ಗ್ರಾ.ಪಂ ತೆರಿಗೆ ವಸೂಲಿ ಅಭಿಯಾನಕ್ಕೆ ತಾ.ಪಂ ಇಒ ಚಾಲನೆ

 

ಮಸ್ಕಿ : ತಾಲೂಕಿನ ಅಂಕುಶದೊಡ್ಡಿ, ಮಾರಲದಿನ್ನಿ, ಅಡವಿಬಾವಿ (ಮಸ್ಕಿ) ಗ್ರಾಮ ಪಂಚಾಯತಿಯಲ್ಲಿ ಗುರುವಾರ ಬೆಳಗ್ಗೆ 8 ಕ್ಕೆ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಅಮರೇಶ್‌ ಅವರು ತೆರಿಗೆ ವಸೂಲಾತಿ ಅಭಿಯಾನಕ್ಕೆ ಚಾಲನೆ ನೀಡಿದರು.

ತದ ನಂತರ ಮಾತನಾಡಿ, ಸ್ಥಳೀಯರು ತೆರಿಗೆ ಪಾವತಿಸಿದರೆ, ಮಾತ್ರ ಗ್ರಾಮ ಪಂಚಾಯತಿಗಳ ಸಿಬ್ಬಂದಿ ವೇತನ ಇನ್ನಿತರೆ ಆಡಳಿತಾತ್ಮಕ ವೆಚ್ಚಕ್ಕೆ ಅನುಕೂಲವಾಗಲಿದೆ. ಈ ಹಿನ್ನಲೆಯಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಆದೇಶದಂತೆ ಎರಡನೇ ಗುರುವಾರವಾದ ಇಂದು ತೆರಿಗೆ ವಸೂಲಾತಿ ಅಭಿಯಾನ ಜರುಗಿದೆ. ಸ್ಥಳೀಯರು ತಮ್ಮ ಸ್ವತ್ತುಗಳಿಗೆ ಸಂಬಂಧಿಸಿದಂತೆ ಗ್ರಾಪಂ ಕರ ವಸೂಲಿಗಾರರು ನಿಗದಿಪಡಿಸುವ ಮೊತ್ತವನ್ನು ಪಾವತಿಸಿ ಸಹಕರಿಸಬೇಕು ಎಂದರು. 

ಸಹಾಯಕ ನಿರ್ದೇಶಕರಾದ (ಪಂಚಾಯತ್‌ ರಾಜ್‌) ಸೋಮನಗೌಡ ಪಾಟೀಲ್‌ ಅವರ ನೇತೃತ್ವದಲ್ಲಿ ಹಾಲಾಪುರದಲ್ಲಿ ತೆರಿಗೆ ವಸೂಲಾತಿ ಅಭಿಯಾನ ಜರುಗಿತು. ಮಸ್ಕಿ ತಾಲೂಕಿನ 21 ಗ್ರಾಮ ಪಂಚಾಯತಿಗಳಲ್ಲಿ ಒಟ್ಟು 15 ಲಕ್ಷ ರೂ. ಹೆಚ್ಚು ತೆರಿಗೆ ಸಂಗ್ರಹವಾಗಿದೆ. ತಲೇಖಾನ್‌, ಮಟ್ಟೂರು, ಮೆದಕಿನಾಳ, ಸಂತೆಕಲ್ಲೂರು, ಗುಡದೂರು, ಬಪ್ಪೂರು ಗ್ರಾಪಂಗಳು ತೆರಿಗೆ ವಸೂಲಾತಿಯಲ್ಲಿ ಮುಂಚೂಣಿಯಲ್ಲಿದ್ದು, ರಾತ್ರಿ 8 ರವರೆಗೆ ತೆರಿಗೆ ವಸೂಲಾತಿ ಅಭಿಯಾನ ಜರುಗಿತು. 

ಈ ವೇಳೆ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಕರವಸೂಲಿಗಾರರು, ಸಿಬ್ಬಂದಿ ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಯಾಶೀಲರಾಗಲು ಕ್ರೀಡೆಗಳು ಸಹಕಾರಿ -ಕೆ ನೇಮಿರಾಜನಾಯ್ಕ

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಪಿಡಿಓ,ಕಾರ್ಯದರ್ಶಿ

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*