ಉತ್ತರ ಬೆಂಗಳೂರಿನಲ್ಲಿ ಹೊಂದಲೇಬೇಕಾದ - ʻಸತ್ವ ಭೂಮಿʼ ಯೋಜನೆ ಘೋಷಿಸಿದ ʻಸತ್ವ ಗ್ರೂಪ್ʼ~ ಪ್ರೀಮಿಯಂ ಗೇಟೆಡ್ ಕಮ್ಯುನಿಟಿ ನಿವೇಶನಗಳಿಗೆ ಅಧಿಕೃತ ಚಾಲನೆಗೆ ಮೊದಲೇ ಅಸಾಧಾರಣ ಮಟ್ಟದ ಸ್ಪಂದನೆ ~

ಬೆಂಗಳೂರು: ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಭಾರತದ ಪ್ರಮುಖ ಹೆಸರುಗಳಲ್ಲಿ ಒಂದಾಗಿರುವ ʻಸತ್ವ ಗ್ರೂಪ್ʼ, ಬೆಂಗಳೂರು ಉತ್ತರದಲ್ಲಿ ವೇಗವಾಗಿ ಬೆಳೆಯುತ್ತಿರುವ ದೇವನಹಳ್ಳಿ ಕಾರಿಡಾರ್ನಲ್ಲಿ ತನ್ನ ಇತ್ತೀಚಿನ ಪ್ರೀಮಿಯಂ ಕೊಡುಗೆ - ʻಸತ್ವ ಭೂಮಿʼಗೆ ವ್ಯಕ್ತವಾದ ಅಭೂತಪೂರ್ವ ಪ್ರತಿಕ್ರಿಯೆಯನ್ನು ಆಚರಿಸುತ್ತಿದೆ. ʻಸತ್ವ ಭೂಮಿʼಯು ನಿಖರವಾಗಿ ಯೋಜಿಸಲಾದ ಗೇಟೆಡ್ ಕಮ್ಯುನಿಟಿಯಾಗಿದ್ದು, ವಿಶಾಲವಾದ 20 ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ. ಈ ಯೋಜನೆಯು ಚಿಂತನಶೀಲವಾಗಿ ವಿನ್ಯಾಸಗೊಳಿಸಲಾದ 343 ನಿವೇಶನಗಳನ್ನು ಒಳಗೊಂಡಿದ್ದು, ಇದು ಈ ಪ್ರದೇಶದಲ್ಲಿ ಹೆಚ್ಚುತ್ತಿರುವ ರಿಯಲ್ ಎಸ್ಟೇಟ್ ಸಾಮರ್ಥ್ಯಕ್ಕೆ ಅನುಗುಣವಾಗಿದೆ. 

ಈ ಯೋಜನೆಯನ್ನು ನಿಜವಾಗಿಯೂ ಗಮನಾರ್ಹವಾಗಿಸಿದ ವಿಷಯವೆಂದರೆ ಇದರ ಅಸಾಧಾರಣ ಪೂರ್ವ-ಚಾಲನೆ ಯಶಸ್ಸು - ಅರ್ಧಕ್ಕಿಂತ ಹೆಚ್ಚು ಪ್ಲಾಟ್ಗಳು ಅಧಿಕೃತ ಬಿಡುಗಡೆಗೆ ಮೊದಲೇ ಮಾರಾಟವಾಗಿವೆ. ಈ ಅಗಾಧ ಆಸಕ್ತಿಯು ವಿವೇಚನಾಶೀಲ ಖರೀದಿದಾರರಿಗೆ ಮುಂದಿನ ʻಹಾಟ್ಸ್ಪಾಟ್ʼ ಆಗಿ ದೇವನಹಳ್ಳಿಯ ಆಕರ್ಷಣೆಯ ಬಗ್ಗೆ ಮತ್ತು ಮಾರುಕಟ್ಟೆಯ ಬೇಡಿಕೆಗೆ ಅನುರಣಿಸುವ ಯೋಜನೆಗಳನ್ನು ತಲುಪಿಸುವ ʻಸತ್ವ ಗ್ರೂಪ್ʼನ ಬದ್ಧತೆಯ ಬಗ್ಗೆ ಸಾಕಷ್ಟು ಮಾತನಾಡುತ್ತದೆ.

