ಮಸ್ಕಿ : ಸಂತೆಕೆಲ್ಲೂರು ಗ್ರಾಮ ಪಂಚಾಯತಿಯಲ್ಲಿ 40 ಲಕ್ಷ ಗುಳುಂ ಮಾಡುವ ಹುನ್ನಾರ: ಆರೋಪ
ಮಸ್ಕಿ : ತಾಲೂಕಿನ ಸಂತೆಕೆಲ್ಲೂರು ಗ್ರಾಮ ಪಂಚಾಯತಿ ಪಿ.ಡಿ.ಓ ಆದ ನಾಗರಾಜ ಇವರು 15ನೇ ಹಣ ಕಾಸು ಯೋಜನೆಯಲ್ಲಿ 40 ಲಕ್ಷ ರೂಗಳು ಗುಳುಂ ಮಹಿಳಾ ಗ್ರಾಮ ಪಂಚಾಯತಿ ಸದಸ್ಯೆ ಆರೋಪ.
ಸುಮಾರು ಅಂದಾಜು 55 ಲಕ್ಷ ರೂಗಳಷ್ಟು ಅನುದಾನ ಬಂದರೂ ಒಬ್ಬ ಸದಸ್ಯರಿಗೆ ತಮ್ಮ ವಾರ್ಡ್ ಕೆಲಸಕ್ಕೆ 50 ಸಾವಿರ ರೂಪಾಯಿಗಳನ್ನು ನೀಡಿರುತ್ತಾರೆ. 21 ಸದಸ್ಯರಿಗೆ 10.50 ಲಕ್ಷ ಆಗುತ್ತದೆ. ಇನ್ನು ಸುಮಾರು 40 ಲಕ್ಷಗಳಷ್ಟು ಎತ್ತುವಳಿ ಮಾಡುವ ಹುನ್ನಾರ ನಡೆಸಿದ್ದಾರೆ. ನಾನು ಗ್ರಾಮ ಪಂಚಾಯತಿಯ ಮಹಿಳಾ ಸದಸ್ಯಗಳಾಗಿದ್ದ ಕಾರಣಕ್ಕಾಗಿ ಹಾಗೂ ನನ್ನಂತ ಎಲ್ಲಾ ಮಹಿಳಾ ಸದಸ್ಯರಿಗೆ ಮಾತನಾಡಲು ಅವಕಾಶವನ್ನು ನೀಡುವುದಿಲ್ಲ. ಹಾಗೆಯೇ ತಮಗೆ ಮನ ಬಂದವರಿಗೆ ಕೆಲಸಗಳನ್ನು ನೀಡುತ್ತ ಪಕ್ಷ ಪಾತ ಮಾಡುತ್ತಾರೆ. ಎಂ.ಜಿ. ಎನ್.ಆರ್.ಇ.ಜಿ ಕಾಮಗಾರಿಗಳು ಪ್ರತಿ ಸದಸ್ಯರಿಗೆ ಸುಮಾರು 5 ಲಕ್ಷದಷ್ಟು ಕಾಮಗಾರಿಗಳು ತಮಗೆ ಅವಶ್ಯ ಇರುವ ಕಡೆಗೆ ಮಾಡಿಸಿಕೊಳ್ಳತಕ್ಕದ್ದು ಎಂದು ಸಾಮಾನ್ಯ ಸಭೆಯಲ್ಲಿ ಹೇಳಿ ನಾನು ಸೂಚಿಸಿದ ಕಾಮಗಾರಿ ಸಂತೆಕೆಲ್ಲೂರು ಗ್ರಾಮದ ಚಿಗರಿ ಮೇಟ್ರಿ ಕುಟ್ರಿ ಅಗಸಿ ಹೊಲದ ಹತ್ತಿರ ಸಿಡಿ ನಿರ್ಮಾಣ ಮಾಡುವುದು ಅಂದಾಜು ರೂ. 4.50 ಲಕ್ಷ ಕೂಲಿ ಮೊತ್ತ 67500 ಸಾಮಾಗ್ರಿ ಮೊತ್ತ 3,82,500 ಬೃಜಿಸಿಲಾದ ಮಾನವ ದಿನಗಳು 214 ಈ ಕಾಮಗಾರಿಯನ್ನು ನನ್ನಿಂದ ಪಡೆದು ಕ್ರಿಯಾ ಯೋಜನೆ ತಯಾರಿಸಿ ನನಗೆ ತೋರಿಸಿ ಜಿಲ್ಲಾ ಪಂಚಾಯತ ನಿಂದ ಅಪ್ರೂವಲ್ ತರುವಾಗ ನನ್ನ ಕಾಮಗಾರಿಯನ್ನು ಕಾಟ ಹಾಕಿಸಿ ಅಂದರೆ ತೆಗೆದು ಹಾಕಿ ಅಪ್ರೂವಲ್ ತೆಗೆದಿರುತ್ತಾರೆ ನಮ್ಮ ಕಮಗಾರಿಗಳನ್ನು ಸರಿ ಪಡಿಸಿ ಕೊಡುವವರೆಗೂ ಎಲ್ಲಾ ಕಾಮಗಾರಿಗಳನ್ನು ತಡೆಯುವಂತೆ ಎಡಿ ಯವರಿಗೆ ಹಾಗೂ ಜೆ.ಇ ಗಳಿಗೆ ಸೂಚಿಸಬೇಕು.
