ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಿಗೆ ಪ್ರತಿಯೊಬ್ಬರಿಗೂ ಯಾವುದೇ ಸಂದರ್ಭದಲ್ಲಿ ಕುಡಿಯುವ ನೀರು ಸಮಸ್ಯೆಯಾಗದಂತೆ ಕಟ್ಟೆಚ್ಚರ ವಹಿಸಲು ಅಧಿಕಾರಿಗಳಿಗೆ ಎಚ್ಚರಿಕೆ : ಶಾಸಕ ಶ್ರೀನಿವಾಸ್.ಎನ್.ಟಿ

 

ಕೂಡ್ಲಿಗಿ : ಬೇಸಿಗೆ ಆರಂಭವಾಗಿದ್ದು ಕ್ಷೇತ್ರದಲ್ಲಿ ಎಲ್ಲೂ ಕುಡಿಯುವ ನೀರಿನ ತೊಂದರೆ ಎದುರಾಗದಂತೆ ಅಧಿಕಾರಿಗಳು ಕ್ರಮವಹಿಸಿ ಕೆಲಸ ಮಾಡಬೇಕು ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹೇಳಿದರು. ಪಟ್ಟಣದ ತಾಲೂಕು ಕಚೇರಿಯಲ್ಲಿ ಶುಕ್ರವಾರ ಟಾಸ್ಕ್ ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಸಿ ಮಾತನಾಡಿದರು. ಈಗಾಗಲೇ ವಾತಾವರಣದಲ್ಲಿ ಉಷ್ಣ ಹೆಚ್ಚಾಗಿದ್ದು, ಬಿಸಿ ಗಾಳಿ ಶುರುವಾಗಿದೆ. ಕ್ಷೇತ್ರದಲ್ಲಿ ಈ ಬಾರಿ ಸಮರ್ಪಕವಾಗಿ ಜನ,ಜಾನುವಾರುಗಳಿಗೆ ನೀರು ಒದಗಿಸಬೇಕಿದೆ, ಕುಡಿಯುವ ನೀರಿನ ಪೂರೈಸಲು ಪೂರಕವಾದ ಅಧಿಕಾರಿಗಳ ನಡುವೆ ಸಮನ್ವಯ ಸಾಧಿಸಿ ಕರ್ತವ್ಯ ನಿರ್ವಹಿಸಬೇಕು ಕೇವಲ ಸಬುಬೂ ಹೇಳಿದರೆ ಮುಂದಿನ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಖಡಕ್ ಎಚ್ಚರಿಕೆ ಅಧಿಕಾರಿಗಳಿಗೆ ತಿಳಿಸಿದರು. ಕ್ಷೇತ್ರ ವ್ಯಾಪ್ತಿಯಲ್ಲಿ ಎಲ್ಲೆಲ್ಲಿ ನೀರಿನ ಬವಣೆ ಎದುರಾಗಿದೆ ಎಂದು ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ ಎಇಇ ಪ್ರಸನ್ನ ಅವರನ್ನು ಶಾಸಕ ಕೇಳಿದರು. ಈಗಾಗಲೇ ಕ್ಷೇತ ಎಲ್ಲಾ ಕಡೆ ಕೊಳವೆ ಬಾವಿಗಳು ಸಮರ್ಪಕವಾಗಿ ನೀರು ಇದ್ದು, 5 ರಿಂದ 6 ಗ್ರಾಮದಲ್ಲಿ ಈ ಬಾರಿ ನೀರಿನ ಕೊರತೆ ಕಾಣಬಹುದು ಎಂದು ತಿಳಿಸಿದರು. ಅದರಂತೆ ಹುರುಳಿಹಾಳು ಮ್ಯಾಸರ ಹಟ್ಟಿಯಲ್ಲಿ ಈಗ ಕೊಳವೆ ಬಾವಿ ಇದ್ದರು, ಆ ಕೊಳವೆ ಬಾವಿಯಲ್ಲಿ ರಾಸಾಯನಿಕ ಅಂಶ ಇದೆ ಎಂದು ಪರೀಕ್ಷೆಯಲ್ಲಿ ದೃಢಪಟ್ಟಿದೆ ಆದ್ದರಿಂದ ಆ ಕೊಳವೆ ಬಾವಿಗೆ ಶುದ್ದ ನೀರಿನ ಘಟಕ ಅಳವಡಿಸಿದರೆ ಮಾತ್ರ ಕುಡಿಯಲು ಯೋಗ್ಯವಾಗುತ್ತದೆ, ಆದ್ದರಿಂದ ಅಲ್ಲಿ ಘಟಕ ಅಳವಡಿಸ ಬೇಕು ಎಂದು ತಿಳಿಸಿದರು. ಇದಕ್ಕೆ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಈ ಕೂಡಲೇ ಬೇಕಾದ ವ್ಯವಸ್ಥೆ ಕಲ್ಪಿಸಿ ಎಂದು ತಿಳಿಸಿದರು. ಕ್ಷೇತ್ರದ 25 ಗ್ರಾಪಂ ವ್ಯಾಪ್ತಿಯಲ್ಲಿನ ಎಲ್ಲಾ ಗ್ರಾಮಗಳಲ್ಲಿಯೂ ನೀರಿನ ಕೊರತೆ ಎದುರಾಗಬಾರದು, ಕೆಲವು ಹಳ್ಳಿಯಲ್ಲಿ ನೀರು ಕಿರುನೀರು ಸಂಗ್ರಹಗಳಲ್ಲಿ ವೃಥಾ ನೀರು ಪೋಲಾಗುತ್ತಿವೆ ಅದನ್ನು ತಡೆಯಲು ಸಂಭಂದಿಸಿದ ಗ್ರಾಪಂ ಪಿಡಿಒ ಗಳಿಗೆ ಸೂಚನೆ ನೀಡಿ, ನೀರಿನ ಮೌಲ್ಯದ ಕುರಿತು ಆ ಗ್ರಾಮದ ಜನರಿಗೆ ಜಾಗೃತಿ ಮೂಡಿಸಲು ತಾಪಂ ಇಒ ಕೆ. ನರಸಪ್ಪ ಅವರಿಗೆ ಶಾಸಕರು ಸೂಚನೆ ನೀಡಿದರು. ಉಳಿದಂತೆ ಪಟ್ಟಣದಲ್ಲಿ ಕಳೆದ ಎರಡು ತಿಂಗಳಿನಿಂದ ನಾಲ್ಕು ದಿನಕ್ಕೆ ಒಮ್ಮೆ ನೀರು ಪೂರೈಕೆಯಾಗುತ್ತಿರುವ ದೂರುಗಳು ಬರುತ್ತಿವೆ ಇದನ್ನು ಸರಿಪಡಿಸುವಂತೆ ಪಪಂ ಎಇ ಗಿರೀಶ್ ಗೆ ಶಾಸಕರು ಸೂಚನೆ ನೀಡಿದರು. ಪಟ್ಟಣ ನೀರು ಸರಬರಾಜು ಎಇಇ ಮಲ್ಲಿಕಾರ್ಜುನ ಮಾತನಾಡಿ, ಬನ್ನಿಗೊಳ ಜಾಕ್ ವೆಲ್ ನಿಂದ ನೀರಿನ ಪೂರೈಕೆ ಸಮರ್ಪಕವಾಗಿದೆ ಯಾವುದೇ ತೊಂದರೆ ಇಲ್ಲ, ಇಲ್ಲಿನ ನೀರು ಸಂಗ್ರಹಗಾರ ತುಂಬಿವೆ ಎಂದು ಹೇಳಿದಾಗ ನಿಲ್ಲಿಸುತ್ತೇವೆ, ವಾರ್ಡ್ ಗಳಲ್ಲಿ ನೀರು ಪೂರೈಕೆ ಮಾಡುವ ಸಿಬ್ಬಂದಿಗಳ ಎಡವಟ್ಟು ಇದು ಎಂದು ಸಭೆಯಲ್ಲಿ ತಿಳಿಸಿದರು. ಇದಕ್ಕೆ ಶಾಸಕರು ಪಟ್ಟಣದಲ್ಲಿ ಸಮರ್ಪಕ ನೀರಿನ ಪೂರೈಕೆ ಮಾಡಲು ಕ್ರಮವಹಿಸಲು ತಹಸೀಲ್ದಾರ್ ವಿ.ಕೆ.ನೇತ್ರಾವತಿ ಅವರಿಗೆ ಸೂಚನೆ ನೀಡಿದರು. ಇದಕ್ಕೆ ಸಮ್ಮತಿಸಿದ ತಹಸೀಲ್ದಾರ್ ವಿ. ಕೆ.ನೇತ್ರಾವತಿ ನಾಳೆಯೇ ನೀರಿನ ಸಮಸ್ಯೆ ಬಗ್ಗೆ ಸಿಬ್ಬಂದಿಗಳ ಸಭೆ ಕರೆದು ಸಮಸ್ಯೆ ಪರಿಹರಿಸುವೆ ಎಂದು ಸಭೆಯಲ್ಲಿ ತಿಳಿಸಿದರು. 

ತಹಸೀಲ್ದಾರ್ ವಿ.ಕೆ.ನೇತ್ರಾವತಿ, ತಾಪಂ ಇಒ ಕೆ. ನರಸಪ್ಪ, ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಪ್ರಸನ್ನ, ಪಶು ಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಲೋಹಿತ್ ಕುಮಾರ್, ಜೆಸ್ಕಾಂ ಎಇಇ ಏಕಾಂತ ರೆಡ್ಡಿ, ಪಟ್ಟಣ ನೀರು ಪೂರೈಕೆ ಇಲಾಖೆ ಎಇಇ ಮಲ್ಲಿಕಾರ್ಜುನ ಸಭೆಯಲ್ಲಿ ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*