*🪔ನಿಧನ ವಾರ್ತೆ: ಶ್ರೀಮತಿ ರಾಧಾ ದೇವಿ ನಿಧನ *🪔*
ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ 14 ನೇ ವಾರ್ಡಿನ ಡಾಕ್ಟರ್ ಬಿ ಆರ್ ಅಂಬೇಡ್ಕರ್ ನಗರದ ನಿವಾಸಿಗಳಾದ ಶ್ರೀಮತಿ ರಾಧಾ ದೇವಿ (52), ಮಂಗಳವಾರ ರಂದು ಹುಬ್ಬಳ್ಳಿಯ ತತ್ವ ದರ್ಷ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದು ನಿನ್ನೆ ದಿನ ರಾತ್ರಿ 8:30ರ ಸಮಯದಲ್ಲಿ ನಿಧನರಾಗಿದ್ದಾರೆ. ಅವರು ಕೆಲವೇ ದಿನಗಳಿಂದ, ಅನಾರೋಗ್ಯದಿಂದ ಬಳಲುತಿದ್ದರು. ಡಾಕ್ಟರ್ ಬಿ ಆರ್ ಅಂಬೇಡ್ಕರ ಸಂಘದ ಮಾಜಿ ಅಧ್ಯಕ್ಷರಾದ ಹಾಗೂ ಗಜಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಡ್ತಿ ಮುಖ್ಯ ಗುರುಗಳಾದ ಹೆಚ್.ಆಂಜಿನೇಯ ಇವರ ಧರ್ಮಪತ್ನಿ ಶ್ರೀಮತಿ ರಾಧ ದೇವಿ ಇವರಿಗೆ 4 ಜನ ಹೆಣ್ಣುಮಕ್ಕಳಿದ್ದು ಮೊಮ್ಮಕ್ಕಳು ಸೇರಿದಂತೆ,ಅಳಿಯಂದಿರು,ತುಂಬು ಕುಟುಂಬವನ್ನು ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ.
*ಅಂತ್ಯಕ್ರಿಯೆ*- ಮಾರ್ಚ್ -19 ಬುಧವಾರ ರಂದು ಮಧ್ಯಾಹ್ನ 2 ಘಂಟೆಗೆ ಕೂಡ್ಲಿಗಿ ಪಟ್ಟಣದ ಕಡೆಯ ಅಂಚಿನಲ್ಲಿರುವ ಶ್ರೀ ರಾಜೀವ್ ಗಾಂಧಿನಗರದ ಪಕ್ಕದಲ್ಲಿ ಬರುವ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು. *ಸಂತಾಪ*- ಕೂಡ್ಲಿಗಿ , ಪಟ್ಟಣದ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಸಂಘ ಹಾಗೂ ದಲಿತ ಸಮುದಾಯದ ಮುಖಂಡರು ಗಳು, ಸಂಬಂಧಿಕರು ಹಾಗೂ ವಿವಿದ ಸಮುದಾಯದವರು ಪಟ್ಟಣದ ಸಮಸ್ತ ಗ್ರಾಮಸ್ಥರು. ಸೇರಿದಂತೆ, ವಿವಿದ ಸಮುದಾಯದವರು. ತಾಲೂಕಿನ ಎಲ್ಲಾ ದಲಿತ ಪರ ಸಂಘಟನೆಗಳು ಸೇರಿದಂತೆ ರೈತರು ಕಾರ್ಮಿಕರು ಮಹಿಳೆಯರ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು. ಸರ್ವ ಸದಸ್ಯರು. ಶಾಸಕರು ಮೊದಲ್ಗೊಂಡು ತಾಲೂಕಿನ ವಿವಿದ ಜನಪ್ರತಿನಿಧಿಗಳು, ಹಾಗೂ ಗಣ್ಯರು. ಕೂಡ್ಲಿಗಿ ಪಟ್ಟಣದ ಪ್ರಮುಖ ನಾಗರೀಕರು, ಕೂಡ್ಲಿಗಿ ಪಟ್ಟಣ ಸೇರಿದಂತೆ ನೆರೆ ಹೊರೆ ಸಂಬಂದಿಕರು ಗ್ರಾಮಸ್ಥರು. ಇವರ ಅಗಲಿಕೆಗೆ, ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