ಪೋಸ್ಟ್‌ಗಳು

ಮಾರ್ಚ್, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಕೊಟ್ಟೂರು ಪವಿತ್ರ ರಂಜಾನ್ ಹಬ್ಬ ಆಚರಣೆ

ಇಮೇಜ್
ಕೊಟ್ಟೂರು ಪವಿತ್ರ ರಂಜಾನ್ ಹಬ್ಬವನ್ನು ಪಟ್ಟಣದ ಮುಸ್ಲಿಂ ಭಾಂದವರು ಸೋಮವಾರ ಸಡಗರ ಸಂಭ್ರಮಗಳೊಂದಿಗೆ ಆಚರಿಸಿದರು, ಇಲ್ಲಿನ  ಪ್ರಮುಖ ಮಸೀದಿಗಳಲ್ಲಿ ಹಬ್ಬದ ನಿಮಿತ್ತವಾಗಿ ಮುಸ್ಲಿಂ ಆರಾಧ್ಯ ದೈವ ಅಲ್ಲಾಹುವಿನ ನಾಮಸ್ಮರಣೆ ಬೆಳೆಗ್ಗೆ ೯ ರಿಂದಲೇ ಮಾರ್ದನಿಸಿದವು.  ಪಟ್ಟಣದ ಬಿಲಾಲ್, ಉಸ್ಮಾನಿಯ, ಜಾಮೀಯ, ಮುಬಾರಕ್, ಇಲಾಹಿ,ತೌಹಿದ್ ಮಸೀದಿಗಳಿಂದ ಮುಸ್ಲಿಂ ಜನಾಂಗದವರು ನೂರಾರು ಸಂಖ್ಯೆಯಲ್ಲಿ ಜಮಾವಣೆ ಗೊಂಡು ಪಾದಯಾತ್ರೆಯ ಮೆರವಣಿಗೆ ಕೈಗೊಂಡರು. ನಂತರ ಇಲ್ಲಿನ ಹಗರಿಬೊಮ್ಮನಹಳ್ಳಿ ರಸ್ತೆಯಲ್ಲಿನ ಖಬರ್‌ಸ್ಥಾನದಲ್ಲಿ ಕೂಡಿಕೊಂಡು ಸಾಮೂಹಿಕ ಪ್ರಾರ್ಥನೆ ಕೈಗೊಂಡರು. ಧರ್ಮಗುರುಗಳಾದ ಖಾರಿ ಹಾಫೀಜ್ ಇಮ್ರಾನ್ ರವರು ನೆರೆದಿದ್ದ ಭಾಂದವರಿಗೆ ಧರ್ಮೊಪದೇಶ ನೀಡಿ ಪ್ರಾರ್ಥನೆಯನ್ನು ಭೋದಿಸಿದರು. ಇವರ ಅಜ್ಞಾನುಸಾರ ಜನಾಂಗದ ಭಾಂದವರು ರಾಗಬದ್ದವಾಗಿ ಅಲ್ಲಾಹುನನ್ನು ಸ್ಮರಿಸಿ ನಮಸ್ಕರಿಸಿದರು. ನಂತರ ಪರಸ್ಪರ ಒಬ್ಬರನ್ನು ಒಬ್ಬರು ಆಲಂಗಿಸಿಕೊಂಡು ಈದ್-ಮುಬರಕ್ ಹೇಳಿಕೊಂಡರು. ಈ ಸುಸಂಧರ್ಭದಲ್ಲಿ ಹಾಫೀಜ್ ಜಬಿ ಉಲ್ಲಾ, ಹಾಫೀಜ್ ಸಾಜೀದ್, ಮುಫ್ತಿ ಯಾಸೀನ್, ಹಾಫೀಜ್ ಚಾಂದ್ ಭಾಷಾ, ಅಯೂಬ್ ಖಾನ್, ನೂರುಲ್ಲಾ ಖಾನ್, ನಜೀರ್ ಸಾಬ್, ಬಾಷಾ ಸಾಬ್ ಇನ್ನು ಮಸೀದಿಯ ಪ್ರಮುಖ ಮುಖಂಡರು ಸೇರಿದ್ದರು ಹಾಗೂ ಪೊಲೀಸ್ ಸಿಬ್ಬಂದಿಗಳಿಗೆ ಸ್ವಾಗತ ಕೋರಿ ಧನ್ಯವಾದಗಳು ತಿಳಿಸಿದರು.

ಕೊಟ್ರೇಶ್ ಚಿಮ್ಮನಹಳ್ಳಿ : ಮುಖ್ಯಮಂತ್ರಿ ಪದಕ ಪ್ರದಾನ ಪ್ರಶಸ್ತಿಗೆ ಆಯ್ಕೆ

ಇಮೇಜ್
ಕೊಟ್ಟೂರು : ತಾಲೂಕಿನ  ಬೋರನಹಳ್ಳಿ ಗ್ರಾಮದ ಪೊಲೀಸ್ ಹೆಡ್ ಕಾನ್ ಸ್ಟೇಬಲ್ ಕೊಟ್ರೇಶ್ ಚಿಮ್ಮನಹಳ್ಳಿ ಅವರಿಗೆ 2024 ನೇ ಸಾಲಿನ ಮುಖ್ಯಮಂತ್ರಿ ಪದಕ ಪ್ರದಾನ ಮಾಡಲು 02.04.2025 ಆರಕ್ಷಕ ಮಹಾ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ. ಕೊಟ್ರೇಶ್ ಅವರು 2005 ರಿಂದ ಪೊಲೀಸ್ ಇಲಾಖೆಯಲ್ಲಿ   ಕಾರ್ಯ ಸುಮಾರು 20 ವರ್ಷಗಳಿಂದ   ನಿರ್ವಹಿಸುತ್ತಿದ್ದಾರೆ. ಇವರು ಅಪರಾಧ ವಿಭಾಗದಲ್ಲಿ ಅಪಾರ ಸೇವೆ ಸಲ್ಲಿಸಿ, ಮಾಡಿದ ಸಾಧನೆಗೆ ಸುಮಾರು 37 ನಗದು ಬಹುಮಾನ,  54 ಪ್ರಶಸ್ತಿ, 3 ಪ್ರಶಂಸೆ ಪತ್ರ, ರಾಜ್ಯ ಮಟ್ಟದ ಪ್ರಶಸ್ತಿ ನೀಡಿ  ಈಗಾಗಲೇ ಗೌರವಿಸಲಾಗಿದೆ. ಪ್ರಸ್ತುತ ಇವರು  ಕೂಡ್ಲಿಗಿಯ ಡಿವೈಎಸ್ಪಿ ಕಛೇರಿಯ ಅಪರಾಧ ವಿಭಾಗದಲ್ಲಿ ಹೆಡ್ ಕಾನ್ ಸ್ಟೇಬಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಜ್ಯದ ಒಟ್ಟು 197 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಮುಖ್ಯಮಂತ್ರಿ ಪದಕ ಪ್ರದಾನ ಪ್ರಶಸ್ತಿಗೆ  ಭಾಜನರಾಗಿದ್ದಾರೆ  ಮುಖ್ಯಮಂತ್ರಿ ಪದಕಕ್ಕೆ  ಕೊಟ್ರೇಶ್ ಅವರು ಆಯ್ಕೆಯಾಗಿರುವುದು ಊರಿಗೆ ಮತ್ತು  ತಾಲೂಕಿಗೆ ಹೆಮ್ಮೆಯ ವಿಷಯವಾಗಿದೆ. ಮುಖ್ಯಮಂತ್ರಿ ಪದಕಕ್ಕೆ ಆಯ್ಕೆಯಾದ ಇವರಿಗೆ ಗ್ರಾಮಸ್ಥರು, ಸ್ನೇಹಿತರು ಶುಭ ಹಾರೈಸಿ ಹರ್ಷವನ್ನು ವ್ಯಕ್ತಪಡಿಸುತ್ತಿದ್ದಾರೆ.

ಬೇಡಿಕೆಗಳ ಈಡೇರಿಸುವಂತೆ ಕೇಂದ್ರ ಸರ್ಕಾರದ ವಿರುದ್ಧ ಬ್ಯಾಂಕ್ ನಿವೃತ್ತರ ಒಕ್ಕೂಟಗಳ ಸಂಯುಕ್ತ ವೇದಿಕೆ ಪ್ರತಿಭಟನೆ

ಇಮೇಜ್
  ಬೆಂಗಳೂರು, ಮಾ, 29; ಪಿಂಚಣಿ ಪರಿಷ್ಕರಣೆ, ಆರೋಗ್ಯ ವಿಮೆ ವ್ಯವಸ್ಥೆ ಸುಧಾರಣೆ ಒಳಗೊಂಡಂತೆ ಹಲವು ದಶಕಗಳಿಂದ ಬಾಕಿ ಉಳಿದಿರುವ ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಬ್ಯಾಂಕ್ ನಿವೃತ್ತರ ಒಕ್ಕೂಟಗಳ ಸಂಯುಕ್ತ ವೇದಿಕೆ ನಗರದ ಫ್ರೀಡಂ ಪಾರ್ಕ್ ನಲ್ಲಿಂದು ಬೃಹತ್ ಪ್ರತಿಭಟನೆ ನಡೆಸಿತು.  ಬ್ಯಾಂಕ್ ನಿವೃತ್ತರ ಸಂಯುಕ್ತ ವೇದಿಕೆಯು" ದೇಶದ ಸುಮಾರು ಏಳು ಬ್ಯಾಂಕ್ ನಿವೃತ್ತರ ಸಂಘಟನೆಗಳ ಒಂದು ರಾಷ್ಟ್ರೀಯ ಬೃಹತ್ ಸಂಘಟನೆಯಾಗಿದೆ. ಅಖಿಲ ಭಾರತ ಬ್ಯಾಂಕ್ ನಿವೃತ್ತರ ಒಕ್ಕೂಟ, ಅಖಿಲ ಭಾರತ ನಿವೃತ್ತ ಬ್ಯಾಂಕ್ ನಿವೃತ್ತರ ಸಂಘ, ಫೋರಂ ಆಫ್ ರಿಟೈರ್ಡ್ ಬ್ಯಾಂಕ್ ಎಂಪ್ಲಾಯೀಸ್, ವಾಣಿಜ್ಯ ಬ್ಯಾಂಕ್ ಗಳ ನಿವೃತ್ತರ ಸಂಘ, ರಿಟೈರ್ಡ್ ಬ್ಯಾಂಕ್ ಆಫೀಸರ್ಸ್ ಕಾನ್ಫಡರೇಷನ್, ಬ್ಯಾಂಕ್ ರ್ಸ್ ಡಿಸರ್ವ್ ಜಸ್ಟಿಸ್ ಸೊಸೈಟಿ ಮತ್ತು ಭಾರತೀಯ ಸ್ಟೇಟ್ ಬ್ಯಾಂಕ್ ನ ಗುಂಪುಗಳ ನಿವೃತ್ತರ ಸಂಘಟನೆಗಳು ಸದಸ್ಯರು ಪ್ರತಿಭಟನೆಯಲ್ಲಿ ಭಾಗಿಯಾದರು.  "ಸಂಯುಕ್ತ ವೇದಿಕೆ"ಯ ಸಂಚಾಲಕರಾದ ಎಸ್.ಸಿ ಜೈನ್ ಮಾತನಾಡಿ, 1995 ರಿಂದ ಬಾಕಿ ಇರುವ ಬ್ಯಾಂಕ್ ನಿವೃತ್ತರ ಪಿಂಚಣಿ ಪರಿಷ್ಕರಣೆ, ವಿಶೇಷ ಭತ್ಯೆಗಳ ಮೇಲೆ ಪಿಂಚಣಿ ನೀಡುವ, ಖಾಸಗಿ ಬ್ಯಾಂಕ್ ನಿವೃತ್ತರಿಗೂ ಎಕ್ಸ್ ಗ್ರೇಶಿಯಾ ಕೊಡುವ, ಅರೋಗ್ಯ ವಿಮೆಯ ಸುಧಾರಣೆ ಮತ್ತು ಅರೋಗ್ಯ ವಿಮೆಯ ಮೇಲಿನ ಜಿ. ಎಸ್. ಟಿಯಿಂದ ಸಂಪೂರ್ಣ ವಿನಾಯತಿ ನೀಡುವ, ವಾಣಿಜ್ಯ ಬ್ಯಾಂಕುಗಳ ಪಿಂಚಣಿದಾರರಿಗೆ ಆ...

ಹಿರೇ-ನಗ-ನೂರು."ನಗ "ಎಂದರೆ ಬಂಗಾರ,ದ ಊರಿನಲ್ಲಿ.ಸಂಭ್ರಮದಿಂದ ಯುಗಾದಿ ಆಚರಣೆ.

