*ಪಂಚಮಸಾಲಿ ಸಮುದಾಯದಿಂದ ಸರ್ಕಾರದ ವಿರುದ್ಧ ಆಕ್ರೋಶ*

ಕೊಟ್ಟೂರು: ಸರ್ಕಾರದ ವಿರುದ್ಧ ತಾಲೂಕು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ವತಿಯಿಂದ ಪ್ರತಿಭಟನೆ ನಡೆಯಿತು.

ಬೆಳಗಾವಿಯಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಯವರ ಮೇಲೆ ನಡೆದ ಲಾಠಿ ಚಾರ್ಜ್, ದೌರ್ಜನ್ಯ ಖಂಡಿಸಿ ಸರ್ಕಾರದ ವಿರುದ್ಧ ಗುರುವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆ ನಂತರ ಮಾತನಾಡಿದರು.

ಸ್ವಾಮೀಜಿ ನೇತೃತ್ವದಲ್ಲಿ ನೆಡೆದ ಮೀಸಲಾತಿ ಕೇಳಿದರೆ ಅವ ರನ್ನೂ ಸೇರಿ ಎಲ್ಲರ ಮೇಲೆ ದೌರ್ಜನ್ಯ ನಡೆಸಿರುವ ಮುಖ್ಯಮಂತ್ರಿ, ಗೃಹ ಸಚಿವರು ನಮ್ಮ ಸಮುದಾಯದವರಿಗೆ ಕ್ಷಮೆ ಕೋರಬೇಕು. ಮೀಸಲಾತಿ ಪಡೆಯುವುದಕ್ಕೆ ಹೋರಾಟದಿಂದ ವಿಮುಖರಾಗುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ನಮ್ಮ ಮೈಮುಟ್ಟಿರುವ ಸಿದ್ದರಾಮಯ್ಯ ನವರಿಗೆ ಜನ್ಮ ಇರುವರೆಗೂ ಪಾಠ ಕಲಿಸು ತ್ತೇವೆ. ಅವರಿಗೆ ತಾಕತ್ತು ಇದ್ದರೆ ಉ.ಕ.ಭಾಗದಲ್ಲಿ ತಮ್ಮ ಪಕ್ಷದ ಶಾಸಕರನ್ನು ಗೆಲ್ಲಿಸಿಕೊಂಡು ಬರಲಿ ಎಂದು ಸವಾಲು ಹಾಕಿದರು. ಪಂಚಮಸಾಲಿ ಸಮಾಜದ ತಾಲೂಕು ಅಧ್ಯಕ್ಷ ಜಾಪಿ ಚಂದ್ರಪ್ಪ ಮುಖಂಡ ಎಸ್.ತಿಂದಪ್ಪ ಮಾತನಾಡಿ, ಶ್ರೀ ಬಸವಜಯ ನೃತ್ಯುಂಜಯ

ಪಂಚಮಸಾಲಿ ಸಮಾಜದ ತಾಲೂಕು ಕಾರ್ಯದರ್ಶಿ ಎಸ್.ಅಶೋಕ್, ಮುಖಂಡರಾದ ಎಂ.ಶಿವಣ್ಣ ಅಂಗಡಿ ಪಂಪಾಪತಿ, ಪಿ. ಭರಮನಗೌಡ ಪಾಟೀಲ್, ಕರಡಿ ಕೊಟ್ರೇಶ್,ಹರಾಳು ರಾಜಣ್ಣ,ಕೆ.ಎಸ್.ವೀಣಾ ವಿವೇಕಾನಂದಗೌಡ ಸೇರಿ ಇತರರು ಮಾತನಾಡಿದರು.

ಬಿ.ಪಂಪಾಪತಿ, ಅಶೋಕ, ಕೆ.ವಿವೇಕಾ ನಂದ ಎನ್. ಗೋಪಿ, ರಾಜಣ್ಣ ಕೆ.ಬಸವರಾಜ, ಮಲ್ಲಿಕಾರ್ಜುನ, ಎ.ಮಹೇಶ, ಚಿರಿಬಿ ಪ್ರಕಾಶ , ಬೆಳಗಾವಿಯಲ್ಲಿನ ಸರ್ಕಾರದ ನಡೆ ಖಂಡಿಸಿ ತಹಶೀಲ್ದಾರ ಜಿ.ಕೆ.ಅಮರೇಶ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಈಶ್ವರಪ್ಪ  ಮತ್ತಿತರರು ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪಡಿತರ ವಿತರಣೆಯಲ್ಲಿ ಸರ್ವರ್ ದೋಷ ಕಾದುಕುಳಿತ ಬಡ ಕುಟುಂಬಗಳು

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಪಿಡಿಓ,ಕಾರ್ಯದರ್ಶಿ

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*