ಸ್ನೇಹ ಸದನ ಸಮಗ್ರ ಸಮಾಜ ಕಾರ್ಯನಿರ್ವಹಣೆ ಕೇಂದ್ರದಲ್ಲಿ.ಕ್ರಿಸ್ಮಸ್ ಆಚರಣೆ.
ಬ್ಯಾಡಗಿ: ಪಟ್ಟಣದ ಕದರಮಂಡಲಗಿ ರಸ್ತೆಯಲ್ಲಿರುವ ಸ್ನೇಹ ಸದನ ಸಮಗ್ರ ಸಮಾಜ ಕಾರ್ಯ ನಿರ್ವಾಹಣ ಕೇಂದ್ರದಲ್ಲಿ.ಸತತವಾಗಿ ಎರಡು ದಿನಗಳ ಕಾಲ ಕ್ರಿಸ್ಮಸ್ ಹಬ್ಬ ಸಂಭ್ರಮಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. 21.12.2024ರಂದು ಸಂಸ್ಥೆಯ ಸಂಕಿತ ಮಹಿಳೆಯರಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಬ್ರಹ್ಮಕುಮಾರಿ ಈಶ್ವರಿ ವಿದ್ಯಾಲಯದ ಕುಮಾರಿ ರೇಖಾ ಅಮ್ಮನವರು ಹಾಗೂ ಅವರ ಶಿಷ್ಯರಾದ ವನಜಾಕ್ಷಿಯವರು ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವತಿಯಿಂದ.ಮಕ್ಕಳ ಸಹಾಯವಾಣಿಯ ಬ್ಯಾಡಗಿ ತಾಲೂಕ ಸಂಯೋಜಕರಾದ ಶ್ರೀಯುತ ರಮೇಶ್ ಲಮಾಣಿ ಅವರು ಆಗಮಿಸಿದ್ದರು. ಕುಮಾರಿ ರೇಖಾ ಅಮ್ಮನವರು ಮಾತನಾಡಿ ಆರೋಗ್ಯದ ಕುರಿತು ಸಾಕಷ್ಟು ಕಾಳಜಿಯನ್ನು ತೆಗೆದುಕೊಳ್ಳಬೇಕು ಎಂದು ತಿಳಿಸಿದರು. ಮತ್ತು ಧ್ಯಾನವನ್ನು ಮಾಡಿಸಿ.ಅವರ ಮನಸ್ಸನ್ನು ಶುದ್ಧಗೊಳಿಸುವ ರೀತಿಯಲ್ಲಿ ಮಾಹಿತಿಯನ್ನು ನೀಡಿದರು.
ನಂತರ ಸಂಸ್ಥೆಯ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಸಂಕಿತ ಮಹಿಳೆಯರಿಗೆ ಹಮ್ಮಿಕೊಳ್ಳಲಾಗಿತ್ತು. ಕುಟಿರದ ಮಕ್ಕಳು ಮಹಿಳೆಯರಿಗೆ ವಿವಿಧ ನೃತ್ಯಗಳನ್ನು ಮಾಡುತ್ತಾ ಅವರ ಮನಸ್ಸಿಗೆ ಸಂತೋಷವನ್ನು ನೀಡಿದರು.ಮತ್ತು ಸಹೋದರಿ ರೂಪಾ ರವರು ಮಹಿಳೆಯರಿಗೂ ಕ್ರಿಸ್ಮಸ್ ಹಬ್ಬದ ಸಂದೇಶವನ್ನು ನೀಡಿದರು.ಎಲ್ಲರಿಗೂ ಆಟೊ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಅದರಲ್ಲಿ ಭಾಗವಹಿಸಿ, ವಿಜೇತರಾದವರಿಗೆ ಬಹುಮಾನಗಳನ್ನು ವಿತರಣೆ ಮಾಡಲಾಯಿತು. ಕೊನೆಯಲ್ಲಿ ಸುಮಾರು 85 ಮಹಿಳೆಯರಿಗೆ ಕ್ರಿಸ್ಮಸ್ ಹಬ್ಬದ ಉಡುಗೊರೆಯನ್ನು. ಎಲ್ಲರಿಗೂ ಒಂದೊಂದು ಸಿರಿಯನ್ನು ನೀಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಮಧ್ಯಾಹ್ನದ ಭೋಜನ ವ್ಯವಸ್ಥೆಯನ್ನು ಮಾಡಲಾಗಿತ್ತು.ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ವಂದನೆಗಳನ್ನು ತಿಳಿಸುತ್ತಾ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.ಅದೇ ರೀತಿ ಸಂಸ್ಥೆಯ ಹಿರಿಯ ನಾಗರಿಕರಿಗೆ ಕ್ರಿಸ್ಮಸ್ ಹಬ್ಬದ ಸಂಭ್ರಮಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಕೊನೆಯಲ್ಲಿ ಸುಮಾರು 88 ಹಿರಿಯ ನಾಗರಿಕರಿಗೆ ಕ್ರಿಸ್ಮಸ್ ಹಬ್ಬದ ಉಡುಗೊರೆಯನ್ನು ಮಹಿಳಾ ಹಿರಿಯ ನಾಗರಿಕರಿಗೆ ಒಂದೊಂದು ಸಿರಿಯನ್ನು ನೀಡಿ.ಹಾಗೂ ಪುರುಷ ಹಿರಿಯ ನಾಗರಿಕರಿಗೆ ಒಂದೊಂದು ಪಂಚೆ ಮತ್ತು ಟವೆಲ್ ನೀಡಲಾಯಿತು ಮಧ್ಯಾಹ್ನ ಭೋಜನದ ನಂತರ ಕಾರ್ಯಕ್ರಮವನ್ನು ಹಚ್ಚು ಕಟ್ಟಾಗಿ ಮುಕ್ತಾಯಗೊಳಿಸಲಾಯಿತು.


💯👌
ಪ್ರತ್ಯುತ್ತರಅಳಿಸಿ