*ಸಡಗರದಿಂದ ಕಾನಮಡುಗು ಶರಣ ಬಸವೇಶ್ವರ ರಥೋತ್ಸವ*
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಹೋಬಳಿಯ ಕಾನಮಡುಗು ಶ್ರೀ ಶರಣ ಬಸವೇಶ್ವರ ರಥೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು.
ಶ್ರೀ ಶರಣಬಸವೇಶ್ವರ ಸ್ವಾಮಿಯ ಉತ್ಸವಮೂರ್ತಿಯನ್ನು ದೇವಸ್ಥಾನದಿಂದ ಸಕಲ ವಾದ್ಯಗಳೊಂದಿಗೆ ರಥದ ಬಳಿ ತಂದು ಮೂರು ಸುತ್ತು ಪ್ರದಕ್ಷಿಣೆ ಹಾಕಿ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಸ್ವಾಮಿಯ ರಥ ಮುಂದೆ ಸಾಗುತ್ತಿದ್ದಂತೆ ನೆರೆದಿದ್ದ ಭಕ್ತರು ಜಯಘೋಷ ಹಾಕಿ. ಬಾಳೆಹಣ್ಣು. ಉತ್ತುತ್ತಿ .ಮಂಡಕ್ಕಿ. ಎಸೆದು ಭಕ್ತಿ ಸಮರ್ಪಿಸಿದರು.
ಕಾಲಮಡುಗು ದಾಸೋಹ ಮಠದ ಧರ್ಮಾಧಿಕಾರಿಗಳಾದ ದಾ.ಮ.ಶರಣಾರ್ಯರು. ಚನ್ನಗಿರಿಯ ಕೇದಾರಲಿಂಗ ಶಿವಾಚಾರ್ಯ ಸ್ವಾಮಿಗಳು. ಕೂಡ್ಲಿಗಿ ಹಿರೇಮಠ ಷ, ಬ್ರ.ಪ್ರಶಾಂತ ಸಾಗರ ಶಿವಾಚಾರ್ಯ ಸ್ವಾಮಿಗಳು ರಥೋತ್ಸವದ ನೇತೃತ್ವದಲ್ಲಿ ರಥಕ್ಕೆ ಪೂಜೆ ಸಲ್ಲಿಸಿದರು.
ಶ್ರೀ ಸ್ವಾಮಿಯ ಪಟ್ಟವನ್ನು ಕಾನಾ ಮಡುಗು ಗ್ರಾಮದ ಮೃತ್ಯುಂಜಯ ಸ್ವಾಮಿ ಇವರು ರೂ ಒಂದು ಕ್ಷ ಒಂದು ನೂರು ಒಂದು ರೂಪಾಯಿ ಕ್ಕೆ ಪಡೆದುಕೊಂಡರು. ಇದೇ ಸಂದರ್ಭದಲ್ಲಿ ಹುಲಿಕೆರೆ. ಸಕಲಾಪುರದಹಟಿ .ಹೊಸಹಳ್ಳಿ. ಆಲೂರು. ಹಿರೇಕುಂಬಳಗುಂಟೆ. ಪಕ್ಕದ ದಾವಣಗೆರೆ ಚಿತ್ರದುರ್ಗ ಜಿಲ್ಲೆಗಳ ಭಕ್ತರು ಸೇರಿದಂತೆ ಸುತ್ತಮುತ್ತಲ ಗ್ರಾಮದ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ಸ್ವಾಮಿಯ ದರ್ಶನ ಪಡೆದರು.



ಓಂ ಶ್ರೀ ಶರಣಬಸವೇಶ್ವರಾಯ ನಮಃ
ಪ್ರತ್ಯುತ್ತರಅಳಿಸಿ