" ನವ ಜೋಡಿಗೆ ಉಜ್ಜಯನಿ ಶ್ರೀಗಳಿಂದ ಅಶಿರ್ವಚನ"

ಕೊಟ್ಟೂರು: ತಾಲೂಕಿನ ಉಜ್ಜಿನಿ ಗ್ರಾಮದ ಕ್ಷೇತ್ರನಾಥ ಜಗದ್ಗುರು ಮರುಳಸಿದ್ದೇಶ್ವರ ಸ್ವಾಮಿಯ ಲಕ್ಷ ದೀಪೋತ್ಸವ ಸದ್ಧರ್ಮಸಿಂಹಾಸನಾಧೀಶ್ವರ ಲಿಂ॥ ಮರುಳಸಿದ್ಧ ಶಿವಾಚಾರ್ಯ ಭಗವತ್ಪಾದರ 13ನೇ ವರ್ಷದ ಪುಣ್ಯ ಸಂಸ್ಮರಣೋತ್ಸವ ಕಾರ್ಯಕ್ರಮದ ಅಂಗವಾಗಿ ಶ್ರೀ ಪೀಠದ ಆವರಣದಲ್ಲಿ ತಮ್ಮ ಸಾನಿಧ್ಯದಲ್ಲಿ ನಡೆದ ಸಾಮೂಹಿಕ ಆರು ಜೋಡಿ ವಿವಾಹಗಳನ್ನು ನೆರವೇರಿಸಿ ಆಶಿರ್ವಚನ ನೀಡಿದರು.

ಮರುಳಸಿದ್ದೇಶ್ವರ ಸ್ವಾಮಿಯ ಕಾರ್ತಿಕೋತ್ಸವ, ಲಿಂ.ಮರುಳಸಿದ್ದರ ಪುಣ್ಯ ಸಂಸ್ಮರಣೋತ್ಸವ ಹಾಗೂ ವಿವಿದ ಮಠಾದೀಶರ ಸಮ್ಮುಖದಲ್ಲಿ ವಿವಾಹಿತರಾಗಿರುವ ತಾವುಗಳು ಪುಣ್ಯವಂತರು. ನೂತನ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವಜೋಡಿಗಳು ಕುಟುಂಬದ ಗುರುಹಿರಿಯರ ಮಾರ್ಗದರ್ಶನದಲ್ಲಿ ಜೀವನಸಾಗಿಸಬೇಕು. ಹೆಣ್ಣು ತವರುಮನೆಗೆ ಹಾಗೂ ಗಂಡನ ಮನೆಗೆ ಕೀರ್ತಿ ತರುವ ನಿಟ್ಟಿನಲ್ಲಿ ನಡೆದುಕೊಳ್ಳಬೇಕು. ಕುಟುಂಬದ ಸದಸ್ಯರನ್ನು ತೊರೆದು ಬಂದ ಹೆಣ್ಣನ್ನು ಗಂಡ ಸೇರಿದಂತೆ ಎಲ್ಲರೂ ತವರು ಮನೆಗಿಂತ ಹೆಚ್ಚಿನ ಪ್ರೀತಿ ನೀಡಿದಾಗ ಮನೆಯಲ್ಲಿ ಶಾಂತಿ ನೆಮ್ಮದಿ ಶಾಶ್ವತವಾಗಿ ನೆಲೆಸಲಿದೆ ಎಂದು ಉಜ್ಜಿನಿ ಜಗದ್ಗುರು ಶ್ರೀ ಸಿದ್ದಲಿಂಗರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಆಶಿರ್ವಚನ ನೀಡಿ ನಿಮ್ಮ ಮೇಲೆ ಲಿಂಗೈಕ್ಯ ಜಗದ್ಗುರುಗಳ ಆಶಿರ್ವಾದ ಸದಾ ಇರಲಿದೆ ಎಂದು ಆಶೀರ್ವದಿಸಿದರು.

ಈ ದಿನ ಲಿಂಗೈಕ್ಯ ಜಗದ್ಗುರುಗಳ ಗದ್ದುಗೆ ಯಲ್ಲಿ ಅಭಿಷೇಕ ಸೇರಿದಂತೆ ವಿವಿಧ ದಾರ್ಮಿಕ ಪೂಜಾ ಕೈಂಕಾರ್ಯಗಳು, ಪಠಣ ಗಳು ಶಾಸ್ರೋಕ್ತವಾಗಿ ನೆರವೇರಿದವು. 

ಈ ಸಂದರ್ಭ ದಲ್ಲಿ ಕಲಕೇರಿ ಶ್ರೀಗಳು, ನಾವದಗಿ ಶ್ರೀ ಗಳು, ದೇವರ ಹಿಪ್ಪರಗಿ ಶ್ರೀಗಳು, ಕುರವತ್ತಿ ಶ್ರೀಗಳು, ದಿಂಡದಹಳ್ಳಿ ಶ್ರೀಗಳು, ಶಿವಾಚಾರ್ಯರರು, ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗ, ಮಠದ ಸಿಬ್ಬಂದಿ ವರ್ಗದವರು ಸಾಮೂಹಿಕ ವಿವಾಹದಲ್ಲಿ ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*