ಪಂಚ ದೀಪಗಳ ಬೆಳಕಿನ ಹಬ್ಬ.ಕ್ರಿಸ್ಮಸ್
ಲಿಂಗಸ್ಗೂರು : ತಮ್ಮೆಲ್ಲರಿಗೂ ಕ್ರಿಸ್ತ ಆಗಮನ ದಿನಮಾನಗಳ ಶುಭಾಶಯಗಳು.ಕ್ರೈಸ್ತ ಬಂದವರು ಪ್ರಾರ್ಥನಾ ಪೂರಕವಾಗಿಯೂ ಹಾಗೂ ಶ್ರದ್ಧಾ ಭಕ್ತಿಯಿಂದಲೂ ಆಚರಿಸಲ್ಪಡುವ ಪ್ರಮುಖವಾದ ಹಬ್ಬಗಳೆಂದರೆ ಕ್ರಿಸ್ಮಸ್ ಗುಡ್ ಫ್ರೈಡೇ ಹಾಗೂ ಈಸ್ಟರ್."ಕ್ರಿಸ್ಮಸ್" ಹಬ್ಬವನ್ನು ಬೆಳಕಿನ ಹಬ್ಬವೆಂದು ಕರೆಯುವುದು ಉಂಟು. ಈ ಎಲ್ಲಾ ಹಬ್ಬಗಳ ಬುನಾದಿ ಕ್ರಿಸ್ಮಸ್ ಎಂದು ಹೇಳಿದರೆ ತಪ್ಪಾಗಲಾರದು. ಕ್ರಿಸ್ಮಸ್ ಏಸುಕ್ರಿಸ್ತನ ಜನನದ ಸಂದೇಶವನ್ನು ಸಾರುವತ್ತ ಹಬ್ಬವಾಗಿದೆ. ವಿಶ್ವದಲ್ಲೇ ಡಿಸೆಂಬರ್ 25ನೇ ತಾರೀಖಿನ ದಿನದಂದು ಈ ಹಬ್ಬವನ್ನು ಆಚರಿಸುತ್ತಾರೆ. ನವಂಬರ್ ತಿಂಗಳ ಕೊನೆಯವಾರದಿಂದ ಹಿಡಿದು ಕ್ರಿಸ್ಮಸ್ ಹಬ್ಬದವರೆಗೂ ಈ ದಿನಗಳನ್ನು ಕ್ರಿಸ್ತನ ಆಗಮನ ದಿನಗಳು(Advent) ಎಂದು ಕರೆಯುತ್ತಾರೆ.ಅಂದರೆ ಕ್ರಿಸ್ಮಸ್ ದಿನಕ್ಕಿಂತಲೂ ನಾಲ್ಕು ವಾರಗಳ ಮುಂಚಿತವಾಗಿ ಕ್ರೈಸ್ತ ಬಂದವರು ಕ್ರಿಸ್ಮಸ್ ಹಬ್ಬದವರಿಗೂ ಪ್ರತಿಯೊಂದು ಭಾನುವಾರ ಒಂದೊಂದು ಮೇಣದ ಬತ್ತಿಯನ್ನು ಬೆಳಗಿಸುವುದರ ಮೂಲಕ ಐದು ವಿಧವಾದ ಸಂದೇಶಗಳನ್ನು ಧ್ಯಾನಿಸುತ್ತಾರೆ.ಈ ಲೇಖನದಲ್ಲಿ ಈ ಸಂಪ್ರದಾಯ ಒಪ್ಪಿಕೊಂಡಿರುವ ಹಿನ್ನೆಲೆ ಹಾಗೂ ಅವುಗಳ ಅರ್ಥವನ್ನು ತಮ್ಮೊಡನೆ ಹಂಚಿಕೊಳ್ಳಲು ಇಚ್ಚಿಸುತ್ತೇನೆ.
