ಮಸ್ಕಿ : ಕ್ರಿಸಮಸ್ ಹಬ್ಬ ಆಚರಣೆ
ಮಸ್ಕಿ : ಕ್ರಿಸಮಸ್ ಹಬ್ಬದ ಸಂಭ್ರಮ ಮನೆ ಮಾಡಿದೆ.ಕಣ್ಣು ಕುಕ್ಕುವ ಬಗೆಯಲ್ಲಿ ಅಲಂಕಾರಗೊಂಡ ವಿದ್ಯುತ್ ದೀಪಗಳು ರೋಮಾಂಚನ ವಾಗಿತ್ತು.ಮಸ್ಕಿ ಪಟ್ಟಣ ಸೇರಿ ತಾಲೂಕಿನ ವಿವಿದೆಡೆ ಕ್ರಿಸಮಸ್ ಹಬ್ಬದ ಸಂಭ್ರಮ.
ಕ್ರಿಸ್ಮಸ್ ಹಬ್ಬ ಹಾಗೂ ಹೊಸ ವರ್ಷದ ಪ್ರಯುಕ್ತ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಹಾಗೂ ಕಟ್ಟಡಗಳ ಮೇಲೆ ಬಣ್ಣ ಬಣ್ಣದ ವಿದ್ಯುತ್ ದೀಪಗಳು ಮಿರಿ ಮಿರಿ ಮಿಂಚುವಂತೆ ಕಂಗೊಳಿಸುತ್ತಿವೆ.
ಮಸ್ಕಿ ಸಂತ ಜಾನರ ಚರ್ಚ್ ನಲ್ಲಿ ಫಾದರ್ ಚಾರ್ಲ್ಸ ಸುಂದರ ರಾಜ ಧರ್ಮ ಗುರುಗಳ ನೇತೃತ್ವದಲ್ಲಿ ಕ್ರಿಸ್ಮಸ್ ಹಬ್ಬದ ವಿಶೇಷ ಬಲಿಪೂಜೆಯು ವಿವಿಧ ಹಳ್ಳಿಗಳಿಂದ ಧರ್ಮ ಕೇಂದ್ರದ ಭಕ್ತಾದಿಗಳ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಸಿಹಿ ಹಂಚುವ ಮೂಲಕ ಸಡಗರ ಸಂಭ್ರಮದಿಂದ ಕ್ರಿಸ್ಮಸ್ ಆಚರಣೆ ಮಾಡಲಾಯಿತು.
ಯೇಸು ಕ್ರಿಸ್ತನ ಜನ್ಮ ಸಂದೇಶ ಸಾರುವ ಆಕರ್ಷಕ ಗೋದಲಿಗಳು ಚರ್ಚುಗಳ ಗಮನ ಸೆಳೆದವು.ಹಬ್ಬದ ಪ್ರಯುಕ್ತ ವಾರದ ಮುಂಚಿತವಾಗಿ ಕ್ಯಾರೇಲ್ಸ್ ಹಾಗೂ ವಿಶೇಷ ಕಾರ್ಯಕ್ರಮಗಳು ಜರುಗಿದವು. ಪೂಜಾ ಕಾರ್ಯಕ್ರಮದ ನಂತರ ಸಂತೋಷದಿ ಭೋಜನ ಸವಿದರು. ನಂತರ ಯೇಸು ಕ್ರಿಸ್ತನ ಜನ್ಮ ಸ್ಥಳವಾದ ಗೋದಲಿಯ ಮುಂಭಾಗ ಭಕ್ತಾದಿಗಳು ಫೋಟೋ ಕ್ಲಿಕ್ಕಿಸುವ ಮೂಲಕ ಗಮನ ಸೆಳೆದರು.

ಸೂಪರ್
ಪ್ರತ್ಯುತ್ತರಅಳಿಸಿ