650 ಅಡಿ ಎತ್ತರದ ಬಾಬಾ ಸಾಹೇಬ್ ಅಂಬೇಡ್ಕರ್ರವರ ಪ್ರತಿಮೆ ನಿರ್ಮಾಣ ಮಾಡಬೇಕು :ವೈಟ್‌ಫೀಲ್ಡ್ ಮುರುಗೇಶ್ ಒತ್ತಾಯ
ಮಸ್ಕಿ: ಭೀಮ್ ಪ್ರಜಾ ಸಂಘ ವತಿಯಿಂದ ಬೀದರ್ ನಿಂದ ಬೆಂಗಳೂರು ಫ್ರೀಡಂ ಪಾರ್ಕ್ ವರೆಗೂ ಸ್ವಾಭಿಮಾನ ಜಾಥಾ ಇಂದು ಪಟ್ಟಣಕ್ಕೆ ಆಗಮಿಸಿತು.
ಈ ಜಾಥವನ್ನು ಇಲ್ಲಿನ ದಲಿತ ಪರ ಸಂಘಟನೆ ಮುಖಂಡರು ಅದ್ದೂರಿಯಾಗಿ ಬರಮಾಡಿಕೊಂಡರು.
ಈ ವೇಳೆ, ವೈಟ್‌ಫೀಲ್ಡ್ ಮುರುಗೇಶ್ ಸಂಸ್ಥಾಪಕ ರಾಜ್ಯಾಧ್ಯಕ್ಷರು ಮಾತನಾಡಿ,200 ಮೀಟರ್‌ಗಳ ಎತ್ತರದ ಡಾ॥ ಬಿ.ಆರ್. ಅಂಬೇಡ್ಕರ್ ರವರ ಪುತ್ಥಳಿ ನಿರ್ಮಾಣ ಮತ್ತು ಕರ್ನಾಟಕ ಸರ್ಕಾರದ ಲಾಂಭನದಲ್ಲಿ ಸತ್ಯಮೇವ ಜಯತೇ ಹಿಂದಿ ಪದ ಹೋಲಿಕೆ ಯಂತೆ ಸಂಸ್ಕೃತ ಪದದಲ್ಲಿರುತ್ತದೆ ಹಾಗೂ ಅದನ್ನು ಕನ್ನಡ ಪದಕ್ಕೆ ಬದಲಾವಣೆ ಮಾಡಬೇಕು ಹಾಗೂ ಡಾ|| ಬಿ.ಆರ್. ಅಂಬೇಡ್ಕರ್ ರವರ ಗ್ರಂಥಾಲಯ ಐ.ಎ.ಎಸ್. ಹಾಗೂ ಕೆ.ಎ.ಎಸ್. ತರಬೇತಿ ಕೇಂದ್ರಗಳು,ಹಾಗೂ ದಲಿತರಿಗೆ ಸ್ಮಶಾನ ಭೂಮಿ ನೀಡಬೇಕೆಂದು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಮಲ್ಲಪ್ಪ ಎಸ್ ಗೋನಾಳ, ಎಸ್ ಡಿ ಎಂ ಸಿ ಅಧ್ಯಕ್ಷರಾದ ಹುಲುಗಪ್ಪ ಛಲವಾದಿ ಹಸ್ಮಕಲ್,ಪ್ರಶಾಂತ ಮುರಾರಿ, ಕಿರಣ್ ವಿ ಮುರಾರಿ, ನೀಲಕಠಪ್ಪ ರಂಗಪುರ,ಅಜಿತ್ ವಕೀಲರು, ಲಕ್ಷ್ಮಣ್ ಕಡಬೂರು ಇದ್ದರು.


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