ಐದು ಮೇಣದ ಬತ್ತಿಗಳ ಹಿನ್ನೆಲೆ: ಕ್ರೈಸ್ತ ಬಂದವರು ಕ್ರಿಸ್ಮಸ್ ಹಬ್ಬವನ್ನು ಆಚರಿಸುವವರಿಗೆ ಸುಮಾರು ಐದು ವಿಧವಾದ ಬಣ್ಣದ ಮೇಣದಬತ್ತಿಗಳನ್ನು ಪ್ರತಿಯೊಂದು ಭಾನುವಾರ ಬೆಳಗುತ್ತಾ ಆ ಮೇಣದ ಬತ್ತಿಯ ಸಂದೇಶವನ್ನು ಆಲಿಸುವವರಾಗಿರುತ್ತಾರೆ. ದೀಪ ಸ್ತಂಭದ ನಾಲ್ಕು ಮೂಲೆಗಳಲ್ಲಿ ಒಂದೊಂದು ಮೇಣದ ಬತ್ತಿಯನ್ನು ಇಟ್ಟು ಅವುಗಳ ಮಧ್ಯದಲ್ಲಿ ಒಂದು ಬಿಳಿಯ ಬಣ್ಣದ ಮೇಣದ ಬತ್ತಿ ಇರುವುದರಿಂದ ಇತ್ತೀಚಿನ ದಿನಮಾನಗಳಲ್ಲಿ ಕ್ರೈಸ್ತಸಭೆಗಳಲ್ಲಿ ಆಚರಿಸುವುದನ್ನು ನಾವು ಕಾಣಬಹುದು. ಈ ಸಂಪ್ರದಾಯ ಕ್ರಿಸ್ತಶಕ 16ನೆಯ ಶತಮಾನದಲ್ಲಿ ಜರ್ಮನಿಯಲ್ಲಿ ಪ್ರಚಲಿತವಾಗಿತ್ತು. ಆದರೆ ಕ್ರಿಸ್ತಶಕ 19ನೇ ಶತಮಾನದಲ್ಲಿ ಜರ್ಮನ್ ದೇಶದ ಮಾಸ್ಟರ್ ಜೋಹನ್ ಹಿನ್ರೀಚ್ ವಿಶರ್ನಾ(Pastor Johann Hrnrich Wichern) ಇವರು ಈ ಸಂಪ್ರದಾಯಕ್ಕೆ ಹೊಸ ರೂಪವನ್ನು ಕೊಟ್ಟರು. ಕ್ರಿಸ್ಮಸ್ ದಿನದಂದು ಇವರು ಉಪಯೋಗಿಸುತ್ತಿದ್ದ 24 ಮೇಣದ ಬತ್ತಿಗಳಲ್ಲಿ ನಾಲ್ಕು ಮೂಲೆಗಳಲ್ಲಿ ಬಿಳಿ ಬಣ್ಣದ ಮೇಣದ ಬತ್ತಿಗಳನ್ನು ಬೆಳಗಿಸುವುದರ ಮೂಲಕ ಸಂದೇಶಗಳನ್ನು ಸಾರುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಐದು ಮೇಣದ ಬತ್ತಿಗಳು ಇವುಗಳ ಬಣ್ಣ ಹಾಗೂ ಅರ್ಥವನ್ನು ವಿವರಿಸುವುದರೊಡನೆ ಆರಾಧನೆಯು ಪ್ರಚಲಿತವಿರುವುದನ್ನು ನಾವು ಕಾಣಬಹುದು.