ಉತ್ತರ ಬೆಂಗಳೂರಿನ ಅಭಿವೃದ್ಧಿ ಹೊಂದುತ್ತಿರುವ ಬೆಳವಣಿಗೆಯ ಕಾರಿಡಾರ್ನ ಹೃದಯಭಾಗದಲ್ಲಿರುವ ʻಸತ್ವ ಭೂಮಿʼ ಯೋಜನೆಯು ಸಾಟಿಯಿಲ್ಲದ ಸಂಪರ್ಕಜಾಲವನ್ನ ಒದಗಿಸುತ್ತದೆ. ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಪ್ರಮುಖ ಕೈಗಾರಿಕಾ ಕೇಂದ್ರಗಳು ಮತ್ತು ಈ ಪ್ರದೇಶದ ಪರಿವರ್ತನೆಗೆ ಕಾರಣವಾಗುವ ಪ್ರಮುಖ ಮೂಲಸೌಕರ್ಯ ಯೋಜನೆಗಳಿಗೆ ಇದು ಹತ್ತಿರದಲ್ಲಿದೆ.

ಬೆಂಗಳೂರು ಉತ್ತರವು ನಗರದಲ್ಲಿ ರಿಯಲ್ ಎಸ್ಟೇಟ್ ಬೆಳವಣಿಗೆಯ ಕೇಂದ್ರಬಿಂದುವಾಗಿ ಹೊರಹೊಮ್ಮುತ್ತಿರುವುದರಿಂದ, ಆಯಕಟ್ಟಿನ ಸ್ಥಳದ ಪ್ರೀಮಿಯಂ ನಿವೇಶನಗಳಿಗೆ ಬಲವಾದ ಬೇಡಿಕೆ ಇದೆ. ಈ ಯೋಜನೆ ಯಶೋಗಾಥೆಯು ಇದಕ್ಕೆ ಮತ್ತಷ್ಟು ಪುರಾವೆ ಒದಗಿಸಿದೆ. ಎಚ್ಚರಿಕೆಯಿಂದ ಯೋಜಿಸಲಾದ ಸೌಲಭ್ಯಗಳು, ಸುಸ್ಥಿರ ಮೂಲಸೌಕರ್ಯ ಮತ್ತು ʻಸತ್ವʼದ ಗುಣಮಟ್ಟದ ಹೆಗ್ಗುರುತುಗಳೊಂದಿಗೆ ರೂಪುಗೊಂಡಿರುವ ʻಸತ್ವ ಭೂಮಿʼಯು ಈ ಪ್ರದೇಶದಲ್ಲಿ ವಾಸಿಸುವ ಗೇಟೆಡ್ ಸಮುದಾಯಕ್ಕೆ ಹೊಸ ಮಾನದಂಡವನ್ನು ಸ್ಥಾಪಿಸಲು ಸಜ್ಜಾಗಿದೆ. ಪ್ರತ್ಯೇಕತೆ (ಎಕ್ಸ್ಕ್ಲೂಸಿವಿಟಿ) ಮತ್ತು ಸಾಮರ್ಥ್ಯ ಎರಡನ್ನೂ ಹೊಂದಿರುವ ವಿಳಾಸವನ್ನು ಹುಡುಕುವವರಿಗೆ, ಈ ಅವಕಾಶದ ಬಾಗಿಲು ವೇಗವಾಗಿ ಮುಚ್ಚಿಕೊಳ್ಳುತ್ತಿದೆ. ಸೀಮಿತ ಪ್ಲಾಟ್ಗಳು ಉಳಿದಿರುವುದರಿಂದ, ಉತ್ತರ ಬೆಂಗಳೂರಿನ ಅತ್ಯಂತ ಭರವಸೆಯ ರಿಯಲ್ ಎಸ್ಟೇಟ್ ನಿರೂಪಣೆಯ ಭಾಗವಾಗಲು ʻಸತ್ವ ಭೂಮಿʼಯು ಖರೀದಿದಾರರನ್ನು ಆಹ್ವಾನಿಸುತ್ತದೆ.

