ಕೊಟ್ಟೂರಿನ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ಕಾರ್ತಿಕೋತ್ಸವವಕ್ಕೆ ಸ್ವಾಮೀಜಿಗಳು, ಜಿಲ್ಲಾಧಿಕಾರಿಗಳು ಸೋಮವಾರ ಚಾಲನೆ ನಿಡಿದರು
ಕೊಟ್ಟೂರು : ಕೊಟ್ಟೂರಿನ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ಕಾರ್ತಿಕೋತ್ಸವದಲ್ಲಿ ಸ್ವಾಮೀಜಿಗಳು, ಜಿಲ್ಲಾಧಿಕಾರಿಗಳು ಕೊಬ್ಬರಿ ಸುಟ್ಟರು.
ವಿಜೃಂಭಣೆಯಿಂದ ಜರುಗಿದ ಕಾರ್ತಿಕೋತ್ಸವ ದೇವಸ್ಥಾನದ ಮುಂಭಾಗದ ಆವರಣದಲ್ಲಿ ಸಾಲಾಗಿ ಜೋಡಿಸಿದ್ದ ಮಣ್ಣಿನ ಪ್ರಣತಿಯಲ್ಲಿ ಸಂಜೆ ೬ಗಂಟೆ ಹೊತ್ತಿಗೆ ಸ್ವಾಮೀಜಿಗಳು, ಅಧಿಕಾರಿಗಳು, ಪ್ರಮುಖರು ದೀಪ ಹಚ್ಚುವ ಮೂಲಕ ಚಾಲನೆ ನೀಡಿದರು. ನಂತರದಲ್ಲಿ ಸ್ವಾಮಿಯ ಭಕ್ತರು ಪ್ರಣತಿಯಲ್ಲಿ ಎಣ್ಣೆ, ಬತ್ತಿ ಹಾಕಿ ಭಕ್ತಿ ಸಮರ್ಪಿಸಿದರು.
ಪಟ್ಟಣದ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ದೇವಸ್ಥಾನದ ಮುಂಭಾಗದ ಆವರಣದಲ್ಲಿ ಕಾರ್ತಿಕೋತ್ಸವ ಪ್ರಯುಕ್ತ ಸೋಮವಾರ ಸಂಜೆ ಕ್ರಿಯಾಮೂರ್ತಿಗಳಾದ ಶ್ರೀ ಶಿವಪ್ರಕಾಶ ಕೊಟ್ಟೂರು ದೇವರು, ಉತ್ತಂಗಿ ಮಠದ ಶ್ರೀ ಸೋಮಶಂಕರ ಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ಕಾರ್ತೀಕೋತ್ಸವಕ್ಕೆ ಸಂಜೆ ೬ಗಂಟೆಗೆ ಚಾಲನೆ ನೀಡಲಾಯಿತು.
ದೇವಸ್ಥಾನ ಮುಂಭಾಗದಲ್ಲಿ ನೂರಾರು ಪ್ರಣತಿಗಳನ್ನು ಇರಿಸಲಾಗಿತ್ತು. ಕೊಬ್ಬರಿ ಸುಡುವುದಕ್ಕಾಗಿ ಚೌಕಕಾರದ ತೊಟ್ಟಿಯನ್ನು ನಿರ್ಮಿಸಲಾಗಿತ್ತು. ಸಂಜೆ ಕಳೆಯತ್ತಿದ್ದಂತೆ ನಾಡಿನೆಲ್ಲೆಡೆಯಿಂದ ಆಗಮಿಸಿದ್ದ ಭಕ್ತರ ದಂಡು ದೀಪಗಳಿಗೆ ಎಣ್ಣೆ ಹಚ್ಚಿ ಕವಿದ ಕತ್ತಲು ಸರಿದು ಬೆಳಕು ಚೆಲ್ಲಲಿ ಎಂಬAತೆ ಪ್ರಾರ್ಥಿಸಿದರು. ಮುಖಂಡರಾದ ಕೆ.ಮಂಜುನಾಥಗೌಡ, ನಾಗರಾಜಗೌಡ, ಕೆ.ಗುರುಸಿದ್ದನಗೌಡ, ಪ್ರೇಮಾನಂದಗೌಡ, ಅಜ್ಜನಗೌಡ, ದೇವಸ್ಥಾನ ಸಿಬ್ಬಂದಿಗಳಾದ ದೀಪು, ಕಾರ್ತಿಕ, ಪ್ರಶಾಂತ, ರೇವಣ್ಣ, ನಾಗರಾಜ, ಕೊಟ್ರಮ್ಮ ಸೇರಿ ಇತರರು ಇದ್ದರು.
ಲಕ್ಷ ದೀಪೋತ್ಸವ : ಸ್ವಾಮಿ ಕಾರ್ತಿಕೋತ್ಸವ ಪ್ರಯುಕ್ತ ಶ್ರೀ ಕೊಟ್ಟೂರೇಶ್ವರ ಕಲ್ಯಾಣ ಮಂಟಪ ಸಮಿತಿಯವರು ಲಕ್ಷ ದೀಪೋತ್ಸವ ಆಯೋಜಿಸಿದ್ದರು. ತೇರುಗಡ್ಡೆಯಿಂದ ತೇರು ಬೀದಿಯ ಎರಡೂ ಬದಿಗಳಲ್ಲಿ ದೀಪಗಳನ್ನು ಇರಿಸಿದ್ದರು.


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