ಚನ್ನಮಲ್ಲ ಶಿವಯೋಗಿಗಳ ಜಾತ್ರಾ ಮಹೋತ್ಸವದ ಪುರಾಣ ಪ್ರವಚನ ಕಾರ್ಯಕ್ರಮ
ಮಸ್ಕಿ : ತಾಲೂಕಿನ ಮೆದಿಕಿನಾಳ ಗ್ರಾಮದ ಲಿಂಗೈಕ್ಯ ಶ್ರೀ ಚನ್ನಮಲ್ಲ ಶಿವಯೋಗಿಗಳ ಮಠದ ಆವರಣದಲ್ಲಿ 69 ನೇ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಪ್ರವಚನ ಕಾರ್ಯಕ್ರಮ ನಡೆಯಿತು.
ಲಿಂಗೈಕ್ಯ ಶ್ರೀ ಚನ್ನಮಲ್ಲ ಶಿವಯೋಗಿಗಳ ಮಠದ ಆವರಣದಲ್ಲಿ 69 ನೇ ಜಾತ್ರಾ ಮಹೋತ್ಸವದ ಅಂಗವಾಗಿ ಇದೇ ಡಿಸೆಂಬರ್ 12 ರಿಂದ 22 ರವರೆಗೆ ಸಂಜೆ ಪ್ರತಿದಿನ 6:30 ರಿಂದ 8:30 ರವರೆಗೆ ಪ್ರವಚನ ಕಾರ್ಯಕ್ರಮ ಜರುಗುವುದು. ಅಂತೆಯೇ ಪ್ರತಿ ನಿತ್ಯವೂ ವಿಶೇಷ ಬಗೆಯ ಪ್ರವಚನ ಕಾರ್ಯಕ್ರಮ ನಡೆಯುವವು.12 -12 -2024 ಶ್ರೀ ಗುಡ್ಡಾಪುರದ ದಾನಮ್ಮ ನವರ ಅಧ್ಯಾತ್ಮಕ ಜೀವನ ಚರಿತೆ ಕುರಿತ ಪ್ರವಚನ ಕಾರ್ಯಕ್ರಮ,14-12-2024 ರಂದು ದಾನಮ್ಮ ದೇವಿಯ ತೊಟ್ಟಿಲ ಕಾರ್ಯಕ್ರಮ ಜರುಗಿತು.
ಶರಣಮ್ಮ ಮಾಲಿ ಮಠ ಇವರ ಸಂಯೋಜಕತೆಯಲ್ಲಿ ಹಚ್ಚೇವು ಕನ್ನಡದ ದೀಪ,ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ ಎಂಬ ಹಗುಗಳಿಗೆ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಶ್ರೀ.ಮ.ನಿ.ಪ್ರ.ಡಾ.ಚನ್ನಮಲ್ಲ ಮಹಾಸ್ವಾಮಿಗಳು ಇವರ ಸಾನಿಧ್ಯ ದಲ್ಲಿ 28ನೇ ಅನುಭವ ಗೋಷ್ಠಿ ಹಾಗೂ ಹರಕೆ ಪಲ್ಲಕ್ಕಿ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದ ಕೊನೆಯಲ್ಲಿ ಅಕ್ಕನ ಬಳಗದ ಹಿಂದಿನ ವರುಷದ ಸಮಿತಿ ಪದಾಧಿಕಾರಿಗಳಾದ ಅಧ್ಯಕ್ಷರಾದ ಕಾಳಮ್ಮ ಬಡಿಗೇರ,ಉಪಾಧ್ಯಕ್ಷರಾದ ಶಶಿಕಲಾ ಗುಂಡಳ್ಳಿ,ಕಾರ್ಯದರ್ಶಿ ಸಾವಿತ್ರಿ ಜೀನೂರು,ನೂತನ ಅಕ್ಕನ ಬಳಗದ ಸಮಿತಿಯ ಪದಾಧಿಕಾರಿಗಳಾದ ಅಧ್ಯಕ್ಷರು ಚೆನ್ನಬಸಮ್ಮ ಪರೆಡ್ಡಿ,ಉಪಾಧ್ಯಕ್ಷರಾದ ಶರಣಮ್ಮ ಮರಕಲ ದಿನ್ನಿ,ಕಾರ್ಯದರ್ಶಿ ಬಸವರಾಜ ಗುಂಡಳ್ಳಿ ಇವರನ್ನು ಶಾಲು ಹೊದಿಸಿ ಮಠದ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಪ್ರವಚನಕಾರರಾದ ಶ್ರೀ ವೇ.ಮೂ. ಶಶಿಧರ ಶಾಸ್ತ್ರಿ ಡೋಣಿ,ಗವಾಯಿಗಳಾದ ಶ್ರೀ ಅಮರೇಶ್,ತಬಲ ವಾದ್ಯಕರಾದ ಶ್ರೀ ಸಂತೋಷ ಹಾಗೂ ಗ್ರಾಮದ ಸಕಲ ಸಕಲ ಸದ್ಭಕ್ತರು ಇದ್ದರು.


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