ಹಿರೇನಗನೂರು ಪ್ರೌಢಶಾಲೆಯಲ್ಲಿ.ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಬಿಳ್ಕೊಡುಗೆ ಸಮಾರಂಭ. ಹಾಗೂ ವರ್ಗಾವಣೆಗೊಂಡ ಶಿಕ್ಷಕರಿಗೆ ಸನ್ಮಾನ.

 

ಹಟ್ಟಿ ಚಿನ್ನದ ಗಣಿ:ಪಟ್ಟಣದ ಸಮೀಪದ ಹಿರೇನಗನೂರು ಸರಕಾರಿ ಪ್ರೌಢಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ.ಹಾಗೂ ವರ್ಗಾವಣೆಗೊಂಡ ಶಿಕ್ಷಕರಿಗೆ ಸನ್ಮಾನ ಸಮಾರಂಭ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷರಾದ ಚಿನ್ನಪ್ಪ ಕೋಟ್ರಿಕಿ. ಮುಖ್ಯ ಅತಿಥಿಗಳಾಗಿ ಶ್ರೀ ಶಂಕರಯ್ಯ ಸ್ವಾಮಿ ಕನ್ನಡ ಶಿಕ್ಷಕರು ಕವಿತಾಳ ಹಾಗೂ ಶಾಲೆಯ ಮುಖ್ಯ ಗುರುಗಳಾದ ಶ್ರೀಮತಿ ವಿಜಯಲಕ್ಷ್ಮಿ ಹಿರೇಮಠ ಎ ಡಿ ಎಂ ಸಿ ಎಲ್ಲಾ ಸದಸ್ಯರು ಹಾಗೂ ಗ್ರಾಮದ ಹಿರಿಯರಾದ ಬಸವರಾಜಪ್ಪ ಕುರುಗೋಡ್ ಹಾಗೂ ವಿರೂಪಾಕ್ಷಪ್ಪ ಮಾಲಿಪಾಟೀಲ್.ಶಿಕ್ಷಣ ಪ್ರೇಮಿಗಳಾದ ಮೌನದ್ದೀನ್ ಬೂದಿನಾಳ.ಅಬ್ರಹಾಂ ಸಲಬೂರು.ಹಬ್ಬ ಸಲಿ.ನಿಂಗಪ್ಪ ಹುಬ್ಬಳ್ಳಿ.ನಿಂಗಪ್ಪ ಬೆಂಚಮಟ್ಟಿ.ಬಸವರಾಜ್ ಹೊರಪೇಟಿ.ಹಾಗೂ ವರ್ಗಾವಣೆಗೊಂಡ ಶಿಕ್ಷಕರಾದ ರಾಘವೇಂದ್ರ ಸರ್ ಹಾಗೂ ಗೋಪಿ ಚಂದ್.ಹಾಗೂ ಪ್ರೌಢಶಾಲೆಯ ಸಹ ಶಿಕ್ಷಕರ ಹಾಗೂ ಮುದ್ದು ವಿದ್ಯಾರ್ಥಿಗಳ ಬಿಳ್ಕೊಡುಗೆ ಕಾರ್ಯಕ್ರಮವು 


ವಿದ್ಯಾರ್ಥಿನಿಯಿಂದ ಪ್ರಾರ್ಥನ ಗೀತೆ ಹಾಗೂ ವಿದ್ಯಾ ಸರಸ್ವತಿಗೆ ಪೂಜೆ ಮತ್ತು ಸಸಿಗೆ ನೀರುಣಿಸುವ ಮುಖಾಂತರ ಕಾರ್ಯಕ್ರಮಕ್ಕೆ ಅದ್ದೂರಿಯಾಗಿ ಚಾಲನೆ ನೀಡಲಾಯಿತು.ನಂತರ ನಮ್ಮ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸಿ ಬೇರೆ ಶಾಲೆಗಳಿಗೆ ವರ್ಗಾವಣೆಗೊಂಡ ಶಿಕ್ಷಕರಾದ ರಾಘವೇಂದ್ರ ಸರ್ ಹಾಗೂ ಗೋಪಿ ಚಂದು ಸರ್ ಇವರಿಗೆ ಶಾಲೆ ವತಿಯಿಂದ ಹಾಗೂ ಗ್ರಾಮದ ವತಿಯಿಂದ ಮತ್ತು ಹಳೆ ವಿದ್ಯಾರ್ಥಿಗಳು ವತಿಯಿಂದ ಗೌರವ ಸನ್ಮಾನ ಮಾಡಲಾಯಿತು.ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ರಾಘವೇಂದ್ರ ಸರ್ ಹಿರೇನಗನೂರು ಶಾಲೆಗೆ ಶಿಕ್ಷಕನಾಗಿ ಆಗಮಿಸಿದಾಗ.ಪ್ರೌಢಶಾಲೆಯ ಕಟ್ಟಡ ಇರಲಿಲ್ಲ.ಪಂಚಾಯಿತಿ ಕಟ್ಟಡದಲ್ಲಿ ನಾವೆಲ್ಲ ಪಾಠ ಮಾಡುತ್ತಿದ್ದೆವು.