ಇಮೇಜ್
  ಹಟ್ಟಿ ಚಿನ್ನದ ಗಣಿ:30ಬಂಗಾರ ಸಿಗುವ ಗಣಿ ಎಂದರೆ ಅದು ಹಟ್ಟಿ ಚಿನ್ನದ ಗಣಿ.ಪಟ್ಟಣದ ಸಮೀಪವಿರುವ ಹಿರೇನಗನೂರು ಗ್ರಾಮದಲ್ಲಿ.ಯುಗಾದಿ ಅಥವಾ ಉಗಾದಿ ಚೈತ್ರ ಮಾಸದ ಮೊದಲ ದಿನ.ನಮ್ಮ ದೇಶದ ಅನೇಕ ಕಡೆಗಳಲ್ಲಿ.ಈ ದಿನ ಹೊಸ ವರ್ಷದ ಮೊದಲ ದಿನ.ಹೊಸ ವರ್ಷದ ಹಬ್ಬವಾಗಿ ಯುಗಾದಿಯನ್ನು ಆಚರಿಸಲಾಗುತ್ತದೆ.ಯುಗಾದಿ" ಪದದ ಉತ್ಪತ್ತಿ"ಯುಗ+ಆದಿ"-- ಹೊಸ ಯುಗದ ಆರಂಭ.ಯುಗಾದಿ ಹಬ್ಬವನ್ನು ಅತ್ಯಂತ ಸಡಗರ ಸಂಭ್ರಮದಿಂದ.ಗ್ರಾಮದ ಹಿರಿಯರಾದ ವಿರೂಪಾಕ್ಷಪ್ಪ ಮಾಲಿ ಪಾಟೀಲ್.ಶಿವನಗೌಡ ನಗರ್.ಹಾಗೂ ವಿಶೇಷವಾಗಿ ವಾಲ್ಮೀಕಿ ಯುವಕ ಮಂಡಳಿಯ ಅಧ್ಯಕ್ಷರಾದ ಕನಕಪ್ಪ ಬೆಂಚಮಟ್ಟಿ.ಉಪಾಧ್ಯಕ್ಷರಾದ ಹುಲಗಪ್ಪ ಗುರಿಕಾರ್.ಕಾರ್ಯದರ್ಶಿ ಈರಪ್ಪ ಗುರಿಕಾರ ಹಾಗೂ ಸದಸ್ಯರು.ಹಾಗೂ ಗ್ರಾಮದ ಗುರುಹಿರಿಯರು ಮಹಿಳೆಯರು.ಮುದ್ದು ಮಕ್ಕಳು ಸೇರಿ.ಗ್ರಾಮದ ಹೃದಯ ಭಾಗದಲ್ಲಿರುವ ಆಂಜನೇಯ ದೇವಸ್ಥಾನದ ಅರ್ಚಕರಾದ ವಿರೂಪಾಕ್ಷಪ್ಪ ಪೂಜಾರಿ ಇವರ ಮನೆಯಿಂದ.ಆಂಜನೇಯ ಸ್ವಾಮಿಯ ದೇವಸ್ಥಾನದ ಗೋಪುರದ ಮೇಲಿರುವ ಕಳಶವನ್ನು ಮೆರವಣಿಗೆ ಮುಖಾಂತರ ತರಲಾಯಿತು.ನಂತರ ಗೋಪುರದ ಮೇಲೆ ಕಳಶವನ್ನು ಸ್ಥಾಪಿಸಲಾಯಿತು. ನಂತರ ಗರ್ಭಗುಡಿಯ ಆಂಜನೇಯ ಸ್ವಾಮಿಗೆ ಅರ್ಚಕರಾದ ವಿರೂಪಾಕ್ಷಪ್ಪ ಪೂಜಾರಿ ಇವರಿಂದ ಕಾಯಿ ಕರ್ಪೂರಗಳಿಂದ ಪೂಜೆ ಸಲ್ಲಿಸಲಾಯಿತು.ನಂತರ ಗ್ರಾಮದ ಎಲ್ಲಾ ಜನರು ತಮ್ಮ ಹರಕೆಯನ್ನು ಸಲ್ಲಿಸಿದರು.ಗ್ರಾಮದ ಎಲ್ಲಾ ಜನರಿಗೂ ಬೇವು ಬೆಲ್ಲ.ಹಾಗೂ ಮಹಾಪ್ರಸಾದವನ್ನು ವಿತರಣೆ ಮಾಡಲಾಯಿತು. ಈ ಸಂದ...

ಪಟ್ಟಣ ಪಂಚಾಯಿತಿ ವತಿಯಿಂದ ಯುಗಾದಿ ಹಾಗೂ ರಂಜಾನ್ ಹಬ್ಬದ ಶುಭಾಶಯಗಳು

ಇಮೇಜ್
ಕೊಟ್ಟೂರು : ನಾಡಿನ ಸಮಸ್ತ ಜನರಿಗೆ ಯುಗಾದಿ ಹಾಗೂ ರಂಜಾನ್ ಹಬ್ಬದ ಶುಭಾಶಯಗಳು ಕೋರುವವರು ಪಟ್ಟಣ ಮುಖ್ಯ ಅಧಿಕಾರಿಗಳು ಹಾಗೂ ಅಧ್ಯಕ್ಷರು , ಉಪಾಧ್ಯಕ್ಷರು,ಸ್ಥಾಯಿ ಸಮಿತಿ ಅಧ್ಯಕ್ಷರು ಸಿಬ್ಬಂದಿ ವರ್ಗದವರು ಶುಭಾಶಯಗಳು ತಿಳಿಸಿದರು

ಎಮ್ ಡಿ ಆರ್ ಅಂಡ್ ಸನ್ಸ್ ವತಿಯಿಂದ ಆಯೋಜಿಸಿದ್ದ ಯುಗಾದಿ ಹಾಗೂ ಪವಿತ್ರ ರಂಜಾನ್ ಹಬ್ಬದ ಇಫ್ತಾರ್ ಕೂಟ.

ಇಮೇಜ್
ಹಟ್ಟಿ ಚಿನ್ನದ ಗ ಣಿ: ಸರ್ವಧರ್ಮ ಸಮನ್ವಯ ಸಾರುವ ತಾಲ್ಲೂಕಿನ ಹಟ್ಟಿ ಚಿನ್ನದ ಗಣಿಯ ಮದೀನಾ ಮಸೀದಿ ಕಾಕಾನಗರ ಹಟ್ಟಿ ಪಟ್ಟಣದಲ್ಲಿ ಮುಸ್ಲಿಂ ಸಮುದಾಯದ ಮಾಜಿ ಎಪಿಎಂಸಿ ನಿರ್ದೇಶಕರು ಹಾಗೂ ಕಾಂಗ್ರೆಸ್ಸಿನ ಮುಖಂಡರಾದ ಅಮ್ಜದ್ ಸೆಟ್ ಇವರು.ಹಟ್ಟಿ ಹಾಗೂ ಸುತ್ತಮುತ್ತಲಿನ ಎಲ್ಲಾ ಧರ್ಮಿಯರನ್ನು.ಜಾತಿ ಮತ ಪಂಥವೆನ್ನದೆ ಗುರುವಾರ ಬೇವು ಬೆಲ್ಲದ ಜೊತೆಗೆ ಹೋಳಿಗೆ ತುಪ್ಪ ಹಾಗೂ ವಿವಿಧ ತರಹದ ಹಣ್ಣು ಹಂಪಲುಗಳು ಹಾಗೂ ವಿಶೇಷವಾಗಿ ಖರ್ಜೂರ ಸೇರಿದಂತೆ ಹಲವು ಖಾದ್ಯಗಳನ್ನು ಇಫ್ತಿಯಾರ್‌ ಕೂಟದಲ್ಲಿ ಏರ್ಪಡಿಸಲಾಗಿತ್ತು. ಇಫ್ತಾರ್ ಕೂಟದಲ್ಲಿ ಹಿಂದೂ ಮುಸ್ಲಿಂ ಕ್ರೈಸ್ತರು ಎನ್ನದೆ ಎಲ್ಲಾ ಧರ್ಮಿಯರು ಭಾಗವಹಿಸಿದ್ದರು.ವಿಶೇಷವಾಗಿ ಲಿಂಗಸಗೂರು ಕ್ಷೇತ್ರದ ಮಾಜಿ ಶಾಸಕರಾದ ಡಿ ಎಸ್ ಹುಲಿಗೇರಿ ಹಾಗೂ ಬ್ಲಾಕ್ ಅಧ್ಯಕ್ಷ ಗೋವಿಂದ ನಾಯಕ ಹಾಗೂ ಅನೇಕ ಕಾಂಗ್ರೆಸ್ ಮುಖಂಡರು.ಇತರ ಪಕ್ಷಗಳ ನಾಯಕರು ಮತ್ತು ಮುಸ್ಲಿಂ ಬಾಂಧವರು ಈ ಇಪ್ತರ್ ಕೂಟದಲ್ಲಿ ಭಾಗವಹಿಸಿದ್ದರು.ಯುನೈಟೆಡ್ ಮೆತೊಡಿಸ್ಟ್ ಚರ್ಚಿನ ರೆವರೆಂಡ್ ದೇವದನ್ ಆನಂದಪ್ಪ ಮಾತನಾಡಿ,ವಿವಿಧತೆಯಲ್ಲಿ ಏಕತೆ ಸಾರುವ ಜಗತ್ತಿನ ಏಕೈಕ ದೇಶ ಭಾರತ.ಇಲ್ಲಿ ಪ್ರೀತಿ.ಸೌಹಾರ್ದತೆಯಿಂದ ಸಹಬಾಳ್ವೆ ಮಾಡುತ್ತಿರುವ ನಾವು ಯಾವುದೇ ಕಾರಣಕ್ಕೂ ಪರಸ್ಪರ ದ್ವೇಷ ಮನೋಭಾವನೆ ತೋರಬಾರದು ಎಂದು ಮಾತನಾಡಿದರು.ಅಮ್ಜದ್ ಸೇಟ್ ಹಾಗೂ ಕುಟುಂಬದ ಸದಸ್ಯರು ಇಪ್ತಾರ್ ಕೂಟವನ್ನು ಪ್ರಾರ್ಥನೆ ಭಕ್ತಿ ಭಾವದಿಂದ ನೆರವೇರಿಸಿ ಕೊಟ್ಟರು .

ರಂಜಾನ್‌ ಹಬ್ಬ : ಶಾಂತಿ ಸಭೆ

ಇಮೇಜ್
ಪವಿತ್ರ ರಂಜಾನ್‌ ಹಬ್ಬದ ನಿಮಿತ್ತ ಪಟ್ಟಣದ ಪೊಲೀಸ್‌ ಠಾಣೆಯಲ್ಲಿ  ಗುರುವಾರ ಶಾಂತಿ ಸಭೆ ನಡೆಯಿತು. ಕೊಟ್ಟೂರು : ಪವಿತ್ರ ರಂಜಾನ್‌ ಹಬ್ಬದ ನಿಮಿತ್ತ ಪಟ್ಟಣದ ಕೊಟ್ಟೂರು ಪೊಲೀಸ್‌ ಠಾಣೆಯಲ್ಲಿ ಗುರುವಾರ ಶಾಂತಿ ಸಭೆ ನಡೆಯಿತು. ಪಿಎಸ್‌ಐ ಗೀತಾಂಜಲಿ ಶಿಂಧೆ ಮಾತನಾಡಿ, ಪವಿತ್ರ ರಂಜಾನ್‌ ಹಬ್ಬದ ಪ್ರಯುಕ್ತ ಮುಸ್ಲಿಂ ಬಾಂಧವರು ಶಾಂತಿ ಕಾಪಾಡಬೇಕು. ಹಬ್ಬದ ನಿಮಿತ್ತ  ಮುಖ್ಯ ರಸ್ತೆಯಲ್ಲಿನ ದರ್ಗಾಕ್ಕೆ ತೆರಳಲು ರಸ್ತೆಯ ಒಂದು ಬದಿಯಲ್ಲಿ ಅವಕಾಶ ಕಲ್ಪಿಸಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ಜಾಗೃತಿ ವಹಿಸಿ. ಮಸೀದಿ ಸ್ವಚ್ಛತೆ, ಸಣ್ಣಪುಟ್ಟ ಗೊಂದಲಗಳಿದ್ದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ. ಯುವಕರಿಗೆ ರಾತ್ರಿ ವೇಳೆ ಬೈಕ್‌ಗಳಲ್ಲಿ ಮೂರ್ನಾಲ್ಕು ಜನರು ಸಂಚರಿಸದಂತೆ ಹಿರಿಯರು ಸೂಚಿಸಬೇಕು. ಠಾಣೆ ವ್ಯಾಪ್ತಿಯ ಬರುವ  ಹಳ್ಳಿಗಳಲ್ಲಿ ಮುಸ್ಲಿಂ ಬಾಂಧವರು ಹಬ್ಬ ಆಚರಿಸುವುದರಿಂದ ಸೂಕ್ತ ಬಂದೋಬಸ್ತ್‌ ನೀಡಲಾಗುವುದು ಎಂದರು. ಈ ಸಂದರ್ಭದಲ್ಲಿ ಮುಸ್ಲಿಂ ಪ್ರಮುಖ ಮುಖಂಡರು ವಿವಿಧ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು

ಹಟ್ಟಿ ಪಟ್ಟಣದಿಂದ ಆದಷ್ಟು ಬೇಗನೆ ಬೇರೆ ಬೇರೆ ಜಿಲ್ಲೆಗಳಿಗೆ ಬಸ್ ಬಿಡುವ ಭರವಸೆ. 2ನೇ ದಿನಕ್ಕೆ ಸರಣಿ ಉಪವಾಸ ಸತ್ಯಾಗ್ರಹ ಅಂತ್ಯ.

ಇಮೇಜ್
ಹಟ್ಟಿ ಚಿನ್ನದ ಗಣಿ :ಹಟ್ಟಿ ಚಿನ್ನದ ಗಣಿಯಿಂದ ಬೇರೆ ಬೇರೆ ಜಿಲ್ಲೆಗಳಿಗೆ ಬಸ್ ಬಿಡುವಂತೆ.ಸೋಮವಾರದಿಂದ ಪ್ರಾರಂಭವಾದ ಅಹೋರಾತ್ರಿ ಸರಣಿ ಉಪವಾಸ ಸತ್ಯಾಗ್ರಹ ಮೂರನೇ ಮೂರನೇ ದಿನಕ್ಕೆ ಕಾಲಿಡುವಷ್ಟರೊಳಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿಗಳು ಎಚ್ಚೆತ್ತುಕೊಂಡು.ಅಹೋ ರಾತ್ರಿ ಸರಣಿ ಉಪವಾಸ ಸತ್ಯಾಗ್ರ ಸ್ಥಳಕ್ಕೆ ಆಗಮಿಸಿ. ಹಟ್ಟಿ ಚಿನ್ನದ ಗಣಿಯ ಪ್ರಗತಿಪರ ಸಂಘಟನೆಗಳ ಕೆಲವು ಪ್ರಮುಖರ ಜೊತೆ ಚರ್ಚಿಸಿದ  ಕೆಎಸ್ಆರ್ಟಿಸಿ  ರಾಯಚೂರು ವಿಭಾಗ ಹಾಗೂ ಲಿಂಗಸುಗೂರು ವಿಭಾಗದ ಮಲತಾಯಿ ಧೋರಣೆ ಖಂಡಿಸಿ ಹಾಗೂ ಹಟ್ಟಿ ಪಟ್ಟಣಕ್ಕೆ ಅಂತರ ಜಿಲ್ಲಾ ಬಸ್ಸುಗಳ  ಸೌಲಭ್ಯ ಒದಗಿಸಿ ಕೊಡಬೇಕೆಂದು ನಡೆದ ಹೋರಾಟಕ್ಕೆ ಮಂಗಳವಾರ ರಾತ್ರಿ ಧರಣಿ ಸ್ಥಳಕ್ಕೆ ಆಗಮಿಸಿದ ರಾಯಚೂರು ವಿಭಾಗೀಯ ಸಂಚಾರ ಅಧಿಕಾರಿ(ಡಿಟಿಒ) ಚಂದ್ರಶೇಖರ್ ಅವರಿಗೆ ಸಂಘಟನೆಯ ಮುಖಂಡರು ಹಾಗೂ ಊರಿನ ಮುಖಂಡರು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಡಿ ಟಿ ಒ ಅವರು ಹಟ್ಟಿ ಪಟ್ಟಣಕ್ಕೆ ಆದಷ್ಟು ಬೇಗನೆ ಬೆಳಗಾವಿಗೆ,ಬಾಗಲಕೋಟೆ,ಹೊಸಪೇಟೆ,ಮಂತ್ರಾಲಯ,ಬಳ್ಳಾರಿ,ಹುಬ್ಬಳಿ ಹಾಗೂ ರಾಜ್ಯದ ಇನ್ನಿತರ ಭಾಗಗಳಿಗೆ ಬಸ್ಸುಗಳನ್ನು ಬಿಡುತ್ತೇವೆ,ಹಾಗೂ ಹೆಚ್ಚುವರಿಯಾಗಿ ಕಲಬುರಗಿ,ಹುಬ್ಬಳಿ,ರಾಯಚೂರು,ಗಂಗಾವತಿ ಮಾರ್ಗಕ್ಕೆ ಬಸ್ಗಳನ್ನು ಕಲ್ಪಿಸಲಾಗುವುದು ಎಂದು  ತಿಳಿಸಿದರು,ಒಂದು ವೇಳೆ  ಹೊಸ ಬಸ್ಸುಗಳನ್ನು ಬಿಟ್ಟರೆ ವರ್ಷಪೂರ್ತಿ 365 ದಿನ ಹ...