ಮೇಣದ ಬತ್ತಿಯ ಫೋಟೋ
1.ಮೊದಲನೆಯ ಮೇಳದ ಬತ್ತಿ: ಕ್ರಿಸ್ತ ಜಯಂತಿಯ ದಿನಮಾನಗಳಲ್ಲಿ ನವಂಬರ್ ತಿಂಗಳ ಕೊನೆಯ ವಾರದಲ್ಲಿ ಅಥವಾ ಕೆಲವೊಮ್ಮೆ ಡಿಸೆಂಬರ್ ಮೊದಲ ಭಾನುವಾರದಂದು ಆರಂಭವಾಗುವ ಕ್ರಿಸ್ತನ ಆಗಮನದ ದಿನಮಾನಗಳಲ್ಲಿ ಬೆಳಗುವ ಮೊದಲನೆಯ ಮೆಣದ ಬತ್ತಿಯ ಬಣ್ಣ ನೇರಳೆ(Purple) ಇದನ್ನು ಪ್ರವಾದನೆಗಳ(Prophet'sCandle) ಎಂದು ಕರೆಯಲಾಗಿದ್ದು ಇದು ಜನರಲ್ಲಿ ಕ್ರಿಸ್ತನ ಬರೋ ಹಣದ ನಿರೀಕ್ಷೆ. ಪ್ರಾಯಶ್ಚಿತ್ತ ಹಾಗೂ ಸಿದ್ಧತೆಯ ಸಂದೇಶವನ್ನು ನೀಡುವುದರಿಂದ Candle of Hope ನಿರೀಕ್ಷೆಯ ಮೇಣದ ಬತ್ತಿ ಎಂದು ಕರೆಯಲಾಗುತ್ತದೆ. ಯೇಸು ಕ್ರಿಸ್ತನು ಜನಿಸಿದ ಪೂರ್ವದಲ್ಲಿ ಅನೇಕ ಪ್ರವಾದಿಗಳು ಮುಂಚಿತವಾಗಿಯೇ ತಿಳಿಸಿರುವ ಘಟನೆ ಯೇಸು ಕ್ರಿಸ್ತನ ಜನನದಲ್ಲಿ ಈಡೇರಿರುವುದನ್ನು ಮರಿಸುತ್ತಾ ಬೆಳಗುವ ಮೊದಲ ಬತ್ತಿಯೇ ಇದಾಗಿರುತ್ತದೆ. ವಿಶೇಷವಾಗಿ ಯಶಾಯ 9:6ರಲ್ಲಿ ತಿಳಿಸಿದಂತೆ " ಒಂದು ಮಗು ನಿಮಗಾಗಿ ಹುಟ್ಟಿದೆಅಷ್ಟೇ,ವರದ ಮಗನು ನಮಗೆ ದೊರೆತನು. ಆಡಳಿತವು ಅವನ ಬಾಹುವಿನ ಮೇಲಿರುವುದು.ಅದ್ಭುತ ಸ್ವರೂಪನು. ಆಲೋಚನ ಕರ್ತನು.ಪರಾಕ್ರಮಿಯಾದ ದೇವರು.ನಿತ್ಯನಾದ ತಂದೆ. ಸಮಾಧಾನದ ಪ್ರಭು.ಎಂಬುದು ಅವನ ಹೆಸರು ಎನ್ನುವ ಪ್ರವಾದನ ಸಂದೇಶವನ್ನು ಧ್ಯಾನಿಸುತ್ತಾ ಈ ಮೊದಲನೆಯ ನಿರೀಕ್ಷೆಯ ಮೇಣದಬತ್ತಿ Candle of Hope ಅಂದರೆ ಯೇಸುಕ್ರಿಸ್ತನು ನಿರಾಶಿಯಲ್ಲಿರುವ ಜನರಲ್ಲಿ ಭಯ.