ಆ ಸಮಯದಲ್ಲಿ ನನಗೆ ಪಾಠ ಮಾಡುವಂಥ ಉತ್ಸವ ಬಹಳ ಇತ್ತು.ಎಷ್ಟೇ ಒತ್ತಡ ಬಂದರೂ ಕೂಡ.ಮುಖ್ಯ ಗುರುಗಳ ಪ್ರಭಾರವನ್ನು ಒಂದು ದಿನವೂ ಕೂಡ ಮುಟ್ಟಲಿಲ್ಲ.ನನಗೆ ಅದು ಏಕೆ?ನಮ್ಮ ವಿಷಯ ನಾವು ಮಾಡೋಣ ಅಂತ ತಿಳಿದು ಅದನ್ನು ಪಾಲಿಸುತ್ತಾ ಬಂದಿದ್ದೇನೆ.ಶಾಲಾ ಕಟ್ಟಡದ ಸಲವಾಗಿ ಗ್ರಾಮದ ಜನರು ಬಿ ಓ ಆಫೀಸಿಗೆ ಅರ್ಜಿ ಬರೆಯುವುದರ ಜೊತೆಗೆ ನಮಗೂ ಸಹಕಾರ ಕೊಡುತ್ತಿದ್ದರು.ಆದರೆ ಮುಖ್ಯ ಗುರುಗಳಾದ ಮಲ್ಲಪ್ಪ ಸರ್ ಬಗ್ಗೆ ಹೇಳಬೇಕೆಂದರೆ. ಹಿರೇನಗನೂರು ಸರಕಾರಿ ಪ್ರೌಢಶಾಲೆ ಮೊದಲನೆಯ ಮುದ್ರಿತ ಆಗಬೇಕಾದರೆ ಅದಕ್ಕೆ ಕಾರಣ ಶ್ರೀ ಮಲ್ಲಪ್ಪ ಸರ್ ಒಂದರಿಂದ ಏಳನೇ ತರಗತಿ ಇರುವಂತ ಶಾಲೆ ಉನ್ನತಿ ಕರಿಸಿದ್ದ ಶಾಲೆಯ ಮುಖ್ಯ ಗುರುಗಳು ಪ್ರಸ್ತಾವನೆ ಕಳಿಸಲಿಲ್ಲ ಅಂದರೆ ಯಾವ ಶಾಲೆಯು ಕೂಡ ಹೈಸ್ಕೂಲ್ ಆಗುವುದಿಲ್ಲ.ಆದುದರಿಂದ ಮಲ್ಲಪ್ಪ ಸರ್ ಈ ಸರಕಾರಿ ಪ್ರೌಢಶಾಲೆಯನ್ನು ಮೊದಲು ಆರಂಭ ಮಾಡುತ್ತಾರೆ.ನಂತರದಲ್ಲಿ ವಿರೂಪಾಕ್ಷಪ್ಪ ಮಾಲಿ ಪಾಟೀಲ್ ಭೂದಾನ ಮಾಡಿದ್ದರಿಂದಲೇ ಶಾಲಾ ಕಟ್ಟಡದ ಕೆಲಸ ಪ್ರಾರಂಭವಾಯಿತು.ಕೆಲವು ಕಾರಣಗಳಿಂದ ಕಾಮಗಾರಿ ಅರ್ಧಕ್ಕೆ ನಿಂತ ಸಮಯದಲ್ಲಿ.ರವೀಂದ್ರ ಸರ್ ಭೀಮಣ್ಣ ಸರ್,ಮುಸ್ತಕ ಅಹ್ಮದ್. ಗೋಪಿಚಂದ್ ಹಾಗೂ ರಾಘವೇಂದ್ರ ಎಲ್ಲಾ ಶಿಕ್ಷಕರು ಸೇರಿ ಮಾಜಿ ಎಂಎಲ್ಎ ಡಿಎಸ್ ಹುಲಿಗೇರಿ ಹತ್ತಿರ ಹೋಗಿ ವಿಷಯ ತಿಳಿಸಿದಾಗ ಮಾಜಿ ಎಂಎಲ್ಎ ಡಿಎಸ್ ಹುಲಿಗೇರಿ ಅವರು ಸರಕಾರಿ ಪ್ರೌಢಶಾಲೆಯ ಆರು ಕೊಠಡಿಗಳನ್ನು ಮಾಡುವುದಕ್ಕೆ ಅನುಮತಿ ಕೊಟ್ಟರು.ಇದರ ಮಧ್ಯದಲ್ಲಿ ಒಬ್ಬ ವ್ಯಕ್ತಿ ಬರುತ್ತಾರೆ ರಫಿ ಕಾಮನ ಕಲ್ಲೂರು ಇವರು ಈ ಕಟ್ಟಡಕ್ಕೆ ಬಹಳ ಸಹಾಯ ಮಾಡಿರುತ್ತಾರೆ.ಇಷ್ಟೆಲ್ಲವನ್ನು ನಾವು ಮುಚ್ಚಿಟ್ಟರೆ ಅಥವಾ ನಾವು ಇದನ್ನೆಲ್ಲಾ ಹೇಳದೆ ಇದ್ದರೆ ನಾವು ಮುಂದಿನ ಪೀಳಿಗೆಗೆ ಈ ಕಟ್ಟಡ ಯಾವ ರೀತಿ ಅಭಿವೃದ್ಧಿ ಹೊಂದಿದ್ದು ಎಂದು ನಾವು ನೆನಪಿನಲ್ಲಿ ಇಟ್ಟುಕೊಳ್ಳಲು ಆಗುವುದಿಲ್ಲ.ಆದುದರಿಂದ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಹೇಳುತ್ತಾರೆ.ಇತಿಹಾಸವನ್ನು ಮರೆತವನು ಇತಿಹಾಸ ಸೃಷ್ಟಿಸಲು ಆಗುವುದಿಲ್ಲ. ಆದುದರಿಂದ ನಾವು ಇತಿಹಾಸವನ್ನು ತಿಳಿದುಕೊಂಡು ಮುಂದಿನವರಿಗೆ ತಿಳಿಸುವ ಕೆಲಸ ಮಾಡಬೇಕು ಎಂದರು. ಅದೇ ರೀತಿ ಎಸ್ ಎಸ್ ಎಲ್ ಸಿ ಮಕ್ಕಳಿಗೆ ಹೇಳುವುದೇನೆಂದರೆ ಪಕ್ಕದ ಆನ್ವರಿಯಲ್ಲಿ ಪರೀಕ್ಷೆ ನಡೆಯುತ್ತವೆ ಆದರೆ ಆಗಿನ ಪರಿಸ್ಥಿತಿ ಬೇರೆ ಈಗಿನ ಪರಿಸ್ಥಿತಿ ಬೇರೆ.ಆವಾಗ ಬರಿ ಸಿಸಿಟಿವಿ ಇದ್ದವು ಇವಾಗ ಸಿಸಿಟಿವಿಗೆ ಹೈ ಪೇಡ್ ವೆಬ್ ಕಾಸ್ಟಿಂಗ್ ಸೇರಿಸಿ ಟೆಲಿಕಾಸ್ಟ್ ಮಾಡುತ್ತಾರೆ.ಅದು ಜಿಲ್ಲಾಮಟ್ಟ ರಾಜ್ಯಮಟ್ಟ ಮತ್ತು ತಾಲೂಕು ಮಟ್ಟದಲ್ಲಿ ಮೂರು ಕಡೆ ನೋಡುತ್ತಾರೆ. ಆನ್ವರಿಯಲ್ಲಿ ಎಸ್ ಎಸ್ ಎಲ್ ಸಿ ಪಾಸಾದವರಿಗೆ ಅದರ ವಿಷಯ ಗೊತ್ತಾಗುತ್ತದೆ.ಆದರೆ ಈಗಿನ ಪರಿಸ್ಥಿತಿಗೆ ಬಹಳ ಬದಲಾವಣೆಯಾಗಿದೆ. ಆದುದರಿಂದ ಯಾವುದೇ ಚೀಟಿ ನಕಲುಗಳನ್ನು ಮಾಡದೆ ನಿಮ್ಮ ಸ್ವ ಪ್ರಯತ್ನದಿಂದ ಪರೀಕ್ಷೆಯನ್ನು ಬರೆಯಬೇಕಾಗುತ್ತದೆ. ಆದುದರಿಂದ ಸರಿಯಾಗಿ ಅಧ್ಯಯನವನ್ನು ಮಾಡಿ ಒಳ್ಳೆಯ ಫಲಿತಾಂಶವನ್ನು ಶಾಲೆಗೆ ತಂದು ಕೊಡುತ್ತೀರಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

