12 ವರ್ಷ ಆಗದ ಅಭಿವೃದ್ಧಿ 22 ತಿಂಗಳಲ್ಲಿ ಮಾಡಿದ್ದು ಯಾರು? : ಆರ್.ಸಿದ್ದನಗೌಡ
ಮಸ್ಕಿ: ವಸತಿ ರಹಿತ ನೀವೇಶನಗಳಿಗಾಗಿ ರೈತರ ಜಮೀನುಗಳನ್ನು ಸರ್ಕಾರಕ್ಕೆ ರಸ್ತೆ ಸಂಪರ್ಕ ಇದೆ ಎಂದು ಸುಳ್ಳು ಹೇಳಿ ಮಾರಾಟ ಮಾಡಿಸಿ ಸರ್ಕಾರಕ್ಕೆ ಹಾಗೂ ರೈತರಿಗೆ ಮಾಜಿ ಶಾಸಕರ ಹಿಂಬಾಲಕರು ಮೋಸ ಮಾಡಿದ್ದಾರೆ ಎಂದು ಎಸ್ ಟಿ ಘಟಕದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಆರ್.ಸಿದ್ದನಗೌಡ ತುರವಿಹಾಳ ಆರೋಪಿಸಿದರು.
ಮಾಜಿ ಶಾಸಕರು12 ವರ್ಷದ ಅಧಿಕಾರ ಅವದಿಯಲ್ಲಿ ಮಾಡದ ಕೆಲಸವನ್ನು ಶಾಸಕರು ಕೇವಲ 22 ತಿಂಗಳಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ನೋಡಿ ಸಹಿಸಲಾರದೇ ಬಿಜೆಪಿ ಪಕ್ಷದ ನಾಯಕರಿಗೆ ಹಾಗೂ ಅಧ್ಯಕ್ಷರು ಹೊಟ್ಟೆ ಉರಿ ಪಟ್ಟುಕೊಳ್ಳುತ್ತಿದ್ದಾರೆ ಎಂದು ಕಟುವಾಗಿ ಟೀಕಿಸಿದರು.
ನಿಮ್ಮ ಅಧಿಕಾರ ಅವಧಿಯಲ್ಲಿ ಮಸ್ಕಿ ಪಟ್ಟಣದ ಕೇಂದ್ರ ಸ್ಥಾನದಲ್ಲಿ ಸುಸಜ್ಜಿತವಾದ ಆಸ್ಪತ್ರೆಯನ್ನು ಮಾಡದೆ ಜನರಿಗೆ ಅನುಕೂಲ ಮಾಡಲಾಗಲಿಲ್ಲ.
ಈಗ ಅಧಿಕಾರ ಕಳೆದುಕೊಂಡು ಬ್ರಹ್ಮ ನಿರಸನಕ್ಕೆ ಒಳಗಾಗಿ ಇಂಥ ಮಾತುಗಳನ್ನು ಆಡುತ್ತಿದ್ದಾರೆ. ಅಲ್ಲದೆ ಈ ಹಿಂದೆ ನಿಮ್ಮ ಸರ್ಕಾರದ ಅವಧಿಯಲ್ಲಿ ಮಾಜಿ ಆರೋಗ್ಯ ಮಂತ್ರಿ
ಬಿ. ಶ್ರೀರಾಮುಲು ಹಾಗೂ ಡಾ.ಸುಧಾಕರ್ ಇದ್ದರು ಆಗಲಾದರೂ ಮಸ್ಕಿ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಬಹುದಿತ್ತು. ಆದರೆ ನೀವು ಬಡವರಿಗಾಗಿ ಯಾಕೆ ಮಾಡಬೇಕು ಎಂದು ಅಸಡ್ಡೆ ತೋರಿದ ಸಲುವಾಗಿ ಕ್ಷೇತ್ರದ ಜನರು ನಿಮ್ಮನ್ನು ಮನೆಯಲ್ಲಿ ಕೂರಿಸಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳು ಜಮೀನನ್ನು ಕೂಡಲೇ ರೈತರಿಗೆ ಮರಳಿಸಿ ಸರ್ಕಾರದ ಹಣವನ್ನು ಮರಳಿ ಪಡೆಯಬೇಕು ಎಂದು ಆಗ್ರಹಿಸಿದರು.
ಇನ್ನಾದರೂ ಬಿಜೆಪಿ ಪಕ್ಷದ ಮಂಡಲ ಅಧ್ಯಕ್ಷರು ಶಾಸಕ ಆರ್ ಬಸನಗೌಡ ತುರುವಿಹಾಳ್ ಅವರ ಅಭಿವೃದ್ಧಿ ವಿಷಯದ ಕುರಿತು ಮಾತನಾಡುವ ಮುನ್ನ ಎಚ್ಚರಿಕೆಯಿಂದ ಮಾತನಾಡಲಿ ಎಂದು ಪ್ರತ್ಯಾರೋಪ ಮಾಡಿದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