ʻಸತ್ವ ಗ್ರೂಪ್ʼನ ಸ್ಟ್ರಾಟೆಜಿಕ್ ಗ್ರೋತ್ ವಿಭಾಗದ ಉಪಾಧ್ಯಕ್ಷರಾದ ಶಿವಂ ಅಗರ್ವಾಲ್ ಅವರು ಮಾತನಾಡಿ, "ನಮ್ಮ ʻಸತ್ವ ಭೂಮಿʼ ಯೋಜನೆಗೆ ದೊರೆತ ಪ್ರತಿಕ್ರಿಯೆ ನಿಜವಾಗಿಯೂ ಅಸಾಧಾರಣವಾಗಿದೆ. ಇದು ʻಸತ್ವ ಗ್ರೂಪ್ʼನಲ್ಲಿ ಖರೀದಿದಾರರು ಹೊಂದಿರುವ ವಿಶ್ವಾಸವನ್ನು ಮತ್ತು ರಿಯಲ್ ಎಸ್ಟೇಟ್ ತಾಣವಾಗಿ ಉತ್ತರ ಬೆಂಗಳೂರಿನ ಉಜ್ವಲ ಭವಿಷ್ಯವನ್ನು ತೋರಿಸುತ್ತದೆ. ಪ್ರೀಮಿಯಂ ಸ್ಥಳದಲ್ಲಿ ನಿವೇಶನವನ್ನು ಹೊಂದಿರುವ, ʻಸತ್ವ ಭೂಮಿʼಯಂತಹ ಗೇಟೆಡ್ ಸಮುದಾಯವು ನಿಮ್ಮ ಕನಸಿನ ಮನೆಯನ್ನು ವಿನ್ಯಾಸಗೊಳಿಸಲು ಮತ್ತು ನಿರ್ಮಿಸಲು ಸಾಟಿಯಿಲ್ಲದ ನಮ್ಯತೆಯನ್ನು ನೀಡುತ್ತದೆ. ಜೊತೆಗೆ, ಈ ಪ್ರದೇಶದ ಆಯಕಟ್ಟಿನ ಸ್ಥಳ ಮತ್ತು ಮೂಲಸೌಕರ್ಯ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಗಮನಾರ್ಹ ಮೌಲ್ಯ ವರ್ಧನೆಯನ್ನೂ ಖಚಿತಪಡಿಸುತ್ತದೆ. ನಮ್ಮ ಗ್ರಾಹಕರ ಆಕಾಂಕ್ಷೆಗಳಿಗೆ ಹೊಂದಿಕೆಯಾಗುವ ಹಾಗೂ ಜೀವನಶೈಲಿ ಮತ್ತು ಹೂಡಿಕೆ ಪ್ರಯೋಜನಗಳೆರಡನ್ನೂ ನೀಡುವ ಸ್ಥಳಗಳನ್ನು ಸೃಷ್ಟಿಸುವ ಮೂಲಕ ಈ ಪ್ರದೇಶದ ಬೆಳವಣಿಗೆಗೆ ಕೊಡುಗೆ ನೀಡಲು ನಾವು ಹೆಮ್ಮೆಪಡುತ್ತೇವೆ,ʼʼ ಎಂದು ಹೇಳಿದರು.