 ಕಾರ್ಯಕ್ರಮವನ್ನು ಕುರಿತು ಗ್ರಾಮದ ಅನೇಕರು ಮಾತನಾಡಿದರು. ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.ಆಟ ಮತ್ತು ಪಾಠಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.ಮತ್ತು ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.ಕಾರ್ಯಕ್ರಮದ ನಿರೂಪಣೆಯನ್ನು ಸಹ ಶಿಕ್ಷಕರಾದ ಮುಸ್ತಾಕ್ ಅಹ್ಮದ್ ನೆರವೇರಿಸಿದರು. 

 ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಗುರುಗಳಾದ ವಿಜಯಲಕ್ಷ್ಮಿ ಹಿರೇಮಠ್. ಸಾಶಿಕ್ಷಕರಾದ ನಾಗರಾಜ್.ರವೀಂದ್ರ ಸ್ವಾಮಿ.ಸುರೇಖಾ.ಮುಸ್ತಾಕ್ ಅಹ್ಮದ್ . ಹನುಮಂತಿ.ಪವಿತ್ರ.ಚಾಂದ್ ಪಾಷಾ.ಹಾಗೂ ವೇದಿಕೆ ಮೇಲಿರುವಂತ ಗಣ್ಯರು ಮತ್ತು ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*