ದುಃಖ.ಕಳವಳ.ಹೆದರಿಕೆಯನ್ನು ಹೋಗಲಾಡಿಸಿ ನಿರೀಕ್ಷೆಯನ್ನು ನೀಡುತ್ತಾನೆ ಎಂದು ಈ ಮೊದಲ ಮೇಣದ ಬತ್ತಿ ತಿಳಿಯಪಡಿಸುತ್ತದೆ.2.ಎರಡನೆಯ ಮೇಣದಬತ್ತಿ ; ಇದು ಸಹ ನೇರಳೆ(Purple); ಬಣ್ಣವುಳ್ಳದಾಗಿದ್ದು ನಂಬಿಕೆಯ ಸಂದೇಶವನ್ನು ನೀಡುವಂತದ್ದಾಗಿರುತ್ತದೆ ದಿನ ತುಂಬಿದ ಮರೆಯಲು ತನ್ನ ಗಂಡನಾದ ಯುಸೆಫನೊಂದಿಗೆ ನಂಬಿಕೆಯೊಡನೆ ಮಾಡಿದ ಪ್ರಯಾಣದ ಘಟನೆಯ ಸಂದೇಶವನ್ನು ಈ ಮೇಳದ ಬತ್ತಿ ನೀಡುತ್ತದೆ, ಇದನ್ನು Candle of Faith ನಂಬಿಕೆಯ ಮೇಣದಬತ್ತಿ ಎಂದು ಕರೆಯುತ್ತಾರೆ. ಯೇಸು ಸ್ವಾಮಿಯು ಸಹ ತನ್ನ ಸೇವೆಯಲ್ಲಿ ಅನೇಕರನ್ನು ಗುಣಪಡಿಸುವಾಗ "ನಿನ್ನ ನಂಬಿಕೆಯೇ ನಿನ್ನನ್ನು ಗುಣಪಡಿಸಿದೆ" ಎನ್ನುವ ಮಾತುಗಳನ್ನು ಹೊಸ ಒಡಂಬಡಿಕೆಯ ಅನೇಕ ಭಾಗಗಳಲ್ಲಿ ಕಾಣಬಹುದು.ಇಬ್ರಿಯ:12:12 ರಲ್ಲಿ ನಂಬಿಕೆಯನ್ನು ಹುಟ್ಟಿಸುವವನು ಪೂರೈಸುವವನು ಆಗಿರುವ ಯೇಸುವಿನ ಮೇಲೆ ದೃಷ್ಟಿಯಿಟ್ಟು ನಮಗೆ ನೇಮಕವಾದ ಓಟವನ್ನು ಸ್ಥಿರ ಚಿತ್ತದಿಂದ ಓಡೋಣ"ಎನ್ನುವ ಸಂದೇಶ ನಮ್ಮಲ್ಲಿ ನಂಬಿಕೆಯನ್ನು ಬಲಪಡಿಸುವಂತದ್ದಾಗಿದೆ.
3.ಮೂರನೆಯ ಮೇಣದ ಬತ್ತಿ : ಮೂರನೆಯ ಮೇಣದ ಬತ್ತಿಯು ಗುಲಾಬಿ (Rose) ಬಣ್ಣದ್ದಾಗಿದ್ದು ಇದು ಸಂತೋಷ (Joy) ಸೂಚಿಸುತ್ತದೆ . "Gaudete" ಗೌಡೆಟೆ ಎನ್ನುವ ಲ್ಯಾಟಿನ್ ಭಾಷೆಯ ಹಿನ್ನೆಲೆಯುಳ್ಳ ಅರ್ಥವನ್ನು ಹೊಂದಿರುವ ಈ ಪದ Rejoice ಸಂತೋಷ ಎನ್ನುವ ಪದಕ್ಕೆ ವಿಶೇಷವಾದ ಅರ್ಥವನ್ನು