ಅಂಬೇಡ್ಕರ್ ರವರ ಮಹಾ ಪರಿನಿರ್ವಾಣ ಆಚರಣೆ
ಮಸ್ಕಿ : ಡಾ.ಬಿ ಆರ್ ಅಂಬೇಡ್ಕರ್ ಅವರ ಮಹಾಪರಿ ನಿರ್ವಾಣ ದಿನದ ಅಂಗವಾಗಿ ಪಟ್ಟಣದ ಹಳೆ ಬಸ್ ನಿಲ್ದಾಣ ಹತ್ತಿರ ಇರುವ ಬಾಬಾ ಸಾಹೇಬ್ ಅಂಬೇಡ್ಕರ್ ರವರೆಗೆ ಗೌರವ ಶ್ರದ್ಧಾಂಜಲಿ ಸಲ್ಲಿಸಿದರು.
ಈ ವೇಳೆ,ಮಲ್ಲಪ್ಪ ಎಸ್ ಗೋನಾಳ ರವರು ಮಾತನಾಡಿ, ಡಾ.ಬಿ .ಆರ್.ಅಂಬೇಡ್ಕರ್ ಅವರು ಅನುಭವಿಸಿದ ಯಾತನೆಗಳಿಗೆ ಲೆಕ್ಕವಿಲ್ಲ. ಅವರು ಬಹಳ ಕಷ್ಟದಿಂದ ಸಮಾನತೆಯ ತೇರನ್ನು ಇಷ್ಟು ದೂರ ಎಳೆದು ತಂದಿದ್ದಾರೆ. ಏನೇ ಅಡ್ಡಿ, ಆತಂಕ ಎದುರಾದರೂ ಅವರು ಮುನ್ನಡೆಸಿದ ತೇರನ್ನು ಮುಂದೆ ಎಳೆಯುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಅಂಬೇಡ್ಕರ್ ಅವರಿಗೆ ಗೌರವ ನಮನ ದಲಿತ ಜನಾಂಗದ ಅಭಿವೃದ್ಧಿಗಾಗಿ ಬಾಬಾ ಸಾಹೇಬರು ನಡೆಸಿದ ಅವಿಶ್ರಾಂತ ಹೋರಾಟ ಅವಿಸ್ಮರಣೀಯ. ಬದುಕಿನುದ್ದಕ್ಕೂ ದಲಿತ ಜನಾಂಗದ ಏಳಿಗೆಗಾಗಿ ಶ್ರಮಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಶೋಷಿತ ಸಮುದಾಯಗಳ ಆಶಾಜ್ಯೋತಿ ಎಂದರು.
ಇದೇ ಸಂದರ್ಭದಲ್ಲಿ ಹುಚ್ಚರೆಡ್ಡಿ ಹಿರೇ ದಿನ್ನಿ,ಗೋವಿಂದಪ್ಪ ಹಸಮಕಲ್,ಹನುಮಂತಪ್ಪ ಚಿಕ್ಕ ಕಡಬೂರು,ಸಿದ್ದು ಮುರಾರಿ ಕರವೇ,ಜಗದೀಶ ಗೋರಬಾಳ,ಮೌನೇಶ್ ಹಸಮಕಲ್ ಕರವೇ ಸೇರಿದಂತೆ ಇನ್ನಿತರರು ಇದ್ದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