ಹಾಗೂ ಗೋನವಾರ ಗ್ರಾಮದ ಕಾರ್ಲಕುಂಟೆ ರಸ್ತೆ ರಾಘಣ್ಣ ಧಣಿಯರ ನಾಲಕ್ಕೆ ಸಿ.ಡಿ ನಿರ್ಮಾಣ ಅಂದಾಜು ರೂ. 4 ಲಕ್ಷ ಕೂಲಿ ಸಾಮಾಗ್ರಿ 60 ಸಾವಿರ ಸಾಮಗ್ರಿ 3.40 ಲಕ್ಷ ಸೃಜಿಸಲಾದ ಮಾನವ ದಿನಗಳು 190 ಈ ರೀತಿಯ ಅನೇಕ ಕಾಮಗಾರಿಗಳನ್ನು ತಮಗೆ ಬೇಕಿರದ ಸದಸ್ಯರ ಕಾಮಗಾರಿಗಳನ್ನು ಕಾಟ ಹಾಕಿಸಿ ರದ್ದುಪಡಿಸಿ ಅಪ್ರೂವಲ್ ಮಾಡಿಕೊಂಡು ಬಂದಿರುತ್ತಾರೆ. ಅಲ್ಲದೇ ಕಾಮಗಾರಿಗಳಿಗೆ ಸಾಮಾಗ್ರಿಗಳ ಪೂರೈಕೆಗಳಿಗಾಗಿ ದರಪಟ್ಟಿಗಳ ಆಹ್ವಾನ (ಟೆಂಡರ್) ದಿನಾಂಕ: 03-09-2024 ರಿಂದ 17-00-2024ವರೆಗೆ ಟೆಂಡರ್‌ನ ಇ.ಎಂ.ಡಿ ಹಣ ಪಂಚಾಯತಿ ಅಕೌಂಟಿಗೆ ಜಮಾ ಆಗಿರುವುದು.
