ಹಳೆ ಬಸ್‌ ನಿಲ್ದಾಣಕ್ಕೆ ಕವಿತಾಳ ಭಾಗದ ಬಸ್ಸೇ ಬರೋಲ್ಲ! : ಮಲ್ಲಪ್ಪ ಗೋನಾಳ

 

ವೃದ್ಧರು, ಅಂಗವಿಕಲರು ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಹಿಡಿ ಶಾಪ! 

ಮಸ್ಕಿ : ಹಳೆ ಬಸ್‌ ನಿಲ್ದಾಣವಿದೆ ಎಂದು ಬಸ್‌ಗಾಗಿ ಕಾಯುತ್ತಾ ನಿಂತರೆ, ನೀವು ಅಲ್ಲಿಯೇ ಕಾಯುತ್ತಲೇ ನಿಲ್ಲಬೇಕಾಗುತ್ತದೆ ಹೊರತು ಬಸ್‌ ಮಾತ್ರ ಅಲ್ಲಿಗೆ ಬರೊಲ್ಲ. ಒಂದು ವೇಳೆ ಬಸ್‌ ಬಂದರೂ ಆ ಬಸ್‌ ನಿಲ್ದಾಣದಲ್ಲಿ ನಿಲ್ಲುವುದಿಲ್ಲ.

ಹೌದು ಪಟ್ಟಣದಲ್ಲಿ ರಸ್ತೆ ಕಾಮಗಾರಿ ಪ್ರಾರಂಭವಾಗಿದ್ದರಿಂದ ಬಸ್‌ ಚಾಲಕರು ಹಿಂದಿನಿಂದಲೂ ಹೊಸ ಬಸ್‌ ನಿಲ್ದಾಣದ ಬಳಿ ಬಸ್‌ ನಿಲುಗಡೆ ಮಾಡುವುದನ್ನು ರೂಢಿ ಮಾಡಿಕೊಂಡಿದ್ದಾರೆ. ಹಳೆ ಬಸ್ ನಿಲ್ದಾಣವಾಗಿದ್ದರೂ ಯಾವೊಬ್ಬ ಬಸ್‌ ಚಾಲಕನೂ ಅಲ್ಲಿ ನಿಲುಗಡೆ ಮಾಡುವುದಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ, ಜನರು ಸಹ ಹೊಸ ಬಸ್‌ ನಿಲ್ದಾಣದ ಬಳಿಯೇ ನಿಂತಿರುತ್ತಾರೆ. ಹೀಗಾಗಿ ಅಲ್ಲಿಯೇ ನಿಲುಗಡೆ ಮಾಡುತ್ತಿದ್ದೇವೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಪಟ್ಟಣದ ಗಾಂಧಿನಗರದಲ್ಲಿ ಹೊಸ ಬಸ್‌ ನಿಲ್ದಾಣವಿದೆ ಹಾಲಾಪುರ,ತೋರಣದಿನ್ನಿ,ಕವಿತಾಳಗೆ ಹೋಗಲು ಇಲ್ಲಿಯ ಹಳೆ ಬಸ್ ನಿಲ್ದಾಣದಿಂದ ಬಸ್ ಹತ್ತಬೇಕು.ಇದರಿಂದಾಗಿ 

ಬಸ್ ನಿಲ್ದಾಣಕ್ಕೆ ಹೋಗಲು ಪ್ರಯಾಣಿಕರು,ವೃದ್ಧರು, ಅಂಗವಿಕಲರಿಗೆ 50 ರಿಂದ 100 ರೂಪಾಯಿ ಆಟೋಗಳಿಗೆ ಕೊಟ್ಟು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಸಂಬಂಧಿಸಿದ ಅಧಿಕಾರಿಗಳು ಆದಷ್ಟು ಬೇಗನೇ ಹಳೆ ಬಸ್ ನಿಲ್ದಾಣದಲ್ಲಿ ಬಸ್ ನಿಲುಗಡೆ ಮಾಡಿ ಪ್ರಯಾಣಿಕರಿಗೆ ಅವಕಾಶ ನೀಡಬೇಕು ಎಂದು ಸಾರ್ವಜನಿಕರ ಮನವಿಯಾಗಿದೆ.


ಹೇಳಿಕೆ : ೧

ಸಮಯಕ್ಕೆ ಸರಿಯಾಗಿ ಬಸ್‌ ಬಾರದಿದ್ದಾಗ ವೃದ್ಧರು, ಮಹಿಳೆಯರು ಯಾವುದೇ ರಕ್ಷಣೆ ಇಲ್ಲದೇ ರಸ್ತೆಯ ಫುಟ್‌ಪಾತ್‌ ಮೇಲೆ ನಿಲ್ಲುತ್ತಿದ್ದಾರೆ. ಪ್ರಯಾಣಿಕರ ಹಿತದೃಷ್ಟಿಯಿಂದ ಬಸ್‌ಗಳು ಕಡ್ಡಾಯವಾಗಿ ಹಳೆ ಬಸ್‌ ನಿಲ್ದಾಣದಲ್ಲಿಯೇ ನಿಲ್ಲುವಂತೆ ಮಾಡಬೇಕು ಎಂದು ದಲಿತ ಸಂಘರ್ಷ ಸಮಿತಿ ಸಂಯೋಜಕ ಬಣದ ರಾಯಚೂರು ಜಿಲ್ಲಾ ಅಧ್ಯಕ್ಷ ಮಲ್ಲಪ್ಪ.ಎಸ್.ಗೋನಾಳ ರವರು ಒತ್ತಾಯಿಸಿದ್ದಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*