ಯೋಗ ಕೇವಲ ಆಸನವಲ್ಲ, ಮಾನಸಿಕ ಸ್ಥಿಮಿತ ಕೂಡ ಯೋಗ : ಬಿಹಾರ ಸ್ಕೂಲ್ ಆಫ್ ಯೋಗ ವಿಶ್ವ ಪೀಠದ ನಿರಂಜನಾನಂದ ಸರಸ್ವತಿ ಸ್ವಾಮೀಜಿ

ಇಮೇಜ್
  ಬೆಂಗಳೂರು, ಮಾ, 24; ಯೋಗ ಎಂದರೆ ಕೇವಲ ಆಸನವಲ್ಲ. ದಿನದ 24 ಗಂಟೆ, ವರ್ಷದ 365 ದಿನಗಳ ಕಾಲ ಮನಸನ್ನು ಸಂಯಮದಲ್ಲಿಟ್ಟುಕೊಳ್ಳುವುದು ಕೂಡ ಯೋಗ ಎಂದು ಬಿಹಾರ ಸ್ಕೂಲ್ ಆಫ್ ಯೋಗ ವಿಶ್ವ ಪೀಠದ ನಿರಂಜನಾನಂದ ಸರಸ್ವತಿ ಸ್ವಾಮೀಜಿ ಹೇಳಿದ್ದಾರೆ.  ವೇದಾಂತ ಭಾರತಿ ಮತ್ತು ರಾಮಕೃಷ್ಣ ಮಠದಿಂದ ಬೆಂಗಳೂರಿನ ಬಸವನಗುಡಿಯ ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಶತಮಾನೋತ್ಸವ ಸಭಾಂಗಣದಲ್ಲಿ “ಭಾರತೀಯ ಸಂಸ್ಕೃತಿ ಬಗ್ಗೆ ಆದಿ ಶಂಕರಾಚಾರ್ಯರ ಬೋಧನೆಗಳ ಪರಿಣಾಮ” ಕುರಿತು ಭಕ್ತ ವೃಂದಕ್ಕೆ ಉಪನ್ಯಾಸ ನೀಡಿದ ಅವರು, ಸಂತರು, ಯೋಗಿಗಳು ದೈನಂದಿನ ಬದುಕಿನಲ್ಲಿ ಯೋಗದ ಮಹತ್ವ ಮತ್ತು ಯೋಗ ತತ್ವಗಳನ್ನು ಬೋಧಿಸಿದ್ದಾರೆ. ಇದರಿಂದ ಪ್ರೇರಣೆ ಪಡೆದ 60 ವರ್ಷಗಳಿಂದ ಯೋಗ ಕಲಿಯುವ, ಕಲಿಸುವ ಕಾಯಕದಲ್ಲಿ ನಿರತವಾಗಿದ್ದೇನೆ. ಸನಾತನ ಧರ್ಮ ಸಂರಕ್ಷಣೆಯಲ್ಲಿ ಆದಿ ಶಂಕರಾಚಾರ್ಯರ ಕೊಡುಗೆ ಅನನ್ಯ,. ಧರ್ಮ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಿರುವ ಅವರು ಸದಾ ಸ್ಮರಣೀಯರು ಎಂದು ಹೇಳಿದರು.   ಎಂದು ಮೈಸೂರಿನ ಕೆ.ಆರ್. ನಗರದ ಯೆಡತೊರೆ ಮಠದ ಯೋಗಾನಂದೇಶ್ವರ ಸರಸ್ವತಿ ಮಠದ ಡಾ. ಶಂಕರ ಭಾರತಿ ಮಹಾ ಸ್ವಾಮೀಜಿ ಮಾತನಾಡಿ, ಶಂಕರಭಗವತ್ಪಾದರು ಪತಂಗದ ಯೋಗ ಶಾಸ್ತ್ರವನ್ನೂ ಸಹ ಬೋಧಿಸಿದ್ದು, ಇದು ಆಧುನಿಕ ಬದುಕಿಗೂ ಪೂರಕವಾಗಿದೆ. ಧರ್ಮದ ಪುನರುತ್ಥಾನಕ್ಕೆ ಯೋಗ ಅತ್ಯಂತ ಅಗತ್ಯವಾಗಿದೆ. ಭಾರತೀಯ ಸಂಸ್ಕೃತಿಯ ಮೇಲೆ ಇದು ಗಾಢವಾದ ಪ್ರಭಾವ ಬೀರಿದೆ. ಯೋಗ ಶಾಸ್ತ್...

"ಸರ್ಕಾರಿ ನೌಕರ ನಿಯಮ ಉಲ್ಲಂಘನೆ "

ಇಮೇಜ್
ಕೊಟ್ಟೂರು : ಕಳೆದ ವರ್ಷ ಪ್ರಾರಂಭವಾಗಿರುವ ಸಿಟಿ ಆಸ್ಪತ್ರೆಯಲ್ಲಿ ಗುತ್ತಿಗೆ ಆದಾರದ ಮೇಲೆ ಮಕ್ಕಳ ತಜ್ಞರಾಗಿ ಕೆಲಸ ನಿರ್ವಹಿಸುತ್ತಿರುವ ಇವರು ಇನ್ನು ನೊಂದಣಿಯಾಗದಿರುವ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಅಲ್ಲದೆ ಇವರು ಸರ್ಕಾರಿ ನೌಕರರಾಗಿ ಈ ರೀತಿ ಮಾಡುವುದು ಸರಿಯಲ್ಲ. ಸರ್ಕಾರ ಒಬ್ಬ ವೈದ್ಯ ಸರ್ಕಾರದಲ್ಲಿ ಕೆಲಸ ಮಾಡುತ್ತಿದ್ದರೆ ಆತನು ಗುತ್ತಿಗೆ ಆದಾರ ಅಥವಾ ಸ್ವಂತಕ್ಕೆ ಕೆಲಸ ಮಾಡಬಾರುದು ಎಂಬ ನಿಯಮ ವಿದೆ ಅದರೇ ಈ ವೈದ್ಯ ಈ ರೀತಿ ಗುತ್ತಿಗೆ ಆದಾರದ ಮೇಲೆ ಹಲವು ದಿನಗಳಿಂದ ಚಿಕಿತ್ಸೆ ನೀಡುತ್ತಿದ್ದಾರೆ.  ಈತನು ಸಮುದಾಯ ಆರೋಗ್ಯ ಕೇಂದ್ರ ಕೊಟ್ಟೂರಿನಲ್ಲಿ ಮಕ್ಕಳ ತಜ್ಞರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಿಂಗಳಿಗೆ ೧,೨೦,೦೦೦ ರೂ ಸಂಬಳ ಪಡೆಯುತ್ತಿದ್ದು. ಅದರೂ  ಸಹ  ಡಾ ಸೋಮಶೇಖರ್  ಅವರು ಕೊಟ್ಟೂರು ಆಸ್ಪತ್ರೆಯಲ್ಲಿ  ಗುತ್ತಿಗೆ  ವೈದ್ಯಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.  ಈಗೆ ಪಟ್ಟಣದಲ್ಲಿ ಹಿಂದಿನ ವರ್ಷ ಪ್ರಾರಂಭವಾಗಿರುವ ಸಿಟಿ ಖಾಸಗಿ ಆಸ್ಪತ್ರೆ ಕರ್ನಾಟಕ ಪ್ರವೇಟ್ ಮೆಡಿಕಲ್ ಎಸ್ಟಾಬ್ಲಿಷ್‌ಮೆಂಟ್ ಅಥಾರಿಟಿಯಿಂದ  ನೋಂದಣಿಯಾಗಿರುವುದಿಲ್ಲ ಎಂದು ತಿಳಿದಿದ್ದು  ಸಹ ಇತಂಹ ಖಾಸಗಿ ಆಸ್ಪತ್ರೆಯಲ್ಲಿ  ಸದರಿ ವೈದ್ಯರು ಕಾರ್ಯ ನಿರ್ವಹಿಸಬಾರದು ಎಂದು ನಿಯಮ ಇದ್ದರು,   ಈ ವೈದ್ಯರು ಯಾವುದೇ ಸರ್ಕಾರಿ ನಿಯಮಗಳನ್ನು ಪಾಲಿಸದೇ ನಿಯ...

ಕೊಟ್ಟೂರಿನ ಸಿಟಿ ಆಸ್ಪತ್ರೆಯಲ್ಲಿ :ಪ್ರಾಧಿಕಾರದಿಂದ ಅನುಮತಿ ಇಲ್ಲದೆ ಅಕ್ರಮ ಕ್ಲಿನಿಕ್

ಇಮೇಜ್
  ಕೊಟ್ಟೂರು ಪಟ್ಟಣದ ಬಸ್ ನಿಲ್ದಾಣದ ಹಿಂಭಾಗದಲ್ಲಿ ಕೊಟ್ಟೂರು ಸಿಟಿ ಆಸ್ಪತ್ರೆಯನ್ನು ಸೂಕ್ತ ಪರವಾನಿಗೆಯನ್ನು ಪಡೆಯದೇ, ಸಂಬಂಧಿಸಿದ ಪ್ರಾಧಿಕಾರಗಳಿಂದ ಅನುಮತಿ ಪಡೆಯದೇ ನಡೆಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕರ್ನಾಟಕ ಪ್ರವೇಟ್ ಮೆಡಿಕಲ್ ಎಸ್ಟಾಬ್ಲಿಷ್‌ಮೆಂಟ್ ಅಥಾರಿಟಿಯಿಂದ ನೋಂದಣಿಯಾಗದ ಪ್ರವೇಟ್ ಕ್ಲಿನಿಕ್ ಆಗಿದೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ. ಆಸ್ಪತ್ರೆಗಳಿಗೆ ಬರುವ ರೋಗಿಗಳಿಗೆ ಹೈ ಡೋಸ್ ಔಷಧಿಗಳನ್ನು ಬರೆದು, ಸುಂಕಪ್ಪ ಎಂಬುವ ರೋಗಿಗಳ ಜೊತೆ ಚೆಲ್ಲಾಟವಾಡುತ್ತಿದ್ದಾರೆ.? ಆಸ್ಪತ್ರೆಯ ಮೆಡಿಕಲ್ ಸ್ಟೋರ್ ಸಹ ಅಕ್ರಮವಾಗಿ ನಡೆಯುತ್ತಿದ್ದು, ಈ ಬಗ್ಗೆ ತಾಲ್ಲೂಕು ಆರೋಗ್ಯ ಇಲಾಖೆಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಪರವಾನಿಗೆಯ ಪ್ರಮಾಣಪತ್ರ ಕೇಳಿದರೆ ಹಾರಿಕೆಯ ಉತ್ತರ ನೀಡುತ್ತಿದ್ದಾರೆ. ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆಯೇ ಎಂಬ ಅನುಮಾನ ಕಾಡುತ್ತಿದೆ. ತಾಲ್ಲೂಕು ವೈದ್ಯಾಧಿಕಾರಿಗಳು ಭೇಟಿ ನೀಡಿದಾಗ ಪ್ರಮಾಣ ಪತ್ರ ಪಡೆಯಲು ಆರು ತಿಂಗಳು ಕಾಲಾವಕಾಶ ಇದೆಯೆಂದು ಸಬೂಬು ಹೇಳಿರುತ್ತಾರೆ. ಇಂತಹ ಅಕ್ರಮ ಕ್ಲಿನಿಕ್‌ಗಳ ಸೀಜ್ ಮಾಡುವ ಮೂಲಕ ಸ್ಥಳೀಯ ಆಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬಲ್ಲದೇ ಕಾದು ನೋಡಬೇಕಾಗಿದೆ. ಎಂದು ಎ ಐ ಡಿ ಆರ್ ಎಂ ರಾಜ್ಯ ಕಾರ್ಯದರ್ಶಿ ಕೆ ರೇಣುಕಮ್ಮ,ರಾಮೇಶ್, ಮಂಜುನಾಥ್ ಪತ್ರಿಕೆ ತಿಳಿಸಿದರು  ಕೋಟ್ -1 ಈ ರೀತಿಯಾಗಿ ಅಕ್ರಮವಾಗಿ ಪ್ರೈವೇಟ್ ಕ್ಲಿನಿಕ್...

