ಸೋರುವ ಮನೆ ಒಂದೇ ಇದ್ದರೆ ಪರವಾಗಿಲ್ಲ. ಸೇರುವ ಮನಸ್ಸು ಒಂದೇ ಆಗಿರಬೇಕು.-- ಘನ ಮಠ ಪೂಜ್ಯ ಗುರು ಬಸವ ಶ್ರೀಗಳು
ಹಟ್ಟಿ: ಚಿನ್ನದ ಗಣಿ ಸಮೀಪದ ಹಿರೇನಗನೂರು ಗ್ರಾಮದಲ್ಲಿ ಸದ್ಗುರು ಶ್ರೀ ಮೌಲಾಸಾಬ್ ಶರಣರ 35ನೆಯ ಗಂಧ ಉರುಸ್ ಅತ್ಯಂತ ಸಡಗರ ಸಂಭ್ರಮದಿಂದ ನಡೆಯಿತು.ಗ್ರಾಮದ ಮಧ್ಯಭಾಗದಲ್ಲಿರುವ ದುರ್ಗಾದಿಂದ ಗಂಧ ಮೆರವಣಿಗೆಯು ಪ್ರಾರಂಭಗೊಂಡು
ಶ್ರೀಮೌಲಾ ಸಾಹೇಬರ ದರ್ಗದವರಿಗೂ ಮೆರವಣಿಗೆ ನಡೆಯಿತು.ನಂತರ ಘನ ಮಠ ಪೂಜ್ಯ ಗುರು ಬಸವ ಶ್ರೀಗಳು ಸಂತೆಕೆಲ್ಲೂರು ಹಾಗೂ ಮರಡಿ ಸುಲ್ತಾನಪುರ ದಾದಾಪೀರ್ ಪಕೀರ್ ಉಲ್ಲಾಸ್.ತಿಂಥಣಿ ಮೌನೇಶ್ವರ ಪೂಜಾರಿ ಹಾಗೂ ಯಂಕಂಚಿ ದಾವಲ್ ಮಲಿಕ್ ಸ್ವಾಮಿಗಳು.ಹೊಡಿಕೆಪ್ಪ ತಾತ.ಹಾಗೂ ಶ್ರೀ ಮೈಬೂಬ್ ಸಾಬ್ ಇವರಿಂದ ಸದ್ಗುರು ಶ್ರೀಮೌಲಾಸಾಬ್ ರವರ ಗದ್ದುಗಿಗೆ ಗಂಧ ಲೇಪನ ಮಾಡಿದರು.
ನಂತರ ಕಾರ್ಯಕ್ರಮದ ದಿವ್ಯ ಸಾನಿಧ್ಯ ಬಯಸಿದ ಘನ ಮಠ ಪೂಜ್ಯ ಗುರುಬಸವ ಶ್ರೀಗಳು ಮಾತನಾಡಿ.
ಸಮಾಧಾನ ಇಲ್ಲದ ಸಂಪತ್ತು.ಆರೋಗ್ಯ ಇಲ್ಲದ ಆಯುಷ್ಯ.ಮಾತು ಕೇಳದ ಮಗ.ಇವು ಸಂಸಾರಕ್ಕೆ ಶತ್ರುಗಳು.ಬ್ರಹ್ಮಾಂಡಕ್ಕೆ ಸೂರ್ಯ ಇದ್ದರೇನೆ ಬೆಳಕು.ಇಲ್ಲ ಅಂದರೆ ಬರೀ ಕತ್ತಲು.ಈ ಬ್ರಹ್ಮಾಂಡಕ್ಕೆ ಸೂರ್ಯ ಎಷ್ಟು ಮುಖ್ಯನೋ.. ಪಿಂಡಾಣಕ್ಕೆ ಗುರು ಅಷ್ಟೇ ಮುಖ್ಯ.
ಈ ಜಗತ್ತು ಪ್ರೀತಿ ಪ್ರೇಮ ವಿಶ್ವಾಸದ ಮೇಲೆ ನಿಂತಿದೆ.ಹಾಗೆ ಈ ಜೀವ ಜಗತ್ತಿಗೆ ಅನ್ಯೋನ್ಯ ಸಂಬಂಧವಿದೆ. ಪಿಂಡದಿಂದ ಹಿಡಿದುಕೊಂಡು.ಬ್ರಹ್ಮಾಂಡದ ವರೆಗೆ.ಸಹಕಾರ ಅನ್ನುವುದಕ್ಕೆ ಈ ಜಗತ್ತು ನಡೆದಿದೆ. ಕತ್ತಲೆಯಿಂದ ಬೆಳಕಾಗುತ್ತಿದೆ. ಆದುದರಿಂದ ಇವತ್ತು ಹಿರೇ ನಗುವಿನ ಊರಿನಲ್ಲಿ ಮೌಲಾಸಾಹೇಬರ 35ನೆಯ ಉರುಸ್ಸು ಗಂಧ.ಈ ಪವಿತ್ರವಾದ ಸಮಾರಂಭ ಪ್ರತಿ ವರ್ಷ ಹೆಚ್ಚು ಹೆಚ್ಚಾಗಿ ಬೆಳೆಯುತ್ತಾ ಇದೆ.ಅಭಿವೃದ್ಧಿ ಆಗುತ್ತಾ ಇದೆ.ಈ ಪವಿತ್ರ ಜಾಗದಲ್ಲಿ ಕುಳಿತಂತ ಸದ್ಭಕ್ತರೇ ಸಾಕ್ಷಿ ಎಂದು ನಾವು ನೆನಪಿಸಿಕೊಳ್ಳಬೇಕಾಗುತ್ತದೆ.ದೇಶದ ಆತ್ಮ ಚರಿತ್ರೆಗಳೇ ನಮ್ಮ ಪ್ರಾಣ ಆಗಬೇಕು.ಆ ತ್ಯಾಗಿಗಳ ದಿವ್ಯ ಬಲಿದಾನ ಕಥೆಗಳೇ ಮಠ.ಮಂದಿರ. ಚರ್ಚ್.