ರಾಜ್ಯಮಟ್ಟದ ಕಾಯಕರತ್ನ ಪ್ರಶಸ್ತಿಗೆ ಭಾಜನರಾದ ಮೌನುದ್ದೀನ್ ಬೂದಿನಾಳ್.

 

ಹಟ್ಟಿ ಚಿನ್ನದ ಗಣಿ: ಸಾಹಿತ್ಯ ಪ್ರೇಮಿ,ಕವಿ ಮತ್ತು ಹಟ್ಟಿ ಚಿನ್ನದ ಗಣಿ ಪ್ರಾಮಾಣಿಕ ನೌಕರ ಮೌನುದ್ದೀನ್ ಬೂದಿಹಾಳ ಅವರಿಗೆ ರಾಜ್ಯ ಮಟ್ಟದ ಕಾಯಕ ರತ್ನ ಪ್ರಶಸ್ತಿ ಆಯ್ಕೆ ಆಗಿದ್ದಾರೆ.ಅವರು ಸಾಹಿತ್ಯದಲ್ಲಿ ಮತ್ತು ಜನಪರ ಕೆಲಸಗಳಲ್ಲಿ ಆಸಕ್ತಿ ಹೊಂದಿದವರು.ಪರರ ಕಾಳಜಿ ಇರುವವರು.ಬಡ,ನಿರ್ಗತಿಕರನ್ನು ಕಂಡರೆ,ಪ್ರೀತಿಯಿಂದ ಕಾಣುವರು ಇಂತಹ ಎಲೆ ಮರಿ ಕಾಯಿಯಂತೆ ಕಾಯಕಯೋಗಿ ಎನಿಸಿರುವ. ಮೌನುದ್ದೀನ್ ಬೂದಿನಾಳ ಇವರಿಗೆ ರಾಜ್ಯಮಟ್ಟದ ಕಾಯಕರತ್ನ ಪ್ರಶಸ್ತಿ ಆಯ್ಕೆ ಆಗಿದ್ದಾರೆ. 

ಹಟ್ಟಿ ಚಿನ್ನದ ಗಣಿಯ ಸಮೀಪದ ಹಿರೇನಗನೂರು ಗ್ರಾಮದ ಮೌನುದ್ದೀನ್ ಬೂದಿನಾಳ್ ಇವರು ಶರಣು ವಿಶ್ವವಚನ ಫೌಂಡೇಶನ್ ಮೈಸೂರು ರಾಯಚೂರು ತಾಲುಕಾ ಗೌರವಾಧ್ಯಕ್ಷರು. ಇವರಿಗೆ.ಶರಣು ವಿಶ್ವವಚನ ಫೌಂಡೇಶನ್ ವತಿಯಿಂದ 2024ನೇ ಸಾಲಿನ ರಾಜ್ಯಮಟ್ಟದ ಕಾಯಕರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಂಸ್ಥಾಪಕರಾದ ಡಾ,ವಚನ ಕುಮಾರಸ್ವಾಮಿ ತಿಳಿಸಿದ್ದಾರೆ.

ಇದೇ ತಿಂಗಳ 28 ರಂದು ಬೆಳಗ್ಗೆ 10 ಗಂಟೆಗೆ ಮೈಸೂರಿನ ವಿಜಯನಗರದ ಕನ್ನಡ ಸಾಹಿತ್ಯಭವನದಲ್ಲಿ ಪೂಜ್ಯರು ಮತ್ತು ಗಣ್ಯರ ಸಮ್ಮುಖದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಮೌನುದ್ದೀನ್ ಅವರು.ಸ್ವೀಕರಿಸಲಿದ್ದಾರೆ.

ಮೌನುದ್ದೀನ ಅವರಿಗೆ ಕುಟುಂಬಸ್ಥರು ಹಾಗೂ ಸ್ನೇಹಿತರು ಅಭಿನಂದಿಸಿ,ಶುಭ ಹಾರೈಸಿದ್ದಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*