ಸಮಗ್ರ ಜೀವನಶೈಲಿ ಕೊಡುಗೆ

15,000 ಚದರ ಅಡಿ ವಿಸ್ತೀರ್ಣದ ಕ್ಲಬ್ಹೌಸ್, ಬೃಹತ್ ಈಜುಕೊಳ ಮತ್ತು ಎಲ್ಲಾ ವಯೋಮಾನದವರ ಅಗತ್ಯವನ್ನು ಪೂರೈಸುವ ಒಳಾಂಗಣ ಮತ್ತು ಹೊರಾಂಗಣ ಸೌಕರ್ಯಗಳೊಂದಿಗೆ ಸಂಪೂರ್ಣ ಜೀವನ ಅನುಭವವನ್ನು ಒದಗಿಸಲು ಸತ್ವ ಭೂಮಿಯನ್ನು ವಿನ್ಯಾಸಗೊಳಿಸಲಾಗಿದೆ. ಚಿಂತನಶೀಲವಾಗಿ ಯೋಜಿಸಲಾದ ವಿಶಾಲವಾದ ಆಂತರಿಕ ರಸ್ತೆಗಳು, ಭವ್ಯವಾದ ಪ್ರವೇಶ ಸಾಮಾನ್ಯ ಮತ್ತು ಉತ್ತಮ ಗುಣಮಟ್ಟದ ನಾಗರಿಕ ಸೌಕರ್ಯಗಳೊಂದಿಗೆ, ʻಸತ್ವ ಭೂಮಿʼಯು ಸೌಂದರ್ಯದ ಆಕರ್ಷಣೆ ಮತ್ತು ಕಾರ್ಯಕ್ಷಮತೆಯ ಸಂಯೋಜನೆಯನ್ನು ಒದಗಿಸುತ್ತದೆ. ಇದು ವೈಯಕ್ತೀಕರಿಸಿ ನಿರ್ಮಿಸಲಾದ ಮನೆಗಳಿಗೆ ಆದರ್ಶ ವ್ಯವಸ್ಥೆಯನ್ನು ಒದಗಿಸುತ್ತದೆ. ಖರೀದಿದಾರರಿಗೆ ತಮ್ಮ ವೈಯಕ್ತಿಕ ಶೈಲಿಯನ್ನು ಪ್ರತಿಬಿಂಬಿಸುವ ಮತ್ತು ವೈವಿಧ್ಯಮಯ ಅಗತ್ಯಗಳನ್ನು ಪೂರೈಸುವ ಸ್ಥಳಗಳನ್ನು ಸೃಷ್ಟಿಸಲು ನಮ್ಯತೆಗೆ ಅನುವು ಮಾಡಿಕೊಡುತ್ತದೆ.

ಈ ಯೋಜನೆಯು ಉತ್ತಮ ಸಂಪರ್ಕ ವ್ಯವಸ್ಥೆ ಮತ್ತು ಎಲ್ಲೆಡೆಯಿಂದ ಪ್ರವೇಶಿಸಬಹುದಾದ ಸ್ಥಳಕ್ಕೆ ಆದ್ಯತೆ ನೀಡುತ್ತದೆ. ಉತ್ತರ ಬೆಂಗಳೂರಿನ ಸಂಪರ್ಕವನ್ನು ಮತ್ತಷ್ಟು ಹೆಚ್ಚಿಸಲು ಸಜ್ಜಾಗಿರುವ ಹಲವು ಪ್ರಮುಖ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಂದ ʻಸತ್ವ ಭೂಮಿʼಯು ಪ್ರಯೋಜನ ಪಡೆಯಲಿದೆ. 

ಉತ್ತರ ಬೆಂಗಳೂರಿನ ಬೆಳವಣಿಗೆಯ ಯಶೋಗಾಥೆಯಲ್ಲಿ ಬಲವಾದ ಹೂಡಿಕೆ

60ಕ್ಕೂ ಹೆಚ್ಚು ಪೂರ್ಣಗೊಂಡ ವಸತಿ ಯೋಜನೆಗಳು ಮತ್ತು ʻಕ್ರಿಸಿಲ್ ಎ+ʼ ರೇಟಿಂಗ್ ಹೊಂದಿರುವ ʻಸತ್ವ ಗ್ರೂಪ್ʼ, ತನ್ನ ಶ್ರೇಷ್ಠತೆಗಾಗಿ ಖ್ಯಾತಿ ಗಳಿಸಿದೆ. ಹೀಗಾಗಿ ಖರೀದಿದಾರರು ಸಂಸ್ಥೆಯ ಗುಣಮಟ್ಟ, ಪಾರದರ್ಶಕತೆ ಮತ್ತು ಸಮಯೋಚಿತ ವಿತರಣೆಯ ಬದ್ಧತೆಯ ಮೇಲೆ ವಿಶ್ವಾಸವಿರಿಸಬಹುದು. ಈ ಯೋಜನೆಯು ತುಮಕೂರು ರಸ್ತೆ ಮತ್ತು ಹೊರ ವರ್ತುಲ ರಸ್ತೆ ಸೇರಿದಂತೆ ಪ್ರಮುಖ ಹೆದ್ದಾರಿಗಳಿಗೆ ತಡೆರಹಿತ ಪ್ರವೇಶದೊಂದಿಗೆ ಮತ್ತು ಪೆರಿಫೆರಲ್ ರಿಂಗ್ ರಸ್ತೆ ಮತ್ತು ಉಪನಗರ ರೈಲು ಕಾರಿಡಾರ್ ಗಳಂತಹ ಮುಂಬರುವ ಮೂಲಸೌಕರ್ಯ ಅಭಿವೃದ್ಧಿಗಳೊಂದಿಗೆ ಆಯಕಟ್ಟಿನ ಸ್ಥಳದಲ್ಲಿದೆ. ಇದು ಅದರ ಪ್ರವೇಶ ಮತ್ತು ಹೂಡಿಕೆ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ.

