ಸಂಜೀವಿನಿ ಒಕ್ಕೂಟಗಳಿಂದ ಲಿಂಗತ್ವ ಅಭಿಯಾನ ಕಾರ್ಯಕ್ರಮ
ಮಸ್ಕಿ : ತಾಲೂಕಿನ ಮೆದಕಿನಾಳ, ಹಾಲಾಪೂರು, ಕೋಳಬಾಳ ಗ್ರಾಮ ಪಂಚಾಯತಿ ಮಟ್ಟದಲ್ಲಿ NRLM ಸಂಜೀವಿನಿ ಒಕ್ಕೂಟಗಳಿಂದ ಅಭಿಯಾನ ಆಂದೋಲನ ಹಮ್ಮಿಕೊಳ್ಳಲಾಯಿತು.
ಸ್ವ ಸಹಾಯ ಗುಂಪಿನ ಮಹಿಳೆಯರಿಗೆ ಲಿಂಗತ್ವ ಕುರಿತು ಕಾನೂನು ಸಲಹೆಗಾರರಿಂದ ಮಾಹಿತಿ ನೀಡಿ ಮಹಿಳೆಯರನ್ನು ಸಬಲಿಕರಣ ಮಾಡುವ ಉದ್ದೇಶ ಹೊಂದಿದೆ ಹಾಗೂ ಸಾವಲಂಬಿ ಜೀವನ ನಡೆಸಲು ಮಹಿಳೆಯರು ಮುಂದೆ ಬರಲು ಮಾಹಿತಿ ತಿಳಿಸಲಾಯಿತು.
ಮಕ್ಕಳಿಂದ ಜಾಥಾ ಕಿಶೋರಿಯರಿಂದ ಪ್ರಬಂಧ ಸ್ಪರ್ಧೆ, ಗುಂಪಿನ ಮಹಿಳೆಯರಿಂದ ರಂಗೋಲಿ ಸ್ಪರ್ಧೆ ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮತ್ತು ತಾಲೂಕ ಪಂಚಾಯತಿ NRLM ಸಿಬ್ಬಂದಿಗಳಾದ ತಾಲೂಕ ವ್ಯವಸ್ಥಾಪಕರಾದ ಮೌನೇಶ, ವಲಯ ಮೇಲ್ವಿಚಾರಕ ಪ್ರಕಾಶ ಹಾಗೂ ಕೋಳಬಾಳ, ಹಾಲಾಪೂರು, ಮೆದಕಿನಾಳ ಗ್ರಾಮ ಪಂಚಾಯತಿಯ MBK, LCRP ಕೃಷಿ ಸಖಿ, ಪಶು ಸಖಿ ಹಾಗೂ ಸ್ವ ಸಹಾಯ ಗುಂಪಿನ ಮಹಿಳೆಯರು ಭಾಗಿಯಾಗಿದ್ದರು.


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