ಕೊಡುತ್ತದೆ. ಕಾರಣ ಕುರುಬರು ಮಧ್ಯರಾತ್ರಿಯಲಿ ಹೊಲದಲ್ಲಿ ಇದ್ದುಕೊಂಡು ತಮ್ಮ ಕುರಿ ಇಂಡನ್ನು ಕಾಯುತ್ತಿರುವಾಗ ಹೆದರಿದ ಕುರುಬರಿಗೆ ದೂತನು ನೀಡಿದ ಸಂದೇಶ." ಹೆದರಬೇಡಿರಿ ಕೇಳಿರಿ; ಜನರಿಗೆಲ್ಲ ಮಹಾ ಸಂತೋಷವನ್ನುಂಟು ಮಾಡುವ ಶುಭ ಸಮಾಚಾರವನ್ನು ನಿಮಗೆ ತಿಳಿಸುತ್ತೇನೆ. ಅದೇನೆಂದರೆ. ಇವತ್ತು ನಿಮಗೋಸ್ಕರ ದಾವಿದನೂರಿನಲ್ಲಿ ಒಬ್ಬ ರಕ್ಷಕನು ಹುಟ್ಟಿದ್ದಾನೆ. ಆತನು ಕರ್ತನಾಗಿರುವ ಕ್ರಿಸ್ತನೇ" (ಲೂಕ 2:10-11) ಎಂಬ ದೂತನ ಸಂದೇಶ ಕುರುಬರಲಿದ್ದ ಹೆದರಿಕೆ.ಭಯ.ಕಳವಳ.ಅಂತಗಳನ್ನೆಲ್ಲ ದೂರಗೊಳಿಸಿ ಸಂತೋಷವನ್ನುಂಟು ಮಾಡಿರುವುದರಿಂದ ಇದು ಸಂತೋಷದ ಸಂಕೇತವಾಗಿರುವುದರಿಂದ ಇದನ್ನು ಕುರುಬರ ಮೇಣದಬತ್ತಿ Shepherd's Candle ಎಂದು ಕರೆಯುತ್ತಾರೆ.4.ನಾಲ್ಕನೆಯ ಮೇಣದ ಬತ್ತಿ : ನಾಲ್ಕನೆಯ ಮೇಣದ ಬತ್ತಿಯ ಬಣ್ಣ ನೇರಳೆ.ಇದು ಕ್ರಿಸ್ಟನ ಪ್ರೀತಿಯನ್ನು ಸೂಚಿಸುವಂತದ್ದಾಗಿದ್ದು. ಕ್ರಿಸ್ತನು ನೀಡುವ ಸಮಾಧಾನದ ಸಂಕೇತವಾಗಿರುವುದರಿಂದ ಇದನ್ನು ಸಮಾಧಾನದ ಮೇಣದಬತ್ತಿ Candle of Peace ಎಂದು ಕರೆಯುವರು.ಲೂಕ: 2:14 " ಮೇಲಣ ಲೋಕದಲ್ಲಿ ದೇವರಿಗೆ ಮಹಿಮೆ. ಭೂಲೋಕದಲ್ಲಿ ಮನುಷ್ಯರೊಳಗೆ ಸಮಾಧಾನ. ದೇವರು ಅವರಿಗೆ ಒಲಿಯುತ್ತಾನೆ ಎಂದು ದೇವರನ್ನು ಕೊಂಡಾಡುತ್ತಾ ಹೇಳಿದರು. ಎಂದು ತಿಳಿಸುವುದರಿಂದ ಇದನ್ನು "ದೂತರ ಮೇಣದ ಬತ್ತಿ" Angel"s Candle ಎಂದು ಕರೆಯುತ್ತಾರೆ.