2024ರಲ್ಲಿ, ಉತ್ತರ ಬೆಂಗಳೂರಿನಲ್ಲಿ 6 ವಸತಿ ಯೋಜನೆಗಳನ್ನು ʻಸತ್ವ ಗ್ರೂಪ್ʼ ಪೂರ್ಣಗೊಳಿಸಿದೆ. ಈ ಪ್ರದೇಶವು ವಸತಿ ಖರೀದಿದಾರರು ಮತ್ತು ಹೂಡಿಕೆದಾರರಿಂದ ಬಲವಾದ ಬೇಡಿಕೆಯೊಂದಿಗೆ ಪ್ರಮುಖ ಹೂಡಿಕೆ ಕೇಂದ್ರವಾಗಿ ಹೊರಹೊಮ್ಮುತ್ತಿರುವುದರಿಂದ, ಶಾಶ್ವತ ಮೌಲ್ಯದ ಸ್ಪಷ್ಟ ಆಸ್ತಿಯನ್ನು ಭದ್ರಪಡಿಸಿಕೊಳ್ಳಲು ಬಯಸುವವರಿಗೆ ʻಸತ್ವ ಭೂಮಿʼಯು ಕಾರ್ಯತಂತ್ರದ ಆಯ್ಕೆಯನ್ನು ಪ್ರತಿನಿಧಿಸುತ್ತದೆ. ಭಾರತದ ವೇಗವಾಗಿ ಬೆಳೆಯುತ್ತಿರುವ ಪ್ರದೇಶಗಳಲ್ಲಿ ಒಂದಾಗಿರುವ ದೇವನಹಳ್ಳಿಗೆ ಸಾಮೀಪ್ಯದಲ್ಲಿರುವ ಈ ಗೇಟೆಡ್ ಕಮ್ಯುನಿಟಿಯು, ಸಮೃದ್ಧ ಸೌಕರ್ಯಗಳನ್ನು ಹೊಂದಿರುವ ಸಮುದಾಯದ ಅನುಕೂಲಗಳನ್ನು ಒದಗಿಸುತ್ತದೆ. ʻಸತ್ವ ಭೂಮಿʼಯು ತಕ್ಷಣದ ಮತ್ತು ದೀರ್ಘಕಾಲೀನ ಹೂಡಿಕೆ ಗುರಿಗಳಿಗೆ ಆದರ್ಶ ಅಡಿಪಾಯವನ್ನು ಒದಗಿಸುತ್ತದೆ.