ಸಾಲಬಾಧೆ ಗೆ ಆತ್ಮಹತ್ಯೆ : ಮೂವರ ಬಂಧನ

ಇಮೇಜ್
  ಕೊಟ್ಟೂರು : ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ  ಬಡ್ಡಿ ಸಾಲ ಕೊಟ್ಟು ಜನರಿಗೆ ಕಿರುಕುಳ ನೀಡಿರುವುದು ಹೆಚ್ಚಾಗಿದ್ದು  ಹೆಚ್ಚಿನ ಬಡ್ಡಿಗೆ ಹಣ ನೀಡಿ ಜನರ ಜೀವದ ಜೋತೆ ಚೆಲ್ಲಾಟ ಅಡುತ್ತಿದ್ದಾರೆ.ಬಡಪಾಯಿ ಕುಟುಂಬಗಳು ಬಿಂದಿಗೆ ಬಿದ್ದಿರುವ ಘಟನೆ ನಡೆದಿದೆ. ಕೊಟ್ಟೂರು ತಾಲೂಕಿನ ಗೊಲ್ಲರ ಹಳ್ಳಿ ನಿವಾಸಿ ಚಂದ್ರಯ್ಯ (43), ಸೌಮ್ಯ(35), ಭವಾನಿ (12) ಮತ್ತು ಶಿವಕುಮಾರ್ (8) ಎಂಬವರು ವಿಜಯನಗರ ಜಿಲ್ಲಾ ಹಂಪಿಯಲ್ಲಿ ಕ್ರಿಮಿನಾಶಕ ಸೇವಿಸಿದ್ದರು. ಚಂದ್ರಯ್ಯ ಮೃತಪಟ್ಟಿದ್ದು, ಮೂವರು ಹೊಸಪೇಟೆ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡರು. * ಸಾಲಗಾರರ ಕಾಟಕ್ಕೆ ನೊಂದು ಜೀವ ಬಿಟ್ಟ ವ್ಯಕ್ತಿ* ಚಂದ್ರಯ್ಯ ಗೆ ನಾಲ್ವರು ಸಾಲ ನೀಡಿದ್ದು, ಕಿರುಕುಳ ನೀಡುತ್ತಿದ್ದ ಆರೋಪದ ಮೇರೆಗೆ ಎಫ್‌ ಐ ಆರ್ ದಾಖಲಾಗಿದೆ. ಇನ್ನು ಎಸ್‌ ಬಿ ಐ ಸೇವಾ ಕೇಂದ್ರದ ಸೂಪರ್‌ ವೈಸರ್ ಆಗಿದ್ದ ಬಸವರಾಜ, ಅಕೌಂಟ್ ಬ್ಲಾಕ್ ಮಾಡಿ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದು, ಈತನ ವಿರುದ್ಧವೂ ಎಫ್‌ ಐ ಆ‌ರ್ ದಾಖಲಾಗಿದೆ. ಸಾಲ ಬಾಧೆಯಿಂದಾಗಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ  ಯತ್ನಿಸಿದ್ದ ಕೊಟ್ಟೂರು ತಾಲೂಕಿನ ಗೊಲ್ಲರಹಳ್ಳಿಯ ಚಂದ್ರಯ್ಯ (43) ಹಂಪಿಯಲ್ಲಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಟ್ಟೂರು ಮೂಲದ ಶ್ರೀಕಾಂತ್ ಶೆಟ್ಟಿ, ಜಗದೀಶ್ ಹಾಗೂ ಬಸವರಾಜ ಬಂಧಿತರು. ಹುಣಸಿ ಕಟ್ಟಿ ಗುರು, ವಾಮಯ್ಯ ಎಂಬುವವರನ್ನು ಪೊಲೀಸರು ...

ಎಸ್ಸೆಸ್ಸೆಲ್ಸಿ ಪರೀಕ್ಷೆ ಶಾಂತಿಯುತ

ಇಮೇಜ್
  ಮಸ್ಕಿ : ತಾಲೂಕಿನಾದ್ಯಂತ 2024-25 ನೇ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಜರುಗುತ್ತಿದ್ದು ಪರೀಕ್ಷಾ ಕೇಂದ್ರಗಳಿಗೆ ತಾಲೂಕ ದಂಡಾಧಿಕಾರಿ ಡಾ.ಮಲ್ಲಪ್ಪ. ಕೆ.ಯರಗೋಳ ಭೇಟಿ.  ಇಂದು ಎಸ್ಸೆಸ್ಸೆಲ್ಸಿ ಪರೀಕ್ಷೆ ತಾಲೂಕಿನಾದ್ಯಂತ ಜರುಗುತ್ತಿದ್ದು, ಯಾವ ರೀತಿಯ ತಯಾರಿಯಲ್ಲಿ ನಡೆಸಲಾಗುತ್ತಿದೆ ಎಂದು ವೀಕ್ಷಣೆಗೆಂದು ತೆರಳಿ ಕೇಂದ್ರಗಳಿಗೆ ಅಳವಡಿಸಿದ ಸಿಸಿಟಿವಿ ಯಾವ ರೀತಿ ಕಾರ್ಯನಿರ್ವಹಿಸುವವು ಎಂದು ಪರಿಶೀಲನೆ ಮಾಡಿ ತಾಲೂಕ ಆಡಳಿತದ ವತಿಯಿಂದ ಕಟ್ಟು ನಿಟ್ಟಿನ ಕ್ರಮ ಕೈಗೊಂಡು ಇಂದಿನ ಗಣಿತ ವಿಷಯದ ಪರೀಕ್ಷೆಯನ್ನು ಶಾಂತ ರೀತಿಯಿಂದ ಜರುಗಿಸಲಾಯಿತು. ಕೇಂದ್ರಗಳಿಗೆ ಯರಮರಸ್ ಡಯಟ್ ಉಪನ್ಯಾಸಕರಾದ ಶ್ರೀ ಕನಕಪ್ಪ ಹಾಗೂ ಗ್ರೇಡ್ 2 ತಹಶೀಲ್ದಾರ್ ಆದ ಅಶೋಕ್ ಪವಾರ್ ಹಾಗೂ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು ಇವರ ಸಮ್ಮುಖದಲ್ಲಿ ವೀಕ್ಷಣೆ ಮಾಡಲಾಯಿತು.

650 ಅಡಿ ಎತ್ತರದ ಬಾಬಾ ಸಾಹೇಬ್ ಅಂಬೇಡ್ಕರ್ರವರ ಪ್ರತಿಮೆ ನಿರ್ಮಾಣ ಮಾಡಬೇಕು :ವೈಟ್‌ಫೀಲ್ಡ್ ಮುರುಗೇಶ್ ಒತ್ತಾಯ

ಇಮೇಜ್
  ಮಸ್ಕಿ: ಭೀಮ್ ಪ್ರಜಾ ಸಂಘ ವತಿಯಿಂದ ಬೀದರ್ ನಿಂದ ಬೆಂಗಳೂರು ಫ್ರೀಡಂ ಪಾರ್ಕ್ ವರೆಗೂ ಸ್ವಾಭಿಮಾನ ಜಾಥಾ ಇಂದು ಪಟ್ಟಣಕ್ಕೆ ಆಗಮಿಸಿತು. ಈ ಜಾಥವನ್ನು ಇಲ್ಲಿನ ದಲಿತ ಪರ ಸಂಘಟನೆ ಮುಖಂಡರು ಅದ್ದೂರಿಯಾಗಿ ಬರಮಾಡಿಕೊಂಡರು. ಈ ವೇಳೆ, ವೈಟ್‌ಫೀಲ್ಡ್ ಮುರುಗೇಶ್ ಸಂಸ್ಥಾಪಕ ರಾಜ್ಯಾಧ್ಯಕ್ಷರು ಮಾತನಾಡಿ,200 ಮೀಟರ್‌ಗಳ ಎತ್ತರದ ಡಾ॥ ಬಿ.ಆರ್. ಅಂಬೇಡ್ಕರ್ ರವರ ಪುತ್ಥಳಿ ನಿರ್ಮಾಣ ಮತ್ತು ಕರ್ನಾಟಕ ಸರ್ಕಾರದ ಲಾಂಭನದಲ್ಲಿ ಸತ್ಯಮೇವ ಜಯತೇ ಹಿಂದಿ ಪದ ಹೋಲಿಕೆ ಯಂತೆ ಸಂಸ್ಕೃತ ಪದದಲ್ಲಿರುತ್ತದೆ ಹಾಗೂ ಅದನ್ನು ಕನ್ನಡ ಪದಕ್ಕೆ ಬದಲಾವಣೆ ಮಾಡಬೇಕು ಹಾಗೂ ಡಾ|| ಬಿ.ಆರ್. ಅಂಬೇಡ್ಕರ್ ರವರ ಗ್ರಂಥಾಲಯ ಐ.ಎ.ಎಸ್. ಹಾಗೂ ಕೆ.ಎ.ಎಸ್. ತರಬೇತಿ ಕೇಂದ್ರಗಳು,ಹಾಗೂ ದಲಿತರಿಗೆ ಸ್ಮಶಾನ ಭೂಮಿ ನೀಡಬೇಕೆಂದು ಒತ್ತಾಯಿಸಿದರು. ಇದೇ ಸಂದರ್ಭದಲ್ಲಿ ಮಲ್ಲಪ್ಪ ಎಸ್ ಗೋನಾಳ, ಎಸ್ ಡಿ ಎಂ ಸಿ ಅಧ್ಯಕ್ಷರಾದ ಹುಲುಗಪ್ಪ ಛಲವಾದಿ ಹಸ್ಮಕಲ್,ಪ್ರಶಾಂತ ಮುರಾರಿ, ಕಿರಣ್ ವಿ ಮುರಾರಿ, ನೀಲಕಠಪ್ಪ ರಂಗಪುರ,ಅಜಿತ್ ವಕೀಲರು, ಲಕ್ಷ್ಮಣ್ ಕಡಬೂರು ಇದ್ದರು.

12 ವರ್ಷ ಆಗದ ಅಭಿವೃದ್ಧಿ 22 ತಿಂಗಳಲ್ಲಿ ಮಾಡಿದ್ದು ಯಾರು? : ಆರ್.ಸಿದ್ದನಗೌಡ

ಇಮೇಜ್
ಮಸ್ಕಿ: ವಸತಿ ರಹಿತ ನೀವೇಶನಗಳಿಗಾಗಿ ರೈತರ ಜಮೀನುಗಳನ್ನು ಸರ್ಕಾರಕ್ಕೆ ರಸ್ತೆ ಸಂಪರ್ಕ ಇದೆ ಎಂದು ಸುಳ್ಳು ಹೇಳಿ ಮಾರಾಟ ಮಾಡಿಸಿ ಸರ್ಕಾರಕ್ಕೆ ಹಾಗೂ ರೈತರಿಗೆ ಮಾಜಿ ಶಾಸಕರ ಹಿಂಬಾಲಕರು ಮೋಸ ಮಾಡಿದ್ದಾರೆ ಎಂದು ಎಸ್ ಟಿ ಘಟಕದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಆರ್.ಸಿದ್ದನಗೌಡ ತುರವಿಹಾಳ ಆರೋಪಿಸಿದರು. ಮಾಜಿ ಶಾಸಕರು12 ವರ್ಷದ ಅಧಿಕಾರ ಅವದಿಯಲ್ಲಿ ಮಾಡದ ಕೆಲಸವನ್ನು ಶಾಸಕರು ಕೇವಲ 22 ತಿಂಗಳಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ನೋಡಿ ಸಹಿಸಲಾರದೇ ಬಿಜೆಪಿ ಪಕ್ಷದ ನಾಯಕರಿಗೆ ಹಾಗೂ ಅಧ್ಯಕ್ಷರು ಹೊಟ್ಟೆ ಉರಿ ಪಟ್ಟುಕೊಳ್ಳುತ್ತಿದ್ದಾರೆ ಎಂದು ಕಟುವಾಗಿ ಟೀಕಿಸಿದರು. ನಿಮ್ಮ ಅಧಿಕಾರ ಅವಧಿಯಲ್ಲಿ ಮಸ್ಕಿ ಪಟ್ಟಣದ ಕೇಂದ್ರ ಸ್ಥಾನದಲ್ಲಿ ಸುಸಜ್ಜಿತವಾದ ಆಸ್ಪತ್ರೆಯನ್ನು ಮಾಡದೆ ಜನರಿಗೆ ಅನುಕೂಲ ಮಾಡಲಾಗಲಿಲ್ಲ. ಈಗ ಅಧಿಕಾರ ಕಳೆದುಕೊಂಡು ಬ್ರಹ್ಮ ನಿರಸನಕ್ಕೆ ಒಳಗಾಗಿ ಇಂಥ ಮಾತುಗಳನ್ನು ಆಡುತ್ತಿದ್ದಾರೆ. ಅಲ್ಲದೆ ಈ ಹಿಂದೆ ನಿಮ್ಮ ಸರ್ಕಾರದ ಅವಧಿಯಲ್ಲಿ ಮಾಜಿ ಆರೋಗ್ಯ ಮಂತ್ರಿ   ಬಿ. ಶ್ರೀರಾಮುಲು ಹಾಗೂ ಡಾ.ಸುಧಾಕರ್ ಇದ್ದರು ಆಗಲಾದರೂ ಮಸ್ಕಿ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಬಹುದಿತ್ತು. ಆದರೆ ನೀವು ಬಡವರಿಗಾಗಿ ಯಾಕೆ ಮಾಡಬೇಕು ಎಂದು ಅಸಡ್ಡೆ ತೋರಿದ ಸಲುವಾಗಿ ಕ್ಷೇತ್ರದ ಜನರು ನಿಮ್ಮನ್ನು ಮನೆಯಲ್ಲಿ ಕೂರಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಜಮೀನನ್ನು ಕೂಡಲೇ ರೈತರಿಗೆ ಮರಳಿಸಿ ಸರ್ಕಾರದ ಹಣವನ್ನು ಮರಳಿ ಪಡೆಯಬೇಕು ಎಂದ...

ಜ್ಞಾನ ಸಂಪಾದನೆ ಯಿಂದ ಮಾತ್ರ ಉನ್ನತ ಹುದ್ದೆಗೆ ಏರಲು ಸಾಧ್ಯ - ಕೊಟ್ಟೂರು ತಹಶೀಲ್ದಾರ್ ಜಿ.ಕೆ ಅಂಬರೀಶ್.

