್ತರು ತಂಡ,ಯುಥ್ ಕ್ರಿಕೆಟರ್ಸ್, ಗೇಮ್ ಚೆಜರ್, ಹಸಿರು ಹೊನಲು ತಂಡ, ಯುವ ಕ್ರಿಕೆಟರ್ಸ್, ಲಾಯನ್ಸ್ ಕೊಟ್ಟೂರು , ಒಟ್ಟು ಹತ್ತು ತಂಡಗಳು ಭಾಗವಹಿಸಿದ್ದವು ಉದ್ಘಾಟನಾ ಕಾರ್ಯಕ್ರಮದಲ್ಲಿ ಮಂಜ...

ಹಿರೇನಗನೂರು ಸರಕಾರಿ ಶಾಲೆಯ ಎಲ್ ಕೆ ಜಿ ಹಾಗೂ ಯುಕೆಜಿ ವಿದ್ಯಾರ್ಥಿಗಳಿಂದ ವಸ್ತು ಪ್ರದರ್ಶನ

ಇಮೇಜ್
  ಹಟ್ಟಿ ಚಿನ್ನದ ಗಣಿ: ಹಿರೇನಗನೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಾಲ್ಯದ ಆರೈಕೆ ಮತ್ತು ಶಿಕ್ಷಣ(ಇ ಸಿ ಸಿ ಇ) ಎಲ್.ಕೆ.ಜಿ ಹಾಗೂ ಯು.ಕೆ.ಜಿ ಇಂಗ್ಲೀಷ್ ಮೀಡಿಯಂ ವಿದ್ಯಾರ್ಥಿಗಳಿಂದ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು,ಮುದ್ದು ವಿದ್ಯಾರ್ಥಿಗಳ ವಸ್ತು ಪ್ರದರ್ಶನವನ್ನು ವೀಕ್ಷಿಸಿದ.ಶಾಲೆಯ ಮುಖ್ಯ ಗುರುಗಳಾದ ಶ್ರೀಮತಿ ಮಮತಾ ಹಾಗೂ ಸಮಾಜ ಸೇವಕರು ಹಾಗೂ ಶಿಕ್ಷಣ ಪ್ರೇಮಿಗಳಾದ ಮೌನುದ್ದೀನ್ ಬೂದಿನಾಳ ಹಾಗೂ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಗೌರಮ್ಮ. ಉಪಾಧ್ಯಕ್ಷರಾದ ಕನಕಪ್ಪ ಬೆಂಚಮಟ್ಟಿ.ಹಾಗೂ ಸದಸ್ಯರು.ಹಾಗೂ ಪುಟಾಣಿ ವಿದ್ಯಾರ್ಥಿಗಳ ಪಾಲಕರು.ಮತ್ತು ಶಾಲೆಯ ಶಿಕ್ಷಕರಾದ ಫಾತಿಮಾ,ವೀಣಾ,ಶಶಿರೇಖಾ,ವಿಜಯಲಕ್ಷ್ಮಿ,ಬಸವರಾಜ. ಅನ್ನಪೂರ್ಣ.ಹಾಗೂ ಸತ್ಯಶ್ರೀ,ಮರಿಯ,ರೇಣುಕಾ.ಹಾಗೂ ಮುಖ್ಯ ಅಡಿಗೆದಾರರು ಹಾಗೂ ಸಹಾಯಕರು ಇವರೆಲ್ಲರೂ ಪುಟಾಣಿ ಮಕ್ಕಳು ಮಾಡಿದಂತ ವಸ್ತುಪ್ರದರ್ಶನದಲ್ಲಿ ಭಾಗವಹಿಸಿದ್ದರು, ಎಲ್ ಕೆ ಜಿ ಹಾಗೂ ಯು ಕೆ ಜಿ ಮಕ್ಕಳು ತುಂಬಾ ಖುಷಿ ಖುಷಿಯಾಗಿ ವಸ್ತು ಪ್ರದರ್ಶನದಲ್ಲಿ ತಮಗೆ ನೀಡಿರುವಂತಹ ವಿಷಯಕ್ಕೆ ಅನುಸಾರವಾಗಿ ತಯಾರಾಗಿ ಬಂದಿದ್ದರು.ವಿಶೇಷವಾಗಿ ತರಕಾರಿ, ಫ್ರೂಟ್ಸ್ ,ಕರಗುವ ವಸ್ತು ಕರಗದಾರದ ವಸ್ತು ಸ್ಟೇಷನರಿ ವಸ್ತುಗಳು,ಕಾಳುಗಳು,ವಾಹನಗಳು,ದೊಡ್ಡ ವಸ್ತು ಸಣ್ಣ ವಸ್ತುಗಳು,ಮೆಡಿಕಲ್ ಕಿಟ್,ಹೇಗೆ ವಿವಿಧ ರೀತಿಯಲ್ಲಿ ಮಕ್ಕಳು ಖುಷಿಖುಷಿಯಾಗಿ ವಸ್ತುಗಳ ಬಗ್ಗೆ ಪರಿಚಯ ಮಾಡಿಕೊಟ್ಟರು. ವಿಶೇಷವಾಗಿ ಒಂದರಿಂದ ಎಂ...