ಮನೆ ಇಲ್ಲದವರಿಗೆ ಮನೆ ಎಂಬ ಯೋಜನೆಯಡಿ ಶಂಕು ಸ್ಥಾಪನೆ
ಮಸ್ಕಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧ್ಯಕ್ಷರಾದ ಪರಮಪೂಜ್ಯ ಡಾ. ವೀರೇಂದ್ರ ಹೆಗ್ಗಡೆ ಮತ್ತು ಮಾತೃಶ್ರಿ ಹೇಮಾವತಿ ಅವರ ಆಶಯದಂತೆ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು ನಿರ್ಗತಿಕರಿಗೆ 1000 ರೂಪಾಯಿಯನ್ನು ಸಹಾಯ ಧಾನವಾಗಿ ಸಂಸ್ಥೆಯ ವತಿಯಿಂದ ನೀಡಲಾಗುತ್ತಿದೆ ಎಂದು ಶಂಕು ಸ್ಥಾಪನೆ ಮಾಡಲಾಯಿತು.
ಯೋಜನೆಯ ಕುರಿತು ಮಾತನಾಡಿ ಮನೆ ಇಲ್ಲದ ಫಲಾನುಭವಿಗಳಿಗೆ ಇದುವರೆಗೂ ಸಂಸ್ಥೆಯ ಯೋಜನೆಯಲ್ಲಿ 455 ಮನೆ ನಿರ್ಮಾಣ ಮಾಡಲಾಗಿದ್ದು 4,73,01,758 ಕೋಟಿ ರೂ ಮೊತ್ತ ಮಂಜೂರಾಗಿರುತ್ತದೆ ಇದುವರೆಗೆ ಸಂಸ್ಥೆಯ ಯೋಜನೆ ಪಡೆದ 455 ಕುಟುಂಬವು ಶ್ರೀ ಧರ್ಮಸ್ಥಳ ಮಂಜುನಾಥ ಸಂಸ್ಥೆಗೆ ಧನ್ಯವಾದವನ್ನು ತಿಳಿಸಿದ್ದಾರೆ ಎಂದು ಮಸ್ಕಿ ತಾಲೂಕ ಶ್ರೀ ಧರ್ಮಸ್ಥಳ ಮಂಜುನಾಥ ಯೋಜನಾಧಿಕಾರಿಗಳಾದ ಶ್ರೀಮತಿ ಶಾಲಿನಿ.ಜಿ ತಿಳಿಸಿದರು.
ಪಟ್ಟಣದ ಮೂರನೇ ವಾರ್ಡಿನ ಫಲಾನುಭವಿ ಒಬ್ಬರಿಗೆ ಪ್ರಸ್ತುತ 2024 - 25 ನೇ ಸಾಲಿನಲ್ಲಿ ಸಂಸ್ಥೆಯ ಮಸ್ಕಿ ತಾಲೂಕಿನ ಮಾಶಾಸನ ಫಲಾನುಭವಿಯಾದ ಹುಸೇನ್ ಬೀ ಅವರಿಗೆ ಯೋಜನೆಯಿಂದ ಹೊಸ ಮನೆ, ಶೌಚಾಲಯ ಮತ್ತು ಸ್ನಾನಗೃಹ ನಿರ್ಮಾಣ ಮಾಡಲು 1,13,700 ಲಕ್ಷ ಮೊತ್ತ ಮಂಜೂರಾತಿಯಾದ ಪ್ರಯುಕ್ತ ಶುಕ್ರವಾರ ಶಂಕು ಸ್ಥಾಪನೆ ಪೂಜೆ ಮಾಡುವ ಮೂಲಕ ಯಶಸ್ವಿಗೊಳಿಸಿದರು.
ಇದೇ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಶ್ರೀಮತಿ ಭಾಗ್ಯಮ್ಮ ,ಶಿವರೆಡ್ಡಿ, ಎಸ್ ಡಿಎಂಸಿ ಉರ್ದು ಶಾಲೆಯ ಅಧ್ಯಕ್ಷರಾದ ಶ್ರೀ ಶಬ್ಬೀರ್, ಒಕ್ಕೂಟ ದ ಅಧ್ಯಕ್ಷರಾದ ಶ್ರೀಮತಿ ನಾಗರತ್ನ,ಜ್ಞಾನ ವಿಕಾಸ ಸಮನ್ವಯಾಧಿಕಾರಿ ಶ್ರೀಮತಿ ಹೇಮಲತಾ, ಗಾಂಧಿನಗರ ವಲಯದ ಮೇಲ್ವಿಚಾರಕರಾದ ಹನುಮಜ್ಜ,ಸೇವಾಪ್ರತಿನಿಧಿ ಹಾಗೂ ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