5.ಐದನೆಯ ಮೇಣದ ಬತ್ತಿ : ನಾಲ್ಕು ಮೂಲೆಗಳ ಮೇಣದ ಬತ್ತಿ ಒಳಗೆ ಮಧ್ಯದಲ್ಲಿ ಹೆಚ್ಚುವ ಮೇಣದ ಬತ್ತಿಯ ಬಿಳಿಯ ಬಣ್ಣ ಉಳ್ಳದ್ದಾಗಿರುತ್ತದೆ. ಇದನ್ನು ಪರಿಶುದ್ಧತೆಯ ಮೇಣದ ಬತ್ತಿ Candle of Purity ಎಂದು ಕರೆಯುವರು. ಕ್ರೈಸ್ತನು ಪರಿಶುದ್ಧನು.1ಪೇತ್ರ 1:16 ರಲ್ಲಿ " ನಾನು ಪರಿಶುದ್ಧನಾಗಿರುವುದರಿಂದ ನೀವು ಪರಿಶುದ್ಧರಾಗಿರಬೇಕು ಎನ್ನುವ ವಾಕ್ಯ ಪರಿಶುದ್ಧ ಜೀವಿತದ ಮಹತ್ವವನ್ನು ತಿಳಿಯಪಡಿಸುತ್ತದೆ. ಯೇಸು ಕ್ರಿಸ್ತನು ಈ ಲೋಕಕ್ಕೆ ಬಂದಿರುವ ಉದ್ದೇಶ ನಮ್ಮೆಲ್ಲರನ್ನು ಅಂಧಕಾರದ ಜೀವಿತದಿಂದ ಬಿಡಿಸಿ. ತನ್ನ ಪರಿಶುದ್ಧ ರಕ್ತವನ್ನು ಕಲ್ವಾರಿ ಶಿಲುಬೆಯ ಮೇಲೆ ಸುರಿಸಿದ ಕ್ರಿಸ್ತನು ನಮ್ಮನ್ನು ಪರಿಶುದ್ಧರಾಗಿ ಮಾಡಿದ್ದಾನೆ. 1ಯೋಹಾನ 1:9 ರಲ್ಲಿ " ನಮ್ಮ ಪಾಪಗಳನ್ನು ಒಪ್ಪಿಕೊಂಡು ಅರಿಕೆ ಮಾಡಿದರೆ ಆತನು ನಂಬಿಗಸ್ತನು. ನೀತಿವಂತನು ಆಗಿರುವುದರಿಂದ ನಮ್ಮ ಪಾಪಗಳನ್ನು ಕ್ಷಮಿಸಿ ಸಕಲ ಅನೀತಿಯನ್ನು ಪರಿಹರಿಸಿ ನಮ್ಮನ್ನು ಶುದ್ಧ ಮಾಡುವನು" ಕ್ರಿಸ್ತ ಜಯಂತಿಯ ದಿನದಂದು ಲೋಕ ರಕ್ಷಕನಾದ ಯೇಸು ಕ್ರಿಸ್ತನನ್ನು ಶ್ರದ್ಧೆಭಕ್ತಿಯಿಂದ ಆರಾಧಿಸುವುದರಿಂದ ಇದನ್ನು ಯೇಸುಕ್ರಿಸ್ತನ ಮೇಣದ ಬತ್ತಿ Christ's Candle ಎಂದು ಕರೆಯುವರು.
ಕ್ರಿಸ್ತ ಜಯಂತಿಯ ಆಗಮನದ ನಿರೀಕ್ಷೆಯಲ್ಲಿದ್ದು ಲೋಕ ರಕ್ಷಕನಾದ ಯೇಸುಕ್ರಿಸ್ತನು ನಮ್ಮೆಲ್ಲರ ಜೀವಿತದಲ್ಲಿ ನಿರೀಕ್ಷೆ.ನಂಬಿಕೆ. ಸಂತೋಷ.ಸಮಾಧಾನ. ಪರಿಶುದ್ಧತೆಯ ಜೀವಿತವನ್ನು ಜೀವಿಸುವಂತೆ ನಡೆಸಲೆಂದು ಪ್ರಾರ್ಥಿಸುತ್ತೇನೆ.ದೇವರು ನಿಮ್ಮೆಲ್ಲರನ್ನು ಆಶೀರ್ವದಿಸಲಿ.ಆಮೆನ್
ರೆವರೆಂಡ್ ದೇವದಾಾನ್ ಆನಂದಪ್ಪ
ದಿ ಯುನೈಟೆಡ್ ಮೇಥೂಡಿಸ್ಟ್ ಚರ್ಚ್
ಹಟ್ಟಿ. ಮೊ.9448705997


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