ಇಮೇಜ್
  ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೆ.ಹೊಸಹಳ್ಳಿ ಬಿ.ಸಿ.ಎಂ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಬುಧವಾರ ಆಯೋಜಿಸಿದ್ದ ಶಾರದಾ ಪೂಜೆ ಹಾಗೂ ಬೀಳ್ಕೊಡುಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ನೆರವೇರಿಸಿ ಮಾತನಾಡುತ್ತಾ ವಿದ್ಯಾರ್ಥಿಗಳು ಜ್ಞಾನ ಸಂಪಾದನೆಯಿಂದ ಮಾತ್ರ ಉನ್ನತ ಹುದ್ದೆಗೆ ಏರಲು ಸಾಧ್ಯ, ಸರ್ಕಾರಗಳು ಹಾಸ್ಟೆಲ್ ವಿದ್ಯಾರ್ಥಿಗಳು ಹೆಚ್ಚಿನ ಸೌಲಭ್ಯವನ್ನು ಕಲ್ಪಿಸಿದ್ದು. ಬಡವರ ಮಕ್ಕಳಿಗೆ ಇಲ್ಲಿನ ವಸತಿ ಊಟದ ಜೊತೆಗೆ ಕಲಿಕೆಯು ಸಿಗಲಿದೆ. ಮನೆಯಲ್ಲಿ ತಂದೆ ತಾಯಿ ತಮ್ಮ ಶಿಕ್ಷಣ ಕಲಿಕೆಗೆ ಹೆಚ್ಚು ಹೊತ್ತು ನೀಡುವುದರಿಂದ ಅವರ ಹೆಸರು ಬೆಳಗುವ ನಿಟ್ಟಿನಲ್ಲಿ ನಿಮ್ಮ ಭವಿಷ್ಯ ರೂಪಿಸಿಕೊಳ್ಳಿ ಎಂದರು, ನಾಡಿನ ಅನೇಕ ದಾರ್ಶನಿಕರ ಜೀವನ ಚರಿತ್ರೆಗಳನ್ನು ಓದುವ ಹವ್ಯಾಸ ರೂಢಿಸಿ ಕೊಳ್ಳಬೇಕು.  ಮಾತೃ ಹೃದಯದೊಂದಿಗೆ ಹಾಸ್ಟೆಲ್ ನಿಲಯ ಮೇಲ್ವಿಚಾರಕರು ವಿದ್ಯಾರ್ಥಿಗಳ ಕಾಳಜಿ ವಹಿಸುತ್ತಿದ್ದಾರೆ. ಇಂತಹ ಹಾಸ್ಟೆಲ್ ನಲ್ಲಿ ಕಲಿತ ವಿದ್ಯಾರ್ಥಿಗಳು ತಮ್ಮ ಉಜ್ವಲ ಭವಿಷ್ಯವನ್ನು ಬೆಳಗಲಿ ಎಂದರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿಗಳಾದ ರಾಮಚಂದ್ರಪ್ಪ ಮಾತನಾಡಿ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯುವ ಮೂಲಕ ಕಲಿಕಾ ಶಾಲೆಗೆ ಮತ್ತು ಹಾಸ್ಟೆಲ್ ಗ್ರಾಮಕ್ಕೆ ಕೀರ್ತಿ ತರಬೇಕು. ಬಡ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ದೇವಸ್ಥಾನ ವಿದ್ದಂತೆ ಊಟ ವಸತಿ ಹಾಗೂ ಕಲಿಕೆಗ...

ಯೂರೋ ಕಿಡ್ಸ್ ಪ್ರಾಂಚೈಸಿ ನಮ್ಮ ಶಾಲೆಗೆ ಬಂದಿರುವುದ ಸಂತೋಷ- ಕುಮಾರಸ್ವಾಮಿ

ಇಮೇಜ್
ಕೊಟ್ಟೂರು :ಚಿಕ್ಕ ಚಿಕ್ಕ ಮಕ್ಕಳ ಕಾರ್ಯಕ್ರಮ ತುಂಬಾ ಅದ್ಭುತವಾಗಿ ಮೂಡಿ ಬಂದಿತು ಇವರು ಕಿಡ್ಸ್ ಫ್ರಾನ್ಸಿಸಿ ಭಾರತದ ನಂಬರ್ ಒನ್ ಪ್ರೀ ಸ್ಕೂಲ್ ಫ್ರಾಂಚಿಸಿಯಾಗಿದ್ದು ನಮ್ಮ ಕೊಟ್ಟೂರಿಗೆ ಬಂದಿರುವುದು ಸಂತೋಷ ಕರವಾಗಿದೆ ಸಂಸ್ಥೆಯ ಅಧ್ಯಕ್ಷರಾದ ಜಂಬೂರು ಕುಮಾರಸ್ವಾಮಿ ಹೇಳಿದರು. ಶುಕ್ರವಾರ ನಡೆದ ಯುರೋ ಕಿಡ್ಸ್ ಫ್ರೀ ಸ್ಕೂಲ್ ಕೊಟ್ಟೂರು ಮೊದಲನೇ ವಾರ್ಷಿಕೋತ್ಸವ ಸಮಾರಂಭ ವನ್ನು ನ್ಯೂ ವಿದ್ಯಾ ಭಾರತಿ ಇಂಗ್ಲೀಷ್ ಮೀಡಿಯಂ ಸ್ಕೂಲ್ ಆವರಣದಲ್ಲಿ ಅಯೋಜಿಸಲಗಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಕ್ಕಳ ಅದ್ಭುತ ಪ್ರತಿಭೆಯನ್ನು ಕಂಡು ಸಂತೋಷವಾಯಿತು ಎರಡರಿಂದ ಮೂರು ವರ್ಷದ ಮಕ್ಕಳು ಅದ್ಭುತ ಪ್ರತಿಭೆಯನ್ನು ತೋರಿಸಿದ್ದಾರೆ. ಯೂರೋ ಕಿಡ್ಸ್ ದೇಶದಲ್ಲಿ ಎಲ್ಲಾ ಶಾಲೆಗಳಲ್ಲಿ ಪ್ರಸಿದ್ದವಾಗಿದೆ. ಅಲ್ಲದೆ  ಈ ಒಂದು ಪ್ರಾಂಚೈಸಿ ನಮ್ಮ ಶಾಲೆಗೆ ಬಂದಿರುವುದು ಪೋಷಕರಿಗೆ ಮತ್ತು ಮಕ್ಕಳು ತುಂಭಾ ಸಂತೋಷವಾಗಿದೆ ಅಲ್ಲದೆ ತಮ್ಮ ಪ್ರತಿಭೆಯನ್ನು ತೋರಿಸಲು ಈ ಕಿಡ್ಸ್ ನಿಂದ ಇನ್ನುಮುಂದೆ ತರಬೇತಿಯನ್ನು ನೀಡಲಾಗುವುದು ಎಂದು ಹೇಳದಿರು.  ಈ ಕಾರ್ಯಕ್ರಮದಲ್ಲಿ ಕರ್ನಾಟಕ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಕೆ ಕೊಟ್ರೇಶ್ , ಪತ್ರಕರ್ತರಾದ ದಾದಾಪೀರ್, ಶೋಹಿಬ್, ಪರುಶುರಾಮ ಎಸ್,ಹೆಚ್ ವಿಜಯಕುಮಾರ್, ಸಿದ್ದೇಶ್, ತಗ್ಗಿನಕೇರಿ ಕೊಟ್ರೇಶ್, ಗುರುಪ್ರಸಾದ್, ಎಸ್ ಪ್ರಕಾಶ್, ಶಿವರಾಜ್ ಹಾಗೂ ಕಾರ್ಯದರ್ಶಿಗಳಾದ ಬಸವರಾಜ್, ನಿರ್ದೇಶಕರಾದ ಮರುಳ ಸಿದ...

*ಕಾಲಹರಣವೇ ಮರಣ*

ಇಮೇಜ್
  *ಭಾವದಂಗಳ -36* ವಿಶೇಷ ಲೇಖನ ಬದುಕು ಕೆಲವೇ ಕೆಲವು ದಿನಗಳ ಓಟ.ಕೈ ಬೆರಳುಗಳ ಎಣಿಕೆಯ ಆಟ.ಸೋಲು ಗೆಲುವಿನ ಸೆಣಸಾಟ.ಸಮಯವಿರುವಾಗ ವಿನಾ ಕಾರಣ  ಕಾಲಹರಣ ಮಾಡುವ ನಾವು ಮುಂದೊಂದು ದಿನ ನಮ್ಮ ತಪ್ಪಿನ ಅರಿವಾಗಿ ಪಶ್ಚಾತ್ತಾಪ ಪಡುವಂತಾಗುತ್ತದೆ.ಯಾವುದೇ ಕೆಲಸವಿರಲಿ ಆಯಾ ಸಮಯಕ್ಕೆ ಸರಿಯಾಗಿ ಮಾಡಿದರೆ ಅದು ಸಾರ್ಥಕ,ಇಲ್ಲವೆಂದರೆ ನಿರರ್ಥಕ. ಬಿಸಿಯಾದ ಪಾನೀಯ ನಂತರ ಕುಡಿಯೋಣವೆಂದು ಕೊಂಡರೆ ಅದು ತಣ್ಣಗಾಗಬಹುದು.ಇಂದು ಮಾಡಬೇಕೆಂದುಕೊಂಡಿರುವ ಕೆಲಸ ನಾಳೆ ಮಾಡಿದರಾಯಿತು ಎಂದುಕೊಂಡರೆ ದಿನಗಳು ಕಳೆದೇ ಹೋಗಿ ಕಾದಿರುವ ನಾಳೆಗಳು ಬಾರದೇ ಹೋಗಬಹುದು.ನಂತರ ಅಂದು ಕೊಂಡರೆ ನಮಗಾಗಿ ಬಂದಿರುವ ಅವಕಾಶಗಳು ಬೇರೊಬ್ಬರ ಪಾಲಾಗಬಹುದು,ಕೆಲಸದ ಮೇಲಿನ ಆಸಕ್ತಿ ಕಡಿಮೆ ಆಗಬಹುದು.ಇಂದಿನ ಕೆಲಸ ಇಂದೇ ಮಾಡಿ ಮುಗಿಸುವ ಮನಸ್ಥಿತಿ ಬೆಳೆಸಿಕೊಂಡರೆ ಯಶಸ್ಸು ಖಚಿತ. *ಆಲಸ್ಯವೇ ಯಶಸ್ಸಿನ ಪರಮ ಶತ್ರು* ನಾವು ಮಾಡಬೇಕೆಂದು ಕೊಂಡಿರುವ ಕೆಲಸ ಮುಂದೂಡುವುದೇ ಒಂದು ಅಭ್ಯಾಸವಾಗಿ ಹೋಗುವುದು. ಇದಕ್ಕೆಲ್ಲಾ ಕಾರಣವಾದ ಆಲಸ್ಯವೇ ವಿಷ ಎನ್ನುವ ಅರಿವಿದ್ದರೂ ಅದನ್ನೇ ರೂಢಿಯಾಗಿಸಿಕೊಳ್ಳುತ್ತೇವೆ. ಆಲಸ್ಯದ ಹುಟ್ಟು ಒಂದು ದುರಂತ. ನಿರಾಸೆ, ಭಯ, ಅವಮಾನ, ಗೊಂದಲ,ದೂರು,ಅಪನಂಬಿಕೆ,ಅನಿಶ್ಚಿತತೆ,ಚಿಂತೆ, ನಿರೀಕ್ಷೆ ಗಳೆಂಬ ಭಾರವನ್ನು  ನವ ಮಾಸಹೊತ್ತು ಪ್ರಸವಿಸುವ ಆಲಸ್ಯ ಎಲ್ಲಾ ಶಕ್ತಿಗಳನ್ನೂ ಕೊಂದು ವ್ಯಕ್ತಿಯನ್ನು ಅಸಹಾಯಕ ಸ್ಥಿತಿಗೆ ತಳ್ಳುವುದು . ಯಾವುದೇ ಕೆಲಸ ಮಾಡು...

'ದೇವನಹಳ್ಳಿ ಪಟ್ಟಣ ಪುರಸಭೆಯಲ್ಲಿ ಪರಿಸರ ಹಬ್ಬ ನೀರು, ತ್ಯಾಜ್ಯ ಮತ್ತು ಜೈವಿಕ ವೈವಿಧ್ಯತೆಯ ಪ್ರದರ್ಶನ

ಇಮೇಜ್
ಐಟಿಸಿ ಲಿಮಿಟೆಡ್ ತನ್ನ ಸಾಮಾಜಿಕ ಹೂಡಿಕೆ ವಿಭಾಗವಾದ ಐಟಿಸಿ ಮಿಷನ್ ಸುನೆಹ್ರಾ ಕಲ್’ ನಡಿಯಲ್ಲಿ ಅದರ ಪಾಲುದಾರ ಎನ್‌ಜಿಒ ಬಯೋಮ್ ಎನ್ವಿರಾನ್‌ಮೆಂಟಲ್ ಟ್ರಸ್ಟ್ ಜೊತೆಗೆ ಹಾಗು ದೇವನಹಳ್ಳಿ ಪುರಸಭೆ ಸಹಯೋಗದೊಂದಿಗೆ ದೇವನಹಳ್ಳಿ ಪುರಸಭೆಯಲ್ಲಿ ಪರಿಸರ ಹಬ್ಬ ನೀರು, ತ್ಯಾಜ್ಯ ಮತ್ತು ಜೈವಿಕ ವೈವಿಧ್ಯತೆಯ ಕುರಿತು ಪ್ರದರ್ಶನ', ಪುರಸಭೆಯ ವಾಟರ್ ಮೆನ್'ಗಳಿಗೆ ಸುಸ್ಥಿರ ನೀರು ನಿರ್ವಹಣೆಯ ತರಬೇತಿ ಮತ್ತು ಪುರಸಭೆಯ ಸದಸ್ಯರೊಂದಿಗೆ ಸಭೆಯನ್ನು, ಮಾರ್ಚ್ 19, 2025 ರಂದು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ದೇವನಹಳ್ಳಿ ಪುರಸಭೆಯ ಅಧ್ಯಕ್ಷರಾದ . ಡಿ.ಎಂ.ಮುನಿಕೃಷ್ಣ, ಡಿಟಿಎಂಸಿ ಉಪಾಧ್ಯಕ್ಷರಾದ ಜಿ.ಎ. ರವೀಂದ್ರ, ಡಿಟಿಎಂಸಿ ಸದಸ್ಯರಾದ ರಘು, ಡಿಟಿಎಂಸಿ ಸಿಇಒ ದೊಡ್ಡಮಳವಯ್ಯ, ಪುರಸಭೆಯ ಎಲ್ಲಾ ಸದಸ್ಯರು, ಎಂಜಿನಿಯರ್‌ಗಳು ಮತ್ತು ಬಯೋಮ್ ಟ್ರಸ್ಟ್'ನ ಸಿಬ್ಬಂದಿ ಭಾಗವಹಿಸಿದ್ದರು.  ಪರಿಸರ ಹಬ್ಬ ಪ್ರದರ್ಶನವು ದೇವನಹಳ್ಳಿಯ ನೀರು ಸರಬರಾಜಿಗೆ ಮೇಲ್ಸ್ತರದ ಅಂತರ್ಜಲವನ್ನು ಸಂಯೋಜಿಸುವುದು" ಯೋಜನೆಯ ಮಾದರಿ ಮತ್ತು ಅದರ ಕುರಿತಾದ ಕಿರುಪುಸ್ತಕವನ್ನು ಒಳಗೊಂಡಂತೆ ಸುಸ್ಥಿರ ನೀರು ನಿರ್ವಹಣಾ ಪದ್ಧತಿಗಳಿಗೆ ಸಂಬಂಧಿಸಿದ ಮಾಹಿತಿ ಶಿಕ್ಷಣ ಮತ್ತು ಸಂವಹನ ವಸ್ತುಗಳ ಪ್ರದರ್ಶನವನ್ನು ಒಳಗೊಂಡಿತ್ತು.  ಇದೇ ಸಂದರ್ಭದಲ್ಲಿ, ಸುಸ್ಥಿರ ನೀರು ನಿರ್ವಹಣೆ ತರಬೇತಿಗೆ ಹಾಜರಾದ ವಾಟರ್ ಮೆನ್'ಗಳಿಗೆೆ ಪುರಸಭೆಯ ಸದಸ್ಯರು ತರಬೇತಿ ಕಿಟ...

