ಸಹ ಶಿಕ್ಷಕಿ ಶ್ರೀಮತಿ ಸುರೇಖಾ ರಾಜಕುಮಾರಿವರಿಂದ ಎಪ್ಪತ್ತು ಮಕ್ಕಳಿಗೆ ಬಿಸಿ ಊಟ ಮಾಡಲು ತಟ್ಟೆ ಹಾಗೂ ಲೋಟ ವಿತರಣೆ.
ಹಟ್ಟಿ:ಹಟ್ಟಿ ಚಿನ್ನದ ಗಣಿ ಸಮೀಪದ ಹಿರೇನಗನೂರು ಸರಕಾರಿ ಪ್ರೌಢಶಾಲೆಯ ಇಂಗ್ಲೀಷ್ ಶಿಕ್ಷಕಿಯರಾದ ಶ್ರೀಮತಿ ಸುರೇಖಾ ರಾಜಕುಮಾರ್ ರವರು ತಮ್ಮ ತಂದೆಯವರಾದ ದಿವಂಗತ ಸಂತಾನಕೃಷ್ಣನ್ ನಿವೃತ್ತ ಮುಖ್ಯಗುರುಗಳು ಸಾ.ಹಟ್ಟಿ ಇವರ ಸ್ಮರಣಾರ್ಥವಾಗಿ. ಸರಕಾರಿ ಪ್ರೌಢಶಾಲೆಯ 70 ಮಕ್ಕಳಿಗೆ ಮದ್ಯಾಹ್ನ ಬಿಸಿಯೂಟ ಮಾಡಲು ತಟ್ಟೆ ಮತ್ತು ಲೋಟಗಳನ್ನು ವಿತರಣೆ ಮಾಡಿದರು.
11 ಸಾವಿರ ಮೌಲ್ಯದ ತಟ್ಟೆ ಮತ್ತು ಲೋಟಗಳನ್ನು ನೀಡಿರುವ ಸಹ ಶಿಕ್ಷಕಿ ಶ್ರೀಮತಿ ಸುರೇಖಾ ರಾಜಕುಮಾರ್ ಇವರಿಗೆ ಶಾಲೆಯ ಮುಖ್ಯಗುರುಗಳು ಹಾಗೂ ಸಹಶಿಕ್ಷಕ ವರ್ಗ ಎಸ್ ಡಿ ಎಂ ಸಿ ಮತ್ತು ಊರಿನ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದರು.
ತಟ್ಟೆ ಲೋಟ ವಿತರಣೆ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಗುರುಗಳಾದ ಶ್ರೀಮತಿ ವಿಜಯಲಕ್ಷ್ಮಿ ಹಿರೇಮಠ.
ಶಿಕ್ಷಕರಾದ ರವೀಂದ್ರಸ್ವಾಮಿ. ಮುಸ್ತಾಖ್ ಅಹ್ಮದ್. ನಾಗರಾಜ ಸಶಿ.ಪವಿತ್ರಾ ಅ.ಶಿ. ಹನುಮಂತಿ ಅ.ಶಿ ಚಾಂದಪಾಶಾ ಅ.ಶಿ ಉಪಸ್ಥಿತರಿದ್ದರು.


ಧನ್ಯವಾದಗಳು ಮೇಡಂ ಇನ್ನೂಬ್ಬರಿ ಮಾದರಿಯಾಗುವ ಈ ನಿಮ್ಮಸಹಾಯ ಮರೆಯಲಾಗದು. ಬಸವರಾಜಯ್ಯ ಸ್ವಾಮಿ ಹಿರೇನಗನೂರ
ಪ್ರತ್ಯುತ್ತರಅಳಿಸಿ