ಮೋಹ,ಪ್ರೇಮಕ್ಕೆ ಬಲಿಯಾಗದೆ,ಉತ್ತಮ ಶಿಕ್ಷಣ,ಪರಿಪೂರ್ಣ ವ್ಯಕ್ತಿತ್ವ ರೂಪಿಸಿಕೊಳ್ಳಿ : ನಾಗರಾಜ ಮಸ್ಕಿ
*ಮಸ್ಕಿ* ಪಟ್ಟಣದ ಸನ್ ರೈಸ್ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಬಿಎ,ಬಿಕಾಮ್ ವಿದ್ಯಾರ್ಥಿಗಳಿಗೆ ಸ್ವಾಗತ ಮತ್ತು ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಕಾರ್ಯಕ್ರಮವನ್ನು ಶ್ರೀ ಷಡಕ್ಷರಿ ಬ್ರಹ್ಮ ವರರುದ್ರಮುನಿ ಶಿವಚಾರ್ಯ ಮಹಾಸ್ವಾಮಿಗಳು ಗಚ್ಚಿನಮಠ ರವರು ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳು ಜೀವನದಲ್ಲಿ ಯಾವಾಗಲೂ ಸತ್ಯವನ್ನು ಪಾಲಿಸಬೇಕು, ನಿರಂತರ ಓದು,ಸತತ ಪ್ರಯತ್ನ ಯಶಸ್ಸು ತರುತ್ತದೆ ಎಂದು ಹೇಳಿದರು.
ನಂತರ ಮಾತನಾಡಿದ ಖ್ಯಾತ ನ್ಯಾಯವಾದಿಗಳಾದ ನಾಗರಾಜ ಮಸ್ಕಿ ವಕೀಲರು ವಿದ್ಯಾರ್ಥಿಗಳು ಓದಿನ ಸಮಯದಲ್ಲಿ ಗುರಿ ಉದ್ದೇಶವನ್ನು ಹೊಂದಿರಬೇಕು , ಯಾವುದೇ ಮೋಹ,ಪ್ರೇಮಕ್ಕೆ ಬಲಿಯಾಗದೆ ಉತ್ತಮ ಶಿಕ್ಷಣ ಪಡೆದು ಸಮಾಜದಲ್ಲಿ ಉನ್ನತವಾದ ಸ್ಥಾನ ಮುಟ್ಟಬೇಕು ಎಂದು ಹೇಳಿದರು. ಅಧ್ಯಕ್ಷತೆಯನ್ನು ಶ್ರೀ ರುದ್ರಯ್ಯಸ್ವಾಮಿ ಬಳಗಾನೂರ ಅಧ್ಯಕ್ಷರು ಸನ್ ರೈಸ್ ಮಹಿಳಾ ಕಾಲೇಜ್ ಮಸ್ಕಿ ನಿರ್ವಹಿಸಿದ್ದರು.ವಿಶೇಷ ಉಪನ್ಯಾಸಕರಾಗಿ ಶ್ರೀ ಮತಿ ಪ್ರೇಮ ರಾಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕರು ಕವಿತಾಳ ನೀಡಿದರು .
ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾನಪ್ಪ ಪ್ರಾಚಾರ್ಯರು, ಪಂಪಾಪತಿ ಗುತ್ತೆದಾರ ಬಳಗಾನೂರ,ರಾಮಣ್ಣ ನಾಯಕ, ವಿರೇಶ ಹೂಗಾರ ಪ್ರಾಚಾರ್ಯರು, ಸಿದ್ದಲಿಂಗಯ್ಯಸ್ವಾಮಿ ಮಸ್ಕಿ,ಯಮನಪ್ಪ ಬೋವಿ, ತಿರುಪತಿ ಜಂಗಮರಹಳ್ಳಿ,
ಸಂಸ್ಥೆಯ ಕಾರ್ಯದರ್ಶಿ ಸುನೀಲ್ ಸ್ವಾಮಿ ಆರ್. ಬಿ, ಸನ್ ರೈಸ್ ಡಿಗ್ರಿ ಕಾಲೇಜ್ ಪ್ರಾಂಶುಪಾಲರಾದ ಸಿದ್ದಪ್ಪ ಸಳ್ಳೆದ ಉದ್ಭಾಳ ಇದ್ದರು.
ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಗೌರವಿಸಲಾಯಿತು. ನಂತರ ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಇಡಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ, ಶಿಸ್ತಿನಿಂದ ಶಾಂತಿಯುತವಾಗಿ ಉಪನ್ಯಾಸಕ ವೃಂದದವರು ನಡೆಸಿಕೊಟ್ಟರು.



ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