ವಿದ್ಯುತ್ ಗುತ್ತಿಗೆದಾರರ ಸಂಘದ ನೂತನ ಅಧ್ಯಕ್ಷರಾಗಿ : ಪ್ರಶಾಂತ್ ಮುರಾರಿ ಆಯ್ಕೆ
ಮಸ್ಕಿ : ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರ ಸಂಘ ( ರಿ) ತಾಲ್ಲೂಕು ಸಮಿತಿ ಮಸ್ಕಿ ಯ ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ನೇಮಕ ಮಾಡಲಾಯಿತು.
ಪಟ್ಟಣದ ಸರ್ಕ್ಯೂಟ್ ಹೌಸ್ ನಲ್ಲಿ ಜಿಲ್ಲಾ ಅಧ್ಯಕ್ಷ ಅಲ್ಲಾಭಕ್ಷ ರವರ ಅಧ್ಯಕ್ಷತೆಯಲ್ಲಿ ಮಸ್ಕಿ ತಾಲ್ಲೂಕು ಸರ್ವ ಸದಸ್ಯರುಗಳ ಒಮ್ಮತದ ಮೇರೆಗೆ ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಅಧ್ಯಕ್ಷ ರಾಗಿ ಪ್ರಶಾಂತ್ ಮುರಾರಿ,ಉಪಾಧ್ಯಕ್ಷ ರಾಗಿ ಪ್ರಕಾಶ್ ಪಾಟೀಲ್, ಪ್ರಧಾನ ಕಾರ್ಯದರ್ಶಿ ಯಾಗಿ ವಿಜಯ ಕುಮಾರ ,ಸಂಘಟನೆ ಕಾರ್ಯದರ್ಶಿ ಯಾಗಿ ನರಸಪ್ಪ ಹಾಗೂ ಸಹ ಕಾರ್ಯದರ್ಶಿ ಯಾಗಿ ತಿರುಕನ ಗೌಡ,ಖಜಾಂಚಿ ಯಾಗಿ ರವಿಕುಮಾರ್ ಬಡಿಗೇರ ರನ್ನು ನೇಮಕ ಮಾಡಲಾಯಿತು.
ಈ ವೇಳೆ, ಜಿಲ್ಲಾಧ್ಯಕ್ಷ ಹಾಗೂ ರಾಜ್ಯ ಸಹ ಕಾರ್ಯದರ್ಶಿ ಗಳಾದ ಅನ್ವರ್ ಮಿಯಾ ಸೇರಿದಂತೆ ಮಸ್ಕಿ ತಾಲ್ಲೂಕಿನ ಪದಾಧಿಕಾರಿಗಳು ಇದ್ದರು.


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