ಮಸೀದಿಗಳಿಂದ ಪಠಣವಾಗಬೇಕು.ಜಾತಿಯ ಹಬ್ಬ ಹರಿದಿನಗಳ ಬದಲಿಗೆ.ರಾಷ್ಟ್ರೀಯ ಹಬ್ಬಗಳು ನಮ್ಮ ಉತ್ಸವ ಆಚರಣೆಗಳು ಆಗಬೇಕು.ಇವತ್ತು ದೇಶದ ಎಲ್ಲಾ ಕಡೆಗಳಲ್ಲಿ ಇಂದು ಮುಸಲ್ಮಾನರ ಗಲಾಟೆ ನಡೆಯುತ್ತವೆ.ಇಂದು ಕ್ರೈಸ್ತರ ಹಿಂದುಗಳ ನಡುವೆ ಗಲಾಟೆ ನಡೆಯುತ್ತವೆ.ಬಹುಷ್ಯ ಇವನ್ನೆಲ್ಲ ನಾವು ನೋಡಿದರೆ ಹೀಗೆ ಇರಬೇಕು ಅನ್ನುವುದಕ್ಕೆ ಇಲ್ಲಿ ನಡೆದಂತಹ ಸಮಾರಂಭವೇ ಸಾಕ್ಷಿ.ಭವಿಷ್ಯ ಗಂಧ ಉರುಸ್ ಕಾರ್ಯಕ್ರಮ ನೋಡುವುದಾದರೆ ಇದು ಒಂದು ಧಾರ್ಮಿಕ ಸಭೆ ಅನಿಸಿದರೂ ಕೂಡ ಇದು ಒಂದು ಸಾಂಸ್ಕೃತಿಕ ಪರಂಪರೆಯ ಮೈಬೂಬ್ ಸಾಬರ ಸಂಕಲ್ಪ ಕಾರ್ಯಕ್ರಮ ಎಂದು ನಾವು ನೀವು ಭಾವಿಸಿಕೊಳ್ಳಬೇಕಾಗಿದ.
ಈ ಉರಿಸು ಕಾರ್ಯಕ್ರಮ ನೋಡಿದರೆ ಲಿಂಗಾಯತ್ ಸ್ವಾಮಿಗಳ ಕೆಲಸ ಇಲ್ಲಿ ಏನಿದೆ?ಹಿರೇನಗನೂರಿನ ಲಿಂಗಾಯತ ಜನ ಭಕ್ತರ ಕೆಲಸ ಏನಿದೆ?ಇದು ಮುಸಲ್ಮಾನರ ಕಾರ್ಯಕ್ರಮವಿದೆ ಏನಿದು ಇದರ ಹಿಂದಿನ ಮಹತ್ವ.ಈ ನಮ್ಮ ಮೈಬೂಬ್ ಸಾಹೇಬರ ತಂದೆ ಮೌಲಾಸಾಬರು ಅವರು ಇಸ್ಲಾಂ ಧರ್ಮದವರು ಲಿಂಗಾಯಿತಲ್ಲಾ ಮುಸಲ್ಮಾನರು ಇಲ್ಲಿ ಕಾರ್ಯಕ್ರಮ ಮಾಡಬೇಕು.ಅದೇ ಸಮಾಜದವರು ಇಲ್ಲಿರಬೇಕು.ಬೇರೆ ಬೇರೆ ಸಮಾಜದವರು ಏಕೆ ಇರುತ್ತಾರೆ ಎಂದು ಕೇಳಿದರೆ.
ಸೋರುವ ಮನೆ ಒಂದು ಇದ್ದರೆ ಪರವಾಗಿಲ್ಲ .ಆದರೆ ,ಸೇರುವ ಮನಸ್ಸು ಒಂದೇ ಆಗಿರಬೇಕು. ಅನ್ನುವುದಕ್ಕೆ ಈ ನಮ್ಮ ಮೈಬೂಬ್ ಸಾಹೇಬರೇ ಸಾಕ್ಷಿ.ಎನ್ನುವಂತ ಮಾತನ್ನು ಇಲ್ಲಿ ನೆನಪಿಸಿಕೊಳ್ಳಬೇಕು.ಎಂದು ಭಕ್ತರನ್ನು ಉದ್ದೇಶಿಸಿ ಮಾತನಾಡಿದರು.
ಸದ್ಗುರು ಶ್ರೀ ಮೌಲಸಾಬರ ಶರಣರ 35ನೇ ಗಂಧ ಉರ್ಸು ಕಾರ್ಯಕ್ರಮಕ್ಕೆ ಸುಮಾರು ಹಳ್ಳಿಗಳಿಂದ ಆಗಮಿಸಿದ ಭಕ್ತರು ರಾತ್ರಿಯಲ್ಲ ಭಜನೆ ಮಾಡಿ ಮುಂಜಾನೆ ಮೌಲಾಸಾಹೇಬರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಹಿರೇನಗನೂರಿನ ಹಿರಿಯರು ಹಾಗೂ ಸದ್ಭಕ್ತರು ಮತ್ತು ಸುತ್ತಮುತ್ತಲಿನ ಗ್ರಾಮಗಳ ಮೌಲಾ ಸಾಹೇಬರ ಶಿಶು ಮಕ್ಕಳು ಶ್ರೀಮೌಲಸಾಬರ ಆಶೀರ್ವಾದ ಪಡೆದು ಪುನೀತರಾದರು.


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