ಆಧುನಿಕ ಬದುಕಿನಲ್ಲಿ ಮೂಲೆಗುಂಪು ಆಗುತ್ತಿರುವ ಮಡಿವಾಳ ಸಮಾಜ
ವರದಿ : ಗ್ಯಾನಪ್ಪ ದೊಡ್ಡಮನಿ
ಮಸ್ಕಿ : ಮಡಿವಾಳ ಸಮಾಜವು ಕರ್ನಾಟಕದಲ್ಲಿ ಕಾಯಕ ಸಮಾಜಗಳಲ್ಲೊಂದು. ‘ಕಾಯಕವೇ ಕೈಲಾಸ’ ಎಂದು ಅಹರ್ನಿಶಿ ದುಡಿವ ಮಡಿವಾಳ ಸಮಾಜ ಹನ್ನೆರಡನೇ ಶತಮಾನದ ಶರಣ ಮಡಿವಾಳ ಮಾಚಿದೇವನನ್ನು ಆರಾಧ್ಯದೈವವನ್ನಾಗಿಸಿಕೊಡು ಭಕ್ತಿ-ಭಾವದಿಂದ ಸಮಾಜಸೇವೆ ಮಾಡುತ್ತಾ ತಾನಾಯಿತು ತನ್ನ ಕಾಯಕವಾಯಿತು ಎಂದು ಜೀವ ಸವೆಸುತ್ತಿರುವ ಸಮುದಾಯ.
ಆಧುನಿಕ ಯುಗದಲ್ಲಿ ಮಡಿವಾಳ ಸಮುದಾಯವು ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಶೋಚನೀಯ ಸ್ಥಿತಿಯಲ್ಲಿದೆ. ರಾಜಕೀಯ ಕ್ಷೇತ್ರದಲ್ಲಂತೂ ಹೇಳಿಕೊಳ್ಳಲೂ ಒಬ್ಬನೇ ಒಬ್ಬ ಜನನಾಯಕನಿಲ್ಲ. ಶಾಸನಸಭೆಗಳಲ್ಲಂತೂ ಪ್ರಾತಿನಿಧ್ಯ ಇಲ್ಲವೇ ಇಲ್ಲ. ಹೀಗಿರುವಲ್ಲಿ ಮಡಿವಾಳರು ಆರ್ಥಿಕವಾಗಿ ಸಬಲರಾಗುವ ದಿಸೆಯಲ್ಲಿ ಸಾಗುವುದು ದೂರದ ಕನಸೇ ಸರಿ.
ಹೀಗಾಗಿ ಆಧುನಿಕ ಕಾಲದಲ್ಲಿ ಸಮುದಾಯದ ಏಳಿಗೆ ಕೂಡ ಕಷ್ಟವಾಗಿದೆ. ಬಟ್ಟೆ ಒಗೆಯುವ ಸಂದರ್ಭದಲ್ಲಿ ಸಾಬೂನು ಮತ್ತು ರಾಸಾಯನಿಕ ಮಿಶ್ರಿತ ಸೋಡಾ, ಪುಡಿ ಬಳಕೆ ಮಾಡುವುದರಿಂದ ಆನಾರೋಗ್ಯಕ್ಕೂ ಒಳಗಾಗಿದ್ದಾರೆ. ಇನ್ನು ವಾಷಿಂಗ್ ಮೆಷಿನ್‌ಗಳು ಮತ್ತು ಡ್ರೈಕ್ಲೀನರ್ ಕೇಂದ್ರಗಳು ಪ್ರವೇಶ ಪಡೆದ ಬಳಿಕವಂತೂ ಮಡಿವಾಳರ ಉದ್ಯೋಗಕ್ಕೆ ಹೊಡೆತ ಬಿದ್ದಿದೆ. ಜೊತೆಗೆ ಆದಾಯ ಪ್ರಮಾಣವೂ ಕುಸಿತ ಕಂಡಿದೆ. ಈ ಎಲ್ಲದರ ಮಧ್ಯೆಯೂ ಅವರು ಮೂಲ ಕಸುಬನ್ನು ಕಾಪಾಡಿಕೊಂಡು ಬಂದಿದ್ದಾರೆ.
ಇದರ ಮಧ್ಯ ತಾಲ್ಲೂಕಿನ ವಿವಿಧೆಡೆ ಇರುವ ಹಳ್ಳದ ಒಡಲು ಮರಳು ಮಾಫಿಯಾ ದಿಂದ ಬರಿದಾಗಿದ್ದು,
ಇದರ ಜೊತೆಗೆ ಎರಡೂ ಬದಿಯಲ್ಲಿ ಜಾಲಿ ಗಿಡ, ಕುರುಚಲು ಮುಳ್ಳುಕಂಟಿ ಬೆಳೆದು ನಿಂತಿದೆ.ಊರಿನ ತ್ಯಾಜ್ಯ ವನ್ನು ಕೆಲವರು
ಹಳ್ಳದ ಒಡಲಲ್ಲಿ ಸುರಿಯುತ್ತಿದ್ದಾರೆ. ಅಧಿಕಾರಿಗಳು ಇದರ ತೆರವಿಗೆ ವಿಫಲರಾಗಿದ್ದಾರೆ. ಬಿದ್ದ ಸ್ವಲ್ಪ ಮಳೆಗೆ ಹಳ್ಳದ ನೀರು ಸಂರಕ್ಷಣೆ ಮಾಡಿ ನಮ್ಮ ಸಮುದಾಯಕ್ಕೆ ಬಟ್ಟೆ ಒಗಿಯಲು ದೋಬಿ ಘಾಟ್ ನಿಮಾರ್ಣ ಮಾಡಿಕೊಡಿ ಎಂದು ಪತ್ರಿಕೆ ಮೂಲಕ ದೇವರಾಜ್ ಮಡಿವಾಳ ಅವರು ತಮ್ಮ ಅಳಲು ತೊಡಿಕೊಂಡಿದ್ದಾರೆ.
ಬಾಕ್ಸ್
ನಮ್ಮ ಸಮಾಜವನ್ನು ಎಸ್.ಸಿ ಪಟ್ಟಿಗೆ ಸೇರಿಸುವ ಮೂಲಕ ಸರಕಾರ ಮಡಿವಾಳ ಸಮಾಜಕ್ಕೆ ನ್ಯಾಯ ಒದಗಿಸಬೇಕು ಎಂಬುದು ರಾಜ್ಯ ಮಡಿವಾಳ ಸಮುದಾಯಯ ಒತ್ತಾಯ ವಾಗಿದೆ.ಪಂಪಣ್ಣ ಮಡಿವಾಳ ಸಮಾಜದ ತಾಲೂಕು ಅಧ್ಯಕ್ಷರು ಮಸ್ಕಿ


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