ಅಧ್ಯಕ್ಷರು ಹಾಗೂ ಪಿ.ಡಿ.ಓ ಇದನ್ನು ನುಂಗಿ ಹಾಕಿರುತ್ತಾರೆ. ಈ ವಿಷಯವಾಗಿ ಮಾನ್ಯ ತಾಲೂಕ ಪಂಚಾಯತ ಅಧಿಕಾರಿಗಳಿಗೆ ದೂರು ನೀಡಿದ್ದೇನೆ ಆದರೂ ಇದುವರಿಗೂ ಯಾವುದೇ ಕ್ರಮ ಜರಗಿಸಿಲ್ಲ. ಇನ್ನು ತಮಗೆ ಬೇಡವಾದ ಸದಸ್ಯರಿಗೆ ತಿಳಿಸುವುದಿಲ್ಲ. ನಮ್ಮ ಪಂಚಾಯತ ವ್ಯಾಪ್ತಿಯ ಸಂತೆಕೆಲ್ಲೂರು ಗ್ರಾಮದಲ್ಲಿ ಪ್ರತಿ ಬುಧುವಾರ ತರಕಾರಿ ಸಂತೆ ಹಾಗೂ ದಿನಿಸಿ ಸಂತೆ ಆಗುತ್ತದೆ. ಸಂತೆಯ ಎಲ್ಲಾ ವ್ಯಾಪಾರಿಗಳಿಂದ ಸಂತೆ ಕರ ವಸೂಲಿ ಮಾಡುತ್ತಾರೆ. ಆದರೇ ಅದನ್ನು ಇಲ್ಲಿಯವರಗೆ ಮಾಹಿತಿ ನೀಡಿರುವುದಿಲ್ಲ. ಪಂಚಾಯತಿ ವ್ಯಾಪ್ತಿಯ ಮುಸ್ಲಿ ಕಾರ್ಲಕುಂಟಿ ಹಾಗೂ ಸಂತೆಕೆಲ್ಲೂರು ಗ್ರಾಮದಲ್ಲಿ ಶುದ್ದ ಕುಡಿಯುವ ನೀರಿನ ಘಟಕದಿಂದ ಬರುವ ಸುಮಾರು ದಿನಕ್ಕೆ 1 ಘಟಕದಿಂದ 1000 ರೂಪಾಯಿಗಳು ಆದಾಯ ಬರುತ್ತದೆ. ದಿನಕ್ಕೆ 2000 ಆದಾಯ ಬರುತ್ತದೆ. ಅದನ್ನು ಪಿ.ಡಿ.ಓ ಮತ್ತು ಅಧ್ಯಕ್ಷರುಗಳು ತೆಗೆದುಕೊಳ್ಳುತ್ತಾರೆ. ನಾವುಗಳು 15ನೇ ಹಣಕಾಸಿನ ಕಾಮಗಾರಿಯ ಆಳತೆ(ಎಂ.ಬಿ) ಮಾಹಿತಿ ಕೇಳಿದರೆ ನಿಮಗೆ ಕೊಡುವುದಿಲ್ಲ ನೀವು ಏನುಬೇಕಾದರೆ ಮಾಡಿಕೊಳ್ಳಿ ಎಂದು ಗರ್ವದಿಂದ ಬೇಜವಬ್ದಾರಿ ತನದಿಂದ ಮಾತನಾಡುತ್ತಾರೆ. ಇಷ್ಟೆಲ್ಲ ಅವ್ಯವಹಾರಗಳು ನಮ್ಮ ಕಣ್ಣು ಮುಂದೆ ನಡೆದರೂ ನಾನು ಗ್ರಾಮ ಪಂಚಾಯತ ಸದಸ್ಯಳಾಗಿ ಇದ್ದರೂ ಏನು ಫಲ ಎಂದು ಮನಸಿಗೆ ತುಂಬ ನೋವಾದ ಕಾರಣಕ್ಕಾಗಿ ನಾನು ನನ್ನ ಸದಸ್ಯತ್ವಕ್ಕೆ ರಾಜೀನಾಮೆ ಕೋಡಲು ತಿರ್ಮಾನಿಸಿದ್ದೇನೆ ಆದರೆ ಅದಕ್ಕೂ ಮುಂಚೆ ತಮಗೂ ಸಹ ನಮ್ಮ ಪಂಚಾಯತಿಯ ಎಲ್ಲಾ ಅವ್ಯವಹಾರಗಳ ಬಗ್ಗೆ ಈ ಮೂಖಾಂತರ ತಿಳಿಸುತ್ತ ತಾವು ಸೂಕ್ತ ರೀತಿಯ ಕಾನೂನು ಕ್ರಮ ಜಗರಗಿಸಬೇಕೆಂದು ತಾಲೂಕ ಕಾರ್ಯನಿರ್ವಾಹಕ ಅಧಿಕಾರಿ ತಾಲೂಕ ಪಂಚಾಯತ ಮಸ್ಕಿ ಇವರಿಗೆ ಮನವಿ ಪತ್ರವನ್ನು ಕಚೇರಿಯಲ್ಲಿ ಸಲ್ಲಿಸಿರುತ್ತಾರೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