ʻಸತ್ವ ಗ್ರೂಪ್ʼ ಬಗ್ಗೆ 

3 ದಶಕಗಳ ಪರಿಣತಿಯೊಂದಿಗೆ, ಸತ್ವ ಗ್ರೂಪ್ ಇಂದು ದೇಶದ ಅತ್ಯಂತ ವಿಶ್ವಾಸಾರ್ಹ ಬಿಲ್ಡರ್ಗಳಲ್ಲಿ ಒಂದಾಗಿ ಬೆಳೆದಿದೆ. ಭಾರತದ ಬೆಂಗಳೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಇದು ಹೈದರಾಬಾದ್, ಕೋಲ್ಕತಾ, ಪುಣೆ, ಕೊಯಮತ್ತೂರು ಮತ್ತು ಗೋವಾದಲ್ಲಿ ಚಿರಪರಿಚಿತ ಹೆಸರು. ʻಸತ್ವ ಗ್ರೂಪ್ʼ ಶೀಘ್ರದಲ್ಲೇ ಮುಂಬೈನಲ್ಲಿ ತನ್ನ ಅಸ್ತಿತ್ವವನ್ನು ವಿಸ್ತರಿಸಲಿದೆ. 80 ದಶಲಕ್ಷ ಚದರ ಅಡಿ ಪೂರ್ಣಗೊಂಡ ಸ್ಥಳ ಮತ್ತು 80 ದಶಲಕ್ಷಕ್ಕೂ ಹೆಚ್ಚು ಚದರ ಅಡಿ ವಿಸ್ತೀರ್ಣದ, ನಿರ್ಮಾಣ ಹಂತದಲ್ಲಿರುವ ವಿವಿಧ ಯೋಜನೆಗಳೊಂದಿಗೆ, ʻಸತ್ವ ಗ್ರೂಪ್ʼ ಇಂದು ಭಾರತದ ಅತ್ಯಂತ ಪ್ರೀಮಿಯಂ ಬಿಲ್ಡರ್ಗಳಲ್ಲಿ ಒಂದಾಗಿದೆ. ʻಸತ್ವʼ ಸಮೂಹದ ಅತ್ಯಾಧುನಿಕ ಬೃಹತ್ ವಾಣಿಜ್ಯ ಯೋಜನೆಗಳಲ್ಲಿ ʻನಾಲೆಡ್ಜ್ ಸಿಟಿʼ, ʻನಾಲೆಡ್ಜ್ ಕ್ಯಾಪಿಟಲ್ʼ, ʻನಾಲೆಡ್ಜ್ ಪಾರ್ಕ್ʼ ಮತ್ತು ʻಇಮೇಜ್ ಟವರ್ʼ (ಎವಿಜಿಸಿ ಉದ್ಯಮಕ್ಕಾಗಿ ತೆಲಂಗಾಣ ರಾಜ್ಯ ಸರ್ಕಾರದೊಂದಿಗೆ ಪಿಪಿಪಿ ಆಧಾರಿತ ಮಾದರಿ) ಸೇರಿವೆ. 100ಕ್ಕೂ ಹೆಚ್ಚು ಸೌಲಭ್ಯಗಳನ್ನು ಒದಗಿಸುವ ʻಸತ್ವ ಗ್ರೀನೇಜ್ʼ, ʻಸತ್ವ ಎಕ್ಸೋಟಿಕ್ʼ, ʻಸತ್ವ ಲಾ ವಿಟಾʼ, ʻಸತ್ವ ಲೇಕ್ ರಿಡ್ಜ್ʼ, ʻಸತ್ವ ಮ್ಯಾಗ್ನಸ್ʼ ಮತ್ತು ʻಸತ್ವ ಸ್ಪ್ರಿಂಗ್ಸ್ʼನಂತಹ ವಿಶ್ವದರ್ಜೆಯ ವಸತಿ ಯೋಜನೆಗಳನ್ನು ಸಹ ಗ್ರೂಪ್ ಹೊಂದಿದೆ. ಸಹ-ಕೆಲಸ, ಸಹ-ಜೀವನ, ಶಿಕ್ಷಣ, ಆತಿಥ್ಯ, ದತ್ತಾಂಶ ಕೇಂದ್ರಗಳು ಮತ್ತು ಗೋದಾಮುಗಳಂತಹ ವಿವಿಧ ವಿಭಾಗಗಳಿಗೆ ಮತ್ತಷ್ಟು ವಿಸ್ತರಿಸುವ ಮೂಲಕ, ʻಸತ್ವ ಗ್ರೂಪ್ʼ ಇಂದು ಭಾರತದ ಬೆಳವಣಿಗೆಯ ಯಶೋಗಾಥೆಯನ್ನು ರೂಪಿಸುವಲ್ಲಿ ಮುಂಚೂಣಿಯಲ್ಲಿ ನಿಂತಿದೆ. ಗುಣಮಟ್ಟಕ್ಕೆ ಗ್ರೂಪ್ನ ಅಚಲ ಬದ್ಧತೆಯ ಮೂಲಕ ದೇಶದ ಬಿಲ್ಡರ್ಗಳ ಪೈಕಿ "ವಿಶ್ವಾಸಾರ್ಹ" ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ. ಇದು 2010 ರಿಂದ ಒಂದು ದಶಕಕ್ಕೂ ಹೆಚ್ಚು ಕಾಲ "ಎ ಸ್ಟೇಬಲ್" ಕ್ರಿಸಿಲ್ ರೇಟಿಂಗ್ಗೆ ಹೆಸರುವಾಸಿಯಾಗಿದೆ, 2022ರಲ್ಲಿ ಈ ಶ್ರೇಯಾಂಕವನ್ನು ʻಕ್ರಿಸಿಲ್ ಎ+ʼ ಗೆ ನವೀಕರಿಸಲಾಯಿತು. 


*****

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*