ನಂದವಾಡಿ ಏತ ನೀರಾವರಿ ಯೋಜನೆ ವಿಳಂಬ.ಸಂತೆಕೆಲ್ಲೂರು ಶ್ರೀ ಘನಮಠಟೇಶ್ವರ ಕಲ್ಯಾಣ ಮಂಟಪದಲ್ಲಿ ಪೂರ್ವಭಾವಿ ಸಭೆ.
ಮಸ್ಕಿ : ಕಳೆದ 10 ವರ್ಷಗಳ ನಿರಂತರ ಹೋರಾಟದ ಫಲವಾಗಿ ನಂದವಾಡಿ ಏತ ನೀರಾವರಿ ಯೋಜನೆಯುನ್ನು 2017ರಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ನಂದಾವಾಡಗಿ ಏತ ನೀರಾವರಿ ಕೃಷ್ಣ ಎ ಸ್ಕೀಮ್ 6 ಟಿಎಂಸಿ ನೀರು ಬಳಕೆಗೆ ಶಂಕುಸ್ಥಾಪನೆ ಮಾಡಿದರು.ಈ ಯೋಜನೆಯು 2017 ರಿಂದ 2022 ಕ್ಕೆ ಮುಕ್ತಾಯವಾಗಬೇಕಾಗಿದ್ದು.ಅವಧಿ ಮುಗಿದರೂ ಶೇಕಡ 50ರಷ್ಟು ಇನ್ನೂ ಕೆಲಸ ಬಾಕಿ ಇದೆ.ಈ ಯೋಜನೆಯು ಸುಮಾರು 60 ಹಳ್ಳಿಗಳು.27 ಸಾವಿರ ರೈತರು.36,000 ಎಕ್ಟರ್ ಭೂಮಿಗೆ ನೀರು ಉಣಿಸುವ ಯೋಜನೆ ಇದಾಗಿದ್ದು.ಇದಕ್ಕೆ ಪೂರಕವಾಗಿ ಇಂದು ಸಂತೆಕಲ್ಲೂರಿನ, ಘನಮಠಟೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ನಂದವಾಡಗಿ ಏತ ನೀರಾವರಿ ಹೋರಾಟ ಸಮಿತಿಯ ಸಭೆಯ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀ ಗುರುಬಸವ ಮಹಾಸ್ವಾಮಿಗಳು.ಯಾವುದೇ ಕಾರಣಕ್ಕೂ ರಾಜಕೀಯವಾಗಿ ಶ್ರೀಮಠದ ಸ್ವಾಮಿಗಳನ್ನು ಪರೀಕ್ಷೆ ಮಾಡಬೇಡಿ.ಶಿವಯೋಗಿಗಳ ಮಠಕ್ಕೂ ಹಾಗೂ ರೈತರಿಗೂ ಬಿಡಿಸಲಾಗದ ಸಂಬಂಧವಿದೆ.ಈ ಹಿಂದೆ ಹೋರಾಟದ ಭಾಗವಾಗಿ ನಂದವಾಡಿಗೆಯಿಂದ ನಿಲೋಗಲ್ ಗ್ರಾಮದವರೆಗೂ ಪಾದರ ಪಾದಯಾತ್ರೆ ಹೋರಾಟದಲ್ಲಿ ಭಾಗವಹಿಸಿದ್ದೆವು.ಎಂದು ಮಾತನಾಡಿದರು.ನಂದವಾಡಗಿ ಏತ ನೀರಾವರಿ ಸಮಿತಿ ಕಾರ್ಯದರ್ಶಿ ಎಚ್ ಬಿ ಮುರಾರಿ ಮಾತನಾಡಿ 2017ರಲ್ಲಿ ಕೃಷ್ಣ ಎ ಸ್ಕೀಮ್ ನಲ್ಲಿ 6 ಟಿ ಎಂ ಸಿ ನೀರು ಬಳಕೆಗೆ ಸರಕಾರ ಒಪ್ಪಿಗೆ ನೀಡಿ ಹಣ ಮಂಜೂರು ಮಾಡಿತು.ನಂತರ ಸುಮಾರು ಮೂರು ಕಂಪನಿಗಳಿಗೆ ಟೆಂಡರ್ ನೀಡಿದ್ದು ಮೂರನೇ ಹಂತದ ಕಾಮಗಾರಿಯಲ್ಲಿ ಸಂಪೂರ್ಣ ಕಳಪೆ ಕಾಮಗಾರಿಯಾಗಿ ರೈತರ ಕನಸು ಛಿದ್ರವಾಗಿದೆ.ಈ ಯೋಜನೆಯ ಲೋಪ ದೋಷ ಸರಿಪಡಿಸಿ ಹನಿ ನೀರಾವರಿಯ ನೂತನ ವ್ಯವಸ್ಥೆಯಡಿ ಕೈಗೊಳ್ಳಲು ಮುಂದಾಗಿದೆ. ಇದರಿಂದಾಗಿ ಇಂದಿಗೂ ನೀರು ಬಂದಿಲ್ಲ.ಈ ಯೋಜನೆಯು ಜಾರಿಯಾಗಿನಿಂದಲು ಕಳಪೆ ಕಾಮಗಾರಿ ಬಗ್ಗೆ ಲೋಕಾಯುಕ್ತರಿಗೆ ಅನೇಕ ಬಾರಿ ದೂರು ನೀಡಿದರು ಪ್ರಯೋಜನವಾಗಿಲ್ಲ.ಹಾಗೂ ರೈತರು ಈ ಯೋಜನೆಯ ಬಗ್ಗೆ ಧ್ವನಿ ಎತ್ತದ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಅದೇ ರೀತಿ ಸಮಿತಿಯ ಮುಖ್ಯಸ್ಥ ಬಸವಂತರಾಯ ಕುರಿ.ತಾಂತ್ರಿಕ ಸಮಿತಿ ಅಧ್ಯಕ್ಷ ಶರಣೆಗೌಡ.ಹಾಗೂ ಈ ಸಭೆಯ ಅಧ್ಯಕ್ಷರು ಹಾಗೂ ಹೋರಾಟ ಸಮಿತಿಯ ಅಧ್ಯಕ್ಷ ಸಿದ್ದರಾಮಪ್ಪ ಸಾಹುಕಾರ.ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಲ್ಲೇಶ್ ಗೌಡ ಮಟ್ಟೂರು.ಗುಂಡಪ್ಪ ನಾಯಕ.ಬಸವರಾಜ ತುರುಡಗಿ.ಸುರೇಶ್ ಗೌಡ ಮುದ್ಗಲ್.ಶರಣಪ್ಪ ಜಾವೂರು. ಅಮರೇಗೌಡ ಪಾಟೀಲ್.ದೊಡ್ಡಪ್ಪ ಸಾಹುಕಾರ.ತಿಮ್ಮನಗೌಡ ಚುಕನಟ್ಟಿ.ಬಸವರಾಜಪ್ಪ ಕುರುಗೋಡ.ಗವಿಸಿದ್ದಪ್ಪ.ಮಹೇಂದ್ರ ಗೌಡ ಪಾಟೀಲ್.ಅಮರ ಗುಂಡಪ್ಪ.ಸಿದ್ದನಗೌಡ.ಹಾಗೂ ನಂದವಾಡಗಿ ಏತ ನೀರವರಿಯ ಸಂಬಂಧಪಟ್ಟ ಅನೇಕ ರೈತರು ಭಾಗವಹಿಸಿದ್ದರು.


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