ಲೇಸರ್ ಮೆಡಿಸಿನ್ ವಲಯದ ಹೂಡಿಕೆಗೆ ಸಂಪೂರ್ಣ ಸಹಕಾರ: ಎಂ ಬಿ ಪಾಟೀಲ

ಇಮೇಜ್
  ಬೆಂಗಳೂರು: ವೈದ್ಯಕೀಯ ಕ್ಷೇತ್ರದಲ್ಲಿ ಪ್ರಮುಖ ಪಾತ್ರ ವಹಿಸುವಂತಹ 350 ಸಾಧನಗಳು ರಾಜ್ಯದಲ್ಲೇ ತಯಾರಾಗುತ್ತಿವೆ. ಜತೆಗೆ ನವೋದ್ಯಮ ಕ್ಷೇತ್ರದಲ್ಲಿ ವೈದ್ಯಕೀಯ ಮತ್ತು ಔಷಧ ತಯಾರಿಕೆ ವಲಯದ ನೂರಾರು ಕಂಪನಿಗಳು ಕರ್ನಾಟಕದಲ್ಲಿ ನೆಲೆಯೂರಿವೆ. ಚರ್ಮಶಾಸ್ತ್ರ ಮತ್ತು ಸೌಂದರ್ಯವರ್ಧಕ ವೈದ್ಯಕೀಯ ಚಿಕಿತ್ಸಾ ವಲಯದ ಹೂಡಿಕೆದಾರರಿಗೆ ಕ್ವಿನ್ ಸಿಟಿ ಯೋಜನೆ ಸೇರಿದಂತೆ ಹಲವೆಡೆ ಹೇರಳ ಅವಕಾಶಗಳಿವೆ. ಉದ್ಯಮಿಗಳು ನಮ್ಮಲ್ಲಿ ಹೂಡಿಕೆಗೆ ಮುಂದೆ ಬಂದರೆ ಅವರಿಗೆ ಸಂಪೂರ್ಣ ಸಹಕಾರ ಕೊಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ. ನಗರದ ಹೊರವಲಯದ ವೈಟ್ ಫೀಲ್ಡಿನಲ್ಲಿ ಏರ್ಪಾಡಾಗಿರುವ ಅಖಿಲ ಭಾರತ ಲೇಸರ್ ಚಿಕಿತ್ಸೆ ಮತ್ತು ಸರ್ಜರಿ ಸಮಾವೇಶವನ್ನು ಅವರು ಗುರುವಾರ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಚರ್ಮಕ್ಕೆ ಸಂಬಂಧಿಸಿದ ಚಿಕಿತ್ಸೆಗಳಲ್ಲಿ ಲೇಸರ್ ಮೆಡಿಸಿನ್ ಮಹತ್ತ್ವದ ಪಾತ್ರ ವಹಿಸುತ್ತಿದೆ. ಮೆಡ್-ಟೆಕ್ ಕ್ಷೇತ್ರದಲ್ಲಿ ಕರ್ನಾಟಕವು ಅತ್ಯುತ್ತಮ ಕಾರ್ಯಪರಿಸರ ಹೊಂದಿದ್ದು, ಕ್ಷಿಪ್ರ ಬೆಳವಣಿಗೆ ಕಾಣುತ್ತಿದೆ. ದೇಶದ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕ್ಷೇತ್ರಕ್ಕೆ ಅತ್ಯಗತ್ಯವಾಗಿರುವ ಸಾಧನಗಳ ಉತ್ಪಾದನೆಯಲ್ಲಿ ಕರ್ನಾಟಕದ ಪಾಲು ಶೇಕಡ 25ರಷ್ಟಿದೆ. ಇದರ ಜತೆಗೆ ದೇಶದ ಬಯೋಟೆಕ್ ಕಂಪನಿಗಳಲ್ಲಿ ಶೇಕಡ 60 ನಮ್ಮಲ್ಲೇ ಇದ್ದು, ದೇಶದ ಔಷಧ ರಫ್ತು ವಹಿವಾಟಿನಲ್ಲಿ ನಮ್ಮ ಪಾಲು ಶೇಕಡ 40ರಷ್ಟಿದೆ ಎಂದು...

ಹಟ್ಟಿ ಪಟ್ಟಣದ ಶ್ರೀಅಮರೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ.

ಇಮೇಜ್
ಹಟ್ಟಿ ಚಿನ್ನದ ಗಣಿ:21ಶ್ರೀಅಮರೇಶ್ವರ ಶಿಕ್ಷಣ ಹಾಗೂ ಗ್ರಾಮೀಣ ಅಭಿವೃದ್ಧಿ ಟ್ರಸ್ಟ್(ರಿ) ಹಟ್ಟಿ ಪಟ್ಟಣ.ಶ್ರೀ ಅಮರೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ನಡೆದಂತ ಎಸ್ ಎಸ್ ಎಲ್ ಸಿ ಪ್ರಥಮ ಭಾಷೆ ಕನ್ನಡ ಪರೀಕ್ಷೆಯನ್ನು ಹಟ್ಟಿ ಚಿನ್ನದ ಗಣಿಯ ಹಲವಾರು ಪ್ರೌಢಶಾಲೆಯ ವಿದ್ಯಾರ್ಥಿಗಳು ಒಟ್ಟು 339 ವಿದ್ಯಾರ್ಥಿಗಳ ಪೈಕಿ 331 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 8 ವಿದ್ಯಾರ್ಥಿಗಳು ಗೈರು ಹಾಜರು ಆಗಿದ್ದಾರೆ ಪರೀಕ್ಷೆಗಳು ಸುಸಜ್ಜಿತವಾಗಿ ನಡೆದವು ಎಂದು ಎಂದು ಪರೀಕ್ಷೆ ಕೇಂದ್ರದ ಮುಖ್ಯ ಅಧೀಕ್ಷಕರಾದ ಶ್ರೀಮತಿ ವಿಜಯಲಕ್ಷ್ಮಿ ಹಿರೇಮಠ ತಿಳಿಸಿದರು. ಹಾಗೂ ಶ್ರೀಶರಣಬಸವೇಶ್ವರ ಬಾಲಕಿಯರ ಪ್ರೌಢಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆದಿದ್ದು. ಒಟ್ಟು 333 ವಿದ್ಯಾರ್ಥಿಗಳ ಪೈಕಿ 323 ಪರೀಕ್ಷೆಗೆ ಹಾಜರಾಗಿದ್ದು 10 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ ಎಂದು ಹಾಗೂ ಎಲ್ಲಾ ವಿದ್ಯಾರ್ಥಿಗಳು ಸಿ ಸಿ ಕ್ಯಾಮೆರಾ ಕಣ್ಗಾವಲಿನಲ್ಲಿ ಪರೀಕ್ಷೆಯನ್ನು ಬರೆದಿದ್ದಾರೆ ಎಂದು ಪರೀಕ್ಷೆ ಕೇಂದ್ರದ ಮುಖ್ಯ ಅಧೀಕ್ಷಕರಾದ ಶರಣಗೌಡ ತಿಳಿಸಿದರು.

ಆನ್ವರಿ ಪ್ರೌಢಶಾಲೆಯಲ್ಲಿ ಸಿಸಿ ವೆಬ್ ಕ್ಯಾಮೆರಾ ಕಣ್ಗಾವಲಿನಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು.

ಇಮೇಜ್
  ಲಿಂಗಸಗೂರು :21ಹಟ್ಟಿ ಚಿನ್ನದ ಗಣಿ ಸಮೀಪದ ಆನ್ವರಿ ಸರಕಾರಿ ಪ್ರೌಢಶಾಲೆಯಲ್ಲಿ ಇಂದು ಎಸ್ ಎಸ್ ಎಲ್ ಸಿ ಪ್ರಥಮ ಭಾಷೆ ಕನ್ನಡ ಪರೀಕ್ಷೆ ನಡೆದಿದ್ದು.ಆನ್ವರಿ ಪ್ರೌಢಶಾಲೆಗೆ ಹಿರೇನಗನೂರು. ಆನ್ವರಿ. ಗೆಜ್ಜಲಗಟ್ಟ.ನಿಲೋಗಲ್ ಕ್ರಾಸ್.ಹಾಗೂ ರೋಡಲಬಂಡ ಪ್ರೌಢಶಾಲೆಗಳ ವಿದ್ಯಾರ್ಥಿಗಳು 115.ವಿದ್ಯಾರ್ಥಿನಿಯರು 106 ಒಟ್ಟು 221 ಹಾಗೂ ರಿಪೀಟರ್11 ವಿದ್ಯಾರ್ಥಿಗಳು ಸೇರಿ ಒಟ್ಟು 232 ವಿದ್ಯಾರ್ಥಿಗಳ ಪೈಕಿ 231 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 1 ವಿದ್ಯಾರ್ಥಿಯು ಗೈರು ಹಾಜರಿ ಎಂದು ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರಾದ ಶ್ರೀ ಶಂಕ್ರಪ್ಪ ಸಕ್ರಿ ತಿಳಿಸಿದರು.

ಜೇವರ್ಗಿಯ ೧೭ ಜನ ಪೌರಕಾರ್ಮಿಕರ ಹೋರಾಟಕ್ಕೆ ಬೆಂಬಲಿಸಿ ಮನವಿ.

ಇಮೇಜ್
  ಕೊಟ್ಟೂರು: ತಿರುಚಿದ ವಿಡಿಯೋ ದುರ್ಬಳಕೆ ಮಾಡಿ, ಸುಳ್ಳು ಪ್ರಕರಣವನ್ನು ದಾಖಲಿಸಿ, ಹೋರಾಟಗಾರರ ತೇಜೋವದಧೆಗೆ ಪ್ರಯತ್ನಿಸುತ್ತಿರುವ, ಪೊಲೀಸರ ಭ್ರಷ್ಟ ಅಧಿಕಾರಿಗಳ ಹಾಗೂ ರಾಜಕೀಯ ಷಡ್ಯಂತ್ರವನ್ನು ಖಂಡಿಸಿ, ಅಮಾನುಷ ಪ್ರಯತ್ನಗಳನ್ನು ಕೂಡಲೇ ನಿಲ್ಲಿಸಬೇಕೆಂದು ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನ ಶುಕ್ರವಾರ ಮಾನ್ಯ ಮುಖ್ಯಮಂತ್ರಿಗಳಿಗೆ ಕೊಟ್ಟೂರು ತಹಶೀಲ್ದಾರರ ಮುಖಾಂತರ ಮನವಿ ಸಲ್ಲಿಸಿತು. ಎಐಡಿಆರ್‌ಎಂ ಆಗ್ರಹಿಸಿ ತಮಗಾದ ಅನ್ಯಾಯಕ್ಕೆ ಪ್ರತಿಯಾಗಿ ನ್ಯಾಯಕ್ಕಾಗಿ ಮತ್ತು ತಮ್ಮ ಕೆಲಸಕ್ಕಾಗಿ ಜೇವರ್ಗಿ ತಾಲೂಕಿನ ೧೭ ಜನ ಪೌರ ಕಾರ್ಮಿಕರ ನಿರಂತರವಾಗಿ ಹೋರಾಟ ನಡೆಸುತ್ತಲೇ ಬಂದಿದ್ದಾರೆ. ಜೇವರ್ಗಿ ಪುರಸಭೆಯ ಮುಖ್ಯಾಧಿಕಾರಿ ಸೇರಿದಂತೆ, ಜಿಲ್ಲಾ ಯೋಜನಾ ನಿರ್ದೇಶಕರಿಗೆ, ಜಿಲ್ಲಾಧಿಕಾರಿಗಳಿಗೆ, ಶಾಸಕರಿಗೆ, ಸಚಿವರಿಗೆ, ಸೇರಿದಂತೆ ಸಂಬಂಧಿಸಿದ ಎಲ್ಲರಿಗೂ ಮನವಿಗಳನ್ನು ಸಲ್ಲಿಸುತ್ತಲೇ ಬಂದಿದ್ದಾರೆ. ಆದರೂ ಪೌರಕಾರ್ಮಿಕರಿಗೆ ನ್ಯಾಯ ಸಿಗದಿದ್ದಾಗ ಅನಿವಾರ್ಯವಾಗಿ ದಿನಾಂಕ ೬.೩.೨೦೨೫ ರಿಂದ ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನ (ಎಐಡಿಆರ್‌ಎಂ) ಮತ್ತು ಜೇವರ್ಗಿ ತಾಲೂಕಿನ ಪೌರಕಾರ್ಮಿಕರ ಸಂಘದ ಮೂಲಕ ಪುರಸಭೆ ಕಾರ್ಯಾಲಯ, ಜೇವರ್ಗಿ ಕಚೇರಿಯ ಮುಂದೆ ಅನಿರ್ಧಿಷ್ಠಿತ ಧರಣಿಯನ್ನು ಪ್ರಾರಂಭಿಸಲಾಗಿದೆ. ಸಾಮಾಜಿಕವಾಗಿ ತುಳಿತಕ್ಕೊಳಪಟ್ಟ ಮತ್ತು ಸರ್ಕಾರದ ಅಧಿಕಾರಿಗಳಿಂದಲೇ ಶೋಷಣೆಗೆ ಒಳಪಟ್ಟ ಬಹುತೇಕ ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆಯರನ್ನು ಒಳಗೊಂಡ ...

