ಬಾಂಗ್ಲಾ ದೇಶದಲ್ಲಿನ ಹಿಂದೂಗಳ ಮೇಲೆ ದೌರ್ಜನ್ಯಕ್ಕೆ ಖಂಡಿಸಿ ಮಸ್ಕಿ ಬಿಜೆಪಿ ಪಕ್ಷದ ಯುವ ಮೋರ್ಚಾ ವತಿಯಿಂದ ಬೃಹತ್ ಪಂಜಿನ ಮೆರವಣಿಗೆ

  

ಮಸ್ಕಿ : ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ಹಲ್ಲೆ, ದೌರ್ಜನ್ಯ, ಹಿಂದೂ ವಿರೋಧಿ ನೀತಿ ಖಂಡಿಸಿ ಮಸ್ಕಿ ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ಹಲ್ಲೆ, ದೌರ್ಜನ್ಯ, ಹಿಂದೂ ವಿರೋಧಿ ನೀತಿ ಖಂಡಿಸಿ ಮಸ್ಕಿ ಭಾರತೀಯ ಜನತಾ ಪಕ್ಷದ ಯುವ ಮೋರ್ಚಾ ವತಿಯಿಂದ ಪಟ್ಟಣದಲ್ಲಿ ಬೃಹತ್ ಪಂಜಿನ ಮೆರವಣಿಗೆ ನಡೆಯಿತು.

ಈ ಸಂದರ್ಭದಲ್ಲಿ,ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ ರವರು ಮಾತನಾಡಿ,ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ಹಿಂಸೆ, ದೌರ್ಜನ್ಯ ಖಂಡನೀಯ. 

ಹಿಂದುಗಳ ಮೇಲೆ ಹಲ್ಲೆ ನಡೆಯುತ್ತಿರುವ ಆಕ್ರಮಣದ ವಿರುದ್ದ ಹೋರಾಟ ಮಾಡುವ ಅನಿವಾರ್ಯ ಸ್ಥಿತಿಯಲ್ಲಿದ್ದೇವೆ. ಬಾಂಗ್ಲಾ ಉದಯಕ್ಕೆ ಕಾರಣವಾದ ಭಾರತದ ಜನರು ಹಿಂದುಗಳ ರಕ್ಷಣೆ ಮಾಡಿ ಎನ್ನುವ ಪರಿಸ್ಥಿತಿಯಲ್ಲಿದ್ದೇವೆ ಶಾಂತಿ, ಸೌಹಾರ್ದತೆ ನೆಲೆಸಲು ವಿಶ್ವಸಂಸ್ಥೆ ಮಧ್ಯ ಪ್ರವೇಶ ಮಾಡಬೇಕು ಎಂದರು.

ಅದೇ ರೀತಿ ಶರಣಬಸವ ಸೊಪ್ಪಿಮಠ ರವರು ಮಾತನಾಡಿ,ಬಾಂಗ್ಲಾದೇಶ ಉಗಮದ ಸಮಯದಲ್ಲಿ ಇಸ್ಕಾನ್ ಸಂಸ್ಥೆ ನೀಡಿದ ಸಹಾಯವನ್ನು ಇಂದು ಮರೆತಿದ್ದಾರೆ. ಯಾವುದೋ ಇಸ್ರೇಲ್, ಇರಾಕ್‌ನಲ್ಲಿ ಯುದ್ಧ ಆದಾಗ ಮರುಗುವ ನಾವು, ನಮ್ಮ ಹಿಂದುಗಳು ಏಕೆ ನಿತ್ರಾಣರಾಗಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಮಸ್ಕಿ ಯುವ ಮೋರ್ಚಾ ಅಧ್ಯಕ್ಷ ಶರಣೆಗೌಡ ತಿಡಿಗೊಳ,ಬಿ.ಎಚ್.ದಿವಟರ್,ಪ್ರಸನ್ನ ಪಾಟೀಲ, ಬಿಜೆಪಿ ಪಕ್ಷದ ಮಂಡಳ ಪ್ರಧಾನ ಕಾರ್ಯದರ್ಶಿ ರಮೇಶ ಉದ್ಬಾಳ,ಪುರಸಭೆ ಸದಸ್ಯರಾದ ಸುರೇಶ್ ಹರಸೂರು,ಸೂಗಣ್ಣ ಬಾಳೆಕಾಯಿ,ಕೇಶವ, ಯುವ ಮೋರ್ಚಾ ಉಪಾಧ್ಯಕ್ಷ ಬಸವರಾಜ ದಿನಸಮುದ್ರ,ಮೌನೇಶ್ ನಾಯಕ,ಶಿವರಾಜ ಬುಕ್ಕಣ್ಣ,ರಮೇಶ್ ಗುಡಿಸಲಿ,ಕಾಳ್ಪಪ್ಪ ಕಣ್ಣೂರು,ಮೋರ್ಚಾ ದ ಪ್ರಧಾನ ಕಾರ್ಯದರ್ಶಿಮಲ್ಲಿಕಾರ್ಜುನ ಗೋನಾಳ,ಶರಣಗೌಡ,ಸೇರಿದಂತೆ ಬಿಜೆಪಿ ಯುವ ಮೋರ್ಚಾದ ಪಕ್ಷದ ಪ್ರಮುಖ ಮುಖಂಡರು ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*