ಮಾ. 22 ರ ಕರ್ನಾಟಕ ಬಂದ್ ಗೆ ಬೆಂಬಲ ಇಲ್ಲ ಇಂಡಿಯನ್ ವೆಹಿಕಲ್ ಡ್ರೈವರ್ಸ್ ಟ್ರೇಡ್ ಯೂನಿಯನ್ ನಿರ್ಧಾರ

ಇಮೇಜ್
ಮಾರ್ಚ್ 22 ರಂದು ಕನ್ನಡ ಚಳವಳಿ ಪಕ್ಷದ ವಾಟಾಳ್ ನಾಗರಾಜ್ ಕರೆ ನೀಡಿರುವ ಕರ್ನಾಟಕ ಬಂದ್ ಗೆ ಇಂಡಿಯನ್ ವೆಹಿಕಲ್ ಡ್ರೈವರ್ಸ್ ಟ್ರೇಡ್ ಯೂನಿಯನ್ ಮತ್ತು ಸ್ನೇಹಜೀವಿ ಚಾಲಕರ ಟ್ರೇಡ್ ಯೂನಿಯನ್ ಸಂಘಟನೆಗಳು ಬೆಂಬಲ ನೀಡುವುದಿಲ್ಲ ಎಂದು ಘೋಷಿಸಿವೆ.  ಸುದ್ದಿಗಾರರೊಂದಿಗೆ ಮಾತನಾಡಿದ ಇಂಡಿಯನ್ ವೆಹಿಕಲ್ ಡ್ರೈವರ್ಸ್ ಟ್ರೇಡ್ ಯೂನಿಯನ್ ಅಧ್ಯಕ್ಷ ಗಂಡಸಿ ಸದಾನಂದ ಸ್ವಾಮಿ ಮತ್ತು ಸ್ನೇಹಜೀವಿ ಚಾಲಕರ ಟ್ರೇಡ್ ಯೂನಿಯನ್ ಅಧ್ಯಕ್ಷ ಸಂತೋಷ್ ಕುಮಾರ್, ಬಂದ್ ಚಾಲಕರ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕುವಂತಿದೆ. ಬೆಂಗಳೂರಿನಲ್ಲಿ 75 ಸಾವಿರಕ್ಕೂ ಅಧಿಕ ಆಟೋಗಳು ಸಂಚರಿಸುತ್ತಿವೆ. 2.5 ಲಕ್ಷಕ್ಕೂ ಅಧಿಕ ಕುಟುಂಬಗಳು ಚಾಲಕ ವೃತ್ತಿಯನ್ನು ಅವಲಂಬಿಸಿದ್ದು, ಬಂದ್ ನಿಂದ ಇವರ ಬದಕು ದುಸ್ತರವಾಗಲಿದೆ. ಔಷಧ, ತರಕಾರಿ, ಹಾಲು, ಅಗತ್ಯ ವಸ್ತುಗಳ ಸಾಗಾಣೆ, ಶಾಲಾ ವಾಹನಗಳು ಸೇವೆ ಸ್ಥಗಿತಗೊಳಿಸಿದರೆ ಜೀವನ ನಿರ್ವಹಣೆ ಕಷ್ಟವಾಗುತ್ತದೆ ಎಂದರು.  ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 8 ಸಾವಿರಕ್ಕೂ ಅಧಿಕ ವಾಹನಗಳು ಸೇವೆ ನೀಡುತ್ತಿವೆ. ಸಿಟಿ ಟ್ಯಾಕ್ಸಿ, ಓಲಾ, ಊಬರ್, ರಾಜ್ಯದ ಮೂಲೆ ಮೂಲೆಗಳಲ್ಲಿ ಕಾರ್ಯಾಚರಣೆ ಮಾಡುತ್ತಿವೆ. ಆದರೆ ಚಾಲಕರು ಬೆಲೆ ಏರಿಕೆಯಿಂದಾಗಿ ತೊಂದರೆಯಲ್ಲಿದ್ದಾರೆ. ಇಎಂಐ, ವಾಹನ ವಿಮೆ ಪಾವತಿ ಮಾಡಲು ಸಾಧ್ಯವಾಗದ ಪರಿಸ್ಥಿತಿ ಇದೆ. ರಾಜ್ಯ ಬಜೆಟ್ ನಲ್ಲೂ ಚಾಲಕ ಸಮುದಾಯಕ್ಕೆ ಯಾವುದೇ ಕೊಡುಗೆ ನೀಡಿಲ್ಲ ಎಂದು ಹೇಳಿದರು....

ಕರುನಾಡಿನ ಕನ್ನಡ ಶಾಸನಗಳಿಗೆ ಇಲ್ಲವೇ ಕಿಮ್ಮತ್ತು..! ಭಾಷಾ ಅಭಿಮಾನಕ್ಕೆ ಆದ್ಯತೆ ‌ನೀಡದ ಕರ್ನಾಟಕ ಸರಕಾರ

ಇಮೇಜ್
  ಮಸ್ಕಿ : ಬಜೆಟ್‌ನಲ್ಲಿ ರುಪಾಯಿ ಚಿಹ್ನೆಯನ್ನು ಮಾತೃಭಾಷೆಯಲ್ಲೇ ನಮೂದಿಸುವ ಮೂಲಕ ಭಾಷಾಪ್ರೇಮ ಮೆರೆದಿದ್ದ ತಮಿಳುನಾಡಿನ ಸರ್ಕಾರ, ಅದೇ ಬಜೆಟ್‌ನಲ್ಲಿ ರಾಯಚೂರು ಜಿಲ್ಲೆಯ ಮಸ್ಕಿಯಲ್ಲಿರುವ ಏಳು ಸಾಲಿನ ಶಾಸನದ ಅಧ್ಯಯನಕ್ಕೂ ಹಣ ಮೀಸಲಿರಿಸಿ ಭಾಷಾ ಪ್ರೀತಿ ಮೆರೆದಿದೆ. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪಕ್ಕದಲ್ಲಿ ಇರುವ ಸುಳಿದಿಬ್ಬ ಬಂಡೆಗಲ್ಲಿನಲ್ಲಿ ತಮಿಳು ಲಿಪಿ ಸಂಸ್ಕೃತಿ ಭಾಷೆಯ ಶಾಸನವಿದೆ.  ಇದು ಕ್ರಿಶ ೧೦೨೦ರಲ್ಲಿನ ಎಡೆದೊರೆ ೨,000 ಸಾವಿರ ಗ್ರಾಮಗಳ ರಾಜಧಾನಿ ಯಾದ ಮೊಸಗೆ ಯಲ್ಲಿ (ಈಗಿನ ಮಸ್ಕಿ) ಕಲ್ಯಾಣ ಚಾಳುಕ್ಯರ ಇಮ್ಮಡಿ ಜಯಸಿಂಹ ಹಾಗೂ ತಮಿಳುನಾಡಿನ ಮೂರು ರಾಜಮನತೆನಗಳಾದ ಚೋಳರು, ಪಾಂಡ್ಯರು ಹಾಗೂ ಚೇರರ ಒಕ್ಕೂಟದ ಸೈನ್ಯವು ರಾಜೇಂದ್ರ ವರ್ಮಾ ನ ನೇತೃತ್ವ ದಲ್ಲಿ ನಡೆದ ಯುದ್ಧದಲ್ಲಿ ಕಲ್ಯಾಣ ಚಾಳುಕ್ಯರ ಅರಸಸೋಲನುಭವಿಸುತ್ತಾನೆ.ಇದರ ನೆನಪಿಗಾಗಿ ಸಂಸ್ಕೃತ ಭಾಷೆಯಲ್ಲಿ ತಮಿಳು ಲಿಪಿಯಲ್ಲಿ ಈ ಶಾಸನವನ್ನು ಕೆತ್ತಿಸಲಾಗಿದೆ. ತಮಿಳುನಾಡು ಸರ್ಕಾರ ಈ ಮಹತ್ವದ ಶಾಸನವನ್ನು ಅರಿತು . ತಮಿಳು ಭಾಷೆಯನ್ನು ಇನ್ನಷ್ಟು ಗಟ್ಟಿಗೊಳಿಸಿಕೊಳ್ಳಲು ಅಲ್ಲಿನ ಸರ್ಕಾರ ಭಾಷೆಗೆ ಸಂಬಂಧಿಸಿದ ಪ್ರತಿ ಸಂಗತಿಗೂ ವಿಶೇಷ ಒತ್ತು ನೀಡುತ್ತಿದೆ ಎಂಬುದು ಇದಕ್ಕೆ ಸಾಕ್ಷಿಯಾಗಿದೆ. ಆದರೆ ಮಸ್ಕಿ ಪಟ್ಟಣದ ಹಳೇ ಪ್ರವಾಸಿ ಮಂದಿರ ದಲ್ಲಿ ಕೆಲವು ಕನ್ನಡ ಶಾಸನಗಳು ದೊರೆತಿವೆ.ಆದರೆ ಅವುಗಳನ್ನು ರಕ್ಷಣೆ ಮಾಡುವಲ್ಲಿ ಸರಕಾರ ಹಾಗೂ ಪುರಾತತ್ವ ಇ...

🪔ನಿಧನ ವಾರ್ತೆ: ಗಿಡ್ಡ ಉಚ್ಚಿಂಗೆಪ್ಪನವರ ಪಾಪಯ್ಯ ನಿಧನ *🪔

ಇಮೇಜ್
ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ 14 ನೇ ವಾರ್ಡಿನ ಡಾಕ್ಟರ್ ಬಿ ಆರ್ ಅಂಬೇಡ್ಕರ್ ನಗರದ ನಿವಾಸಿಗಳಾದ ಗಿಡ್ಡ ಹುಚ್ಚಿಂಗೆಪ್ಪನವರ ಪಾಪಯ್ಯ (80), ಬುಧವಾರ ರಂದು ಸಾಯಂಕಾಲ 4 ಘಂಟೆಗೆ ಸ್ವ ಗೃಹದಲ್ಲಿ ಸುಮಾರು ಆರು ತಿಂಗಳಗಳಿಂದ ಹಾಸಿಗೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದು ಈ ದಿನ ನಿಧನರಾಗಿದ್ದಾರೆ. ಅವರು ಗಿಡ್ಡ ಉಚ್ಚೀಗೆಂಪ್ಪನವರ ಪಾಪಯ್ಯ ಇವರಿಗೆ ಧರ್ಮ ಪತ್ನಿ ಉಚ್ಚೆಂಗೆಮ್ಮ ಇದ್ದು ಹಾಗೂ 3 ಜನ ಗಂಡು ಮಕ್ಕಳು ಹಾಗೂ 4 ಜನ ಹೆಣ್ಣುಮಕ್ಕಳಿದ್ದು ಮೊಮ್ಮಕ್ಕಳು ಸೇರಿದಂತೆ,ಅಳಿಯಂದಿರು,ತುಂಬು ಕುಟುಂಬವನ್ನು ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ.   *ಅಂತ್ಯಕ್ರಿಯೆ*- ಮಾರ್ಚ್ -20 ಗುರುವಾರ ರಂದು 10.30 ಘಂಟೆಗೆ ಕೂಡ್ಲಿಗಿ ಪಟ್ಟಣದ ಕಡೆಯ ಅಂಚಿನಲ್ಲಿರುವ ಶ್ರೀ ರಾಜೀವ್ ಗಾಂಧಿನಗರದ ಪಕ್ಕದಲ್ಲಿ ಬರುವ ಶಾಂತಿ ವನದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು. *ಸಂತಾಪ*- ಕೂಡ್ಲಿಗಿ , ಪಟ್ಟಣದ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಸಂಘ ಹಾಗೂ ಮಾದಿಗ ದಂಡೋರ ಸಂಘ ಹಾಗೂ ದಲಿತ ಸಮುದಾಯದ ಮುಖಂಡರು ಗಳು, ಸಂಬಂಧಿಕರು ಹಾಗೂ ವಿವಿದ ಸಮುದಾಯದವರು ಪಟ್ಟಣದ ಸಮಸ್ತ ಗ್ರಾಮಸ್ಥರು. ಸೇರಿದಂತೆ, ವಿವಿದ ಸಮುದಾಯದವರು. ತಾಲೂಕಿನ ಎಲ್ಲಾ ದಲಿತ ಪರ ಸಂಘಟನೆಗಳು ಸೇರಿದಂತೆ ರೈತರು ಕಾರ್ಮಿಕರು ಮಹಿಳೆಯರ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು. ಪಟ್ಟಣ ಪಂಚಾಯಿತಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಸರ್ವ ಸದಸ್ಯರು. ಶಾಸಕರು ಮೊ...

*🪔ನಿಧನ ವಾರ್ತೆ: ಶ್ರೀಮತಿ ರಾಧಾ ದೇವಿ ನಿಧನ *🪔*

ಇಮೇಜ್
ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ 14 ನೇ ವಾರ್ಡಿನ ಡಾಕ್ಟರ್ ಬಿ ಆರ್ ಅಂಬೇಡ್ಕರ್ ನಗರದ ನಿವಾಸಿಗಳಾದ ಶ್ರೀಮತಿ ರಾಧಾ ದೇವಿ (52), ಮಂಗಳವಾರ ರಂದು ಹುಬ್ಬಳ್ಳಿಯ ತತ್ವ ದರ್ಷ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದು ನಿನ್ನೆ ದಿನ ರಾತ್ರಿ 8:30ರ ಸಮಯದಲ್ಲಿ ನಿಧನರಾಗಿದ್ದಾರೆ. ಅವರು ಕೆಲವೇ ದಿನಗಳಿಂದ, ಅನಾರೋಗ್ಯದಿಂದ ಬಳಲುತಿದ್ದರು. ಡಾಕ್ಟರ್ ಬಿ ಆರ್ ಅಂಬೇಡ್ಕರ ಸಂಘದ ಮಾಜಿ ಅಧ್ಯಕ್ಷರಾದ ಹಾಗೂ ಗಜಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಡ್ತಿ ಮುಖ್ಯ ಗುರುಗಳಾದ ಹೆಚ್.ಆಂಜಿನೇಯ ಇವರ ಧರ್ಮಪತ್ನಿ ಶ್ರೀಮತಿ ರಾಧ ದೇವಿ ಇವರಿಗೆ 4 ಜನ ಹೆಣ್ಣುಮಕ್ಕಳಿದ್ದು ಮೊಮ್ಮಕ್ಕಳು ಸೇರಿದಂತೆ,ಅಳಿಯಂದಿರು,ತುಂಬು ಕುಟುಂಬವನ್ನು ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ.   *ಅಂತ್ಯಕ್ರಿಯೆ*- ಮಾರ್ಚ್ -19 ಬುಧವಾರ ರಂದು ಮಧ್ಯಾಹ್ನ 2 ಘಂಟೆಗೆ ಕೂಡ್ಲಿಗಿ ಪಟ್ಟಣದ ಕಡೆಯ ಅಂಚಿನಲ್ಲಿರುವ ಶ್ರೀ ರಾಜೀವ್ ಗಾಂಧಿನಗರದ ಪಕ್ಕದಲ್ಲಿ ಬರುವ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು. *ಸಂತಾಪ*- ಕೂಡ್ಲಿಗಿ , ಪಟ್ಟಣದ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಸಂಘ ಹಾಗೂ ದಲಿತ ಸಮುದಾಯದ ಮುಖಂಡರು ಗಳು, ಸಂಬಂಧಿಕರು ಹಾಗೂ ವಿವಿದ ಸಮುದಾಯದವರು ಪಟ್ಟಣದ ಸಮಸ್ತ ಗ್ರಾಮಸ್ಥರು. ಸೇರಿದಂತೆ, ವಿವಿದ ಸಮುದಾಯದವರು. ತಾಲೂಕಿನ ಎಲ್ಲಾ ದಲಿತ ಪರ ಸಂಘಟನೆಗಳು ಸೇರಿದಂತೆ ರೈತರು ಕಾರ್ಮಿಕರು ಮಹಿಳೆಯರ ಕನ್ನಡಪರ ಸಂಘಟನೆ...

ಕೂಸಿನ ಮನೆಗೆ.ವೆಂಕಟೇಶ್ ದೇಸಾಯಿ ಸಹಾಯಕ ನಿರ್ದೇಶಕರು(ಗ್ರಾ. ಉ)ರವರಿಂದ ಭೇಟಿ.

ಇಮೇಜ್
  ಲಿಂಗಸಗೂರು:ರಾಯಚೂರು ಜಿಲ್ಲಾ ಲಿಂಗಸಗೂರು ತಾಲೂಕು ಕಿನ ವಿವಿದ ಗ್ರಾಮ ಪಂಚಾಯತಗಳಾದ ಸರ್ಜಾಪುರ,ಗೆಜ್ಜೆಲಗಟ್ಟ, ಅನ್ವರಿ,ಗೌಡುರ,ಪೈದೊಡ್ಡಿ ಪಂಚಾಯಿತಿಗಳ ವ್ಯಾಪ್ತಿಗೆ ಒಳಪಡುವ.ಕೂಸಿನ ಮನೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ನಂತರ ಪ್ರತಿಯೊಂದು ಕೂಸಿನ ಮನೆಯಲ್ಲಿ ಸ್ವಚ್ಛತೆ,ಸುರಕ್ಷತೇ ಹಾಗೂ ಮಕ್ಕಳಿಗೆ ಸೂಚಿತ್ವ ಆಹಾರ,ಉಪಹಾರ ಹಾಗೂ ಪೌಷ್ಟಿಕ ಆಹಾರ ನೀಡಬೇಕು, ಮಕ್ಕಳಿಗೆ.ದೈಹಿಕ.ಮಾನಸಿಕ, ಬೌದಿಕ,ಶರೀರಕ,ಸೃಜನಾತ್ಮ ಬೆಳವಣಿಗೆಗೆ ಕೂಸಿನ ಮನೆಯು ಸಹಕರಿ ಯಾಗಬೇಕು ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ.ಹಾಗೂ ಕೇರ್ ಟೆಕಾರ್ ಗಳಿಗೆ ಸೂಚನೆ ನೀಡಿದರು. ರಾಯಚೂರು ಜಿಲ್ಲಾ ಯ ಆಹಾರ ಮೆನು ಪ್ರಕಾರ ನೀಡಬೇಕು ತಾಲೂಕಿನ ಎಲ್ಲಾ ಕೂಸಿನ ಮನೆಗೆ ಸರಕಾರದ ಮಾರ್ಗಸೂಚಿ ಪ್ರಕಾರ ಮೂಲ ಭೂತ ಸೌಕರ್ಯ ನೀಡಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು,ಅಧ್ಯಕ್ಷರು, ತಾಲೂಕು ಐ.ಇ.ಸಿ. ಸಂಯೋಜಕರು,ತಾಂತ್ರಿಕ ಸಹಾಯಕರು,ಜಿ ಕೆ ಎಮ್ .ಬಿಫ್ಟ್ಸ್.ಕರವಾಸಲಿ ಗಾರರು,ಕೇರ್ ಟೆಕಾರ್ ಗಳು ,ಭಾಗವಯಿಸಿದ್ದರು.

ನ್ಯಾಯಾಲಯಗಳಲ್ಲಿ ಕನ್ನಡ ಭಾಷಾ ಅನುಷ್ಠಾನ ರಾಜ್ಯ ಸಮಿತಿ ಉದ್ಘಾಟನಾ ಸಮಾರಂಭ.

ಇಮೇಜ್
ಬೆಂಗಳೂರು ಮಾರ್ಚ್ 18; ಭಾರತೀಯ ಭಾಷಾ ಅಭಿಯಾನ, ಕರ್ನಾಟಕ ವತಿಯಿಂದ ರಾಜ್ಯದ ನ್ಯಾಯಾಂಗದಲ್ಲಿ ನ್ಯಾಯಾಲಯಗಳಲ್ಲಿ ಕನ್ನಡ ಭಾಷಾ ಅನುಷ್ಠಾನಕ್ಕಾಗಿ ರಾಜ್ಯ ಸಮಿತಿ ಉದ್ಘಾಟನಾ ಸಮಾರಂಭ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ, ಹೈಕೋರ್ಟ್ ನ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಮಾತನಾಡಿ,ರಾಜ್ಯದ ಹೈಕೋರ್ಟ್ ಸೇರಿದಂತೆ ಬೇರೆ ನ್ಯಾಯಾಲಯಗಳಲ್ಲಿ 17ಸಾವಿರ ಪ್ರಕರಣಗಳು ಆನ್ ಲೈನ್ ಮೂಲಕ ಕನ್ನಡದಲ್ಲಿ ತೀರ್ಪು ಬಂದಿವೆ. ಕನ್ನಡದಲ್ಲಿ ಹೈಕೋರ್ಟ್ ಸೇರಿದಂತೆ ಕೆಳ ನ್ಯಾಯಾಲಯದ ವರೆಗೆ ತೀರ್ಪುಗಳು ಕನ್ನಡದಲ್ಲಿ ಬರುವ ಅಗತ್ಯವಿದೆ ಎಂದು ಹೇಳಿದರು. ಹೈಕೋರ್ಟ್ ನ ನ್ಯಾಯಮೂರ್ತಿ ಆರ್ .ದೇವದಾಸ್ ಮಾತನಾಡಿ, ಈ ದೇಶದಲ್ಲಿ ಆಯಾ ಪ್ರಾದೇಶಿಕ ಭಾಷೆಗಳಲ್ಲಿ ನ್ಯಾಯಾಲಯಗಳಲ್ಲಿ ತೀರ್ಪುಗಳ ವಾದ,ಪ್ರತಿವಾದಗಳು ನಡೆಯಬೇಕಾದರೆ ಕೇಂದ್ರ ಸರ್ಕಾರ ಇಲ್ಲವೇ ಸುಪ್ರೀಂಕೋರ್ಟ್ ನಿಂದ ಗೆಜೆಟ್ ನೋಟಿಫಿಕೇಶನ್ ಹೊರಡಿಸುವುದು ಅಗತ್ಯವಾಗಿದೆ ಜತೆಗೆ ಇಂದಿನ ಪೀಳಿಗೆಯ ವಕೀಲರು ಇಂಗ್ಲಿಷ್ ವ್ಯಾಮೋಹ ವ್ಯವಹಾರ ಕೈ ಬಿಟ್ಟು ಆಯಾ ಪ್ರಾದೇಶಿಕ ಭಾಷೆಯಲ್ಲಿ ವಾದ ನಡೆಸಿದರೆ ಕನ್ನಡ ಭಾಷೆ ನ್ಯಾಯಾಲಯದಲ್ಲಿ ಬಳಕೆಯಾಗಲು ಸಾಧ್ಯ ಎಂದರು. ಕಾರ್ಯಕ್ರಮದ ಸಂಯೋಜಕ, ನಿರೂಪಕ ವಕೀಲ ಅನಿಲ್ ರೆಡ್ಡಿ ಮಾತನಾಡಿ,ಇಡೀ ದೇಶದಲ್ಲಿ ಪ್ರಾದೇಶಿಕ ಭಾಷೆಯಲ್ಲಿ ನ್ಯಾಯಾಲಯ ವ್ಯವಹಾರಗಳು, ವಾದ ಪ್ರತಿವಾದಗಳು ನಡೆಯಬೇಕೆಂಬ ಉದ್ದೇಶದಿಂದ ಕನ್ನಡ ಭಾಷೆ ನ್ಯಾಯಾಂಗದಲ್ಲಿ ಅನುಷ್ಠಾನ ಕುರಿತು ವಿಚಾರ ಸಂಕಿರಣ, ...

ಪುರುಷೋತ್ತಮ ದಾಸ್ ಹೆಗ್ಗಡೆ ಅವರ “ಯಯಾತಿ” ಕಾದಂಬರಿ ಬಿಡುಗಡೆ

ಇಮೇಜ್
  ಅತಿ ಕಾಮ ಅತಿರೇಖವಾದ್ದು, ಮನಷ್ಯನ ಶ್ರೇಯಸ್ಸಿಗೆ ಪೂರಕವಲ್ಲ ; ಸಂಸ್ಕೃತಿ ಚಿಂತಕ ಬಂಜಗೆರೆ ಜಯಪ್ರಕಾಶ್ ಬೆಂಗಳೂರು, ಮಾ, 16; ಯಯಾತಿ ಎಲ್ಲಾ ಕಾಲಕ್ಕೂ ಸರ್ವಶ್ರೇಷ್ಠ ವಸ್ತುವಾಗಿದ್ದು, ಎಲ್ಲಾ ಕಾಲಘಟ್ಟದಲ್ಲೂ ಯಯಾತಿ ಪಾತ್ರಧಾರಿಗಳನ್ನು ಕಾಣಬಹುದು. ಕಾಮ ಎನ್ನುವುದು ಚಿವಿಂಗ್ ಗಮ್ ರೀತಿ. ಮೊದಲು ಜಿಗಿಯುವಾಗ ಚೆನ್ನಾಗಿರುತ್ತದೆ. ಅದೇ ರೀತಿ ಅತಿ ಕಾಮ ಅತಿರೇಖವಾದ್ದು, ಇದು ಮನಷ್ಯನ ಶ್ರೇಯಸ್ಸಿಗೆ ಪೂರಕವಲ್ಲ ಎಂದು ಲೇಖಕ, ಸಂಸ್ಕೃತಿ ಚಿಂತಕ ಬಂಜಗೆರೆ ಜಯಪ್ರಕಾಶ್ ಹೇಳಿದ್ದಾರೆ.  ಮಹಾಭಾರತದ ಆಖ್ಯಾನದ ಎಳೆಯನ್ನು ಆಧರಿಸಿದ, ಪೌರಾಣಿಕ ಕಥಾ ಹಂದರವನ್ನೊಳಗೊಂಡಿರುವ ಪುರುಷೋತ್ತಮ ದಾಸ್ ಹೆಗ್ಗಡೆ ರಚಿತ “ಯಯಾತಿ” ಕಾದಂಬರಿಯನ್ನು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಸಾಹಿತಿಗಳು, ಗಣ್ಯರ ಸಮ್ಮುಖದಲ್ಲಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಎಲ್ಲಿ ಸಮರಸ್ಯದ ದಾಂಪತ್ಯ ಇರುವುದಿಲ್ಲವೋ ಅಲ್ಲಿ ಸಂಸಾರ ದೀರ್ಘಕಾಲ ನಡೆಯುವುದಿಲ್ಲ. ಹೆಣ್ಣು ಗಂಡು ನಡುವಿನ ಪ್ರೇಮ ಮೊದಲಿಗೆ ಆಕರ್ಷಣೆಯಾದರೂ ಕ್ರಮೇಣ ಗೌರವ, ಪರಸ್ಪರ ವಿಶ್ವಾಸ ಮೂಡುವಂತಾಗಬೇಕು. ಆರೈಕೆಯ ಭಾವನೆಯ ಜೊತೆಗೆ ಸಂಬಂಧ ಮಾಗುತ್ತಾ ಮಾಗುತ್ತಾ ಪ್ರೌಢವಾಗುತ್ತಾ ಸಾಗಬೇಕು. ಇಲ್ಲವಾದಲ್ಲಿ ಒಲುಮೆಗಿಂತ ಸಂಘರ್ಷ ಜಾಸ್ತಿಯಾಗುತ್ತದೆ ಎಂದರು.  ಎಲ್ಲಾ ಕಾಲದಲ್ಲೂ ಮನುಷ್ಯನಿಗೆ ಮೂರು ಅಭೀಪ್ಸೆಗಳು ಇರುತ್ತವೆ. ನನಗೆ ಮುಪ್ಪು ಬರಬಾರದು ಎನ್ನುವುದು. ಯೋಗ ಶಾಸ್ತ್ರವೂ ಕೂಡ ದೇಹವನ್ನು ವಜ್ರಕ...